ಪುಟ:Kanakadasa darshana Vol 1 Pages 561-1028.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೭೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೭೭ tttttttttttttttttttttttttttttttttttttttttttttttttt ಪೇಳೆ ಮೂವತ್ತಾರುಯೋಜನದಗಲದೊ ಳಾಲಂಬವಿಡಿದೋಜೆವಿಡಿದು ನೀಳನಾಲ್ವತ್ತೆಂಟು ಗಾವುದ ಸಂದಿರೆ ಪಾಳೆಯ ಬಿಟ್ಟುದಾ ಕಟಕ | ವಣಿಜರಂಗಡಿಗಳು ಹಯಶಾಲೆ ಗಜಶಾಲೆ ಗಣಿಕಾಂಗನೆಯರ ಕೇರಿಗಳು ಕಣದೊಳಾದವು ವಿಶ್ವಕರ್ಮ ನಿರ್ಮಿತದ ಪಟ್ಟಣವ ಪಾಳೆಯ ನೃಪನಾ || ಏಸು ಜನ್ಮದ ತಪಃಫಲವಿದು ಬಂದುದೊ ಈ ಸೌಂದರಿಯ ಸಂಭೋಗ ಲೇಸಿನೊಳ್ ತನುವ ತೆತ್ತGಶಕ್ತಸೌಭಾಗ್ಯ? ಭಾಸುರವಹುದೆಂದ ತನಗೆ || ಆವಕಾಲವ ಕಳೆದರೆ ಜೀವವುಳ್ಳನ್ನ ಸಾವಡಸದೆ ಮಾಣ್ಣಪುದೆ ಈ ವನಿತೆಯೊಳೊಂದಿ ಸುಖವಟ್ಟು ಮಡಿದಡೆ ಜೀವನ್ಮುಕ್ತಿಯೆಂದವನು || ಅರಲಂಬನಾತ್ಮಜ ನುಡಿದ ವಾಕ್ಯವ ಕೇಳಿ ತರಲಾಕ್ಷಿ ದುಕ್ಕದೆ ತನ್ನ 'ಕೊರಳನುತ್ತರಿಸೆಂದು' ಪಾದ ಪದ್ಮಕೆ ಬಿದ್ದು ಹೊರಲೆ ನೋಡಿ ಚಿಂತಿಸಿದ || ನಿನ್ನ ಸಾವನ್ನು ನಾನು ಕಣ್ಣಾರೆ ನೋಡುವ ಮೊದಲು ಅಂದರೆ ನಾನು ವಿಧವೆಯಾಗುವ ಮೊದಲು, ನಾನು ಮುತ್ತೈದೆಯಾಗಿ ಸಾಯುವಂತೆ ಕೃಪೆ ಮಾಡು ಅರ್ಥಾತ್ ನಿನ್ನ ಕೈಯಾರ ನನ್ನ ಕೊರಳನ್ನು ಕತ್ತರಿಸು ಎಂಬ ಉಷೆಯ ಮಾತಿನಲ್ಲಿ, ಪ್ರೇಮಪ್ರಾಪ್ತಿಯಾಗಿ ಯುದ್ಧದಲ್ಲಿ ಹೋರಾಡಿ ಸತ್ತರೆ ಜೀವನ್ಮುಕ್ತಿ ಎಂಬ ಅನಿರುದ್ಧನ ಮಾತಿನಲ್ಲಿ ವೀರಗುಣಸಹಜವಾದ ನಿರ್ಭೀತಿ ನಿನದಿಸುವುದನ್ನು ಕಾಣಬಹುದು. ಯುದ್ಧಸನ್ನದ್ದರಾಗುವ ವೀರರಿಗೆ ಸ್ತ್ರೀಯರು ಅಷ್ಟೇ ವೀರಾವೇಶದಿಂದ ನೆರವಾಗುವ ಚಿತ್ರ ವಿಶಿಷ್ಟವಾದುದು ಕನಕದಾಸರು ತಮ್ಮ ಕಾವ್ಯದಲ್ಲಿ ಆ ಮುಖವನ್ನು ಮರೆಯದ ಹಾಗೆ ಚಿತ್ರಿಸಿದ್ದಾರೆ : ಇನ್ನು ಆ ಕಾಲದಲ್ಲಿ, ಯುದ್ದದ ಬಗ್ಗೆ ಸಾವಿನ ಬಗ್ಗೆ ಕಿಂಚಿತ್ತೂ ಅಂಜಿಕೆ ಇರಲಿಲ್ಲ. ಉನ್ನತ ಧೈಯಕ್ಕಾಗಿ ಹೋರಾಡಿ ಮಡಿಯುವುದು ಶ್ರೇಯಸ್ಕರ ಎಂಬ ನಿಲುವು ರಕ್ತದ ಕಣಕಣದಲ್ಲಿದ್ದುದನ್ನು ಕಾಣುತ್ತೇವೆ. ಕನಕದಾಸರು ಅನಿರುದ್ದನ ಮಾತಿನ ಮೂಲಕ ಅದನ್ನು ಎರಕ ಹುಯ್ದಿದ್ದಾರೆ. ಉಷಾ ಅನಿರುದ್ದರ ವಿವಾಹವೃತ್ತಾಂತವನ್ನು ನಾರದನು ಬಾಣಾಸುರನಿಗೆ ಹೇಳಿದ ಪ್ರಯುಕ್ತ ಅವನ ಸೈನ್ಯ ನಿನ್ನನ್ನು ಸೆರೆ ಹಿಡಿಯಲು ಬಂದಿದೆ, ನಿನ್ನ ಸಾವಿಗೆ ನಾನೇ ಕಾರಣಳಾದೆ ಎಂದು ಚಿತ್ರಲೇಖೆ ಅನಿರುದ್ಧನಿಗೆ ಹೇಳಿದಾಗ ಅವನ ಉತ್ತರ ನೋಡಿ : ದುಕ್ಕವಿದೇಕೆ ಮಾತೃಕೆಯ ಗರ್ಭವ ಮತ್ತೆ ಹೊಕ್ಕಡೆ ಬಿಡುವುದೆ ಪ್ರಾಪ್ತಿ ಅಕ್ಕರ ಹಣೆಯೊಳಿರ್ದನಿತಾದಪುದೆಂದು ನಕ್ಕನು ಮಂತ್ರಿಜೆಯೊಡನೆ ನಳಿನೋದ್ಭವ ಕೋಟಿ ವರ ತನುವಿಡಿ ದಣಿದೊಡದೇನು ವೃಥಾಯ ಸುಟೆಗುರುಳಬಲೆಯ ತೋಳತೆಕ್ಕೆಯೊಳೊಂದು ಗಳಿಗೆ ಬಾಳಲು ಮುಕ್ತಿಯಹುದು || ೧. ಡಾ. ಕೆ.ತಿ.ನ. “ಶಕ್ರಸೌಭಾಗ್ಯ” ಎಂಬುದಕ್ಕೆ “ಶುಕ್ರದೆಸೆ” ಎಂದು ಗದ್ಯಾನುವಾದ ಮಾಡಿದ್ದಾರೆ. ಅದರ ನಿಜವಾದ ಅರ್ಥ ಇಂದ್ರವೈಭವ, ಇಂದ್ರಪದವಿ ಎಂದು, (ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿತ ಮೋಹನತರಂಗಿಣಿ ಗದ್ಯಾನುವಾದ ಕೃತಿ.) ೨. ಡಾ. ಕೋ.ತಿ ನ “ಕೊರಳನುತ್ತರಿಸು” ಎಂಬುದಕ್ಕೆ “ನನ್ನ ಪ್ರಾಣವನ್ನು ಉದ್ಧರಿಸು”, ಎಂದು ಗದ್ಯಾನುವಾದ ಮಾಡಿದ್ದಾರೆ. ಸದ್ಯದಲ್ಲಿ ಉತ್ತರಿಸು ಎಂಬುದಕ್ಕೆ ಅರ್ಥ ಕತ್ತರಿಸು ಎಂದು ಇಂದಿಗೂ ಜನಪದರು ಸೊಪ್ಪನ್ನು ಉತ್ತರಿಸು, ಈರುಳ್ಳಿಯನ್ನು ಉತ್ತರಿಸು ಎಂದು ಬಳಸುವುದನ್ನು ಗಮನಿಸಬೇಕು. ಜನಪದ ಸತ್ಯಸಮನ್ವಿತವಾದ ಕನಕದಾಸರ ಭಾಷೆಯ ಮರ್ಮ ಗೊತ್ತಿಲ್ಲದೆ ಅನನ್ವಯ ಅರ್ಥ ಕಲ್ಪಿಸಬಾರದು.