ಪುಟ:Kanakadasa darshana Vol 1 Pages 561-1028.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಇಹ-ಪರಗಳ ಕಲ್ಪನೆ ೮೮೭ ಮೇಲೆ ಅರಿವಿನ ಜನ್ಮ ಪಡೆದ ಮಾನವ 'ಎಲ್ಲಿಂದ ಬಂದೆ ಮುಂದೆತ್ತ ಪಯಣ?” ಎಂಬ ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಳ್ಳಬೇಕು. “ಎಲ್ಲಿಂದ ಬಂದೆ ಮುಂದೆತ್ತ ಪಯಣ | ಇಲ್ಲಿ ನಿನಗೆಷ್ಟು ಅಲಸ್ಯ ಮರುಳೆ ? || ಪ || ಮುಂದಾವ ಪಥವ ಸೇರುವೆ ಮರುಳೆ ಸಾಕಿನ್ನು | ಹಿಂದೆ ನಿನ್ನವರಾರು, ಆಪ್ತರುಂಟೆ ? || ಒಂದುಗೂಡಿದ ಪತ್ನಿ ಸುತರೆಲ್ಲ ವರ್ಜಿಪರು | ನಿಂದು ಮಾತಾಡು, ಬಳಲಿದೆ ಬರಿದೆ ಮರುಳೆ ! | ಪ್ರತಿಪಾದಿಸಿದ್ದಾನೆ. ಜಗನ್ನಿಥ್ಯಾತ್ವವಾದ, ಜಗಜೀವನ ನಶ್ವರವೆಂಬ ವಾದ, ಜಗತ್ತು ಕಣ್ಣೀರಿನ ಕಣಿವೆಯೆಂಬ ವಾದ, ಜಗತ್ತು ಪಾಪಗಳ ತವರು ಎಂಬ ವಾದ ಇಲ್ಲಿ ಹುಟ್ಟುವುದೇ ಹೇಯವಾದುದೆಂಬ ಭಾವನೆಗೆ ಮಾತೃಕೆಗಳಾಗಿವೆ. ಪಾಶ್ಚಾತ್ಯರಲ್ಲಿಯೂ ಈ ವಿಚಾರ ಸರಣಿಯಿಲ್ಲದಿಲ್ಲ. ಅಂತೆಯೇ ಕೀಟ್ಸ್ ಕವಿ ಬರೆಯಬೇಕಾಯಿತು: “The common cognomen of this world among the misguided and superstitious is a vale of tears' from which we are to be redeemed-... What a little cireumescribed straightened notion ! Call the world is you please, “The vale of Soul-making” ಇದು ಒಪ್ಪಬಹುದಾದ ಮಾತು. ಇಂದಿನ ಯೋಗೀಶ್ವರ ಅರವಿಂದರೂ ತಮ್ಮ ಮಹಾಕಾವ್ಯ 'ಸಾವಿತ್ರಿ'ಯಲ್ಲಿ ಇದನ್ನು ಇನ್ನೂ ಉದ್ದೋಧಕವಾಗಿ ಹೇಳಿದ್ದಾರೆ : “Earth made a stepping stone to conquer heaven The soul saw beyond heaven's limiting boundaries" ಆತ್ಮವಿಕಾಸದ ಸಾಧನರಂಗ ಈ ಜಗತ್ತು. ಬಹುಶಃ ಮಾಧ್ವಮತದೀಕ್ಷೆ ಪಡೆಯದಿದ್ದರೂ ಮಾಧ್ವಮತಕ್ಕೆ ಮನಸೋತಿದ್ದ ಕನಕದಾಸರಿಗೆ ಮಾಧ್ವಸಿದ್ದಾಂತದ ಪ್ರಕಾರ ಜಗತ್ತು ಸತ್ಯವೆಂಬುದು ವೇದ್ಯವಾಗಿರಲೇಬೇಕು. ಅಂತೆಯೇ ಜಗತ್ತು ನಶ್ವರ, ಮಿಥ್ಯ, ಸಂಸಾರ ನೀರ ಮೇಲಿನ ಗುರುಳೆ, ಗಾಳಿಗೊಡ್ಡಿದ ಸೊಡರು, ಸುರಚಾಪ, ವಿದ್ಯುಲ್ಲತೆ ಇತ್ಯಾದಿ ಎಂಬ ಭಾವನೆ ಅವರ ಕೃತಿಗಳಲ್ಲಿ ಹೆಚ್ಚಾಗಿ ಕಾಣಿಸುವುದಿಲ್ಲ. 