ಪುಟ:Kanakadasa darshana Vol 1 Pages 561-1028.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೧೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳು : ಧಾರ್ಮಿಕ ಮುಖ ೯೧೩ ಭಕ್ತಿಪಾರಮ್ಯವನ್ನು ಘೋಷಿಸುವಾಗ ಕನಕದಾಸರು : ನಡತೆಹೀನನಾದರೇನಯ್ಯ ಜಗ ದೊಡೆಯನ ಭಕುತಿಯಿದ್ದರೆ ಸಾಲದೆ ? | ಎನ್ನುವಷ್ಟು ದೂರ ಹೋಗುತ್ತಾರೆ. ಇಲ್ಲಿ ಭಕ್ತಿಗೆ ಒತ್ತು ; ನಡತೆಯಿಲ್ಲದಿರುವಿಕೆಯ ಪ್ರಸ್ತಾಪ ಗೌಣ. ಕೆಲವು ಹೇಳಿಕೆಗಳ ಆಶಯವನ್ನು ನಾವು ಗ್ರಹಿಸಬೇಕೆ ಹೊರತು ಅಕ್ಷರಾರ್ಥವನ್ನಲ್ಲ. ತಮ್ಮ ದಾಸತ್ವವನ್ನಂತೂ ಕನಕದಾಸರು ಆತ್ಮಾವಹೇಳನ, ನೈಚ್ಯಾನುಸಂಧಾನ ಎನಿಸುವಷ್ಟು ಗಾಢವಾಗಿ ನಿವೇದಿಸುತ್ತಾರೆ. ತಾನು ದಾಸರ ದಾಸ ಎನ್ನುತ್ತಾರೆ: ಬಂಟನಾಗಿ ಬಾಗಿಲು ಕಾಯ್ದೆ ಹರಿಯ ವೈಕುಂಠದ ಸೊಂಪಿನ ದಾಸರ ಮನೆಯ |

ಹೂವು ತರುವರ ಮನೆಗೆ ಹುಲ್ಲು ತರುವೆ ಆವ ಪರಿಯಲಿ ಸಲಹೊ ದೇವ ಚಿನ್ನಯನೆ |ಇತ್ಯಾದಿ. ತಮ್ಮ ಅಸ್ವತಂತ್ರ ಭಾವವನ್ನು ಕನಕದಾಸರು ಹೇಳಿಕೊಳ್ಳುವುದು ಹೀಗೆ : ನನ್ನಿಂದ ನಾನೇ ಜನಿಸಿಬಂದೆನೆ ಕೃಷ್ಣ ಎನ್ನ ಸ್ವತಂತ್ರವು ಲೇಶವಿದ್ದರು ತೋರು ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ ನಿನ್ನದೇ ತಪ್ಪೋ ಎನ್ನದೆ ತಪ್ಪೋ ಪರಮಾತ್ಮ || ಕಡೆಗೆ ಸಮರ್ಪಣಭಾವ ಸಿದ್ಧಿಸುತ್ತದೆ ; ಶರಣಾಗತಿಯ ನಿಲುವಿನಲ್ಲಿ ವಿರಮಿಸುತ್ತಾರೆ, ಕನಕದಾಸರು : ತನು ನಿನ್ನದು ಜೀವನ ನಿನ್ನದು ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಸವಿನುಡಿ ವೇದ ಪುರಾಣ ಶಾಸ್ತ್ರಂಗಳ | ಕಿವಿಗೊಟ್ಟು ಕೇಳುವ ಸ್ಥಿತಿ ನಿನ್ನದು ನವಮೋಹನಾಂಗಿಯರ ರೂಪವ ಕಣ್ಣಲಿ ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ | ಹೀಗೆಲ್ಲ ಹೇಳಿದ ಮೇಲೆ “ಪಂಚೇಂದ್ರಿಯಗಳು ನಿನ್ನವು” ಎಂದು ವಾಚ್ಯವಾಗಿಯೆ ನುಡಿಯುತ್ತಾರೆ, ಕನಕದಾಸರು. ಈ ಇಂದ್ರಿಯಗಳೂ ನಮ್ಮನ್ನು ಇಳಿಸಲೂ ಬಲ್ಲವು, ಎತ್ತಲೂಬಲ್ಲವು. ಉದಾಹರಣೆಗೆ “ಕಣೇ ಕಾಮನ ಬೀಜ”ಇದು