ಪುಟ:Kanakadasa darshana Vol 1 Pages 561-1028.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ CH ಚಿಣ್ಣನದಾರಿಗಂಜುವನಲ್ಲ ಕಳನಮು ಕಣ್ಣ ನೀ ಬಯಸಿದರೆ ಜಯಿಸು || ಎಂದು ವರದಿ ಮಾಡಿದಾಗ ಬಾಣಾಸುರ ತಾನೇ ಸೈನ್ಯಸಮೇತ ಯುದ್ದಕ್ಕೆ ಬರುತ್ತಾನೆ. ಅನಿರುದ್ಧ ಆ ರಕ್ಕಸ ಸೈನಿಕರ ರುಂಡಗಳನ್ನು ಚೆಂಡಾಡಿದ ವರ್ಣನೆ ಎಷ್ಟು ಹೊಚ್ಚ ಹೊಸತನದಿಂದ ಕೂಡಿದೆ ಎಂಬುದನ್ನು ನೋಡಿ ರಣಮಾರ್ಗದಿ ನಿಖಿಲಾಯುಧವೇಚಿನ ಬಣಗುಗಳ್ ಬಂದು ತನ್ನೊಡನೆ ಸೆಣಸಲು ಕೂರ್ಗೋಲಗಾಜ ಸುಂಕಕೆ ತಲೆ ವಣಗೊಂಡು ಬಿಟ್ಟನೆಲ್ಲರನು || ಸುಂಕಕಟ್ಟೆಯ ರೂಪಕ ಇಲ್ಲಿ ಬಳಕೆಯಾಗಿದೆ. ರಣರಂಗ ಮಾರ್ಗದ ಸುಂಕದ ಕಟ್ಟೆಯಲ್ಲಿ ರಕ್ಕಸ ವ್ಯಾಪಾರಿಗಳು (ಬಣಗು < ವಣಿಕ್ = ವ್ಯಾಪಾರಿ ಎಂಬ ಅರ್ಥವೂ ಆಗುತ್ತದೆ ಕುಲ್ಲಕ ಎಂಬ ಅರ್ಥದ ಜೊತೆಗೆ) ತಮ್ಮ “ಆಯುಧಗಳ ಹೇರಿಗೆ ಸುಂಕ ಕೊಡಲು ನಿರಾಕರಿಸಿ ತರಲೆ ಮಾಡಿದಾಗ ಅನಿರುದ್ಧ ಅವರ ತಲೆಗಳನ್ನೇ ಸುಂಕದ ಹಣವನ್ನಾಗಿ ತೆಗೆದುಕೊಂಡು ಹೇರನ್ನು ಮುಂದಕ್ಕೆ ಬಿಟ್ಟನಂತೆ ! ಇದಕ್ಕಿಂತಲೂ ಚೆನ್ನಾಗಿ, ಸಚಿತ್ರವಾಗಿ, ನವೀನವಾಗಿ ಅನಿರುದ್ಧ ಶತ್ರುಗಳ ಸಾಲು ಹೆಣ ಮಲಗಿಸಿದ್ದನ್ನು ವರ್ಣಿಸಲು ಸಾಧ್ಯವಿಲ್ಲ ಇನ್ನೊಂದು ಉದಾಹರಣೆ : ಬಾಣಾಸುರ ಕೃಷ್ಣನ ಮೇಲೆ, ಕುಂಭಾಂಡ ಬಲರಾಮನ ಮೇಲೆ ಮಾಯಾಯುದ್ದಕ್ಕೆ ತೊಡಗಿದಾಗ ಯುದ್ದ ಭಯಂಕರವಾಗುತ್ತದೆ : ಜಿಗುಪ್ಪೆ ಮೂಡಿಸುತ್ತದೆ. ಅದನ್ನು ಹೊಚ್ಚಹೊಸ ರೂಪಕದಿಂದ ವರ್ಣಿಸಿರುವ ಬಗೆಯನ್ನು ನೋಡಿ : ತಲೆಗಳ ತುಂಡು ತೋಳಳ ತುಂಡು ನಡುತುಂಡು ಸಲೆ ಜಾನು ಜಂಘಯ ತುಂಡು ಬೆಲೆಯಿಂದ ಕಟುಕರಂಗಡಿಯಂತೆ ರಣರಂಗ ಸಲೆ ಜಿಗುಪ್ಪೆಯ ತೋರಿಸಿತು || ರಣರಂಗವನ್ನು ಕಟುಕರಂಗಡಿಯ ರೂಪಕದಲ್ಲಿ ಸೆರೆ ಹಿಡಿದಿರುವ ಕನಕದಾಸರ ಸ್ಪೋಪಜ್ಞತೆ ಮೆಚ್ಚುವಂಥದು. ಬಹಶಃ ಹೊಸಗನ್ನಡದಲ್ಲಿ ಆಲನಹಳ್ಳಿ ಕೃಷ್ಣ ತಮ್ಮ 'ಬೆಳಗು' ಕವನದಲ್ಲಿ ಮೂಡಲಿನ ಬಣ್ಣದೋಕುಳಿಯನ್ನು 'ಮಾಂಸದಂಗಡಿ'ಯ ರೂಪಕದಲ್ಲಿ ಸೆರೆಹಿಡಿದಿರುವುದನ್ನು ಬಿಟ್ಟರೆ ಮತ್ತಾರೂ ಹೀಗೆ ಚಿತ್ರಿಸಿಲ್ಲ. ಅಂದರೆ ಕನಕದಾಸರ ವರ್ಣನೆಗಳಲ್ಲಿ ಬಹುತೇಕ ಹಳಸಲು ತಂಗಳುಗಳಿಗಿಂತ ಬೆಚ್ಚನೆಯ ಹಬೆಯಾಡುವ 'ಬೆಂಗಳು' (< ಬೆಂಗಳು) ಹೆಚ್ಚು ಎನ್ನಬೇಕು. ಕೇಣವಿಲ್ಲದ ರೋಹಿತ ವಾರ್ಧಿಯೊಳು ಕಟ್ಟು ಗಾಣಕ್ಕೆ ಪಾಯ ಮೀನೆನಲು ಗೋಣರೆಗಡಿದು ಪೆರ್ನರವಾಂತು ಮಿಡುಕುವ ಪ್ರಾಣದ ಶವಗಳೊಪ್ಪಿದವು || ಗಾಳದ ರೂಪಕ ಇಲ್ಲಿ ಬಳಕೆಯಾಗಿದೆ. ಗಾಳದ ಕೊಕ್ಕೆಮುಳ್ಳು ಮೀನಿನ ಗಂಟಲಿಗೆ ಸಿಕ್ಕಿಕೊಂಡಾಗ ಬಿಡಿಸಿಕೊಳ್ಳಲು ಮೀನು ಮಿಡುಕಾಡುವಂತೆ, ರಕ್ತದ ಕಡಲಿನಲಿ ಅರೆಗಡಿದ ಕುತ್ತಿಗೆಯ ಸೈನಿಕರ ರುಂಡಗಳು, ಮುಂಡಕ್ಕೆ ಇನ್ನೂ ತಗುಲಿಕೊಂಡಿರುವ ನರದಿಂದಾಗಿ ಮಿಡುಕಾಡುತ್ತಿದ್ದುವಂತೆ, ಒಂದೇ ಸಮನೆ ವಿಲವಿಲನೆ ಒದ್ದಾಡುತಿದ್ದುವಂತೆ ! ಎಷ್ಟು ಸಚಿತ್ರವಾದ ವರ್ಣನೆ ಇದು.* ತುಂಡು ಮುಂಡಗಳ ಮಿದುಳು ರೋಹಿತ ಕೊಬ್ಬು ಖಂಡವ ಮನದಣಿವನಕ ಉಂಡಳೆವೆಯನಾಂತು ಕಮುರುದೇಗಿತು ಮರು ಇಂಡ ಶಾಕಿನಿ ಡಾಕಿನಿಯರು || ಶಾಕಿನಿ ಡಾಕಿನಿಯರು ಕಟರೆಯಾಗಿ ತಿಂದು ಕಮುರುದೇಗಿತು ಎಂಬ ವರ್ಣನೆಯೇ ಸಾಕಲ್ಲವೇ ರಣರಂಗದ ಅಗಾಧ ಮಾರಣಹೋಮವನ್ನು ಮನದಟ್ಟು ಪಡಿಸಲು ! ಒಟ್ಟಿನಲ್ಲಿ ಕನಕದಾಸರ ಯುದ್ದ ವರ್ಣನೆಯಾಗಲೀ, ಬೇರೆ ವರ್ಣನೆಯಾಗಲೀ ಜನಪದ ಸತ್ತ _ದಿಂದ ತುಂಬಿ ತುಳುಕಾಡುವಂಥವು, ಅಗಾಧ ಜನಪದ ಜೀವನಾನುಭವ ಇರದ ಓದುಗರು ಕಾವ್ಯಾಂತರ್ಗತ ಸಾರಸರ್ವಸ್ವವನ್ನು ಹೀರಿ ಹಿಗ್ಗಲಾರರು. ಉದಾಹರಣೆಗೆ ಕುಂಭಾಂಡನ ಬಾಣದಿಂದ ಅನಿರುದ್ಧ ರಕ್ತದೋಕುಳಿಯಲ್ಲಿ ಮುಳುಗಿ ಮೂರ್ಛ ಹೋಗುತ್ತಾನೆ. ಆಗ ಉಷಾ ಮತ್ತು ಚಿತ್ರಲೇಖೆಯರು ಹೌಹಾರಿ ಬಂದು ನೋಡುತ್ತಾರೆ. ಆಗಿನ ವರ್ಣನೆಯನ್ನು ನೋಡಿ :

  • ಡಾ. ಕೋ.ತಿ.ನ. “ವಿಶಾಲವಾದ ನೆತ್ತರ ಕಡಲಿನಲ್ಲಿ ಅಡೆತಡೆಯಿಲ್ಲದೆ ಚಲಿಸುವ ಮೀನಿನಂತೆ ಅರೆಗಡಿದ ಕುತ್ತಿಗೆಯಿಂದ ನರಗಳು ಹೊರಬಿದ್ದು, ಅರೆಜೀವಗೊಂಡ ದೇಹಗಳು ತೇಲಾಡುತ್ತಿದ್ದವು” ಎಂದು ಕೆಟ್ಟದಾಗಿ ಗದ್ಯಾನುವಾದ ಮಾಡಿದ್ದಾರೆ. “ಗಾಣಕ್ಕೆ ಪಾಯ ಮೀನೆನಲು” ಎಂಬುದಕ್ಕೆ ಅಡೆತಡೆಯಿಲ್ಲದೆ ಚಲಿಸುವ ಮೀನಿನಂತೆ” ಎಂದು “ಮಿಡುಕು” ಎಂದರೆ “ತೇಲಾಡು” ಎಂದು ವ್ಯಾಖ್ಯಾನ ಮಾಡಿರುವದಿದೆ. ಇದು ಸರಿಯಲ್ಲ. “ಗಾಳಕ್ಕೆ ಸಿಕ್ಕಿಕೊಂಡ ಮೀನು ಬಿಡಿಸಿಕೊಳ್ಳಲು ವಿಲಿವಿಲಿ ಒದ್ದಾಡುವ ಚಿತ್ರ” ಇಲ್ಲಿ ಪ್ರಸ್ತುತ.