ಪುಟ:Kanakadasa darshana Vol 1 Pages 561-1028.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೬೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ೮೬೧ ಜನಪರನಾದ ಈ ಕವಿ ಸಮಕಾಲೀನ ಪ್ರಜ್ಞೆಯಲ್ಲಿ ಎಷ್ಟೇ ಪ್ರಸ್ತುತವೆನಿಸಿದರೂ ಅವರ ಬದುಕು ಅಂತಿಮವಾಗಿ ಫಲಿಸಿರುವುದು ಅಧ್ಯಾತ್ಮದಲ್ಲಿ, ಭಾರತೀಯ ದರ್ಶನದ ಪ್ರಕಾರ ಇದೇ ನಿಜವಾದ ಸಿದ್ದಿ. ಕುಟುಂಬದ ವರ್ಗವಾಗಿ ಕಾಣುವ ಒಂದು ಪದ್ಯ ಹೀಗಿದೆ : ಸಿರಿಯು ಕುಲಸತಿ ಸುತನು ಕಮಲಜ ಹಿರಿಯ ಸೊಸೆ ಶಾರದೆ ಸಹೋದರಿ ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು ನಿರುತ ಮಾಯೆಯು ದಾಸಿ ನಿಜಮಂ ದಿರವಜಾಂಡವು ಜಂಗಮ ಸ್ಟಾ ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ || ಇದಲ್ಲದೆ ಭಗವಂತ ಭಕ್ತಪರಾಧೀನ. ಅವರು ಏನೇ ಪಾಪಗಳನ್ನು ಮಾಡಿದರು ಅವರನ್ನು ಕ್ಷಮಿಸಿ ಕಾಯುವ ಔದಾರ್ಯ ಮೂರುತಿ ಈತ. ಹೆತ್ತ ಮಗಳನು ಮದುವೆಯಾದವ ನುತ್ತಮನು ಗುರುಪತ್ನಿಗಳುಪಿದ ಚಿತ್ತಜನು ಮಾವನ ಕೃತಘ್ನನು ನಿನಗೆ ಮೈದುನನು ಹೊತ್ತು ತಪ್ಪಿಸಿ ಕಾಮದಲಿ ಮುನಿ ಪೋತ್ತಮನ ಮಡದಿಯನು ನೆರೆದವ ಗಿತ್ತೆ ಕೈವಲ್ಯವನ್ನು ರಕ್ಷಿಸು ನಮ್ಮನನವರತ || ಇಲ್ಲಿ ಪುರಾಣಪುರುಷರ ಗುಣಗಳ ಜೊತೆಯಲ್ಲೇ ದೋಷವನ್ನೂ ತೋರಿಸುವ ವಿಮರ್ಶಕ ಪ್ರಜ್ಞೆ ವಿಶಿಷ್ಟವಾದುದು. ಮುಖ್ಯವಾಗಿ “ಕನದಾಸರು ಭಗವತ್ ಸಮರ್ಪಣೆ ಮಾಡಿಕೊಂಡ ಭಕ್ತರು. ಮಾತ್ರವಲ್ಲ ಪ್ರಾಚೀನ ಕಾವ್ಯ ಪುರಾಣ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದ ವಿದ್ವಾಂಸರೂ ಹೌದು. ಈ ಪುರಾಣಪ್ರಜ್ಞೆ ಅವರ ಕೀರ್ತನೆಗಳಲ್ಲಿ ದಟ್ಟವಾಗಿ ಹರಡಿಕೊಂಡಿದೆ. ಆದರೆ ಇದು ಶುಷ್ಕ ಸರಕಾಗಿ ಪ್ರದರ್ಶಿತವಾಗದೆ ಆತ್ಮೀಯ ಆದ್ರ್ರತೆಯಲ್ಲಿ ರಸಪಾಕದಲ್ಲಿ ಅದ್ದಿದ ಹೃದಯ ಮಿಡಿವ ಕಾವ್ಯವಾಗಿದೆ.” ಹಾಗೆ ನೋಡಿದರೆ ಹರಿದಾಸ ಪರಂಪರೆಯಲ್ಲಿ ಕನಕರೊಬ್ಬರೇ ಕವಿ. ಉಳಿದವರು ಕೀರ್ತನೆಕಾರರು, ಕೀರ್ತನೆಗಳನ್ನು ಮಾತ್ರವಲ್ಲದೆ ಮಹತ್ವದ ಕಾವ್ಯಗಳನ್ನೂ ರಚಿಸಿದ ಹಿರಿಮೆ ಕನಕರದು. ಪುರಾಣ ಪ್ರಜ್ಞೆಯಲ್ಲಿ ಸಾಮಾಜಿಕ ಬದುಕನ್ನು ಅಳವಡಿಸಿರುವುದು ಅವರ ಸಮಸ್ತ ಸಾಹಿತ್ಯದಲ್ಲೂ ಕಂಡು ಬಂದಿದೆ. (ಎಚ್. ಜೆ. ಲಕ್ಕಪ್ಪ ಗೌಡ, ಕನಕದಾಸರ ಕೀರ್ತನೆಗಳ ಕಾವ್ಯ ಮೌಲ್ಯ, 'ಕನಕಕಿರಣ', ಸಂ. ಕಾ. ತ. ಚಿಕ್ಕಣ್ಣ, ಪು 141)