ಪುಟ:Kanakadasa darshana Vol 1 Pages 561-1028.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೫೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ೮೫೭ ಧನಸು ಮುರಿದು ತರಲು ಘನ ತನ್ನ ಪದವಿಯ ಬಿಟ್ಟು ವನವ ಸೇರಿದೆನೆಂದು ಘನತಪದಿಂದಲಿ ವನಿತೆ ಮನದಿ ನೊಂದು || ೧ || ಕುರುಹಿನುಂಗುರವಾ ತರಳಾಕ್ಷಿಗೆ ಕೊಡೆ ಬರಿದು ಮಹಾವೆಂದು ಬೇಸರದಿ ಬೀರಿದಳೇ ಸೀತಾ ಅಶೋಕವನದಿಂದ ನಿರುತ ಸಂತಾಪದಿಂದಲಿ ಮನದಿನೊಂದು || ೨ || ಸಮಾರಾಧನೆಗೆ ಅರ್ಹನಾದವನೆಂಬ ಕೊಬ್ಬು ಅದಕ್ಕಾದರೆ ಅಲ್ಲ ಅಲ್ಲ ನೀನು ಸತ್ತವರ ಪ್ರತಿಬಿಂಬರೂಪ ಎಂದು ನರೆದಲಗ ಹೀಯಾಳಿಸುತ್ತದೆ. ಏನೇ ಅಗಲಿ ಇವುಗಳ ತಾರ್ಕಿಕ ಹೋರಾಟದ ಸಂದರ್ಭದಲ್ಲಿ ಕಂಡುಬರುವ ನಾಟಕೀಯತೆ, ಸಂಭಾಷಣೆಯ ಸೊಗಸು, ವೈಚಾರಿಕ ದೃಷ್ಟಿ ಅಪೂವ್ವವಾಗಿದೆ. ತುಂಬ ಸ್ವಾರಸ್ಯಪೂರ್ಣವಾದ ಈ ವಾಗ್ವಿಲಾಸದಲ್ಲಿ ವ್ಯಂಗ್ಯ ವಿಡಂಬನೆ ಮತ್ತು ಕಾಕು ನುಡಿಗಳು ತುಂಬಿವೆ. ನರೆದಲಗನ ಮಾತು ಅದರ ಮಟ್ಟಿಗೆ ಸರಿಯಾಗಿಯೇ ಇದೆ ಪ್ರೋಹಿಗನ ವಾದದಲ್ಲೂ ತಪ್ಪಿಲ್ಲ. ನ್ಯಾಯಾಲಯದಲ್ಲಿ ಅತ್ಯಂತ ಸಮರ್ಥರಾದ ವಕೀಲರಿಬ್ಬರು ತಮ್ಮ ತಮ್ಮ ವಿಷಯವನ್ನು ಸಮರ್ಥನೆ ಮಾಡಿಕೊಂಡಂತೆ ಕಂಡು ಬರುತ್ತದೆ. ಇಂತಹ ಸಂದರ್ಭಗಳಲ್ಲೇ ತೀರ್ಪಿನ ಅಗತ್ಯವಿರುವುದು. ಇಲ್ಲಿ ತೀರ್ಪುಗಾರ ಸ್ವಯಂ ಶ್ರೀರಾಮಚಂದ್ರ, ಅವನಿಗೂ ಈ ಸತ್ಯವನ್ನು ಒಡನೆಯೇ ನಿರ್ಧರಿಸುವುದು ಕಷ್ಟವಾಯಿತು. ಅದಕ್ಕಾಗಿಯೇ ಆತ ಅವುಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಗು ಮಾಡಿದ. ಇಲ್ಲಿ ಕನಕರಿಗಿರುವ ವೈಜ್ಞಾನಿಕ ದೃಷ್ಟಿ ಮನನೀಯ. ಆರು ತಿಂಗಳು ಕಳೆದರೂ ಕಂದದೆ, ಕುಂದದೆ, ಬಣ್ಣಗೆಡದೆ ತನ್ನ ಸತ್ಯವನ್ನು ಉಳಿಸಿಕೊಂಡ ರಾಗಿಯನ್ನು ಶ್ರೇಷ್ಠಧಾನ್ಯ ಎಂದು ತೀರ್ಪುಕೊಟ್ಟದ್ದು ಎಲ್ಲರಿಗೂ ಸಮ್ಮತವೆ. ಇಲ್ಲಿ ಭತ್ತಕ್ಕಿಂತ ರಾಗಿ ಶ್ರೇಷ್ಠ ಆಹಾರವಾಗಿದ್ದರೂ ಮೇಲುವರ್ಗದವರಿಗೆ ಅದರ ಬಗ್ಗೆ ತಾತ್ಸಾರವಿದ್ದುದನ್ನು ತಿಳಿದಿದ್ದರು. ರಾಗಿಯ ಮಹಿಮೆಯನ್ನು ಎತ್ತಿಹಿಡಿದು ಇವರಿಗೆಲ್ಲ ಸರಿಯಾದ ಪಾಠ ಕಲಿಸುವ ದೃಷ್ಟಿಯೂ ಇದ್ದಿರಬೇಕು. ಮೇಲುನೋಟಕ್ಕೆ ತಮಾಷೆಯಂತೆ ಕಾಣುವ ಈ ಕೃತಿಯ ಒಳಹೊಕ್ಕು ನೋಡಿದಾಗ ಜಾತಿಸಮಸ್ಯೆ, ವರ್ಗ ಸಂಘರ್ಷ ಮತ್ತು ಮನುಷ್ಯ ಮಧ್ಯೆ ಬೆಳೆದ ತರತಮ ಭಾವಗಳ ಅಂತರ ಅಭಿವ್ಯಕ್ತಗೊಂಡಿದೆ. ರಾಮಾಯಣ ಮಹಾಭಾರತದ ಕಥೆಗಳು, ಕಥಾಭಾಗಗಳು ಕನಕರ ಕೀರ್ತನೆಗಳಲ್ಲಿ ಅಂತರ್ಗತವಾಗಿವೆ. ಅವು ಅವರ ಬದುಕನ್ನು ಹಾಸುಹೊಕ್ಕಾಗಿ ತುಂಬಿಕೊಂಡಿವೆ. ಕಥೆಗಳ ಮೂಲಕವಾಗಿ ಭಗವತ್ ಸ್ಮರಣೆ ಮಾಡುವುದು ಕನಕರ ವೈಶಿಷ್ಟ್ಯ. ಇಡೀ ರಾಮಾಯಣ ಕಥೆಯನ್ನೆಲ್ಲ ಕೇವಲ ಹದಿನಾಲ್ಕು ಸಾಲುಗಳಲ್ಲೇ ಸೆರೆಹಿಡಿಯುವ ಶಕ್ತಿ ಅಪೂವ್ವವಾದುದು : ಏನೆಂದಳೇನೆಂದಳೋ ನಿನ್ನೊಳು ಸೀತೆ ಹನುಮಯ್ಯ || ಜನಕನ ಮನೆಯಲ್ಲಿ ಜನಿಸಿ ಸುಖದಲ್ಲಿರೆ ಸೇತುವೆಯಕಟ್ಟಿ ರಾವಣನಳಿದು ಸಂ ಜಾತ ಲಂಕಾಧಿಪನನೋಡಿಸಿ ಸೀತೆಯ ಸೆರೆಯ ಬಿಡಿಸಿದ್ದೇ ಧರೆ ನಾಥಾದಿಕೇಶವಗೆ ಬಲು ಬಿರುದು ಎಂದು || ೩ || ಸೀತೆಯನ್ನು ಕಂಡು ಬಂದ ಹನುಮನನ್ನು ರಾಮ ಪ್ರಶ್ನಿಸುವಂತಿರುವ ಈ ಪ್ರಸಂಗದಲ್ಲಿ ರಾಮಾಯಣ ಕಥೆಯನ್ನು ಅಡಕವಾಗಿ ಹೇಳಿರುವ ಸಂಕ್ಷಿಪ್ತತೆ ಗಮನಾರ್ಹವಾದುದು. ಸ್ತುತಿಗಳಲ್ಲಿ ದೇವರನ್ನು ಉನ್ನತಿಗೊಯ್ದು, ತನ್ನನ್ನು ಕೀಳುಗೈದುಕೊಳ್ಳುವ ಬಗೆ ವಚನಕಾರರಂತೆ ಇಲ್ಲಿಯೂ ಕಂಡುಬರುತ್ತದೆ. ಕಂಬದಲಿ ಬಂದ ಆನಂದ ಮೂರುತಿ ನೀನು ನಂಬಿಕಿಲ್ಲದ ಪ್ರಪಂಚಿಗನು ನಾನು ಅಂಬರೀಷಗೆ ಒಲಿದ ಅಕ್ಕೂರಸಖ ನೀನು ಡಂಭಕರ್ಮಿಯು ನಾನು ನಿರ್ಜಿತನು ನೀನು || ಹೀಗೆ ಭಜನೆ ಮಾಡುವಾಗಲೇ ಅಂಬರೀಷ, ಅಕ್ರೂರ ಮೊದಲಾದವರ ಪ್ರಸಂಗಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಭಕ್ತನಾದ ಕನಕ ದೇವರ ಜೊತೆಯಲ್ಲೇ ಉಳಿದ ಪ್ರಾಚೀನ ಭಕ್ತರನ್ನೂ ಸ್ಮರಿಸುವುದು ಕಂಡುಬರುತ್ತದೆ. ಆತ ಹರಿಯನ್ನು ಮಾತ್ರವಲ್ಲದೆ ಹರನನ್ನು ಕುರಿತು ಮನದುಂಬಿ ಹಾಡಿದ್ದಾನೆ. ಶಿವ ಶಿವ ಶಿವ ಎನ್ನಿರೊ-ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೋ || ಆಗಮ ಸಿದ್ದಾಂತ ಮೂಲದ ಜಪವಿದು (ಶಿವ) ನಿಮ್ಮ