ಪುಟ:Kanakadasa darshana Vol 1 Pages 561-1028.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೪ಸಿ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದಲ್ಲಿ ಐತಿಹಾಸಿಕ ಅಂಶಗಳು ಹೇಳುವುದು ಸರಿಯಲ್ಲ. ಅವರ ಒಂದೆರಡು ಗ್ರಂಥಗಳಲ್ಲಿ ಮುಖ್ಯವಾಗಿ 'ಮೋಹನತರಂಗಿಣಿ'ಯಲ್ಲಿ ಚರಿತ್ರಾಂಶಗಳು ಬಂದಿವೆಯೆಂಬುದು ನಿಜ. ಆದರೆ ಅವನ್ನು ಇತಿಹಾಸಕಾರನ ದೃಷ್ಟಿಯಿಂದ ಬರೆದವುಗಳಲ್ಲ. ಇತಿಹಾಸದ ಸಂವೇದನೆ ಇತ್ತೆಂದು ಮಾತ್ರ ಹೇಳಬಹುದು. ಹಾಗೆಯೇ ಶ್ರೀಕೃಷ್ಣ ಬಾಣಾಸುರನ ಮೇಲೆ ಯುದ್ಧಕ್ಕೆ ಹೊರಟದ್ದರಲ್ಲಿ ನಿರ್ದಿಷ್ಟ ಚಾರಿತ್ರಿಕ ಸಂದರ್ಭವನ್ನು ಗುರುತಿಸಲಾಗಿದೆ. ಶ್ರೀಕೃಷ್ಣದೇವರಾಯನು ಆದಿಲಶಾಹನ ವಶದಲ್ಲಿದ್ದ ರಾಯಚೂರು ಕೋಟೆಯನ್ನು ಮುತ್ತಿಗೆ ಹಾಕಿದ್ದನ್ನು ಮೆಲುಕುಹಾಕುತ್ತಾ ಕವಿ ಅದನ್ನು ಕೃಷ್ಣನು ಬಾಣಾಸುರನ ಮೇಲೆ ಯುದ್ಧಕ್ಕೆ ಹೊರಟ ಭಾಗದಲ್ಲಿ ಬೆಸೆಯುತ್ತಾನೆ.”30 ಈ ಅಭಿಪ್ರಾಯ ರೋಚಕವಾಗೇನೊ ಇದೆ. ಆದರೆ ಕೃತಿಯಲ್ಲಿ ಇದಕ್ಕೆ ಸೂಚನೆಗಳಿಲ್ಲ. ಇದು ಊಹೆ ಮಾತ್ರ. ಹೀಗೆ ಪ್ರತಿ ಪುರಾಣ ಘಟನೆಯನ್ನೂ ಐತಿಹಾಸಿಕವಾದ ಯಾವುದಾದರೂ ಘಟನೆಗೆ ತಳುಕು ಹಾಕುತ್ತಾ ಹೋದರೆ ಅದಕ್ಕೆ ಕೊನೆಯಿರುವುದಿಲ್ಲ. ಸೂಚನೆ ಸಿಕ್ಕಿದಾಗ ಮಾತ್ರ ಇತಿಹಾಸದ ಅರ್ಥವನ್ನೂ ನಿಷ್ಪನ್ನಗೊಳಿಸುವುದು ಸೂಕ್ತವೆನಿಸುತ್ತದೆ. 