ಪುಟ:Kanakadasa darshana Vol 1 Pages 561-1028.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

oseses ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಇಹ-ಪರಗಳ ಕಲ್ಪನೆ ೮ರ್೮ ವ್ರತವ ಮಾಡುವೆನೆಂಬ ನೇಮಬೇಡ | ಶ್ರುತಿ-ಸ್ಕೃತಿಗಳನಂತು ನಡೆವೆನೆನಬೇಡ ಶ್ರೀ | ಪತಿಯ ಶ್ರೀನಾಮವೊಂದೇ ಸಾಕು ಮರುಳೆ ! || “ಏನು ಬರುವುದೋ ಸಂಗಡೇನು ಬರುವುದೊ ? ||ಪ|| ಧಾನಧರ್ಮ ಮಾಡಿ ಬಹು ನಿಧಾನಿಯೆನಿಸಿಕೊಳ್ಳೋ ಮನುಜ ||ಅ. ಪ.|| ಎನ್ನದೆಂದು ತನ್ನದೆಂದು ಹೊನ್ನು-ಹೆಣ್ಣು-ಮಣ್ಣಿಗಾಗಿ ಬನ್ನಬಟ್ಟು ಬಾಯ ಬಿಡುವೆ ಬರಿದೆ ಮೋಹದಿ | ಸನ್ನುತದಲಿ ಪರಹಿತಾರ್ಥಮಾಡಿ ಪುಣ್ಯ ಪಡೆಯೊ ನೀನು ಮುನ್ನ ಕೂರಫಣಿಯ ಕೂಪದಂತೆ ಕೆಡಲುಬೇಡ ಮನುಜ !” ಆದುದರಿಂದ ಇಹಜೀವನ ದೇವರ ಧ್ಯಾನಕ್ಕಾಗಿ, ದಾನಧರ್ಮಕ್ಕಾಗಿ, ಪರ ಹಿತಾರ್ಥಕ್ಕಾಗಿ ಅಂತೆಯೇ, “ದಾನಧರ್ಮವಮಾಡಿ ಸುಖಿಯಾಗು ಮನವೆ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ !”....... ದಾನಧರ್ಮ ಪರರುಪಕಾರವ ಮಾಡು | ದೀನನಾಗಿ ನೀ ಕೆಡಬೇಡಿ! ಇದು ಸಾಧ್ಯವಾಗಬೇಕಾದರೆ ಮಾನವ ಮೊದಲು ತನ್ನ ತಾನೇ ತಿಳಿದು ನೋಡಬೇಕು-ತನ್ನ ನಿಜವನ್ನು ತಾನೇ ತಿಳಿದುಕೊಳ್ಳಬೇಕು : “ನಾನು ನೀನು ಎನ್ನದಿರೋ ಹೀನ ಮಾನವ | ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡೆಲೊ-ಪ್ರಾಣಿ ||ಪ|| ಹೆಣ್ಣು-ಹೊನ್ನು-ಮಣ್ಣು ಮೂರು ನಿನ್ನವೇನೆಲೊ | ಅನ್ನದಿಂದ ಬಂದ ಕಾಯ ನಿನ್ನದೇನೆಲೊ ? || ಕರ್ಣದಿಂದ ಬರುವ ಘೋಷ ನಿನ್ನದೇನೆಲೊ ? | ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ ? | ಕಾಲ-ಕರ್ಮ-ಶೀಲ-ನೇಮ ನಿನ್ನದೇನೆಲೊ ? ತನುವದಂಡಿಸಿ ತುದಿಯ ಕೋಡುಗಲ್ಲಿನ ಮೇಲೆ | ವನಿತೆಯನು ಬಿಟ್ಟು ತಪವಿರಲು ಬೇಡ || ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ | ವನಜಾಕ್ಷನಾಮವೊಂದೇ ಸಾಕು ಮರುಳೆ || ಅರಮನೆಯನ್ನು ತೊರೆದು ವೀರವಿರಾಗಿಯಾದ ನಮ್ಮ ಕನಕಣ್ಣ ಜನರಿಗೆ ವನಿತೆಯನ್ನು ಬಿಡಲು