ಪುಟ:Kanakadasa darshana Vol 1 Pages 561-1028.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೪೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ೮೪೩ ಕುದುರೆಗಳ ವೈಹಾಳಿಯ ಬಯಲು ಸ್ಥಳಗಳೂ-ಇವೆಲ್ಲ ವಿಜಯನಗರದ ಚಿತ್ರಗಳೆಂಬುದರಲ್ಲಿ ಸಂಶಯವಿರಲಾರದು. ವಿಜಯನಗರದ ಕೋಟೆ, ಬೀದಿ, ಅಂಗಡಿ, ಮನೆ, ಅರಮನೆ ಮೊದಲಾದ ಚಿತ್ರಗಳನ್ನು ಕವಿ ಕೊಟ್ಟಿರುವುದು ಸರಿಯಾಗಿದೆ. ಅವನು ಕೊಟ್ಟಿರುವ ಅಂಗಡಿಯ ಮತ್ತು ವ್ಯಾಪಾರಿಗಳ ಕೆಲಸವು ಚಿತ್ರಗಳು ಹೀಗಿವೆ : ಹಲವು ಬಗೆಯ ಡಾಲು, ಗಂಡೆ, ಬಣ್ಣದವಸ್ತು, ರೇಶಿಮೆ ಬಟ್ಟೆ, ತೊಟ್ಟಿಲುಗಳಿದ್ದ ಅಂಗಡಿಯ ಸಾಲು : ವಜ್ರವೈಡೂಲ್ಯ ಮುತ್ತು ರತ್ನಾಭರಣಗಳನ್ನು ಮಾಡುವ ಅಕ್ಕಸಾಲಿಗರ ಅಂಗಡಿಗಳು : ರತ್ನಗಳಿಗೆ ಸಾಣೆ ಹಿಡಿಯುವ ಸಾಣೆಗಾರರು ಮತ್ತು ಮುತ್ತಿಗೆ ಅಗಾಧ ಬೆಲೆ ಕಟ್ಟುವ ವ್ಯಾಪಾರಿಗಳು : ಹಣ ಬಂಗಾರದ ಕೊಪ್ಪರಿಗೆಗಳನ್ನು ಮುಂದಿಟ್ಟು ಕೊಂಡು ನಾನಾ ದೇಶದ ನಾಣ್ಯಗಳನ್ನು ಕಾಯುತ್ತ ಕುಳಿತ ಸೆಟ್ಟಿಗಳು : ಹಡಗಿನ ವ್ಯಾಪಾರದಲ್ಲಿ ಗಳಿಸಿದ ಹಣವನ್ನು ಭಾರಿ ಸಂಖ್ಯೆಯಲ್ಲಿ ತೂಕ ಮಾಡುವ ವ್ಯಾಪಾರಿಗಳು ಇತ್ಯಾದಿ. ಕೃಷ್ಣದೇವರಾಯನ ಕಾಲದಲ್ಲಿ ರಾಜ್ಯಕ್ಕೆ ಸಂದರ್ಶಿಸಿದ್ದ ಡೊಮಿಂಗೋ ಪಾಯಸ್ ವಿಜಯನಗರದ ಅರಮನೆ, ಉತ್ಸವ, ಮನೋರಂಜಕ ಕಾಠ್ಯಕ್ರಮ ಮೊದಲಾದವುಗಳನ್ನು ವರ್ಣಿಸಿದ್ದಾನೆ. ಅವನು ವಿಜಯನಗರವನ್ನು ಕುರಿತು ಬರೆಯುತ್ತಾ ಒಂದು ಕಡೆ ಹೀಗೆ ಹೇಳಿದ್ದಾನೆ : “ಈ ನಗರದಲ್ಲಿ ಎಲ್ಲ ರಾಷ್ಟ್ರಗಳೂ ಎಲ್ಲ ಜನಾಂಗಗಳಿಗೂ ಸೇರಿದ ಜನಗಳನ್ನು ನೋಡಬಹುದು; ಇದಕ್ಕೆ ಇಲ್ಲಿ ನಡೆಯುವ ಅಗಾಧವಾದ ವ್ಯಾಪಾರವೂ ಬೆಲೆಯಾದ ಹರಳುಗಳೂ, ಅದರಲ್ಲಿಯೂ ವಜ್ರಗಳೂ, ಸಿಕ್ಕುವುದು ಕಾರಣವಾಗಿದೆ.”25 ಕನಕನ ಪೂರ್ವೋಕ್ತ ವರ್ಣನೆಯನ್ನು ಪಾಯಸ್‌ನ ಈ ಹೇಳಿಕೆಯು ಸಮರ್ಥಿಸುವುದನ್ನು ಕಾಣುತ್ತೇವೆ. ವಿಜಯನಗರದ ವೈಭವದ ಒಂದು ವಾಸ್ತವ ಚಿತ್ರ ದೊರಕಿದಂತಾಗಿದೆ. ಕೃಷ್ಣದೇವರಾಯನಿಗೆ ಸಂಬಂಧಿಸಿದ ವೈಯಕ್ತಿಕ ವಿಚಾರಗಳು ಅಷ್ಟೇ ಮುಖ್ಯವಾಗಿವೆ- “ಶ್ರೀಕೃಷ್ಣದೇವರಾಯನ ಪಾದನಳಿನಕ್ಕೆ ಶಿರವಚಾಚಿದರು” (೪೧-೪೨) ಎಂಬುದರಲ್ಲಿ 'ಶ್ರೀಕೃಷ್ಣದೇವರಾಯ' ಎಂಬ ಉಲ್ಲೇಖ ನೇರವಾಗಿಯೇ ಬಂದಿದೆ. ಅವನು ಪರಾಕ್ರಮಿಯೂ ಸುಂದರನೂ ಆಗಿದ್ದನಂತೆ. ಕೃಷ್ಣದೇವರಾಯನ ತೇಜೋಮಯರೂಪದ ವರ್ಣನೆ “ಪರಿಪೂರ್ಣ ತೇಜೋಮಯ ಕೃಷ್ಣರಾಯನ ಸಿರಿಮೊಗಕಾಂತಿ” (೧೫-೯) ಎಂಬಲ್ಲಿ ಬಂದಿದೆ. ಕೃಷ್ಣರಾಯನ ಪ್ರಕಾಶಮಾನವಾದ ವ್ಯಕ್ತಿತ್ವದ ಮುಂದೆ ಉಳಿದ ರಾಜರು ೨೩. ಎಚ್. ಎಲ್. ನಾಗೇಗೌಡ, ಪ್ರವಾಸಿ ಕಂಡ ಇಂಡಿಯಾ, ಸಂಪುಟ ಎರಡು, ಪು. 369 ಮಂಕಾದರಂತೆ. ಬಹುಪರಾಕ್ರಮಿಯಾದ ಕೃಷ್ಣದೇವರಾಯನ ಒಂದು ಚಿತ್ರ “ಭುಜಬಲಭೀಮ ಸಾರುವಭೌಮಕೃಷ್ಣ” (೪೦-೬೪) ಎಂಬುದರಲ್ಲಿ ದೊರೆಯುತ್ತದೆ. ಇಲ್ಲಿನ 'ಸಾರುವ ಭೌಮ' ಮಾತು ಇತಿಹಾಸದ ಕೃಷ್ಣದೇವರಾಯನನ್ನೇ ಉದ್ದೇಶಿಸಿ ಹೇಳಿದ್ದೆಂಬುದು ಸ್ಪಷ್ಟ.24 ಪಾಯಸ್ ಕೃಷ್ಣದೇವರಾಯನ ರೂಪವನ್ನು ಗಮನಿಸಿ “ರಾಜನು ಸುಮಾರು ಎತ್ತರವಾಗಿದ್ದು ಲಕ್ಷಣವಾಗಿದ್ದಾನೆ” ಎಂದು ಬರೆದಿರುವುದನ್ನು