ಪುಟ:Kanakadasa darshana Vol 1 Pages 561-1028.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೯೦ ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಇಹ-ಪರಗಳ ಕಲ್ಪನೆ ೮೯೧ ಇದು ಅದರಲ್ಲಿ ಇರು ಹೀಗೆಯೇ ಬಕುಲದಯ್ಯ “ಹಸಿದು ಬಂದವರಿಗೆ ಅಶನವೀಯಲು ಬೇಕು ಶಿಶುವಿಗೆ ಬಾಯ್ದೆಣ್ಣೆಯುಣಿಸಬೇಕು ಹಸನಾದ ಭೂಮಿಯನೆ ಧಾರೆಯೆರೆಯಲುಬೇಕು ಪುಸಿಯಾಡದಲೆ ಭಾಷೆ ನಡೆಸಲೇಬೇಕು || ಇಲ್ಲಿ ಮೊದಲ ಸಾಲಿನಲ್ಲಿ ಮಠಮಂದಿರಗಳಿಗೆ, ಎರಡನೆಯ ಸಾಲಿನಲ್ಲಿ ಯುನಿಸೆಫ್ (Unicef)ಗೆ, ಮೂರನೆಯ ಸಾಲಿನಲ್ಲಿ ಭೂಮಿದಾರರಿಗೆ, ನಾಲ್ಕನೆಯ ಸಾಲಿನಲ್ಲಿ ರಾಜಕೀಯ ನಾಯಕರಿಗೆ ಎಚ್ಚರಿಕೆಯಿದೆ. - ಇಹವನ್ನು ಕಲುಷಿತಗೊಳಿಸಿರುವ ಇನ್ನೊಂದು ದುಷ್ಪಕಲ್ಪನೆ, ಕುಲದ ಕಲ್ಪನೆ, ಕೀಳು ಮೇಲಿನ ಕಲ್ಪನೆ, ಕನಕದಾಸರು “ನೀ ದೇಹದೊಳು ನೆಲೆಸಿರಲು ಹೊಲೆಯುಂಟೆ?' ಎಂದು ಕೇಳಿ ಅಸ್ಪಶ್ಯತೆಯ ಬೇರಿಗೇ ಕೊಡಲಿಯೇಟು ಕೊಟ್ಟಿದ್ದಾರೆ. ಕರಿಯರೆಂದು, ಅಂತ್ಯಜರೆಂದು, ಪಂಚಮರೆಂದು ಪರಮಾತ್ಮನ ಮಕ್ಕಳನ್ನು ಅಸ್ಪಶ್ಯರೆನ್ನುವುದು ಅದರಲ್ಲಿ ಇರುವ ಪರಮಾತ್ಮನಿಗೇ ಅಪಮಾನ ಮಾಡಿದಂತೆ. ಹೀಗೆನ್ನುವವರು ಪಾಪಿಗಳು. ಹೀಗೆಯೇ, 'ಬಂದದ್ದು ಮೂತ್ರ ಕುಳಿ ತಿಂದದ್ದು ಮೊಲೆ ಮಾಂಸ | ಹಿಂದೆ ಹೀಗಿರಲದಿನ್ನೇತರ ಕುಲವಯ್ಯ?” ಎಂದೂ 'ಆತ್ಮ ಯಾವ ಕುಲ ಜೀವ ಯಾವ ಕುಲ | ತತ್ತೇಂದ್ರಿಯಂಗಳ ಕುಲವ ಪೇಳಿರಯ್ಯ' ಎಂದು ಕೇಳಿ ಕುಲದ ಮೂಲಕ್ಕೆ ಕುಠಾರವನ್ನಿಕ್ಕಿದರು ಕನಕದಾಸರು. ಅವರ ಸರ್ವತ್ರ ಸಮದರ್ಶಿತ್ವ ಕೃತ್ರಿಮ ಕುಲಭೇದಗಳನ್ನು, ಸ್ಪಶ್ಯಾಸ್ಪಶ್ಯ ಭೇದಗಳನ್ನು ಒಪ್ಪಿತೆ ? ಮಾತಿನಲ್ಲಿ 'ಸರ್ವಂ ಖಲ್ವಿದು ಬ್ರಹ್ಮ', ಕೃತಿಯಲ್ಲಿ ದಲಿತ ದಮನ ವೇದಾಭ್ಯಾಸಜಡರ ವೈಶಿಷ್ಟ್ಯ ! ಕನಕದಾಸರ ಕಣ್ಣು ಇಹದಲ್ಲಿ ಎಲ್ಲೆಡೆಗೂ ಶಿವವಾದುದನ್ನೇ ಕಾಣ ಬಯಸಿದರೂ ಕೆಡುಕು, ದಾಷ್ಟ್ರ, ದೌರ್ಜನ್ಯಗಳು ಅವರ ಕಣ್ಣಿಗೆ ಬೀಳದಿರಲಿಲ್ಲ. ಅವುಗಳಿಗೆ ಮುಖಾಮುಖಿಯಾಗಲು ಅವರು ಹಿಂಜರಿಯಲೂ ಇಲ್ಲ. ಮೋಸದಿ ಜೀವರ ಘಾಸಿ ಮಾಡುವವರು, ಭಾಷೆಯ ಕೊಟ್ಟು ನಿರಾಶೆ ಮಾಡಿದವರು, ನ್ಯಾಯವ ಬಿಟ್ಟನ್ಯಾಯವ ಮಾಡುವ ನಾಯಿಗಳು, ತಾಯಿ ತಂದೆಗಳ ನೋಯಿಸಿದ ಆ ನಾಯಿಗಳು, ಬಾಯಿ ಕೊಬ್ಬಿ ಬಯ್ಯುವ ದುರ್ಜನರು, ಬಾಧಿಸಿ ಬಡವರ ಅರ್ಥವನೊಯ್ತರು, ಕದ್ದು