ಹೇಳಲಿಲ್ಲ. ಯತಿಯಾಗಲು, ವೈರಾಗ್ಯವತಿಯಾಗಲು ಹೇಳಲಿಲ್ಲ-ಭಾಗವತ ಮಹಾತ್ಮದಲ್ಲಿ ಹೇಳಿರುವಂತೆ “ಉತ್ಪನ್ನಾ ದ್ರಾವಿಡೇಚಾಹಂ ವೃದ್ದಿ ಕರ್ಣಾಟಕೋಗತಾ” ದ್ರಾವಿಡದಲ್ಲಿ ಹುಟ್ಟಿ ಕರ್ಣಾಟದಲ್ಲಿ ವರ್ಧಿಸಿದ ಭಕ್ತಿಯನ್ನೇ ಬೋಧಿಸಿದರು. ಉಪನಿಷತ್ತಿನ 'ಉಪಾಸನೆ' ನಾರದರ 'ಅನನ್ಯತೆ', ಶಂಕರರ “ಅನುಸಂಧಾನ', ರಾಮಾನುಜರ 'ಪ್ರಪನ್ನತೆ, ಆನಂದತೀರ್ಥರ 'ಸಾಪ್ರತಿಷ್ಠಿತ ಸ್ನೇಹ, ಶರಣರ 'ಸಾಮರಸ್ಯ, ದಾಸರ 'ದಾಸ್ಯಭಾವಿ, ಸಂತರ “ಸಖ್ಯ' 'ಶರಣಾಗತಿ' ಇತ್ಯಾದಿಗಳಲ್ಲಿ ಬಿತ್ತರಗೊಂಡಿರುವ ಭಕ್ತಿಯ ಅರ್ಥಪ್ರಪಂಚ ಅಪಾರವಾದುದು. ಇದನ್ನು ಪಂಚಮ ಪುರುಷಾರ್ಥವೆಂದು ಕರೆದವರಿದ್ದಾರೆ. ಆದಿಯಿಂದ ಬಂದ ಚತುರ್ವಿಧ ಪುರುಷಾರ್ಥಗಳನ್ನು ಅಲ್ಲಗಳೆಯದೆ ಅವುಗಳಿಗೆ ಈ ಪಂಚಮ ಪುರುಷಾರ್ಥವನ್ನೂ ಸೇರಿಸಿ ಇಹಜೀವನ ಅರ್ಥಪೂರ್ಣವಾಗುವಂತೆ ಮಾಡಿದವರಲ್ಲಿ ಕನಕದಾಸರೂ ಒಬ್ಬ ಮಹಾ ಭಕ್ತ-ಜ್ಞಾನಿಗಳು. ಇಹಜೀವನ ಸರ್ವಾಂಗ ಸುಂದರವಾಗಲು ಕನಕದಾಸರು ಇನ್ನೂ ಕೆಲವು ಅಂಶಗಳನ್ನು ವಿಶದೀಕರಿಸಿದ್ದಾರೆ. 'ರಾಮಧಾನ್ಯ ಚರಿತ್ರೆಯಲ್ಲಿ “ಸತ್ಯಹೀನನು ಬಡವರನು ಕ | ಣ್ಣೆತ್ತಿ ನೋಡೆ, ಧನಾಡ್ಯರನು ಬೆಂ | ಬತ್ತಿ ನಡೆವವುಪೇಕ್ಷೆ ನಿನ್ನದು ಹೇಳಲೇನದನು || ಹೆತ್ತ ಬಾಣಂತಿಯರು ರೋಗಿಗ | ಪತ್ಯ ನೀನಹೆ ಹೆಣದ ಬಾಯಿಗೆ | ತುತ್ತು ನೀನಹೆ ನಿನ್ನ ಜನ್ನ ನಿರರ್ಥಕರವೆಂದ” ಎಂದು ರಾಮಧಾನ್ಯದಿಂದ ಹೇಳಿಸಿ ಬಡವರನು ಕಣ್ಣೆತ್ತಿ ನೋಡದ, ಧನಾಡ್ಯರ ಬೆಂಬತ್ತಿ ನಡೆವ, ಬಾಣಂತಿಯರಿಗೆ, ರೋಗಿಗಳಿಗೆ ಆಗದ ಇಹ ಜೀವನ ನಿರರ್ಥಕವೆಂದು ಎಚ್ಚರಿಸಿದ್ದಾರೆ. 111111111111111111೦೦೦೦೦೦•••••••••••••••••••••••••••••••••••••••••••••••••• ಲೋಲ ಆದಿಕೇಶವನ ಭಕ್ತನಾಗೆ ! | “ನಳಚರಿತ್ರೆ' 'ಮೋಹನ ತರಂಗಿಣಿ'ಗಳಲ್ಲಿ ಅನ್ನದಿಂದ ಬಂದ ಕಾಯ ಪ್ರೇಮವಾಗಿ ಪರಿಣಮಿಸುವುದನ್ನು ಚಿತ್ರಿಸಿದ ಕವಿ ಕನಕದಾಸ ಭಕ್ತನಾಗಿ ಕಂಡುಕೊಂಡ ಮಹಾ ಮೌಲ್ಯ ಭಕ್ತಿ, ನಾಮಜಪ. “ಸಂಸಾರ ಸಾಗರವನುತ್ತರಿಸುವಡೆ ಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ||ಪ|| ಯತಿಯಾಗಬೇಡ ವೈರಾಗ್ಯವರಿತು ಸಕಲ |