ಪುಟ:Kanakadasa darshana Vol 1 Pages 561-1028.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳು : ಧಾರ್ಮಿಕ ಮುಖ ೯೦೭ ಕನಕದಾಸರ ಕೃತಿಗಳು : ಧಾರ್ಮಿಕ ಮುಖ ಡಾ. ಸಿ. ಪಿ. ಕೃಷ್ಣಕುಮಾರ್ S ) ಧರ್ಮ ಎಂಬುದು ಇಂಗ್ಲಿಷಿನ `ರಿಲಿಜಿಯನ್' ಎಂಬುದಕ್ಕಿಂತ ವ್ಯಾಪಕವಾದುದು : 'ಧೃ' ಎಂದರೆ 'ಧರಿಸು' ಎಂಬ ಧಾತುವಿನಿಂದ ಅದರ ನಿಷ್ಪತ್ತಿ, ಸೃಷ್ಟಿಗೆ, ಅಸ್ತಿತ್ವಕ್ಕೆ ಆಧಾರಭೂತವಾದದ್ದು ಧರ್ಮ, ಮತವಾದರೋ ಸಂಕುಚಿತವಾದುದು : 'Cult” ಎಂಬುದಕ್ಕೆ ಸಂವಾದಿಯಾದುದು. ಅದು ಧರ್ಮದ ಒಂದು ಅಂಗವಷ್ಟೆ. ಧರ್ಮ ಎನ್ನುವುದು ಚೇತನವನ್ನು ಊರ್ಧ್ವಮುಖವಾಗಿಸುವ ಆಂತರಿಕ ಪ್ರೇರಣೆ ; ಪರಿಪೂರ್ಣತೆಯ ಅಭೀಪ್ಪೆ ; ಬಿಡುಗಡೆಯ ಹಂಬಲ. ದೇವರು ಧರ್ಮದ ಕೇಂದ್ರ ; ದೇವರಿಲ್ಲದೆ ಧರ್ಮವಿಲ್ಲ. (ಬಹುಶ : ಬೌದ್ಧ ಧರ್ಮವೊಂದು ಅಪವಾದ.) ಮಾನವ ಯಾವುದನ್ನು ಪವಿತ್ರ ಭಾವನೆಯಿಂದ ನೋಡುತ್ತಾನೋ ಅದರೊಡನೆ ಇರಿಸಿಕೊಳ್ಳುವ ಸಂಬಂಧ ಎಂಬುದು ಧರ್ಮ ಶಬ್ದದ ವಿಶಾಲಾರ್ಥ, ಪೂಜೆ, ಅದಕ್ಕೆ ಕಾರಣವಾದ ಭಕ್ತಿ ಇಲ್ಲಿ ಬಹು ಮುಖ್ಯ. ಜೊತೆಗೆ ನೀತಿನಿಷ್ಠೆ ಸದಾಚಾರ, ಭೂತಾನುಕಂಪ ಇತ್ಯಾದಿಗಳೂ ಸೇರುತ್ತವೆ. ಪಾವಿತ್ರ್ಯಭಾವನೆ ಎಲ್ಲ ಧರ್ಮಗಳ ಸಾಮಾನ್ಯಾಂಶ ಎನ್ನಲಾಗಿದೆ. ಹೀಗಾಗಿ ಎಲ್ಲ ಧರ್ಮಗಳ ತಿರುಳೂ ಒಂದೇ ಎಂದು ಹೇಳಬಹುದು. ಮೊದಮೊದಲು ಸರಳ ಪೂಜಾವಿಧಿಗಳಷ್ಟೇ ಇದ್ದು, ಕ್ರಮೇಣ ಜಟಿಲ ಪ್ರಕ್ರಿಯೆಗಳು. ವಿಧಿಗಳು ಆಚರಣೆಗಳು ಒಂದು ಕಥೆ ಹುಟ್ಟಿಕೊಂಡವು ; ಪುರೋಹಿತಶಾಹಿಯ ಪ್ರವೇಶವಾಯಿತು. ಇನ್ನೊಂದು ಕಡೆ ಸಂಕೀರ್ಣತ, ಸಿದ್ದಾಂತ ರಾದ್ದಾಂತಗಳು ಬೆಳೆದುಬಂದವು. ಈ ಆಚರಣೆ, ಸಿದ್ದಾಂತಗಳ ಭಾಗವೇ ಮತ, ಇವು ಒಮ್ಮೊಮ್ಮೆ ಅಗತ್ಯವಾಗಬಹುದಾದರೂ ಸಾರಭೂತವಲ್ಲ; ಕೆಲವೊಮ್ಮೆ ಶ್ರೇಯಸ್ಕರವೂ ಅಲ್ಲ. ಜನಸಾಮಾನ್ಯರಿಗೆ ಇದೆಲ್ಲ ಅಗಮ್ಯ ; ಆದ್ದರಿಂದಲೇ ಧರ್ಮ ನಿಗೂಢವಾದದ್ದು ಎಂಬ ಮಾತೊಂದು ನಮ್ಮಲ್ಲಿದೆ. ಧರ್ಮ ಮೂಲತಃ ವೈಯಕ್ತಿಕವೇ ಅಥವಾ ಸಾಮೂಹಿಕವೇ ಎಂಬುದನ್ನು ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಧರ್ಮ, ಅಧ್ಯಾತ್ಮ ಮೂಲತಃ ವೈಯಕ್ತಿಕ ಎನ್ನಬಹುದು. “ಮನುಷ್ಯ ಏಕಾಂತದಲ್ಲಿ ಏನನ್ನು ಕುರಿತು