ಕವಿಯಾದವನು ಮಾತ್ರ ಕೊಡಬಹುದಾದ ಸೊಗಸಾದ ರೂಪಕ-ಆದರೆ ದೇಹ ಹೊಲಸು ಎಂಬ ಭಾವನೆಗೆ ಇದು ವಿಸಂಗತವಾಗುವುದಿಲ್ಲವೆ ? ಮುಕ್ತಿ ಆನಂದಗಳು ತಮ್ಮ ಧೈಯವೆಂದು ಉಸುರುತ್ತಾರೆ ಕನಕದಾಸರು. ಈ ವಿಶಿಷ್ಟ ಕೀರ್ತನೆಯಲ್ಲಿ ವಾಸ್ತವ, ಆದರ್ಶಗಳ ಎರಡೂ ಸ್ತರಗಳಿವೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ......ಉನ್ನಂತ ನೆಲೆಯಾದಿಕೇಶವನ ಧ್ಯಾನವನು ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ || ತಮ್ಮ ಆತ್ಯಂತಿಕ ಸಿದ್ದಿಯ ಸಾಕ್ಷಾತ್ಕಾರದ ಚಿತ್ರಗಳನ್ನು ಕನಕದಾಸರು ಅನೇಕ ಹಾಡುಗಳಲ್ಲಿ ಕೊಟ್ಟಿದ್ದಾರೆ. ಇದೊಂದು ಖ್ಯಾತ ಕೀರ್ತನೆ : ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ಪದುಮನಾಭನ ಪಾದದೊಲುಮೆ ಎನಗಾಯಿತು ಹರಿಯ ನಾಮಾಮೃತ ಕಿವಿಗೊದಗಿತು ಹರಿಯ ದಾಸರು ಎನ್ನ ಬಂಧು ಬಳಗಾದರು ಹರಿಯ ಶ್ರೀಮುದ್ರೆ ಆಭರಣವಾಯ್ತು || ಇಂದೆನ್ನ ಜೀವಕ್ಕೆ ಸಕಲಸಂಪದವಾಯ್ತು ಮುಂದೆನ್ನ ಜನ್ಮ ಸಾಫಲ್ಯವಾಯ್ತು ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯ ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ || “ಹರಿಯ ಶ್ರೀ ಮುದ್ರೆ ಆಭರಣವಾಯ್ತು” ಎಂಬ ಉದ್ದಾರ ಅಗತ್ಯವಾಗಿ ಲಕ್ಷಿಸಬೇಕಾದುದು. ಮಾಧ್ವದೀಕ್ಷೆಯ ಉಲ್ಲೇಖ ಇಲ್ಲಿದೆ. ಒಂದು ಧಾರ್ಮಿಕ ವಿಧಿಯ ಹಿನ್ನೆಲೆಯಲ್ಲಿ ಇಂಥ ಸುಂದರವಾದ ಗೀತೆಯೊಂದು ಮೂಡಿರುವುದು ವಿಶೇಷ ಎನಿಸುತ್ತದೆ. ಕನಕದಾಸರ ಸಿದ್ದಿಯ ದೃಷ್ಟಿಯಿಂದ ಈ ಹಾಡೂ ಗಮನಾರ್ಹ : ಇಷ್ಟು ದಿನ ವೈಕುಂಠ ಎಷ್ಟು ದೂರ ಎನ್ನುತ್ತಿದ್ದೆ ಇಂದು ಸೃಷ್ಟಿಗೀಶ ಶ್ರೀರಂಗನನ್ನು ದೃಷ್ಟಿಯಿಂದ ನೋಡಿದೆ...... ನಾಗಶಯನನ ಮೂರ್ತಿಯ ಕಂಡೆ ಭೋಗಿಭೂಷಣ ಶಿವನು ಕಂಡೆ || ೧. ನೋಟ ಭಗವದರ್ಪಿತವಾದಾಗ ಏನೊಂದನ್ನೂ ಕೆಟ್ಟ ದೃಷ್ಟಿಯಿಂದ ನೋಡುವುದು ಸಾಧ್ಯವಾಗುವುದಿಲ್ಲ. ಮಾಡುವ ಕರ್ಮವೆಲ್ಲ ಭಗವದರ್ಪಿತವಾದಾಗ ಕೆಟ್ಟದ್ದೇನನ್ನೂ ಮಾಡುವುದು ಸಾಧ್ಯವಾಗುವುದಿಲ್ಲ. ಇದು ಇಲ್ಲಿ ಗ್ರಹಿಸಬೇಕಾದ ಅಭಿಪ್ರಾಯ.