ಪುಟ:Kanakadasa darshana Vol 1 Pages 561-1028.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦೪ ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿತ್ಯದಲ್ಲಿ ಭಕ್ತಸ್ವರೂಪ ೯೦೫ ಅರಳುಗಳ ಸೊಗಸನ್ನು ನೋಡುವುದು ಈ ಸಂದರ್ಭದಲ್ಲಿ ಉಚಿತ ; “ಹಸಿವರಿತು ತಾಯ್ತನ್ನ ಶಿಶುವಿಗೆ ಒಸೆದು ಪಾಲ್ಗೊಡುವಂತೆ ನೀ ಪೋ ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು ಬಸುರೊಳಗೆ ಬ್ರಹ್ಮಾಂಡ ಕೋಟಿಯ ಪಸರಿಸಿದ ಪರಮಾತ್ಮ ನೀನೆಂ ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ || ಏನು ಮಾಡಿದರೇನು ಕರ್ಮವ ನೀನೊಲಿಯದಿನ್ನಿಲ್ಲವಿದಕನು ಮಾನವುಂಟೇ ಭ್ರಮರ ಕೀಟನ್ಯಾಯದಂದದಲಿ ನೀನೊಲಿಯೆ ತೃಣಪರ್ವತವು ಪುಸಿ ಯೇನು ನೀ ಪತಿಕರಿಸೆ ಬಳಿಕ ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ || ಕೀರ್ತನೆಯಾಗಿ ಹರಿದು ಬಾಳಿಗೊಂದು ನಂಬಿಕೆಯನ್ನೇ ನೀಡಿದೆ. ಅವರ ಸಾಹಿತ್ಯದ ಒಟ್ಟು ಅಧ್ಯಯನದಲ್ಲಿ, ಪರಮಾತ್ಮನ ಮೇಲೆ ಸಂಪೂರ್ಣ ಭಾರಹಾಕಿ, “ಎಲ್ಲರನು ಸಲಹುವನು”, “ನೀನಲ್ಲದೆ ನರರು ಸ್ವತಂತ್ರರೇ” ಎಂಬಂತಹ ಭಾವದ ಮಾತುಗಳು ಕಂಡು ಬಂದು, ಆರೇನು ಮಾಡುವರು, ಆರಿಂದಲೇನಹುದು, ಎಲ್ಲ ವಿಧಿಲಿಖಿತ ಎಂಬುದನ್ನೇ ಹೇಳುತ್ತದಲ್ಲ ಎನ್ನಿಸೀತು ! ಈ ಎಲ್ಲ ಮಾತುಗಳಲ್ಲಿ ಪಲಾಯನವಾದವಿದೆಯಲ್ಲವೆಂದೆನ್ನಿಸೀತು ! ಆದರೆ ಹೀಗೆ ತಿಳಿದರೆ, ಕನಕರನ್ನು ನೋಡುವ ದೃಷ್ಟಿ ನೊಂದೀತು. ಏಕೆಂದರೆ ಕನಕರ ಇಂತಹ ಅಭಿವ್ಯಕ್ತಿಯ ಮಾತುಗಳಲ್ಲಿ ಎಲ್ಲರೂ ಸೋಮಾರಿಗಳಾದರೂ ಸಲಹುವನು' ಎಂಬ ಅರ್ಥವಿರುವುದಿಲ್ಲ. ಏಕೆಂದರೆ ಭಕ್ತಿಮಾರ್ಗ ಸುಲಭವೆಂದರೂ ಕೂಡ ಅದು ಹೋಗುತ್ತ ಕೊಯ್ಯುತ್ತದೆ, ಬರುತ್ತ ಕೊಯ್ಯುತ್ತದೆ. ಆದ್ದರಿಂದ ಗೀತೆಯಲ್ಲಿಯ ನಿಷ್ಕಾಮಕರ್ಮದ ತಳಹದಿಯ ಮೇಲೆ, ಸರ್ವಸಮರ್ಪಣಾ ಭಾವದಿಂದ ಕರ್ತವ್ಯಪರಾಯಣರಾಗಿದ್ದವರಿಗೆ ಮಾತ್ರ ಪರಮಾತ್ಮ ಶ್ರೀರಕ್ಷೆಯಾಗುತ್ತಾನೆ. ಸೋಮಾರಿಗಳಿಗೆ ಇಲ್ಲಿ ಬದುಕಲಿಕ್ಕೆ ಅವಕಾಶವಿರುವುದಿಲ್ಲ. ಆದರೆ ಸೋಮಾರಿಗಳಲ್ಲಿಯೂ ವಿವೇಕೋದಯವಾಗಲು ಪರಿಸರ ಪ್ರಸನ್ನತೆಯನ್ನು ಭಕ್ತಿ ಸಾಹಿತ್ಯವು ಒದಗಿಸುತ್ತದೆ. ಪ್ರೇರಣೆಯಾಗುತ್ತದೆ. ಕೆಲಸಕ್ಕೆ ಬಾರದ ತೃಣವೂ ಸಾಧನಾಬಲದಲ್ಲಿ ಶಕ್ತಿಯಾಗಿ ಪರಿಣಮಿಸುತ್ತದೆ. ಈ ಹಿನ್ನೆಲೆಯಲ್ಲಿ ಕನಕಸಾಹಿತ್ಯದಲ್ಲಿ ಭಕ್ತಿಸ್ವರೂಪ ಪೌರುಷವಾದವನ್ನು ಮೆರೆದಿದೆ. ಆತ್ಮಬಲ ಹೆಚ್ಚಿಸಿ ಸ್ವಾಭಿಮಾನವನ್ನು ಶ್ರೀಮಂತಗೊಳಿಸಿ ಬದುಕನ್ನು ನೋಡುವ ಕ್ರಿಯಾಸಂಪನ್ನತೆಯಲ್ಲಿ ಆತ್ಮೀಯತೆಯನ್ನು ಮೆರೆದಿದೆ. “ನಾನು” ಹೋಗಿಸಿ ವಾಸುದೇವನನ್ನು ಅಂಗೈನೆಲ್ಲಿಯಾಗಿಸಿ, ಭೂಮಿಯನ್ನು ವೈಕುಂಠವಾಗಿಸಿದೆ. ಈ ರೀತಿಯಲ್ಲಿ ಕನಕರ ಸಾಹಿತ್ಯದ ಭಕ್ತಿಸ್ವರೂಪವು ಜೀವವಾಹಿನಿಯಾಗಿದ್ದು ಕನಕಮೌಲ್ಯವನ್ನು ಪಡೆದು ಕನ್ನಡ ಸಾಹಿತ್ಯದ ತವನಿಧಿಯನ್ನು ಶ್ರೀಮಂತವಾಗಿಸಿದೆ. ಅರಿವಿನ ಕಣ್ಣನ್ನು ಅರಳಿಸಿದೆ. ಈಗಲೇ ಈ ದೇಹವಿನ್ನಾ ವಾಗಲೋ ನಿಜವಲ್ಲವೆಂಬುದ ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆನುತ ರಾಗ ಲೋಭದಿ ಮುಳುಗಿ ಮುಂದಣ ಕಾರುಬಾರುಗಳರಿಯೆ ನಿನ್ನ ಸ ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ | ಲೇಸಕಾಣೆನು ಜನನ ಮರಣದಿ ಘಾಸಿಯಾದೆನು ನೊಂದೆನಕಟಾ ಲೇಸೆನಿಸಿ ನೋಡಲು ಪರಾತ್ಪರ ವಸ್ತು ನೀನಾಗಿ ನೀ ಸಲಹುವವನಲ್ಲವೇ ಕರು ಣಾಸಮುದ್ರನು ನೀನಿರಲು ಕಮ ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ || ಹೀಗೆ ಕನಕರ ಅನುಭವವೆಲ್ಲ ಅವರ ಸಾಹಿತ್ಯದಲ್ಲಿ, ಮಾನವನ ಕಲ್ಯಾಣಕ್ಕಾಗಿ