ಚಿಂತಿಸುತ್ತಾನೋ ಅದೇ ಧರ್ಮ” ಎಂಬ ಉಕ್ತಿಯೊಂದು ಗಮನಾರ್ಹ. ಮತವಾದರೂ ಸಾಮೂಹಿಕವಾದದ್ದು. ಈ ಹಿನ್ನೆಲೆಯಲ್ಲಿ ನೋಡಿದಾಗ, ಕನಕದಾಸರು ಮುಖ್ಯವಾಗಿ ಒಬ್ಬ ಧಾರ್ಮಿಕ ವಿಭೂತಿ ; ಮತೀಯ ಅಥವಾ ಮಠೀಯ ವ್ಯಕ್ತಿಯಲ್ಲ. ಅದರಲ್ಲಿ ಮಹಾಭಕ್ತನನ್ನು, ಅನುಭಾವಿಯನ್ನು, ಆಧ್ಯಾತ್ಮಿಕ ಚೇತನವನ್ನು ಗುರುತಿಸುತ್ತೇವೆ; ಅವರು ಜನ ಸಾಮಾನ್ಯರಿಗೆ ಧರ್ಮದ ರಹಸ್ಯವನ್ನು ಸರಳ ಸುಲಭವಾಗಿ ತಿಳಿಸಿಕೊಟ್ಟರು ; ಸರ್ವೋದಯ ದೃಷ್ಟಿಯನ್ನು ವ್ಯಕ್ತಪಡಿಸಿದರು. 'ಹರಿಭಕ್ತಿಸಾರ'ದ ಪ್ರತಿ ಪದ್ಯದಲ್ಲೂ ಅವರು ದೇವರನ್ನು ಪ್ರಾರ್ಥಿಸುವುದು “ರಕ್ಷಿಸು ನಮ್ಮನನವರತ ಎಂದೇ ವಿನಾ “ನನ್ನನನವರತ” ಎಂದಲ್ಲ. ಕನಕದಾಸರನ್ನು ಹರಿದಾಸರ ಪಂಕ್ತಿಯಲ್ಲಿ ಪರಿಗಣಿಸುತ್ತೇವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅವರ ದಾಸ್ಯಭಾವ, ದಾಸ್ಯಭಕ್ತಿ, (ಹಾಗೆ ನೋಡಿದರೆ ನವವಿಧಭಕ್ತಿ ಸಾಧನೆಯೂ ಅವರಲ್ಲಿ ಕಂಡುಬರುತ್ತದೆ.) ಆದರೂ ಹರಿದಾಸ ಪರಂಪರೆಯ ಸಾಂಪ್ರದಾಯಿಕ ಸ್ತುತಿಯಲ್ಲಿ ಕನಕದಾಸರಿಗೆ ಸ್ಥಾನವಿಲ್ಲ ಎಂದು ಹೇಳುತ್ತಾರೆ. ಇದು ಒಂದರ್ಥದಲ್ಲಿ ಸರಿ. ಏಕೆಂದರೆ ಇತರ ಹರಿದಾಸರಿಗೂ ಕನಕದಾಸರಿಗೂ ಸಾಮ್ಯಕ್ಕಿಂತ ವೈಷಮ್ಯಗಳೇ ಹೆಚ್ಚು. ಕನಕದಾಸರು ಇತರರಿಗಿಂತ ಭಿನ್ನವಾಗಿ ಒಂದು ವಿಶಿಷ್ಟವಾದ ನೆಲೆಯಲ್ಲಿ ನಿಲ್ಲುತ್ತಾರೆ. ಅವರು ಹುಟ್ಟಿನಿಂದ ಶೂದ್ರರೆಂಬ ಸಂಗತಿ ಈ ವೈಶಿಷ್ಟ್ಯಗಳ ಒಂದು ಪ್ರಮುಖ ಕಾರಣವಾಗಿದೆ. ಕನಕದಾಸರದು ಸಮನ್ವಯಶೀಲ ವ್ಯಕ್ತಿತ್ವ ಅವರು ಸಂತರೂ ಹೌದು. ಕವಿಯೂ ಹೌದು. ಅವರಲ್ಲಿ ಸ್ವತಂತ್ರ ನಿರಂಕುಶಮತಿ, ವೈಚಾರಿಕ ಮನೋಭಾವ, ವಿಮರ್ಶನಬುದ್ಧಿ, ಪ್ರಶ್ನಿಸುವ ಭಂಗಿ ಇತರ ದಾಸರಲ್ಲಿ ಇರುವುದಕ್ಕಿಂತ ಮಿಗಿಲಾಗಿ ಗೋಚರಿಸುತ್ತವೆ. ಆರ್ತ ಭಾವುಕ ಭಕ್ತಿಯನ್ನು ಮಾತ್ರವಲ್ಲ, ಜಿಜ್ಞಾಸುಪ್ರವೃತ್ತಿಯನ್ನೂ ಅವರಲ್ಲಿ ಎದುರುಗೊಳ್ಳುತ್ತೇವೆ. ಭಕ್ತಿಮಾರ್ಗ, ಜ್ಞಾನಮಾರ್ಗಗಳ ಮಿಲನ ಅವರ ವ್ಯಕ್ತಿತ್ವದಲ್ಲಿದೆ. ಹರಿದಾಸ ಪರಂಪರೆಗೆ ಹಿನ್ನೆಲೆ ಮಾಧ್ವಮತ ; ದೈತ ಸಿದ್ದಾಂತ ಮಧ್ವಮತದ ಸಾರಾಂಶವನ್ನು ಒಂದು ಹೇಳಿಕೆ ಹೀಗೆ ಸಂಗ್ರಹಿಸುತ್ತದೆ : ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯ ಜಗತ್ತತ್ತೋ