ಪುಟ:Kanakadasa darshana Vol 1 Pages 561-1028.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೫೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ೮೫೫ ಈ ಪುಟ್ಟ ಭಾವಗೀತೆಗಳಲ್ಲೂ ಸಹ ಒಂದು ಮಟ್ಟದ ವಿಚಾರದ ನೆಲೆಗಟ್ಟನ್ನು ಗುರುತಿಸಬಹುದಾಗಿದೆ. ಪಾಂಡಿತ್ಯದ ಪ್ರದರ್ಶನಕ್ಕೊ, ಚಮತ್ಕಾರಕ್ಕೊ, ಒಗಟಿನ ಅರ್ಥದ ವ್ಯಾಮೋಹಕ್ಕೊ, ವಿಚಾರದ ಜಿಜ್ಞಾಸೆಗೋ ಅಥವಾ ತತ್ತ್ವಜ್ಞಾನಾಭಿವ್ಯಕ್ತಿಗೊ ಹಂಬಲಿಸಿ ರಚಿತವಾಗಿರುವ ಮುಂಡಿಗೆಗಳಲ್ಲಿ ಪುರಾಣ ಸಂಗತಿಗಳು ಅಡಿಗಿಕೊಂಡಿವೆ. ವಿಷ್ಣುವಿಗೆ ಅನ್ವಯವಾಗುವ ಒಂದು ಮುಂಡಿಗೆ ಹೀಗಿದೆ : ಅಂಧಕನನುಜನ ಕಂದನ ತಂದೆಯ ಕೊಂದನ” ಶಿರದಲ್ಲಿ ನಿಂದವನ ಚಂದದ ವಡೆದನ ನಂದನೆಯಳಿನಲ ವಿಂದ ಧರಿಸಿರ್ದ ಮುಕುಂದನಿಗೆ || ಕೇವಲ ಚಮತ್ಕಾರ ಪ್ರಧಾನವಾದ ಇದನ್ನು ಬುರ್ಲಿ ಬಿಂದು ಮಾಧವರಾಯರು ಹೀಗೆ ಅರ್ಥೈಸಿದ್ದಾರೆ : ೧ ಧೃತರಾಷ್ಟ್ರ, ೨ ಪಾಂಡುರಾಜ, ೩ ಧರ್ಮರಾಯ, ೪ ಯಮ, ೫ ಈಶ್ವರ, ೬ ಚಂದ್ರ, ೭ ಸಮುದ್ರರಾಜ, ೮ ಲಕ್ಕಿ, ೯ ವಿಷ್ಣು. ಆದರೆ ಇಲ್ಲಿ ಪುರಾಣದ ಹೆಸರುಗಳನ್ನು ಅರಸಬಹುದಲ್ಲದೆ ಬೇರೆ ಯಾವ ಗಹನ ವಿಚಾರವೂ ಹುದುಗಿಲ್ಲ. ಕನಕದಾಸರ ಕೃತಿಗಳಲ್ಲೆಲ್ಲ ವೈಚಾರಿಕತೆ ದಟ್ಟವಾಗಿ ಮಡುಗಟ್ಟಿ ನಿಂತಿರುವುದು ರಾಮಧಾನ್ಯಚರಿತೆ೦ರಲಿ. “ಎಂಥ ಲೌಕಿಕ ವಸ್ತುವನ್ನಾಗಿಸಿಕೊಂಡರೂ ಅದನ್ನು ಪೌರಾಣಿಕ ಅಥವಾ ಇತಿಹಾಸ ಪ್ರಸಿದ್ದವಾದ ಕಥೆಯ ಪ್ರಣಾಳಿಯಲ್ಲಿ ಹಾಯಿಸಬೇಕೆನ್ನುವ ಚಟ ಯಾವ ಕವಿಯನ್ನು ಬಿಟ್ಟಿದ್ದಲ್ಲ. ಕೃತಿಯ ನಾಮಕರಣದಿಂದಲೇ ಅದರ ಪ್ರಧಾನ ಕಥೆ ಯಾವುದು, ಕವಿಯ ಮುಖ್ಯೋದ್ದೇಶವೇನೆಂಬುದು ನಿರ್ಣಯವಾಗುತ್ತದೆ. ಕವಿ ಸಹಜವಾಗಿ ಕ್ರಾಂತಿ ಮತಿಂತರಾದರೂ ಸನ್ನಿವೇಶ ವಾತಾವರಣ ಬದ್ದವಾಗಿ ಸಂಪ್ರದಾಯನಿಷ್ಠನಾಗುತ್ತಾನೆ; ಸಾಮಾಜಿಕ ವಿಷಯ ಕಥಾವಸ್ತುವಾದರೂ ಪೌರಾಣಿಕ ಪ್ರಜ್ಞೆ ಭಕ್ತಕವಿಯ ಮನಸ್ಸನ್ನು ಸದಾ ಆಕ್ರಮಿಸಿಕೊಂಡಿದೆ” [ಡಾ. ದೇಜಗೌ, ರಾಮಧಾನ್ಯಚರಿತ್ರೆ ಒಂದು ಅಣಕು ಮಹಾಕಾವ್ಯ, ಕನಕ ಕಿರಣ, (ಸಂ) ಕಾ.ತ. ಚಿಕ್ಕಣ್ಣ, ಪು. ೮೫] ರಾಗಿಯ ಮಹತ್ವವನ್ನು ಎತ್ತಿಹಿಡಿಯುವ ಉದ್ದೇಶದಿಂದಲೇ ಈ ಕಥೆಯನ್ನು ಸೃಷ್ಟಿಸಿದ್ದರೂ ಸಹ ಅದಕ್ಕೆ ಪುರಾಣದ ಹಿನ್ನೆಲೆಯನ್ನು ಒದಗಿಸಿದ್ದಾರೆ. ರಾಗಿ ಮತ್ತು ಭತ್ತದ (ನರೆದಲಗ-ನೆಲ್ಲು) ವಾಗ್ವಾದದ ಹಿಂದಿರುವ ವಿಚಾರವೇ ಈ ಕಾವ್ಯದ ಸರ್ವಸ್ವ. ಇದನ್ನು ಬೇರ್ಪಡಿಸಿದರೆ ಅದು ತನಗೆ ತಾನೆ ಒಂದು ಸ್ವತಂತ್ರ ಕೃತಿಯಾಗಬಲ್ಲುದು. ಆದರ ಅದು ಕಥಾಬಂಧಕ್ಕೆ ಅಳವಟ್ಟಿರುವುದರಿಂದ ಅದಕ್ಕೊಂದು ಅಪೂವ್ವವಾದ ಕಲಾತ್ಮಕ ಶೋಭೆ ಒದಗಿಬಂದಿದೆ. ಕನಕದಾಸರಿಗಿರುವ ಅನನ್ಯವಾದ ಬಡವರ ಪ್ರೇಮ ಇಲ್ಲಿ ವ್ಯಕ್ತವಾಗಿದೆ ವಾಸ್ತವವಾಗಿ ರಾಮಧಾನ್ಯಚರಿತೆ ದಲಿತಧ್ವನಿಯ ಒಂದು ಸುಂದರ ರೂಪಕ, ಅಕ್ಕಿಗಿಂತ ರಾಗಿ ಶ್ರೇಷ್ಠ ಎಂದು ರಾಮನಿಂದಲೇ ಮಾನ್ಯತೆ ಪಡೆಯುವ ಅಂಶ ಮಹತ್ವದ್ದಾಗಿದೆ. ರಾಗಿ ಶ್ರೀಸಾಮಾನ್ಯರ ಆಹಾರ ಭತ್ತ ಶ್ರೀಮಂತರ ಸ್ವತ್ತು, ಅವುಗಳ ಸ್ವಾರಸ್ಯಪೂರ್ಣವಾದ ಜಗಳ ವಾದ ವಿವಾದಗಳ ಹಿಂದೆ ಅಡಗಿರುವ ಅರ್ಥ ಈ ಕಾವ್ಯದ ನಿಜಧ್ವನಿ ಎಂದು ಹೇಳಬೇಕು. ರಾಮಧಾನ್ಯ ಚರಿತ್ರೆಯ ಕಥೆ ಕನಕರ ಸ್ವಂತ ಸೃಷ್ಟಿ, ಧಾನ್ಯಗಳನ್ನು ಮೊದಲಿಗೆ ಸಾಹಿತ್ಯದಲ್ಲಿ ಮಾತನಾಡಿಸಿದ್ದು ಅವರ ವಿಶಿಷ್ಟ ಪ್ರತಿಭೆ. ಮೂಕರಿಗೆ ಮಾತು ಕೊಟ್ಟ ಕನಕರ ದ್ರಷ್ಟಾರ ಪ್ರಜ್ಞೆ ದೊಡ್ಡದೆಂದೇ ಹೇಳಬೇಕು. ರಾಗಿಯ ಮಾತಿನಲ್ಲಿ ದುಡಿಮೆಗಾರನ ಧ್ವನಿ ಇದೆ. ನೊಂದವರ ಪ್ರತಿನಿಧಿಯಾಗಿ ಅದು ಕಂಡುಬರುತ್ತದೆ ಭತ್ತದ ಮಾತಿನಲ್ಲಿ ವ್ಯವಸ್ಥೆಯ ಪರವಾದ ಘೋಷಣೆಯಿದೆ, ಸಾಮಾನ್ಯರ ತುಚೀಕರಣವಿದೆ. ಸಿರಿವಂತಿಕೆಯ ಮದವಿದೆ, ಮಡಿವಂತಿಕೆಯ ಅಹಂಭಾವವಿದೆ. ತಾನು ಮೇಲೆಂಬ ಅಹಂಭಾವವಿದೆ. ಪುರೋಹಿತಶಾಹಿಯ ಪ್ರಚ್ಛನ್ನ ಸ್ವರೂಪ ಅಲ್ಲಿ ಎದ್ದು ಕಾಣುತ್ತದೆ. ರಾಗಿಯ ಪ್ರತಿಭಟನೆಯಲ್ಲಿ ಕ್ರಾಂತಿಯ ಸುಳುವಿದೆ. ಶ್ರೀಸಾಮಾನ್ಯನ ಜಾಗೃತಿಯಿದೆ. ಸತ್ಯಹೀನನು ಬಡವರನು ಕ ಣ್ಣೆತ್ತಿನೋಡೆ ಧನಾಡ್ಯರನು ಬೆಂ ಬತ್ತಿ ನಡೆವವುಪೇಕ್ಷೆ ನಿನ್ನದು ಹೇಳಲೇನದನು. || - ಎಂಬ ರಾಗಿಯ ಮಾತಿನಲ್ಲಿ ವಿಚಾರದ ಸತ್ಯವಿದೆ. ಇದು ಸ್ವಬಲದ ಆತ್ಮವಿಶ್ವಾಸವನ್ನೂ ಎದೆಗುಂದದೆ ಹೋರಾಡುವ ಛಲವನ್ನೂ ತೋರಿಸುತ್ತದೆ. ಭತ್ತ (ವೀಹಿ) ವಾದರೂ ಲೋಕದಲಧಿಕ ಭೋಜನವಿದದೆಂ ದಾಕೆವಾಳರು ಬುದರು ಜರೆದು ನಿ ರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲ ಎಂದು ನಿರಾಕರಿಸುತ್ತದೆ. ತನ್ನ ಪರವಾದ ಸಾಕ್ಷಿಯಾಗಿ 'ನಾಕನಿಳಯ'ರನ್ನೇ ಇಟ್ಟುಕೊಳ್ಳುತ್ತದೆ. ತಾನು ದೇವರ ಆಹಾರವೆಂದೂ ಬೀಗುತ್ತದೆ. ತಾನು ಬ್ರಹ್ಮ