ಪುಟ:Kanakadasa darshana Vol 1 Pages 561-1028.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೫೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ೮೫೯ ರೋಗದ ಮೂಲವ ಕೆಡಿಪ ಔಷಧವಿದು (ಶಿವ) ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ (ಶಿವ) ನಿಮ್ಮ ತನುಮನ ಪ್ರಾಣವ ವ್ಯರ್ಥವ ಮಾಡದೆ (ಶಿವ) | ಶಿವ ಶಿವ ಶಿವ ಎನ್ನಿರೋ ...... ಪುರಾಣ ವೀರರನ್ನು ಸ್ತುತಿಸುವಾಗ ಈ ಕವಿ ಆಂಜನೇಯನಿಗೆ ವಿಶೇಷವಾದ ಮನ್ನಣೆಯನ್ನಿತ್ತಿರುವುದು ಕಂಡುಬರುತ್ತದೆ : ವೀರ ರಾವಣನೊಡನೆ ಹೋರಿದ ವೀರರಗ್ಗದ ಕಪಿಗಳವರೊಳು ಮಾರುತನ ಮಗನೇನು ಧನ್ಯನೊ ಬ್ರಹ್ಮಪಟ್ಟದಲಿ ಸೇರಿಸಿದೆ ನಿನ್ನಂತೆ ಕೊಡುವ ಉ ದಾರಿ ಯಾವನು ತ್ರಿಜಗದೊಳಗಾ ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ || ಭಗವನ್ನಾಮಸ್ಮರಣೆಯಲ್ಲೂ ಉತ್ತಮ ಉಪಮೆಗಳನ್ನೂ, ಪ್ರತಿಮೆಗಳನ್ನೂ ಕನಕ ಪ್ರತಿಭೆ ಸೃಷ್ಟಿಸಿದೆ. “ನಾರಾಯಣನೆಂಬ ನಾಮದ ಬೀಜವನು ನಾಲಿಗೆಯ ಕೂರಿಗೆಯ ಮಾಡಿ ಬಿತ್ತಿರಯ್ಯ” ಎಂಬ ಅನುಭಾವದ ನುಡಿ ಒಕ್ಕಲು ವೃತ್ತಿಯ ಅನುಭವವನ್ನು ಆಧರಿಸಿ-ದಿನನಿತ್ಯದ ಕಸುಬುಗಳ ಬಗ್ಗೆ ಕವಿಗಿರುವ ಅರಿವನ್ನು ತೋರಿಸುತ್ತದೆ. “ಕೂರಿಗೆ” ಎಂಬಂತಹ ಪದ ಪ್ರಯೋಗದಲ್ಲೂ ಕವಿಗಿರುವ ಜಾನಪದೀಯ ದೃಷ್ಟಿ ವ್ಯಕ್ತವಾಗಿದೆ. ಜಗತ್ತಿನಲ್ಲಿ ದೈವವಲ್ಲದೆ ಬೇರೆ ನಮ್ಮನ್ನು ಯಾರೂ ಕಾಯುವುದಿಲ್ಲ ಎಂಬ ನಂಬಿಕೆ ಕನಕರಿಗೆ ದೃಢವಾಗಿದೆ. ಅದಕ್ಕೆ ಅನೇಕ ನಿದರ್ಶನಗಳನ್ನು ಪುರಾಣಗಳಲ್ಲೇ ಆರಿಸಿದ್ದಾರೆ. 'ತನಯ ಪ್ರಹ್ಲಾದನಿಗೆ ಪಿತ ಮುನಿದನು ಜನನಿಯೇ ರಕ್ಷಿಪಳೆಂತೆಂಬೆನೆ ಆ ಕುಂತಿತನಯ ರಾಧೇಯನಿಗೆ ಎರಡೆಣೆಸಿದ ಮೇಲೆ, ತಂದೆ ತಾಯಿಗಳು ರಕ್ಷಕರೆಲ್ಲಿ ಆಗುತ್ತಾರೆ ಎಂಬ ಭಾವ ಕನಕರದು. ಕಂಸ ತಂದೆಯನ್ನೇ ಬಂಧಿಸಿದ, ಸುಗ್ರೀವ ಅಣ್ಣನನ್ನೇ ಕೊಲ್ಲಿಸಿದ. ಆದ್ದರಿಂದ ತನಗೆ ದೇಹಾನು ಬಂಧುಗಳೇ ಬಂಧುಗಳೆಂಬ ಮನದಿ ನಿಶ್ಚಯವಾಗಿ ನಂಬಬೇಡ ಘನಕೃಪಾನಿಧಿ ಕೇಶವನನ್ನು ನಂಬಿದವರಿಗೆ ಇಹಪರದಿ ಸುಖ' ನಿರ್ಣಯ ಕನಕರದಾಗಿತ್ತು. ಹೀಗಾಗಿ ಅವರು ತಮ್ಮನ್ನು ದಾಸದಾಸರ ಮನೆಯ ದಾಸಾನುದಾಸ ನಾನು ಎಂದು ಕರೆದುಕೊಂಡು ಭಜಿಸಿ ಬದುಕಿಲೊ ಮನುಜ ಮನಮುಟ್ಟಿ ಶ್ರೀಹರಿಯ ಎಂದು ಕರೆಯಿತ್ತರು. ತಾನು ಶಿವಶರಣರ ಮನೆಯ ಊಳಿಗದಾಳು ಎನ್ನುವ ಬಸವಣ್ಣನವರ ವಚನಗಳನ್ನು ಇಲ್ಲಿ ನೆನೆಯಬಹುದು. ದೇವಸ್ತುತಿಯಲ್ಲಿ ಅವನು ಗೈದ ಪವಾಡಗಳನ್ನೂ, ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆಯ ಕಾರ್ಯಗಳನ್ನು ಕವಿ ನೆನೆಯುತ್ತಾರೆ. ಬಲಿಯ ಮೆಟ್ಟಿದ ಪಾದ, ಕಾಕುಶಕಟನ ತುಳಿದು ಕೊಂದ ಪಾದ, ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ, ಲೋಕಪಾವನೆ ಗಂಗೆ ಜನಿಸಿದ ಪಾದ, ಶಿಲೆಯ ಸತಿಯಳನು ಸೌಂದಯ್ಯಗೊಳಿಸಿದ ಪಾದ, ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ, ಕೊಲಿಸಿ ಕಾಳಗದಿ ಕೌರವರ ಕೆಡಹಿದ ಪಾದ ಎಂದು ಹೇಳಿ ಕೊನೆಗೆ ಗರುಡ ಶೇಷಾದಿಗಳು ಪೊತ್ತುಕೊಂಡಿಹ ಪಾದ ವರಕಾಗಿನೆಲೆಯಾದಿಕೇಶವನ ಪಾದ ಎಂದು ಹರಿದು ಹೆಗ್ಗಳಿಕೆಯನ್ನು ಬಣ್ಣಿಸುತ್ತಾರೆ. ಜನ ಪ ದ ದ ಧಾಟಿಯನ್ನೊಳಗೊಂಡಿರುವ ಡೊಳ್ಳಿನ ಹಾಡಿನಂತಹ ಕೀರ್ತನೆಗಳಲ್ಲೂ ಸಹ ಪುರಾಣ ಪ್ರಸಂಗಗಳು ಅಂತರ್ಗತವಾಗಿದೆ. ದೇವಿ ನಮ್ಮ ದ್ಯಾವರು ಬಂದರು ಬನ್ನಿರೆ | ಪ || ಕೆಂಗಣ್ಣ ಮೀನನಾಗಿ ನಮ್ಮ ರಂಗ ಗುಂಗಾಡಿ ಸೋಮನ ಕೊಂದನ್ಮಾ ಗುಂಗಾಡಿ ಸೋಮನ ಕೊಂದು ವೇದವನು ಬಂಗಾರದೊಡಲಿಗಿತ್ತಾನ್ಮಾ || - ಕುರುಬರ ಸಂಪ್ರದಾಯದ ಆಚರಣೆಗಳಲ್ಲೂ ಪುರಾಣದ ಹಾಡುಗಳು ಬೆರತುಕೊಂಡಿರುವುದು ಕಂಡು ಬರುತ್ತದೆ. “ಹರಿಭಕ್ತಿಸಾರ' ಕೀರ್ತನೆಗಳಿಗಿಂತ ತುಸು ಭಿನ್ನವಾಗುತ್ತದೆ. ಆತ್ಮನಿವೇದನಾ ಪರವಾದ ಪ್ರಾರ್ಥನಾಕೃತಿ ಇದಾಗಿದೆ. ಇಲ್ಲಿಯೂ ಸಹ ಭಕ್ತಿರಸ ಪ್ರಧಾನವಾದ ಹರಿ ನಾಮಸ್ಮರಣೆಗಳು ಕಂಡುಬರುತ್ತವೆ. ಅದಕ್ಕೆ ಅವಲಂಬನವಾಗಿ ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ಕಾಣುವ ಭಕ್ತರ ಚರಿತ್ರೆಗಳು ಒದಗಿಬರುತ್ತವೆ. ಭಕ್ತ ಭಗವಂತರ ಕಥೆಗಳು ರೂಪಿತವಾಗುವ ಹಾಗೆಯೇ ಭಗವಂತನನ್ನು ಎದುರಿಸಿದವರ ಕಥೆಗಳೂ ಅಡಕವಾಗಿವೆ, ಪ್ರಹ್ಲಾದ, ಅಜಾಮಿಳ ಧ್ರುವ ಮೊದಲಾದ ಭಕ್ತರ ಕಥೆಯನ್ನು, ಬಲಿ, ಬಾಣಾಸುರ, ಹಿರಣ್ಯಾಕ್ಷ, ಶಿಶುಪಾಲ, ಕಂಸ, ಮುಂತಾದ ರಾಕ್ಷಸ ವೀರರ ದೈವ ಸಂಬಂಧೀ ಘಟನೆಗಳನ್ನು ಈ ಕವಿ ಹರಿಭಕ್ತಿಸಾರದಲ್ಲಿ ತಂದಿದ್ದಾರೆ, ಶತಕಗಳ ವಸ್ತುವಿನ್ಯಾಸವನ್ನು ಇಲ್ಲಿನ ರಚನೆಗಳಲ್ಲಿ ಹರಿ ಸರ್ವೋತ್ತಮತ್ವ ಬಿಂಬಿತವಾಗಿದೆ. ಅಜಾಂಡವೇ ಮನೆ ನಾರಾಯಣನೇ ಅದರ ಯಜಮಾನ, ಬ್ರಹ್ಮ, ಶಿವ, ಸಿರಿ, ಶಾರದೆಯರು