ಪುಟ:Kanakadasa darshana Vol 1 Pages 561-1028.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೯೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಮುಂಡಿಗೆಗಳು ೫೯೫ ಬಿಡಿಸಿ ಹೇಳುವ ಜನರು ದಾಸಪರಂಪರೆಯಲ್ಲಿ ಈಗ ಇಲ್ಲವೆಂದೇ ಹೇಳಬಹುದು. ಕೆಲಕೆಲವು ಪಂಡಿತರು ಅವುಗಳ ಅರ್ಥವನ್ನು ಹೇಳಲು ತಿಣುಕಾಡಿ, ಏನೇನೋ ಆಭಾಸಾರ್ಥಗಳನ್ನು ಹೇಳುವರಾದರೂ ಅವು ಕೇವಲ ಬುದ್ದಿಯ ಕರಸತ್ತು ಎನಿಸುವುವು. ಉಚಿತ ತತ್ತ್ವ ರಹಸ್ಯವನ್ನು ಅವು ಹೊರಕ್ಕೆ ಹಾಕಲಾರವು” ಎಂಬ ಅಭಿಪ್ರಾಯಕ್ಕೆ ನಾವೂ ದನಿಗೂಡಿಸಬಹುದು. ಸೋಂಕಲಾರವು ಎಂಬುದನ್ನು ವಿವರಿಸುವಾಗ ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳು ಇಂತಿವೆ - ನಾ ಜಾಯತೇ ಮೈಯತೇ ವಾ ಕದಾಚಿ ನಾಯಂ ಭೂತ್ವಾ ಭವಿತಾ ವಾ ನ ಭೂಯಃ | ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ || ನ ಹನ್ಯತೇ ಹೋಯಮಾನೇ ಶರೀರೇ (೨-೨೦) ನೈನಂ ಛಿಂದಂತಿ ಶಸ್ತಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೀದಯಂತ್ಯಾಪೋ ನ ಶೋಷಯತಿ ಮಾರುತಃ || (೨-೨೩) ಅಚ್ಛೇದ್ಯೋ ಯಮದಾಸ್ಕೋಯಮ ಕ್ಷೇದ್ಯೋ ಶೋಷ್ಯ ಏವ ಚ ನಿತ್ಯಃ ಸರ್ವಗತಃ ಸ್ಥಾಣುರಚಲೋಯಂ ಸನಾತನಃ || ಎಂಬಲ್ಲಿನ ತ ತ ಜ್ಞಾನ ವನ್ನು ಕನಕ ದಾಸರು ಹೀಗೆ ಅಳವಡಿಸಿಕೊಂಡಿದ್ದಾರೆ ಓಹೊ ಎನ ಜೀವಾ ಮೈಯೆಲ್ಲಾ ನವಗಾಯ ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ || ಮಾಡಿಲ್ಲ ಮಳೆಯಿಲ್ಲ ಮರದ ಮ್ಯಾಲೆ ನೀರ ಕಂಡೆ ಕಾಡು ಸುಡುವುದು ಕಂಡೆ ಬೂದಿಯ ಕಾಣಲಿಲ್ಲ | ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ ಹೊತ್ತುಕೊಂಡು ತಿರುಗಿದರೆ ರೊಕ್ಕದಾ ಪ್ರಾಣಿಯನ್ನು || ಮುಂದೆ ಈ ಮುಂಡಿಗೆ ಬೇರೊಂದು ಹಾದಿಯಲ್ಲಿ ಸಾಗುತ್ತದೆ. ಈ ರೀತಿ ಭಗವದ್ಗೀತೆಯನ್ನು ಅಧ್ಯಯನ ಮಾಡಿ, ಅರಗಿಸಿಕೊಂಡು ತಮ್ಮದೇ ಆದ ಕಾಷ್ಠೆಯನ್ನು ನೀಡಿರುವಲ್ಲಿ ಕನಕದಾಸರ ಸೋಪಜ್ಞತೆಯನ್ನು ಮನಗಾಣಬಹುದು. ಇವರ ಮುಂಡಿಗೆಗಳು ಅಮೂರ್ತವಾದ ಸಂಗತಿಗಳನ್ನು ಮೂರ್ತಗೊಳಿಸುತ್ತವೆ. ಇವು ನಾಳಿಕೇರ ಪಾಕದಂತೆ, ಸರಳವಾದ, ವಾಚ್ಯವಾದ ಅರ್ಥಕ್ಕಿಂತ ವಿಪರೀತವಾದ ವಿಶಿಷ್ಟವಾದ ಅಂತರಾರ್ಥವನ್ನು ಮುಂಡಿಗೆಗಳು ಪಡೆದಿರುತ್ತವೆ. ಇಲ್ಲಿ ಭಾವತೀವ್ರತೆಗಿಂತ ಬುದ್ದಿ ತೀವ್ರತೆಯ ಪ್ರಧಾನವಾಗಿ ಕಂಡುಬರುತ್ತದೆ. ಚಾತುರ್ಯ, ಕಾಕು, ಕೌಶಲ, ಜಾಣತನಗಳು ಪ್ರಧಾನ ಪಾತ್ರ ವಹಿಸುತ್ತವೆ. ಮುಂಡಿಗೆಗಳಲ್ಲಿ ಕಂಡುಬರುವ ಜಟಿಲತೆಯನ್ನು ಕುರಿತಂತೆ ಅನೇಕ ಸಮಕಾಲೀನ ವಿದ್ವಾಂಸರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಬೆಟಗೇರಿ ಕೃಷ್ಣಶರ್ಮರ “ಇಂತಹ ಮುಂಡಿಗೆಗಳ ಅರ್ಥವನ್ನು ಸರಿಯಾಗಿ