ಪರಾಕ್ರಮವನ್ನೂ ಗಮನಿಸಿ “Gallant and perfect in all things”25 ಎಂದು ಹೇಳುವುದನ್ನು ಇಲ್ಲಿ ಹೋಲಿಸಿ ನೋಡಬಹುದು. ರತ್ನಮಯ ಮಂಟಪದ ಮಧ್ಯದ ಸಿಂಹಾಸನದಲ್ಲಿ ವಿಪುಲ ವೈಭವದಿಂದ ಶೋಭಿಸುತ್ತಿದ್ದ ಚಿತ್ರವನ್ನು “ವರರತ್ನ ಮಂಟಪ ಮಧ್ಯದ ಸಿಂಹವಿಷ್ಟರದಲ್ಲಿ ಶ್ರೀಕೃಷ್ಣರಾಯ ಪರಮೈಶ್ವರ್ಯದಿಂದೊಪ್ಪಿದ” (೩೬-೪) ಎಂಬುದರಲ್ಲಿ ಕಾಣುತ್ತೇವೆ. ಅರಮನೆಯ ದಂತದ ಸಭಾಮಂಟಪದಲ್ಲಿ “ಸಿಂಹವಿಷ್ಟರದಲ್ಲಿ ಕುಳಿತು ಓಲಗ ನಡೆಸುತ್ತಿದ್ದ ವಿಚಾರವನ್ನು ಕವಿ ಇನ್ನೊಂದೆಡೆ (೩-೭೦) ಪ್ರಸ್ತಾಪಿಸಿದ್ದಾನೆ. ಕೃಷ್ಣದೇವರಾಯನ ಆಳಿಕೆ ಸುಖದಾಯಕವಾದುದೆಂದು ಇತಿಹಾಸ ಹೇಳುತ್ತದೆ, “ಕೃಷ್ಟ ಸುಖ ಸಾಮಾಜ್ಯವನಾಳಿದ ಮುದದೆ” (೪೨-೭೫) ಎಂಬ ಮಾತು ಇದನ್ನು ಸೂಚಿಸುತ್ತದೆ. ವಿಜಯನಗರವನ್ನು ವರ್ಣಿಸುತ್ತಾ “ಪ್ರಪಂಚದ ನಗರಗಳಲ್ಲಿ ಎಲ್ಲಾ ಸೌಕರ್ಯಗಳಿರುವ ನಗರವೆಂದರೆ ಇದು”26 ಎನ್ನುವ ಪಾಯಸ್‌ನ ಮಾತನ್ನು ಇಲ್ಲಿ ಗಮನಿಸಬಹುದು. ಕೃಷ್ಣದೇವರಾಯನಿಗೆ ಸಂಬಂಧಿಸಿದ ವಿವರಗಳಲ್ಲಿ ಅವನಿಗೆ ಮಗನಾದುದರ ಸೂಚನೆ ಸಿಗುವುದು ಒಂದು ಮುಖ್ಯ ಸಂಗತಿ. ಇದು ಕೂಡ ವರ್ಣನೆಯ ಭಾಗವಾಗಿಯೇ ಬಂದಿದ್ದರೂ, ಮಹತ್ವದ ಅಂಶವೆಂದು ತೋರುತ್ತದೆ. ಆ ಪದ್ಯ (೪-೭೦) ಹೀಗಿದೆ : ಜಗದೊಳು ಶ್ರೀಕೃಷ್ಣದೇವರಾಯಗೆ ಗಂಡು ಮಗನಾದ ಪರಮಸಂಭ್ರಮದಿ ೨೪. ಅದೇ ಪು. 362 ೨೫. K.A. Neelakanta Sasthri, A History of South India p.278 ೨೬. ಎಚ್.ಎಲ್. ನಾಗೇಗೌಡ, ಪ್ರವಾಸಿಕಂಡ ಇಂಡಿಯಾ, ಸಂಪುಟ ಎರಡು, ಪು. 369