ಪುಟ:Kanakadasa darshana Vol 1 Pages 561-1028.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦೦ ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಭಕ್ತಿಸ್ವರೂಪ ಕಣ್ಣೀ ಕಾಮನ ಬೀಜ | ಈ | ಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ || ಕಣ್ಣಿನ ಮೂರುತಿ ಬಿಗಿದು | ಒಳ | ಗಣ್ಣಿಂದಲೆ ದೇವರ ನೋಡಣ್ಣ || ೧ || ಪರಮಾತ್ಮನ ಸ್ಪಷ್ಟ ಚೈತನ್ಯ ಕಾಣುತ್ತದೆ. ಸುಖ ದುಃಖಗಳನ್ನು ಮೀರಿದ ಚೆಲುವು ಒಳ-ಹೊರಗೂ ಕೋರೈಸುತ್ತದೆ. ರೂಪಾಂತರ ಸೃಷ್ಟಿಯ ಅಂತರಂಗ ಗೊತ್ತಾಗುತ್ತದೆ. ಆ ಪರಿಸರದಲ್ಲಿ ತಾನು ತನ್ನ ಪ್ರಯತ್ನದ ಭೋಗದ ಪ್ರಕಾರ ಭಾರವಾಗದೆ, ಜೀವನವನ್ನು ಸುಗಮಗೊಳಿಸಿಕೊಳ್ಳಬೇಕಾದುದನ್ನು ಕಂಡುಕೊಂಡಾಗ ಉಳಿಯುವುದೇನು ? ದೂರವಿದ್ದ ವೈಕುಂಠ ನೆಲದಲ್ಲಿಗೆ, ತಾನಿದ್ದಲ್ಲಿಗೆ ಸಾಗಿ ಬಂದಿರುತ್ತದೆ. ಅದು ಅಷ್ಟಕ್ಕೆ ನಿಲ್ಲದೆ, ದೇಹದಲ್ಲಿಯೇ ವೈಕುಂಠ ನೆಲೆಸಿಬಿಡುತ್ತದೆ. ಇಂತಹ ದಿವ್ಯಜ್ಞಾನವು ಸಾಕಾರವಾದಾಗ ಗೋಡೆ ಸೀಳಿ ಇದ್ದಲ್ಲಿಯೇ ಪರಮಾತ್ಮತ್ವದ ಬೆಳಕು ಮನದ ಕತ್ತಲೆಯನ್ನೆಲ್ಲ ನಾಪತ್ತೆ ಗೊಳಿಸಿರುತ್ತದೆ. ಆ ಸಂದರ್ಭದ ಕನಕರ ಅನುಭವದಲ್ಲಿ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು || ಪ || ಮೂಗೇ ಶ್ವಾಸ ನಿಶ್ವಾಸ | ಈ || ಮೂಗಿಂದಲೆ ಕಾಣೋ ಯೋಗ ಸನ್ಮಾಸ | ಮೂಗನಾದರೆ ವಿಶೇಷ | ಒಳ | ಮೂಗಿಲಿ ನೋಡಣ್ಣ ಲೀಲಾವಿಲಾಸ | ೨ || ಪದುಮನಾಭನ ಪಾದದೊಲುಮೆ ಎನಗಾಯಿತು | ಅ. ಪ || ಕಿವಿಯೇ ಕರ್ಮಕೆ ದ್ವಾರ | ಈ | ಕಿವಿಯಿಂದಲೆ ಕೇಳೊ ಮೋಕ್ಷದ ಸಾರ || ಕಿವಿಯೇ ಕರ್ಮಕುಠಾರ | ಒಳ | ಗಿವಿಯಲ್ಲಿ ಕಾಣೋ ನಾದದ ಬೇರ || ೩ || ಹರಿತೀರ್ಥ ಪ್ರಸಾದ ಎನ್ನ ಜಿಹೈಗೊದಗಿತು | ಹರಿಯ ನಾಮಾಮೃತ ಕಿವಿಗೊದಗಿತು || ಹರಿಯದಾಸರು ಎನ್ನ ಬಂಧು ಬಳಗಾದರು | ಹರಿಯ ಶ್ರೀಮುದ್ರೆ ಆಭರಣವಾಯಿತು || ೧ || ಬೊಮ್ಮ ಮಾಡಿದ ತನು ಬಿಟ್ಟು | ವಿಶ್ವ | ಕರ್ಮನು ಮಾಡಿದ ಬೊಂಬೆಯನ್ನಿಟ್ಟು ಸುಮ್ಮನೆ ಕೂಗುಗಳಿಟ್ಟು | ಅದ || ನಂಬುವನೆಂಬೋನೆ ಹೋಗೆ ಕಂಗೆಟ್ಟು || ೪ || ಮುಕುತರಾದರು ಎನ್ನ ನೂರೊಂದು ಕುಲದವರು | ಮುಕುತಿಮಾರ್ಗಕ್ಕೆ ಯೋಗ್ಯ ನಾನಾದೆನೊ || ಅಕಳಂಕ ಶ್ರೀಹರಿ ಭಕುತಿಗೆ ಮನ ಬೆಳೆದು | ರುಕುಮಿಣಿಯರಸ ಕೈವಶನಾದನೆನಗೆ | ೨ | ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು | ಮುಂದೆನ್ನ ಜನ್ಮ ಸಫಲವಾಯಿತು || ತಂದೆ ಶ್ರೀಕಾಗಿನೆಲೆಯಾದಿಕೇಶವ ರಾಯ | ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ || ೩ || ಈ ರೀತಿ ಸುಭದ್ರವಾಗಿ ದೇವರು ಹೃದಯದಲ್ಲಿ ನೆಲೆಯಾಗಿ ನಿಂತ ಮೇಲೆ ಎಲ್ಲಿ ನೋಡಿದರಲ್ಲಿ ರಾಮ ರಾಮ, ಆರಾಮ, ಬಲ್ಲ ಜಾಣರು ದೇಹದಲ್ಲಿ ನೋಡಬೇಕು. ರೂಢಿಯೊಳಗೆ ಶುದ್ಧ ಮೂಢ | ಈ || ಕಾಡುಕಲ್ಲುಗಳನ್ನು ನಂಬಲು ಬೇಡ || ನಾಡಾಡಿದೈವಗಳೆಲ್ಲ | ನಮ್ಮ || ಬಾಡದಾದಿ ಕೇಶವನೊಬ್ಬನೆ ಬಲ್ಲ || ೫ || ನಂಬಲುಬೇಡ ನಾಡಾಡಿ ದೈವಗಳನೆಲ್ಲ ನಂಬಬೇಡ ಎಂಬಲ್ಲಿ ಎಚ್ಚರಿಕೆ ಇದೆ. ಆ ಎಚ್ಚರಿಕೆಯಲ್ಲಿ ಪ್ರೀತಿ ಇದೆ. ಪ್ರೀತಿಯೇ ವಿಶ್ವಾಸಕ್ಕೆ ಮೂಲ. ವಿಶ್ವಾಸವೇ ಭಕ್ತಿ. ಅಂತೆಯೇ ಆ ಕಣ್ಣಿಗೆ ಒಂದೇ ದೈವ. ಅವರು ಕಂಡ ರಾಮಮಯದಲ್ಲಿ ಹರಿಹರ ಎಲ್ಲ ರಾಮರಾಮ. ದೇವರ ನಾಮ ಹಲವು. ಆದರೆ ಆ ದೇವರ ಇರುವು ಒಂದೇ ಒಂದು ಈ ಸತ್ಯಕ್ಕೆ ಇಲ್ಲಿ ಒತ್ತು. ಇದರಿಂದಾಗಿ ಹೊರಗಣ್ಣಿಗೆ,