ಪುಟ:Kanakadasa darshana Vol 1 Pages 561-1028.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦೨ ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಭಕ್ತಸ್ವರೂಪ ೯೦೩ “ಬಯಲು ಆಲಯದೊಳಗೊ ಆಲಯದೊಳಗೆ ಬಯಲೋ | ಬಯಲು ಆಲಯವೆರಡು ನಯದೊಳಗೊ || ನಯನ ಬುದ್ದಿಯ ಒಳಗೊ ಬುದ್ಧಿ ನಯನದ ಒಳಗೊ | ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || ೧ || ಹೊರ ತಿಳಿವಳಿಕೆಗೆ ಕಾಣುವ ಕುಲಗಳೆಲ್ಲ ನಿರ್ನಾಮವಾಗಿ ಒಂದೇ ರಾಮ, ಇದನ್ನು ಅನುಭವಿಸಿದ ತತ್‌ಕ್ಷಣ ಕನಕರು ಸಾಮಾನ್ಯರ ಪ್ರಶ್ನೆಗೆ ಕ್ರಾಂತಿದಾಯಕ ಉತ್ತರ ನೀಡಿ, ಸತ್ಯದ ಇರುವನ್ನು ಬಿಚ್ಚಿ ತೋರಿಸಿ ಸಮಾಧಾನ ನೀಡುತ್ತಾರೆ. ಅವರ ಆ ಕೀರ್ತನೆ ಸತ್ಯದ ಇರುವಿನ ಎಸಳಿನ ಸೀಗುರಿ, ಅದರ ಬಿಚ್ಚುವಿಕೆಯಲ್ಲಿ ಬ್ರಹ್ಮಾಂಡದ ಅಂತರಾಳದ ಸೊಗಸು ಬಿಚ್ಚಿ ಅರಳು. “ಕುಲಕುಲ ಕುಲವೆನ್ನುತಿಹರೊ | ಕುಲವಾವುದು ಸತ್ಯ ಸುಜನರಿಗೆ || ಪ || ಕೆಸರೊಳು ತಾವರೆ ಪುಟ್ಟಲು ಅದ ತಂದು | ಕುಸುಮನಾಭನಿಗೆ ಅರ್ಪಿಸರೇನಯ್ಯ ? || ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ | ವಸುಧೆಯೊಳಗೆ ಭೂಸುರರುಣ್ಡರೇನಯ್ಯ || ೧ || ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಯೆರಡು ಜಿಹೈಯೊಳಗೊ || ಜಿ. ಬುದ್ಧಿಯ ಒಳಗೂ ಬುದ್ಧಿ ಜಿಹೈಯ ಒಳಗೊ ಜಿಹೈಬುದ್ಧಿಗಳೆರಡು ನಿನ್ನೊಳಗೊ ಹರಿಯೆ || ೨ || ಆ ಶೌಂಡಲ್ಯ ಪರಾಶರ ಎನಿಪನು || ವೇಶ್ಯಯ ಪುತ್ರ ವಸಿಷ್ಠ ಮುನಿ || ದಾಸಿಯ ನಂದನ ನಾರದ ಎನಿಪನು | ಕಾಶ್ಯಪ ಪೌತ್ರನ ಕುಲ ಹೇಳಿರಯ್ಯ ಆತ್ಮನಾವಕುಲ ಜೀವನಾವ ಕುಲ | ತತೇಂದ್ರಿಯಗಳ ಕುಲಪೇಳಿರಯ್ಯ || ಆತ್ಮನು ಕಾಗಿನೆಲೆಯಾದಿಕೇಶವನೊಲಿದ | ಭಕ್ತರಿಗೆ ಕುಲವಾವುದು ಹೇಳಿರಯ್ಯ || ೩ || ಈ ಕೀರ್ತನೆಯು ವಸುಧೆಯ ಮೂಲತತ್ತ್ವವನ್ನು ತಿಳಿಸುವ ಗಾಯತ್ರಿ, ಸ್ಪಷ್ಟ ನಿಘಂಟು. ಈ ನಿಘಂಟುವಿನ ಪರಿಚಯವಾದರೆ ಸಾಕು ಭಕ್ತಿಮಾರ್ಗದ ಕುಲ ತಿಳಿಯುತ್ತದೆ. ಭಕ್ತಿಮಾರ್ಗದ ಕುಲ ಭಕ್ತಿ ಅದು ವಲಂ. ಈ ಕುಲದವರಿಗೆ ಹುಟ್ಟಿನ ಮೂಲದ ಕುಲವಿಲ್ಲ. ಈ ಕುಲದವರಿಗೆ ಅಂತೆಯೇ ವಿಜ್ಞಾನದ ಮುಂದಿನ ಜ್ಞಾನದ ಅಸಲೂ ಪ್ರಾಪ್ತಿ. ಅದು ಸಿಕ್ಕಾಗ, ಆ ಮಾಯೆ ಒಳಗೋ ಹೊರಗೋ, ಭಕ್ತನಲ್ಲಿಯೋ ಪರಮಾತ್ಮನಲ್ಲಿಯೋ ! ಎಲ್ಲೆಲ್ಲಿಯೂ ಪರಮಾತ್ಮನೆ. ಆ ಬೆಳಕಿನ ಸೊಗಸು ತರಲ ತರಲವಾಗಿ ಅಂತರಂಗವನ್ನೇ ಮಿಡಿಯುತ್ತದೆ. ಅದನ್ನು ಕನಕರ ವಾಣಿಯಲ್ಲಿಯೇ ನೋಡಬೇಕು ; ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ ಕುಸುಮಗಂಧಗಳೆರಡು ಘ್ರಾಣದೊಳಗೋ || ಅಸಮಭವ ಕಾಗಿನೆಲೆಯಾದಿಕೇಶವರಾಯ | ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ || ೩ || ಈ ತಿಳಿವಳಿಕೆಯಲ್ಲಿ ಪೂರ್ಣತ್ವದ ಪರಮಾವಧಿ ಇದೆ. ಇಲ್ಲಿ ಭಕ್ತ ಅರ್ಜುನನ ಸಂಶಯಗಳೆಲ್ಲ ನಿವಾರಣೆಯಾಗುತ್ತವೆ. ಇದಕ್ಕೆ ಕಾರಣ ಶ್ರೀಕೃಷ್ಣನ ಭಗವದ್ಗೀತೆಯ ಒಳಸ್ಪಂದನವು ಕನಕರ ಭಕ್ತಿಗೀತೆಗಳಲ್ಲಿ ಒಳದನಿಯಾಗಿದ್ದು ಪೂರ್ಣ ಶಕ್ತಿಯೂ ಆಗಿದೆ. ಈ ಶಕ್ತಿಯು ಕನಕರ ಅನುಭಾವದ ಶಕ್ತಿಯೇ ಹೌದು. ಆದ್ದರಿಂದ ಭಕ್ತಿಯ ಮಾರ್ಗದಲ್ಲಿ ಅನನ್ಯವಾಗಿ ಸಮರ್ಪಣವಾದರೆ ಸಾಕು. ಮುಕ್ತಿ ಸಾಲೋಕ್ಯ, ಇದು ಕನಕರ ಭಕ್ತಿ ಸಾಹಿತ್ಯದ ಒಳಗುಟ್ಟು, ಹರಿಭಕ್ತಿಸಾರದಲ್ಲಂತೂ ಮುಕ್ತಿಸಾಧನೆಗೆ ಭಕ್ತಿಯೇ ಕಾರಣ ಎಂಬುದು ಸುಸ್ಪಷ್ಟ. ಇಂತಹ ಭಕ್ತಿಮಾರ್ಗದಲ್ಲಿ ಸಾಗಿದವರಿಗೆ, ಚತುರ್ವಿಧ ಪುರುಷಾರ್ಥಗಳ ಸಾಧನೆ ತೀರ ಸರಳ, ಅದನ್ನು ಹರಿಭಕ್ತಿಸಾರವು ಇನ್ನಷ್ಟು ಸರಳಗೊಳಿಸಿದೆ. ಭಕ್ತಿ ಮಾರ್ಗದ ತಿರುಳೆಲ್ಲ ಅಲ್ಲಿ ತುಂಬಿತುಳುಕಿದೆ. ಇದನ್ನು ಒಳಹೊಕ್ಕು ನೋಡಿದಾಗ ಭಕ್ತಿಯೇ ನಿಜವಾದ ಯೋಗವೆಂಬುದು ಸ್ಪಷ್ಟವಾಗುತ್ತದೆ. ಈ ಭಕ್ತಿಯೋಗದ ಸಾಧನೆಯು ಪುಣ್ಯಕಾರ್ಯ ಮಾಡುವ ವಿವೇಕಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಮನಸ್ಸನ್ನು ಬಲಪಡಿಸಬೇಕು. ಅದಕ್ಕೆ ಬೇಕಾಗುವ ಸಾಮಗ್ರಿ ಹರಿಭಕ್ತಿಸಾರದಲ್ಲಿ, ಆ ಸಾಮಗ್ರಿಯ ಬಲದಿಂದ ಮನಸ್ಸು ಬಲಗೊಂಡಾಗ ದುಃಖ ನಿರ್ನಾಮ. ಆಗ ಆನಂದ ಆರಾಮ. ಆ ಆರಾಮದಲ್ಲಿಯ ಕೆಲವು