ಪುಟ:Kanakadasa darshana Vol 1 Pages 561-1028.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್೮ಲ್ಲ ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಭಕ್ತಿಸ್ವರೂಪ ೮೯೫ ಭಕ್ತಿಯ ಸೆಲೆಯು...........ಉಪನಿಷತ್ತುಗಳ ದಾರ್ಶನಿಕ ಅರಣ್ಯದಲ್ಲಿ ಅಡಗಿಕೊಂಡಿರುವುದು. ಮುಂದೆ ಭಗವದ್ಗೀತೆಯ ಕಾಲದಲ್ಲಿ ಅದು ಮರಳಿ ಹೊರಬಂದು ಸ್ಪಷ್ಟವಾದ ರೀತಿಯಲ್ಲಿ ಕಾಣಿಸಿಕೊಳ್ಳುವುದು. ಅದರಲ್ಲಿ ಹಳೆಯ ನಂಬಿಕೆಗಳು ಹೊಸರೂಪವನ್ನು ತಳೆದಿರುವುವು. ಉಪನಿಷತ್ತುಗಳಲ್ಲಿ ಕಾಣಬರುವ ಅನುಭಾವದ ಪ್ರವೃತ್ತಿಯು ಶ್ರೀ ವಾಸುದೇವ ಪಂಥದಲ್ಲಿಯೂ ಕಾಣಬರುವುದು. ಇದರಲ್ಲಿ ಆದರೆ ಭಕ್ತಿಗೆ ಪ್ರಾಧಾನ್ಯ ಬಂದಿರುವುದಷ್ಟೇ !” ಎಂಬ ಖಚಿತತೆಯ ಮಾತು ನೆನಪಾಗುತ್ತದೆ. ಈ ಮಾತನ್ನು ಬಿಡಿಸಿ, ಪ್ರಮಾಣಗಳನ್ನು ಅರಸಿ ನೋಡಿದಾಗ, “ಅಸತ್ತಿನಿಂದ ಸತ್ಯದೆಡೆಗೆ, ಕತ್ತಲೆಯಿಂದ ಜ್ಯೋತಿಯೆಡೆಗೆ | ಮರಣದಿಂದ ಅಮರ ಬಾಳಿನೆಡೆಗೆ ನಡೆಯಿಸ್ಯೆ ” ಎಂಬಂತಹ ಪ್ರಾರ್ಥನೆಯಲ್ಲಿ ಭಕ್ತಿಭಾವವು ತುಂಬಿ ತುಳುಕಿರುವುದು ಕಾಣುತ್ತದೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ, “ಯಸ್ಯದೇವೇ ಪರಾಭಕ್ತಿಃ | ಯಥಾದೇವೀ ತಥಾಗುರ್‌ | ತಸ್ಯತೇ ಕಥಿತಾರ್ಥಾಃ | ಪ್ರಕಾಶಂತೇ ಮಹಾತ್ಮನಃ || (VI-23) ಎಂದು ಬರುವ ಶ್ಲೋಕದಲ್ಲಿ, 'ಭಕ್ತಿ' ಎಂಬ ಶಬ್ದವು ಪ್ರಥಮ ಸಲ ಬಂದಿರುವುದನ್ನು ಭಕ್ತಿಗೆ ಇರುವ ಮಹತ್ತನ್ನು ತೋರಿಸುತ್ತದೆ. ಮುಂದೆ ಭಗವದ್ಗೀತೆಯಲ್ಲಿ ಭಕ್ತಿಯ ನಿಚ್ಚಳಸ್ವರೂಪವು ಒಡಮೂಡಿದೆ. ಅನಂತರ ಭರತಖಂಡದಲ್ಲಿ ಪ್ರಚಲಿತವಿರುವ ಎಲ್ಲ ಭಾಷೆಗಳಲ್ಲಿ ಸಾಧುಸಂತರು, ಶರಣರು ದಾಸರು ಅದನ್ನು ಅಖಂಡವಾಗಿ ಜನಪದದೊಳಗೆ ಪ್ರಸಾರಕ್ಕೆ ತಂದು ಸಾಮಾನ್ಯರ ಜೀವನವನ್ನು ಪಾವನಗೊಳಿಸಿದರು. ಈ ರೀತಿ ಕನ್ನಡ ನಾಡಿನಲ್ಲಿ ಶರಣರು ಭಕ್ತಿಮಾರ್ಗದಲ್ಲಿ ಅನನ್ಯವಾಗಿ ಬಾಳಿದರು. ಹರಿದಾಸರು ಅದನ್ನು ಸಂಗೀತದ ಸಾಂಗತ್ಯದಲ್ಲಿ ಇನ್ನಷ್ಟು ಸುಲಭಗೊಳಿಸಿದರು. ಇವರು ಬಾಳಿದ ಭಕ್ತಿಯೆಂದರೆ ಪರಮಾತ್ಮನಲ್ಲಿಯ ಪರಮಪ್ರೀತಿ-ಉತ್ಕಟ ಪ್ರೇಮವೇ-ಆಗಿದೆ. ಇದನ್ನೇ ಸದೃಢ ಸ್ನೇಹವೆಂದು ಒಬ್ಬರೆಂದರೆ ಮತ್ತೊಬ್ಬರು ಅಮೃತ ರೂಪ, ಶಾಂತರೂಪ ಎಂದರು. ಈ ಶಾಂತರೂಪವೇ ಪರಮಾನಂದರೂಪ. ಇಂತಹ ಅಪರೂಪವಾದ ಭಕ್ತಿಯ ಬಗೆಗಳನ್ನು ಭಕ್ತಾಗ್ರಣಿ ಪ್ರಹ್ಲಾದನು, “ಶ್ರವಣಂ ಕೀರ್ತನಂ ವಿಷ್ಟೋಃ | ಸ್ಮರಣಂ ಪಾದಸೇವನಮ್ | ಅರ್ಚನಂ ವಂದನಂ ದಾಸ್ಯಂ | ಸಖ್ಯಂ ಆತ್ಮನಿವೇದನಮ್ | ಎಂದು ಒಂಬತ್ತು ಬಗೆಗಳನ್ನು ನಿಚ್ಚಳವಾಗಿ ಹೇಳಿದ್ದಾನೆ. ಅದೆಲ್ಲ ಹರಿದಾಸ ಸಾಹಿತ್ಯದಲ್ಲಿ ಓತಪ್ರೋತವಾಗಿ ಗೆಜ್ಜೆಯೊಡನೆ ನಾದಗೈದಿದೆ. ಆರ್ತತೆಯಿಂದ ಸರ್ವಸಮರ್ಪಣೆಗೆ ಪ್ರೇರಣೆಯಾಗಿ ಪರಮಾತ್ಮತತ್ವವನ್ನು ನಿಚ್ಚಳಗೊಳಿಸಿ ಸಾನ್ನಿಧ್ಯವನ್ನು ನೀಡುತ್ತದೆ. ಈ ಭಕ್ತಿಮಾರ್ಗದಲ್ಲಿ ನಿರ್ವಂಚನೆ ಇಲ್ಲ. ಬದುಕುವ ಕಲೆ ಇದೆ. ವಿಹ್ವಲಗೊಂಡ ಮನಕ್ಕೆ ಸೈರ್ಯವಿದೆ. ಎಲ್ಲವನ್ನೂ ಪರಮಾತ್ಮನ ತಲೆಗೆ ಕಟ್ಟಿ ಕುಕ್ಕರಿ ಕೂಡುವುದಲ್ಲ. ದತ್ತ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಾಧನೆ ಮಾಡುವುದು ಆಗಿದೆ. ಇದನ್ನೇ ಪುರಂದರ-ಕನಕರು ಬಾಳಿದರು. ಮಾದರಿಯಾದರು, ಇವರು ಹರಿದಾಸ ಸಾಹಿತ್ಯದ ಯಮಳರು. ಅವರು ಮಾನವ ಜೀವನದ ಮಹತಿಯನ್ನು ತಿಳಿಸಿದ ಹರಿಕಾರರು. ಅವರು ಭಕ್ತಿ ಮಾರ್ಗದಿಂದ ಭೂಮಿಯ ಬದುಕನ್ನೇ ಮೈಕುಂಠವಾಗಿಸಿದವರು. ಅದಕ್ಕಾಗಿ ತಾವು ಪಡೆದ ಅನುಭವಗಳನ್ನೆಲ್ಲ ಕೀರ್ತನೆಗಳನ್ನಾಗಿಸಿದರು. ಕನಕದಾಸರು ಕೇವಲ ಕೀರ್ತನ ಸಾಹಿತ್ಯವನ್ನು ನಿರ್ಮಾಣಮಾಡಿದುದರ ಜೊತೆಗೆ ಅನೇಕ ಕಾವ್ಯಗಳನ್ನೂ ರಚನೆಮಾಡಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಿಗೊಳಿಸಿದರು. ಆ ಕಾವ್ಯಗಳಲ್ಲಿಯೂ ಭಾಗವತ ಮನೋಧರ್ಮವೇ ಪ್ರಮುಖವಾಗಿರುವುದನ್ನು ಕಾಣಬಹುದು. ಭಾಗವತ ಮನೋಧರ್ಮವೆಂದರೆ ಹರಿಹರರಲ್ಲಿ ಭೇದವನ್ನೆಣಿಸದೇ ಇರುವುದು. ಮಾನವಕಲ್ಯಾಣಕ್ಕಾಗಿ ಹುಟ್ಟಿದ ಎಲ್ಲ ಮತಗಳ ಸಾರಗ್ರಾಹಿಯಾಗಿರುವುದು. ಈ ಮನೋಧರ್ಮದಿಂದ ವಿಶಾಲ ಹೃದಯಿಗಳಾದ ಕನಕರು, “ಕಾಂತಿಸಾಗರನಾದ, ನಾದಸಾಗರನಾದ, ಅಮೃತಸಾಗರನಾದ, ಜ್ಞಾನಬಲಕಾರುಣ್ಯ ಸಾಗರನಾದ, ಶಾಂತಿಸಾಗರನಾದ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡರು. ಇದನ್ನು ಪಡೆಯಲು ಅವರ ಸಾಧನೆ, ಭಕ್ತಿಯ ವಿವಿಧ ಪ್ರಕಾರಗಳಲ್ಲಿ ವಿಶೇಷತಃ ಆರ್ತ ಭಕ್ತಿ, ದಾಸ್ಯಭಕ್ತಿ, ಅರ್ಪಣಾ ಭಕ್ತಿಗಳ ಮುಖಾಂತರ ಪ್ರಮುಖವಾದುವು. ಈ ಮಾತನ್ನು ನಾವು ಅವರ ಎಲ್ಲ ಸಾಹಿತ್ಯ ಕೃತಿಗಳಲ್ಲಿ ಮನಗಂಡರೂ, ಅವರ ಕೀರ್ತನೆಗಳು ಮತ್ತು ಹರಿಭಕ್ತಿಸಾರ ಹೆಚ್ಚು ಸ್ಪಷ್ಟಗೊಳಿಸುತ್ತವೆ.” ಕನಕನು ಕನಕದಾಸರಾದ ಮೇಲೆ, ಇಹಲೋಕದಲ್ಲಿ ಅಲಿಪ್ತವಾಗಿ ಬದುಕುವ ಕಲೆಯನ್ನು ತಮ್ಮ ವಿವೇಕದಲ್ಲಿ ಸ್ಪಷ್ಟವಾಗಿಸಿಕೊಂಡು ನವಜಾಗೃತಿಯನ್ನೇ ಉಂಟು ಮಾಡಿದರು. “ಸಾಕು ಸಾಕು ಮನುಜಸೇವೆಯು ರಂಗಯ್ಯ ಇನ್ನು ಪ | ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೆಂದೆ ನಾನು