ಪುಟ:Kanakadasa darshana Vol 1 Pages 561-1028.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೩೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ೮೩೫ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ರಾಗ್ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳನ್ನು ಹುಡುಕುವಾಗ, ಎರಡು ರೀತಿಯಲ್ಲಿ ನೋಡುವುದು ಆವಶ್ಯಕ. ಕನಕದಾಸರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿವರಗಳು ಒಂದು ಬಗೆಯವಾದರೆ, ಸಮಕಾಲೀನ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳು ಇನ್ನೊಂದು ಬಗೆಯವಾಗುತ್ತವೆ. ವೈಯಕ್ತಿಕ ವಿವರಗಳಲ್ಲಿ ಸ್ಥಳ, ಕುಲ, ಕುಟುಂಬ ಗುರು, ದೊರೆತನ ಮುಖ್ಯವಾಗುತ್ತವೆ. ಕನಕ ದಾಸ ಸಂತನಾಗುವ ಪೂರ್ವದಲ್ಲಿ ಪಾಳೆಯಪಟೊಂದರ ಅಧಿಪತಿಯಾದುದರಿಂದ, ಸಮಕಾಲೀನ ರಾಜಕೀಯದೊಡನೆ ಸಂಬಂಧ ಹೊಂದಿರುವುದನ್ನು ಕಾಣುತ್ತೇವೆ. ವಿಜಯನಗರದ ಕೃಷ್ಣದೇವರಾಯನ ಸಮಕಾಲೀನನಾಗಿ ಅವನ ಅಧೀನದಲ್ಲಿ ಕೆಲಸಮಾಡುತ್ತಿದ್ದ ಕನಕದಾಸ ಅವನೊಡನೆ ನೇರ ಸಂಪರ್ಕದಲ್ಲಿದ್ದಿರಬಹುದಾದ ಸಾಧ್ಯತೆ ಇದೆ. ಈ ಎಲ್ಲ ಅ೦ಶ ಗಳ ನ ಕೃತಿಗಳೆ ಒದಗಿಸುವ ಆಧಾರ ಗಳ ಮೂಲಕ ಪರಿಶೀಲಿಸಬಹುದು. ಕನಕದಾಸರ ಕೃತಿಗಳಲ್ಲಿ, ಮುಖ್ಯವಾಗಿ 'ಮೋಹನತರಂಗಿಣಿ' ಮತ್ತು ಕೀರ್ತನೆಗಳಲ್ಲಿ ಕಾಗಿನೆಲೆಯ ಆದಿಕೇಶವ ಅಂಕಿತ ದೊರೆಯುತ್ತದೆ-ಇದರಿಂದ ಕನಕದಾಸರು ತಮ್ಮ ಜೀವಿತದ ಬಹುತೇಕ ಕಾಲವನ್ನು ಕಾಗಿನೆಲೆಯಲ್ಲಿ ಕಳೆದಿರಬೇಕೆಂದು ಸ್ಪಷ್ಟವಾಗುವುದು. ಹುಟ್ಟಿದ ಊರು ಬಾಡವಾದರೂ ಬಾಳಿದ ಸ್ಥಳ ಕಾಗಿನೆಲೆಯೆಂದು ಒಟ್ಟಾರೆ ಅಭಿಪ್ರಾಯ. ಆದರೆ ಉಳಿದ ಕೃತಿಗಳಲ್ಲಿನ ಪರಿಸ್ಥಿತಿಯೇ ಬೇರೆ. 'ರಾಮಧಾನ್ಯ ಚರಿತೆ'ಯ ಆರಂಭದಲ್ಲಿ 'ವರಪೌರ ಚನ್ನಿಗರಾಯ' ಮತ್ತು 'ವರಪುರದರಸು' ಎಂಬಿವುಗಳೂ, ಕೊನೆಯಲ್ಲಿ “ವರಪುರದಾದಿಕೇಶವನ ಚರಣದಂಕಿತವಾಗಿ ಹೇಳಿದ” ಎಂಬ ಮಾತೂ ಬರುತ್ತವೆ. 'ನಳಚರಿತ್ರೆಯ ಆದಿ-ಅಂತ್ಯಗಳಲ್ಲಿ “ವರಪುರದ ಚೆನ್ನಿಗರಾಯ 1. ದೇ. ಜವರೇಗೌಡ (ಸಂ.), ರಾಮಧಾನ್ಯ ಚರಿತೆ, ಪದ್ಯ 1, 2 ಮತ್ತು 158 ನಂಕಿತಮಾಗಿ ಪೇಳುವೆ ಪ್ರಿಯದಿಂದಾಲಿಸುವ ಸುಜನರಿಗೀ ಮಹಾಕಥೆಯ” ಮತ್ತು “ವರಪುರದಾದಿದೇಶವನಮರವಂದಿತ” ಎಂಬ ಹೇಳಿಕೆಗಳಿವೆ.2 “ಹರಿಭಕ್ತಿಸಾರ'ದಲ್ಲಿಯೂ 'ಸುರಪುರನಿಲಯ ಚನ್ನಿಗರಾಯ' ಎಂಬ ಉಲ್ಲೇಖವಿದೆ; ಜೊತೆಗೆ 'ಕಾಗಿನೆಲೆಯಾದಿಕೇಶವನ' ಉಲ್ಲೇಖವೂ ಇದೆ. ಮಂಗಳ ಪದ್ಯದಲ್ಲಿ ಬರುವ “ಮಂಗಳಂ ಬೇಲೂರ ಚನ್ನಿಗರಾಯ ಕೇಶವನಿಗೆ” ಎಂಬ ಮಾತು ಇಲ್ಲಿ ಗಮನಾರ್ಹ. ಇವುಗಳಲ್ಲಿ ವರಪುರ ಅಥವಾ ಬೇಲೂರ ಚನ್ನಿಗರಾಯನ ಅಂಕಿತವಿರುವುದನ್ನು ನೋಡಿದರೆ, ಬೇಲೂರು ಕನಕದಾಸರ ಇನ್ನೊಂದು ಕಾವ್ಯಕ್ಷೇತ್ರವಾಗಿರುವಂತೆ ತೋರುವುದು. ಬೇಲೂರಿನಲ್ಲಿದ್ದ ವೈಕುಂಠದಾಸರನ್ನು ಕನಕದಾಸ ಭೇಟಿಮಾಡಿದ್ದ ವಿಚಾರ ಸ್ಪಷ್ಟವೇ ಇದೆ. ಹೀಗಾಗಿ ಕನಕ ಇಲ್ಲಿ ಬಹಳಕಾಲ ವಾಸಮಾಡಿರಬೇಕು. ಉತ್ತರದ ಕಾಗಿನೆಲೆಯವರಾದ ಕನಕದಾಸರು ದಕ್ಷಿಣದ ಬೇಲೂರಿನ ಸಂಪರ್ಕಕ್ಕೆ ಬರಬೇಕಾದರೆ ವಿಶಿಷ್ಟ ಕಾರಣವೇ ಇರಬೇಕು. ಸೀತಾರಾಮ ಜಾಗೀರ್‌ದಾರ್‌ ತಮ್ಮ ಲೇಖನವೊಂದರಲ್ಲಿ, ಕೃಷ್ಣದೇವರಾಯನಿಂದ ಬೇಲೂರನ್ನು ಅಮರಮಾಗಣಿಯಾಗಿ ಪಡೆದ ಬಾದಾಮಿಯ ಕೃಷ್ಣಪ್ಪನಾಯಕ ಇಲ್ಲಿಗೆ ಬರುವಾಗ, ಅವನ ಜೊತೆಯಲ್ಲಿ ಬಂದಂತಹ ದಂಡಿನ ಕುಟುಂಬಗಳಲ್ಲಿ ಕನಕನ ಕುಟುಂಬವೂ ಒಂದಾಗಿತ್ತೆಂದೂ, ಕೆಲಕಾಲದನಂತರ ಮತ್ತೆ ಸ್ವಗ್ರಾಮಕ್ಕೆ ತೆರಳಿರಬೇಕೆಂದೂ ಅಭಿಪ್ರಾಯಪಡುತ್ತಾರೆ. ಇದು ವಿಚಾರಾರ್ಹ ವಿಷಯ, ಕನಕ ದಾಸರ ಕೀರ್ತನೆಗಳಲ್ಲಿ 'ಕಾಗಿನೆಲೆಯಾದಿಕೇಶವ' ಅ೦ಕಿತವಲ್ಲದೆ, 'ಬಾಡ ದಾದಿಕೇಶವ' “ಚೆನ್ನಶ್ರೀರಂಗಪಟ್ಟಣದ ರಂಗೇಶ' 'ಬಂಕಾಪುರದ ಲಕುಮಿನರಸಿಂಹ' ಎಂಬ ಮಾತುಗಳೂ ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಉಲ್ಲೇಖಿತವಾಗಿರುವ ಊರುಗಳ ಸಂಬಂಧ ಅವನಿಗಿತ್ತೆಂದು ತೋರುತ್ತದೆ. ಕನಕದಾಸರು ಸಮಾಜದ ಕೆಳಸ್ತರಕ್ಕೆ ಸೇರಿದವರು. ಕೆಲವರು ಅವನನ್ನು ಬೇಡರವನೆಂದೂ, ಇನ್ನು ಕೆಲವರು ಕುರುಬರವನೆಂದೂ ಅಭಿಪ್ರಾಯಪಟ್ಟಿದ್ದಾರೆ; ಜೊತೆಗೆ “ಕಬ್ಬಲಿಗ' ಗ್ರಹಿಕೆಯೂ ಇದೆ. ಬೇಡರವನೆಂಬುದಕ್ಕೆ ಆಧಾರಗಳು ದೊರೆಯವು. ಕನಕದಾಸರನ್ನು ಬೇಡ ಅಥವಾ ನಾಯಕರವನೆಂದು ಕರೆಯಲು 'ಕನಕನಾಯಕ' ಪದದಲ್ಲಿನ 'ನಾಯಕ' ಎಂಬುದು ಜಾತಿಸೂಚಕ ಎಂದು 2. ದೇ. ಜವರೇಗೌಡ (ಸಂ.), ಪು. 34 ಮತ್ತು 161 3, ಬಿ. ಶಿವಮೂರ್ತಿಶಾಸ್ತ್ರೀ ಮತ್ತು ಕೆ. ಎಂ. ಕೃಷ್ಣರಾವ್, ಹರಿಭಕ್ತಿಸಾರ, ಮಂಗಳಪದ್ಯ 4. ಪರಮೇಶ (ಸಂ.), ಕನಕಸುಧೆ, 1988, ಪು : 18-19