ಪುಟ:Kanakadasa darshana Vol 1 Pages 561-1028.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೧೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳು : ಧಾರ್ಮಿಕ ಮುಖ ಇರಬಂದುದಿಲ್ಲ ಸಂಸಾರ ಅರಿತು ಶ್ರೀ ಹರಿಗುಣವ ಭಜಿಸುವುದು ಸಾರ || ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ವಾಸುದೇವನ ಭಜಿಸೊ ಒರಟು ಜೀವನವೆ ? ಎನ್ನುವಲ್ಲಿ ಹೊರಪಡುವುದು ದಾಸರ ವಿನಯ ಮಾತ್ರವಲ್ಲ. “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ?” ಎಂಬ ಸುಪ್ರಸಿದ್ದ ಕೀರ್ತನೆಯಲ್ಲಿ, ದೇವರು ಸರ್ವವ್ಯಾಪಿ, “ಸರ್ವಂ ಖಲ್ವಿದು ಬ್ರಹ್ಮ” ಎಂಬ ವೇದಾಂತ ತತ್ರ ದ ವೈಶಿಷ ಪೂರ್ಣ, ಸರಸ ನಿರೂಪಣೆಯಿದೆ. ಕನಕದಾಸರ ದುರವಗಾಹ್ಯವಾದ ಮುಂಡಿಗೆಗಳಲ್ಲಿ ಪಾಂಡಿತ್ಯ ಚಮತ್ಕಾರಗಳಿಗೆ ಪ್ರಾಶಸ್ತ್ರವಿದ್ದರೂ, ಅವುಗಳಲ್ಲಿ ಕೆಲವಾದರೂ ಅನುಭಾವದ ಸಾಂಕೇತಿಕ ಆವಿಷ್ಕಾರಗಳು ಎಂಬುದನ್ನು ಮರೆಯಬಾರದು. ಕನಕದಾಸರ ಧಾರ್ಮಿಕ ಜೀವನ ವಿಕಾಸದ ಒಂದು ಚಿತ್ರವನ್ನು ರೇಖಿಸುವುದು ಅಪ್ರಸ್ತುತವಾಗಲಾರದು. ಪ್ರತಿಯೊಬ್ಬ ಸಾಧಕನ ಬದುಕಿನಲ್ಲೂ Dark Night of the Soul (ಆತ್ಮದ ಕಾಳರಾತಿ) ಎಂದು ಕರೆಯಬಹುದಾದ ಆರಂಭದ ಅವಸ್ಥೆಯೊಂದಿರುತ್ತದೆ. ಕನಕದಾಸರ ಬಾಳು ಅದಕ್ಕೆ ಹೊರತಲ್ಲ. ಮೊದಮೊದಲು ಅವರು ಸಂಸಾರಬದ್ದರಾಗಿ ಮಾಯಾ ಮೋಹವಶರಾಗಿ ತೊಳಲುತ್ತಿದ್ದಿರಬೇಕು. ಆ ತೊಳಲಾಟವನ್ನು ತೋಡಿಕೊಂಡು ಭಗವತ್ಕರುಣೆಯನ್ನು ಯಾಚಿಸುವ ಪರಿ ಅವರ ಅನೇಕ ಹಾಡುಗಳಲ್ಲಿದೆ : ನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣ ಕಾನನದೊಳು ಕಣ್ಣ ಮುಚ್ಚಿ ಬಿಟ್ಟಿಹರೊ || ಎನ್ನುವಲ್ಲಿ ಜೀವವನ್ನು ಕವಿದ ಕಗ್ಗತ್ತಲಿನ ನಿರೂಪಣೆಯಿದೆ. ಘೋರ ಸಂಸಾರವೆಂದೆಂಬ ವಾರಿಧಿಯೊಳಗೆ ಬಿದ್ದು ಪಾರಗಾಣದಾದೆನಲ್ಲಯ್ಯ | ಎಂದು ಕನಕದಾಸರು ಅಳಲುತ್ತಾರೆ. ಸಾಕು ಸಾಕು ಮನುಜಸೇವೆ ರಂಗಯ್ಯ ಬೇಕು ನಿನ್ನ ಭಜನೆ || ಎಂದು ಸಂಕಲ್ಪಿಸುತ್ತಾರೆ. ತಮ್ಮ ಪಾಲಿಗೆ ಭಗವದನುಗ್ರಹದ ಬಾಗಿಲು ತೆರೆಯಲಿಲ್ಲವೆನಿಸಿದಾಗ ಹೀಗೆ ಮೊರೆಯಿಡುತ್ತಾರೆ : ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ ? || ಈ ತಳಮಳ, ತಲ್ಲಣಗಳ ಅವಸ್ಥೆ ಹಿಂಜರಿಯುವ ಕಾಲ ದೂರವಿಲ್ಲ. ಈ ಸಂಸಾರ, ಸಂಪತ್ತು, ದೇಹ ಅನಿತ್ಯವೆಂಬ ಅರಿವು ಕನಕದಾಸ ರಿಗಾಗುತ್ತದೆ : ಅದನ್ನು ಅವರು ಅನೇಕ ರೀತಿಯಲ್ಲಿ ಅಭಿವ್ಯಕ್ತಿಸುತ್ತಾರೆ : ಡಿಂಬದಲ್ಲಿರುವ ಜೀವ ಕಂಬ ಸೂತ್ರ ಬೊಂಬೆಯಂತೆ ಎಂದಿಗಿದ್ದರೊಂದು ದಿನ ಸಾವು ತಪ್ಪದು.... | -ಇತ್ಯಾದಿ ಶರೀರದಜೇಯತೆಯನ್ನು ಕನಕದಾಸರು ಜುಗುಪ್ಪೆ ಹುಟ್ಟುವಂತೆ ಬಣ್ಣಿಸಿ ಕಡೆಗೆ ಹೀಗೆ ಸಾರುತ್ತಾರೆ : ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಮುಂದರಿತು ಶ್ರೀಹರಿಯ ಭಜಿಸುವುದು ಲೇಸು || ಆದರೆ ಹರಿಭಕ್ತಿಸಾರದಲ್ಲಿ ಒಂದು ಕಡೆ “ನೀನಿರಲು ದೇಹದಲ್ಲಿ ಹೊಲೆಯುಂಟೆ ?” ಎಂದಿರುವುದು ದ್ವಂದ್ವಕ್ಕೆ ಎಡೆಮಾಡಿಕೊಡುತ್ತದೆ. ದೈವಬಲ ಎಲ್ಲಕ್ಕಿಂತ ಮುಖ್ಯ ಎಂದು ಕನಕದಾಸರ ನಂಬಿಕೆ : ಆವ ಬಲವಿದ್ದರೇನು ದೈವಬಲವಿಲ್ಲದವಗೆ ? ಭಗವಂತನ ಮಹಿಮೆಯನ್ನೂ ತಮ್ಮ ಅಲ್ಪತೆಯನ್ನೂ ಕನಕದಾಸರು ಪರಿಪರಿಯಾಗಿ ಅರುಹುತ್ತಾರೆ : ಏನೆಂದು ಕೊಂಡಾಡಿ ತುತಿಸಲೋ ದೇವ ? ನಾನೇನು ಬಲ್ಲೆ ನಿನ್ನಯ ಮಹಿಮೆ ಘನವ ? ಹರಿಮುಕುಂದನು ನೀನು ನರಜನ್ಮ ಹುಳು ನಾನು - ಇತ್ಯಾದಿ ನಾಮ ಮಹಿಮೆಯೂ ಅನೇಕ ಕಡೆ ಕೀರ್ತಿತವಾಗಿದೆ : ನೀರ ಮುಳುಗಲು ಯಾಕೆ ನಾರಿಯಳ ಬಿಡಲೇಕೆ ? ವಾರಕೊಂದುಪವಾಸ ಮಾಡಲೇಕೆ ? ನಾರಸಿಂಹನ ದಿವ್ಯನಾಮವನು ನೆನೆದರೆ ಘೋರ ಪಾತಕವೆಲ್ಲ ತೊಲಗಿ ಹೋಗುವುದು. || ಇತ್ಯಾದಿ ಇಲ್ಲಿ ಸಂಸಾರ ತ್ಯಾಜ್ಯವಲ್ಲವೆಂದು ಹೇಳುತ್ತಾರೆ ಕನಕದಾಸರು. ಆದರೆ ಈ ನಿಲುವಿಗೂ ದೇಹ ಹೇಯವೆ೦ಬ ನ೦ಬಿಕೆಗೂ ವಿರೋಧ ಏರ್ಪಡುವುದಿಲ್ಲವೆ ?