ಪುಟ:Kanakadasa darshana Vol 1 Pages 561-1028.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೧೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಂದೇಶ ೯೧೯ “ದೊರೆತನ ಬಿಡಿಸಿ ಮಾರ್ಗವನೆ ತೋರಿ ಪರಿಪಾಲಿಸಿದೆನ್ನ-ಹರಿಯೆ” “ವೀರರಾಹುತಬಲದ ಭಾರವನು ತರಿದಹಂಕಾರವನ್ನು ಮುರಿದೆ ಹರಿಯೆ" “ನೀರು ಶುಕ್ಕೆಯ ಸೇರಿ ತೋರ ಮುತ್ತಾದ ಪರಿ ