ಪುಟ:Kanakadasa darshana Vol 1 Pages 561-1028.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೩೨ ಕನಕ ಸಾಹಿತ್ಯ ದರ್ಶನ-೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೮೩೩ ಎಂದು ಕೇಳುತ್ತಾನೆ. ಇಷ್ಟಾಗಿಯೂ ಕನಕ ಸಾಧನೆಯ ಪಥದಲ್ಲಿ ಹೆಣ್ಣು ಒಂದು ಕಂಟಕ ಎಂದು ಭಾವಿಸಿಲ್ಲ ಎಂಬುದು ಗಮನಾರ್ಹ. ಸಂಸಾರ ಸಾಗರಮನುತ್ತರಿಸುವೊಡೆ ಕಂಸಾರಿ ನಾಮವೊಂದೆ ಸಾಕು ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ ವನಿತೆಯನು ಬಿಟ್ಟು ತಪವಿರಲು ಬೇಡ || ಎಂಬ ಮಾತು ಕನಕನ ಅನುಭವದಿಂದ ಬಂದ ಮಾತು, ಕನಕದಾಸರ ಹೆಣ್ಣಿನ ಪರಿಕಲ್ಪನೆಯನ್ನು ವಿಶ್ಲೇಷಿಸಿದಾಗ ಒಟ್ಟಾರೆ ವ್ಯಕ್ತವಾಗುವ ಅಂಶವೇನೆಂದರೆ ಬಾಹ್ಯ ಸೌಂದರ್ಯದಿಂದಲೇ ಹೆಣ್ಣನ್ನು ಗುರುತಿಸುವ ಮೋಹನ ತರಂಗಿಣಿಯ ದೃಷ್ಟಿ, ನಳಚರಿತ್ರೆಯಲ್ಲಿ ಹೆಣ್ಣಿಗೆ ಒಂದು ನಿರ್ದಿಷ್ಟ ವ್ಯಕ್ತಿತ್ವವಿರುವುದನ್ನು ಅರ್ಥಮಾಡಿಕೊಳ್ಳುವ ಮಟ್ಟಕ್ಕೆ ಏರಿದೆ. ಕೀರ್ತನೆಗಳಲ್ಲಿ ಈ ಆಕರ್ಷಣೆಯ ಸತ್ಯವನ್ನು ಮನವರಿಕೆ ಮಾಡಿಕೊಂಡ ಹಾಗೂ ಪ್ರಾಪಂಚಿಕವಾದ ಎಲ್ಲ ಭೋಗಾಕರ್ಷಣೆಗಳೊಂದಿಗೆ ಹೆಣ್ಣಿನ ಆಕರ್ಷಣೆಯನ್ನೂ ಮೀರಬೇಕೆಂಬ ಆಕಾಂಕ್ಷೆಯಲ್ಲಿ ಪರ್ಯವಸಾನವಾಗಿದೆ. [ಪ್ರಸ್ತುತ ಲೇಖನದಲ್ಲಿ ಮೋಹನತರಂಗಿಣಿಯ ಪದ್ಯಗಳನ್ನು ಉದಾಹರಿಸುವಾಗ ಡಾ. ಎಸ್. ಎಸ್. ಕೋತಿನ ಅವರ ಗದ್ಯಾನುವಾದವನ್ನೇ ನೀಡಲಾಗಿದೆ.] ಆಕರಗ್ರಂಥಗಳು : 1. ಹರಿದಾಸಹೃದಯ ಡಾ. ಜಿ. ವರದರಾಜರಾವ್ (೧೯೬೭) ಪ್ರ, ಶಾರದಾ ಮಂದಿರ, ರಾಮಯ್ಯರ್ ರಸ್ತೆ ಮೈಸೂರು-೪. 2. ಹರಿಭಕ್ತಿವಾಹಿನಿ ಡಾ. ಜಿ. ವರದರಾಜರಾವ್ (೧೯೮೩) ಪ್ರ, ವಿಶ್ವಕನ್ನಡ ಸಮ್ಮೇಳನ, ೧೪-ಎ, ನೃಪತುಂಗ ರಸ್ತೆ, ಬೆಂಗಳೂರು-೫೬೦ ೦೦೨ 3. ಜನಪ್ರಿಯ ಕನಕ ಸಂಪುಟ ಸಂ. ದೇ. ಜವರೇಗೌಡ (ಶ್ರೀ ಕನಕದಾಸರ ಐದುನೂರನೇ ಎಲ್. ಎಸ್. ಶೇಷಗಿರಿರಾವ್ ಜಯಂತ್ಯುತ್ಸವದ ನೆನಪಿಗಾಗಿ) ದೇವೇಂದ್ರಕುಮಾರ ಹಕಾರಿ (೧೯೮೮) ಎಚ್. ಜೆ. ಲಕ್ಕಪ್ಪಗೌಡ, ಪ್ರ ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಬೆಂಗಳೂರು-೫೬೦ ೦೦೨. 4. ಮೋಹನ ತರಂಗಿಣಿ ಗದ್ಯಾನುವಾದ : ಡಾ. ಎಸ್. ಎಸ್. (ಕನಕದಾಸ ವಿರಚಿತ) ಕೋತಿನ (೧೯೭೪) ಪ್ರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮) 5. ನಳಚರಿತ್ರೆ ಸಂ. ದೇ. ಜವರೇಗೌಡ (ಕನಕದಾಸ ವಿರಚಿತ) ಪ್ರ ಕನ್ನಡ ಮತ್ತು ಸಂಸ್ಕೃತಿ ನಿರ್ದೆಶ (೧೯೮೫) ನಾಲಯ ೧೪-೩ಎ, ನೃಪತುಂಗ ರಸ್ತೆ. ಬೆಂಗಳೂರು-೫೬೦ ೦೦೨.