ಪುಟ:Kanakadasa darshana Vol 1 Pages 561-1028.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೩೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ೮೩ ವಾದಿರಾಜ-ಈ ಇಬ್ಬರ ಕಾಲದಲ್ಲೂ ಬದುಕಿದ್ದರಿಂದ, ದಾಸಪರಂಪರೆಯನ್ನು ಒಪ್ಪಿಕೊಂಡು ಕೀರ್ತನೆಗಳನ್ನು ಬರೆದದ್ದರಿಂದ ವಾದಿರಾಜರೂ ಗುರುಗಳೆಂಬ ಅಭಿಪ್ರಾಯ ಬೆಳೆಯಲು ಕಾರಣವಾಗಿರಬೇಕು. ಕನಕದಾಸರ ಕೀರ್ತನೆಗಳಲ್ಲಿ ವ್ಯಾಸರಾಯರ ಉಲ್ಲೇಖ ಸಿಗುವುದು ಅಪರೂಪ. ಒಂದು ಕೀರ್ತನೆಯಲ್ಲಿ “ಕಾಟಕೆ ಕಾಸು ಕೊಟ್ಟವರು ರಾಯರ ಪಂಕ್ತಿ ಊಟವ ಬಯಸಿದಂತೆ ನಾ ಬೇಡಿದೆ” ಎಂಬ ಮಾತಿದೆ.14 ಇಲ್ಲಿನ 'ರಾಯರ' ವ್ಯಾಸರಾಯರಿರಬೇಕು. ವ್ಯಾಸರಾಯರ ಶಿಷ್ಯನಾಗಿ ಕನಕನಿದ್ದನೆಂಬುದಕ್ಕೆ ಪುರಂದರದಾಸರ ಸುಪ್ರಸಿದ್ದ ಕೀರ್ತನೆ ಬೇರೆ ಇದ್ದೇ ಇದೆ. ವ್ಯಾಸರಾಯ ಕನಕನನ್ನು ಶಿಷ್ಯನನ್ನಾಗಿ ಸ್ವೀಕರಿಸಿದಾಗ ತನ್ನವರ್ಗದ ಶಿಷ್ಯರಿಂದ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಪುರಂದರದಾಸರ “ಕನಕದಾಸನ ದಯಮಾಡಲು ವ್ಯಾಸಮುನಿ ಮಠದ ಜನರೆಲ್ಲ ದೂರಿ ಕೊಂಬುವರು” ಎಂಬ ಕೀರ್ತನೆ! ಈ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೀರ್ಥ ಕೊಡುವಾಗ ಕನಕನನ್ನು ಕರೆಸಿದ್ದಕ್ಕೂ ವಿದ್ವಾಂಸರು ಆಕ್ಷೇಪಿಸಿದ ವಿಚಾರವನ್ನು ಪುರಂದರದಾಸರು ನಮೂದಿಸಿರುವರು. ಈ ಸಂದರ್ಭದಲ್ಲಿ ಕನಕನ ವ್ಯಕ್ತಿತ್ವವನ್ನು ಮನದಟ್ಟು ಮಾಡಿಕೊಡಲು ವ್ಯಾಸರಾಯ ಕೈಗೊಂಡೆರಡು ಪರೀಕ್ಷೆಗಳನ್ನು ಪುರಂದರರ ಪದ್ಯ ಹೇಳಿದೆ. ಹೀಗೆ ವ್ಯಾಸರಾಯರ ಶಿಷ್ಯನಾದಾಗ ಕನಕದಾಸ ಅನೇಕ ಕಿರುಕುಳಗಳಿಗೆ ಒಳಗಾಗಬೇಕಾಯಿತು. ಆದರೆ ಇಂತಹ ಪ್ರತಿರೋಧವನ್ನು ಜೀರ್ಣಿಸಿಕೊಳ್ಳುವಷ್ಟು ಶಕ್ತಿ ಕನಕನಿಗಿದ್ದುರಿಂದಲೇ ಮೇಲೆ ಬರುವುದು ಸಾಧ್ಯವಾಯಿತು. ಆದ್ದರಿಂದಲೇ ಕನಕದಾಸರನ್ನು ಸುಲಭವಾಗಿ ನಿವಾರಿಸಿಕೊಳ್ಳಲು ಸಾಂಪ್ರದಾಯಿಕ ಪಂಡಿತರಿಗೆ ಸಾಧ್ಯವಾಗಲಿಲ್ಲ. ಕನಕನು ವೈರಾಗ್ಯದತ್ತ ಪರಿವರ್ತನೆ ಹೊಂದಲು ಮೇಲಿಂದ ಮೇಲೆ ಒದಗಿದ ಆಘಾತಗಳು ಕಾರಣವಾದವು. ಈ ಹಿಂದೆಯೇ ತಂದೆಯನ್ನು ಕಳೆದುಕೊಂಡಿದ್ದ ಕನಕನ ಮೇಲೆ ತಾಯಿ ಮತ್ತು ಹೆಂಡತಿಯ ಸಾವು ತೀವ್ರತರವಾದ ಪರಿಣಾಮವನ್ನು ಬೀರಿರಬಹುದು. ಆದರೆ ಈ ಯಾವುದರ ಉಲ್ಲೇಖವೂ ಅವನ ಸಾಹಿತ್ಯದಲ್ಲಿ ದೊರೆಯದು. ಬದಲಾಗಿ ಯುದ್ಧದಲ್ಲಿ ಗಾಯಗೊಂಡು ಅನುಭವಿಸಿದ ನೋವು ಬದುಕಿನ ಬಗ್ಗೆ ಮರುಚಿಂತನೆ ಮಾಡಲು ಸಾಧ್ಯವಾದುದು ಮಾತ್ರ ಅವನ ಕೃತಿಗಳಲ್ಲಿದೆ. ಯುದ್ಧದಲ್ಲಿ ಗಾಯಗೊಂಡು ಅನಿರೀಕ್ಷಿತ ಸಹಾಯ ಒದಗಿ ಬಂದುದರ ವಿಷಯವಾಗಿ ಕೀರ್ತನೆಗಳು ಪ್ರಸ್ತಾಪಿಸಿವೆ. ಉದಾಹರಣೆಗಾಗಿ ಈ ಸಾಲುಗಳನ್ನು ನೋಡಬಹುದು : ಅರಿಗಳು ದಂಡೆತ್ತಿ ಬರಲು ನಾನವರೊಡನೆ ಪರಿಪರೀ ಹೋರುತಿರಲು ದುರುಳರೆನ್ನನ್ನು ಜಯಸಿ ಹರಿದಟ್ಟಿ ಬಂದೆನ್ನ ಧರೆಗುರುಳಿದರೊ ಹರಿಯೆ ||16 ಹೋದ ಜೀವನಕೆ ವೈದ್ಯನ ಸ್ಮರಣೆಯನ್ನಿಟ್ಟು ವಾದಗುಣ ಬಿಡಿಸಿ ದಾಸನಮಾಡಿಕೊಂಡೆಯೊ 17 ಕನಕ ಪಾಳೆಯಗಾರರ ವಂಶದವನೆಂಬುದು ಒಂದು ಮುಖ್ಯ ವಿಚಾರ. ಕನ ಕನ ತಂದೆ ಬೀರ ಪ್ರ ವಿಜಯನಗರದ ದೊರೆ ಗಳಲ್ಲಿ ದಂಡನಾಯಕನಾಗಿದ್ದನೆಂಬುದು ಪ್ರತೀತಿ. ವಿಜಯನಗರ ಸಾಮಾಜ್ಯದ ಅಧೀನದಲ್ಲಿ ಇವರು ಚಿಕ್ಕ ಪಾಳೆಯಪಟೊಂದನ್ನು ಆಳುತ್ತಿದ್ದರೆಂಬುದಕ್ಕೆ ಕನಕದಾಸರ ಕೀರ್ತನೆಗಳಲ್ಲಿಯೇ ಉಲ್ಲೇಖಗಳಿವೆ. “ದೊರೆತನವ ಬಿಡಿಸಿ ಸುಸ್ಥಿರಮಾರ್ಗ ತೋರಿಸಿದೆ”, “ಮೊನೆಗಾರ ಧಣಿಯೆಂಬ ಧೈರ್ಯವ ಬಿಡಿಸಿ ಸೇವಕನ ಮಾಡಿಸಿದೆ”, “ಕನಕ ದಳದಲಿ ಬಂದು ಕಲೆತನೆಂದರೆ ಪೌಜು ಕನಕುಮನಕಾಗುವುದು”18-ಇವು ಒಳ್ಳೆಯ ನಿದರ್ಶನಗಳಾಗಿವೆ. ಇವುಗಳಿಂದ ಅವನಿಗೆ 'ದೊರೆತನ' ವಿದ್ದುದೂ, ಅವನು ಅದರ 'ಧಣಿ'ಯಾಗಿದ್ದುದೂ ಸ್ಪಷ್ಟವಾಗುತ್ತದೆ : ಜೊತೆಗೆ ಕನಕ ಮಹಾಪರಾಕ್ರಮಿಯಾಗಿದ್ದುದ್ದು ತಿಳಿಯುತ್ತದೆ. ಪ್ರತ್ಯೇಕ ರಾಜವ್ಯವಸ್ಥೆ ಇದ್ದುದನ್ನು ಅವನ ಕೀರ್ತನೆಯ ಈ ವಿವರವೇ ಹೇಳುವುದು ಸ್ವಾರಿ ಹೊರಟರೆ ಛತ್ರ ಭೇರಿಯು ನಗಾರಿಗಳು ಭೋರೆಂಬ ಪೊಂಗಹಳೆ ಹರಿಯೆ | ಧೀರರಾಹುತರಾಣ್ಯ ಪರಿವಾರಲಂಕಾರ ಭಾರವನ್ನು ತೆಗೆದೆಯೋ ಹರಿಯೆ 19 ಇಲ್ಲಿ ಸೂಚಿತವಾಗಿರುವ ಛತ್ರ, ನಗಾರಿ, ಕಹಳೆ, ರಾಹುತ, ಪರಿವಾರಗಳು ಅವನು ಪುಟ್ಟದೊಂದು ರಾಜ್ಯವನ್ನು ಆಳುತ್ತಿದ್ದನೆಂಬುದನ್ನು ದೃಢಪಡಿಸುತ್ತವೆ. 2° 14. ಕನಕದಾಸರ ಕೀರ್ತನೆಗಳು ಕೀ, 150 15. ಜಿ. ವರದರಾಜರಾವ್ (ಸಂ.) ಹರಿಭಕ್ತಿವಾಹಿನಿ, ಕೀ, 175 16, ಕನಕದಾಸರ ಕೀರ್ತನೆಗಳು, ಕೀ. 92 17. ಶ್ರೀ ಕನಕದಾಸರ ಹಾಡುಗಳು, ಕೀ. 174 18. ಅದೇ. ಕೀ. 173 19, ಅಲ್ಲೇ.