ಒಡಲ ಪೊರೆವವರು, ಹೇವವಿಲ್ಲದ ಹೆಣ್ಣು, ಸೇವೆಯರಿಯದ ಧಣಿ, ಧರ್ಮವಿಲ್ಲದ ಅರಸು, ಸೊಕ್ಕಿ ನಡೆಯವ ನೃತ್ಯ, ಕಂಡೂ ಕರೆಯದ ನಂಟ, ದಂಡಿಗಂಜುವ ಬಂಟ, ಉಂಡಮನೆಗೆರಡ ಎಣಿಸುವಾತ, ಕೊಂಡೆಯವ ಪೇಳಿ ಕಾದಿಸುವವ, ನಂಬಿದ ಆವಿನಲಿ ಕೇಡನೆಣಿಸುವವ, ಗುರುಸತಿಗೆ ಪರಸತಿಗೆ ಎರಡು ಎಣಿಸುವವ, ಗುರುನಿಂದೆ ಪರನಿಂದೆ ಮಾಡುವವ, ಪರಹಿತಾರ್ಥದ ಧರ್ಮ ಪಡೆಯದಾತ-ಹೀಗೆ ಎಲ್ಲ ಖುಲ್ಲರನ್ನೂ ಅವರು ಕಂಡಿದ್ದಾರೆ. ಇಷ್ಟೆಲ್ಲ ಕೆಡುಕುಗಳಿಂದ, ಕೆಡುಕರಿಂದ ಕೂಡಿದ್ದರೂ ಇಹ ಜೀವನ ಅವರಿಗೆ ಕಹಿಯೆನಿಸಲಿಲ್ಲ. “ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸೆಂದು. ಹಸಿವರಿತು ತಾಯ್ ತನ್ನ ಶಿಶುವಿಗೆ ಒಸೆದು ಮೊಲೆ ಕೊಡುವಂತೆ | ಹರಿ ಪೋಷಿಸುವನೆಂದು ನಂಬಿ, ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಂದು ನೆಚ್ಚಿ, ಹಸನಾದ ಬಾಳು ಬಾಳಿ, ಭಕ್ತಿರಸವ ಸೇವಿಸಿ ಧನ್ಯನಾದರೆ ಸಾಕು ಪರದ ಚಿಂತೆ ಬೇಕಿಲ್ಲವೆಂಬುದು ಇವರ ಸಮಂಜಸ ಸಂದೇಶ. “ಎಲ್ಲಿರುವನೋ ರಂಗ ಎಂಬ ಸಂಶಯಬೇಡ ||ಪ|| ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು ||ಅ.ಪು. ಎಂದು ನಂಬಿದ್ದ ಕನಕದಾಸರಿಗೆ ಇಹ-ಪರವೆಂಬ ವಿಭಜನೆಯೇ ಒಪ್ಪಿಗೆಯಾಗಲಿಲ್ಲ. ಹರಿಯನ್ನು ಬೆರೆಯಲು ವೈಕುಂಠಕ್ಕೆ ಹೋಗಬೇಕಿಲ್ಲ. ತನ್ನ ಹೃದಯದಲ್ಲಿಯೇ ಹರಿಯಿರುವಾಗ ಪ ರ ಲೆಕ ವೊಂದರಲ್ಲಿ ಅವನಿರುವನೆಂಬುದು ಹಾಸ್ಯಾಸ್ಪದ. “ಅಣುಮಹತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ ಗಣನೆಯಿಲ್ಲದ ಮಹಾಮಹಿಮನೆನಿಪ ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು ನೆನೆದವರ ಮನದೊಳಿಹನೆಂಬ ಬಿರುದುಂಟಾಗಿ || - ಎಲ್ಲಿರುವನೋ ರಂಗ ಎಂಬ ಸಂಶಯಬೇಡ ! “ಎಲ್ಲಿ ನೋಡಿದರಲ್ಲಿ ರಾಮ-ಇದ ಬಲ್ಲ ಜಾಣರ ದೇಹದಲ್ಲಿ ನೋಡಣ್ಣ !” ಅವರ ಮನವೇ ಹರಿಯ ಮಂದಿರವಾಗಿದ್ದ ಕಾರಣ ಕನಕದಾಸರು ಹರಿಯೊಡನೆ ಸಲಿಗೆಯ ಸಲ್ಲಾಪ ನಡೆಸಲು ಸಮರ್ಥರಾದರು. “ನನ್ನಿಂದ ನಾನೇ ಜನಿಸಿ ಬಂದೆನೆ ದೇವ ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ ನಿನ್ನದು ತಪ್ಪೋ ಎನ್ನದು ತಪ್ಪೋ ಪರಮಾತ್ಮ ?” ಎಂದು ಕೇಳಿ ಇಂದಿಗೂ ಪ್ರಸ್ತುತವೆನಿಸುವ ಒಂದು ದೃಷ್ಟಾಂತವನ್ನು ಶಿಬು)