'ಮೋಹನತರಂಗಿಣಿ'ಯಲ್ಲಿ ಅನೇಕ ಐತಿಹಾಸಿಕ ಅಂಶಗಳಿವೆ ಎಂಬುದು ನಿಜ. ಅವು ಕಾವ್ಯದ ತುಂಬ ಚದುರಿಕೊಂಡಿವೆ ; ಕೆಲವು ಸಂಧಿಗಳಲ್ಲಿ ಸಾಂದ್ರವಾಗಿವೆ. ಆದರೆ ಇವು ರಾಜಕೀಯ ಸ್ವರೂಪದವು ಎನ್ನುವುದಕ್ಕಿಂತ ಸಾಮಾಜಿಕ ಅಥವಾ ಸಾಂಸ್ಕೃತಿಕ ಸ್ವರೂಪದವು ಎನ್ನುವುದು ಸರಿಯಾದುದು, ರಾಜಕೀಯ ಸಂಗತಿಗಳ ಪ್ರಸ್ತಾಪ ಕಡಿಮೆಯಿರುವುದು ಇದಕ್ಕೆ ಕಾರಣ. ಸಮಕಾಲೀನ ಜೀವನಕ್ಕೆ ಸ್ಪಂದಿಸಿದವರು ಕನಕದಾಸರು, ವಿಜಯನಗರದ ಅರಸರಲ್ಲಿ ಅಧಿಕಾರದಲ್ಲಿದ್ದುದರಿಂದ ವಿಜಯನಗರದ ವೈಭವವೂ ಕೃಷ್ಣದೇವರಾಯನ ಸ್ನೇಹವೂ ಅವನ ಅಂತರಂಗಕ್ಕೆ ಬಂದಿದ್ದರೆ ಆಶ್ಚಯ್ಯಪಡಬೇಕಾಗಿಲ್ಲ. ಆ ಸಂತೋಷವನ್ನು ತನ್ನ 'ಮೋಹನತರಂಗಿಣಿಯ'ಯಲ್ಲಿ ಹಂಚಿಕೊಂಡಿದ್ದಾನೆ. ಆ ಕೃತಿಯ ಕೃಷ್ಣನ ಪಾತ್ರದಲ್ಲಿ ಕೃಷ್ಣದೇವರಾಯನನ್ನು ಕಾಣುವುದರ ಮೂಲಕ ಸಮಕಾಲೀನ ಇತಿಹಾಸವನ್ನು ಅಭಿವ್ಯಕ್ತಿಸಿದೆನೆಂಬ ತೃಪ್ತಿಗೆ ಒಳಗಾಗಿರಬೇಕು. ವಿಜಯನಗರದ ಔನ್ನತ್ಯವನ್ನು 'ಮೋಹನತರಂಗಿಣಿ'ಯಲ್ಲಿ ಕೊಟ್ಟಂತೆ, ವಿಜಯನಗರದ ಅರಸರು ರಕ್ಕಸತಂಗಡಿಯಲ್ಲಿ ಸೋತು ಕೆಲಕಾಲ ತೊಂದರೆಗೊಳಗಾಗಿ ಮತ್ತೆ ಅಧಿಕಾರಕ್ಕೆ ಬಂದುದನ್ನು 'ನಳಚರಿತ್ರೆಯಲ್ಲಿ ವರ್ಣಿಸಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ.31, ಇದು ನಿಜವಿರಬಹುದಾದರೂ, ವೈಯಕ್ತಿಕ ಜೀವನದ ನೋವಿನ ಅಭಿವ್ಯಕ್ತಿಯೂ “ನಳಚರಿತ್ರೆಯಲ್ಲಿ ಕೆಲಸಮಾಡಿರುವ ಸಾಧ್ಯತೆಯಿದೆ. ಇಷ್ಟಕ್ಕೆ ಅವರು ಶ್ರೇಷ್ಠಸಾಹಿತಿಯಾದಂತೆ ಪ್ರಸಿದ್ಧ ಇತಿಹಾಸಕಾರರೂ ಆಗಿದ್ದಾರೆ”32 ಎಂದು 30. ಮೋಹನತರಂಗಿಣಿ ಸಂ. ಎಸ್. ಎಸ್. ಕೋತಿನ, ಮುನ್ನುಡಿ ಪು. xii 31. ಬಿ.ಎಸ್. ಸಣ್ಣಯ್ಯ, ಮಹಾತ್ಮ ಕನಕದಾಸ ಪ್ರಶಸ್ತಿ, ಪು. 96 32. ಅದೇ, ಪು. 99