'ಇಲ್ಲಿಹನು ಅಲ್ಲಿಲ್ಲವೆಂಬೀ ಸೊಲ್ಲುಸಲ್ಲದು ಹೊರಗೊಳಗೆ ನೀನಲ್ಲದಿಲ್ಲ' (ಹರಿಭಕ್ತಿಸಾರ೮೨) ಎಂದು ದೃಢವಾಗಿ ನಂಬಿದ್ದ ಅವರು ಸಂಸಾರದ ಅಸಾರತೆಯನ್ನು ಅಲ್ಲಲ್ಲಿ ಪ್ರಸ್ತಾಪಿಸಿದರೂ ಜೀವನದ ಗುರಿಯನ್ನು ಜೀವಿ ಮರೆಯದಿರಲೆಂಬ ಸದಾಶಯದಿಂದ ಪ್ರಸ್ತಾಪಿಸಿರುವರಾಗಲಿ ಹೇಯಭಾವನೆಯಿಂದಲ್ಲ. ಹುಟ್ಟಿದ ಬರವಿದೇತಕೆ ? ನಿನ್ನ ಸ್ಥಳವೆಲ್ಲಿ ? ನೆಲೆಯಾಗಿ ಇರುವ ಮಂದಿರವಾವುದೆನಗೆ ಪೇಳೊ || ಧರೆಯೊಳಗೆ ವರಕಾಗಿನೆಲೆಯಾದಿ ಕೇಶವನ ಸಿರಿಚರಣಕಮಲವನು ನೆರೆನಂಬಿ ಸುಖಿಸೋ ! || ಬರವಿದೇತಕೆ ? ಪಯಣಿಸಲು ತನ್ನ ಮೂಲಕೆ ! ದಾರಿ ? ಹರಿಯ ಚರಣ ಕಮಲವನು ನೆರೆ ನಂಬಿ ಸುಖಿಸುವುದು ; “ಇರಬಂದುದಿಲ್ಲ ಸಂಸಾರಇದ | ನರಿತು ಹರಿಯ ಸ್ಮರಣೆಯ ಮಾಡೋ ಮನುಜ !” “ಏನು ಇಲ್ಲದ ಎರಡು ದಿನದ ಸಂಸಾರ | ಜ್ಞಾನದಲಿ ದಾನ-ಧರ್ಮವ ಮಾಡಿರಯ್ಯ !” ಉಳಿದಂತೆ ಮಾನವನ ಬದುಕಿನಲ್ಲೇನಿದೆ ? ಹೊಟ್ಟೆಗಾಗಿ ಹೋರಾಟ. “ಎಲ್ಲರೂ ಮಾಡುವುದು ಹೊಟ್ಟೆಗಾಗಿ-ಗೇಣು ಬಟ್ಟೆಗಾಗಿ !” ಇದು ಬದುಕಿನ ಕಠೋರ ಸತ್ಯ. ಆದರೂ ಗುರಿಯಾಗಲಿ ಸತ್ಯ. ಎಷ್ಟು ಕಷ್ಟಪಟ್ಟು ಎಷ್ಟು ರೊಟ್ಟಿ-ಬಟ್ಟೆ ಗಳಿಸಿದರೇನು ? ಸಂಗಡ ಬರುವುದಿಲ್ಲ ಇವು ಯಾವೂ. (1) ಚಾಮರಸ ತನ್ನ ಪ್ರಭುಲಿಂಗ ರೀತಿಯಲ್ಲಿ “ಭೋಗ ಭೂಮಿಯ ಭೋಗತನುವಿನ ಲಾಗದನುಪಮಸಿದ್ದಿ ಕರ್ಮೊ | ದ್ಯೋಗ ಭೂಮಿಯ ಕರ್ಮತನುವಿಲಲ್ಲದದಲೆಂದೆ || ಯೋಗ ಯೋಗ್ಯರು ಯೋಚಿಸುತ ಭೂ- ಭಾಗದಲ್ಲಿ ಮಾನವ ಶರೀರಗ | ಳಾಗಿ ಸಾಧಿಸಿ ನಿಜವನರಿವರು ಗಿರಿಜೆ ಕೇಳೆಂದ” || ಎಂದು ಪರಮೇಶ್ವರನಿಂದಲೇ ಪಾರ್ವತಿಗೆ ಹೇಳಿಸಿದರೂ, ಅನುಭಾವವಿಭುಮಾಯಿ ದೇವ ಪ್ರಭು “ಧರಣಿಯ ಪೀಠಮಂಬರಮೆ ಲಿಂಗಮಿವಿಂತಿರದೊಂದನೊಂದು ಬಿಟ್ಟಿರದಿಹಕಾರಣಂ ಸಕಲ ಜೀವರಿಗಾಲಯ ಮಾಯೊ ತಮ್ಮೊಳೊಂದಿರದಿರಲೊಂದೆಯಾಯೊ ಸರಿನೋಡೆ ವಿಶೇಷಮದೇನು ಮಿರಾದಿಲ್ಲೆರಡರ ಮಧ್ಯದಲ್ಲಿ ಪರಮ ಪ್ರಭುವೇ ಮಹದೈಪುರೀಶ್ವರಾ” | ಎಂದು ಎಚ್ಚರಿಸಿದರೂ ಇಹದ ಕೀಳೆ ಪರದ ಮೇಲೆಗಳು ಮಾಯವಾಗಲಿಲ್ಲ ವೀರಶೈವ ಪುರಾಣಗಳಲ್ಲಿ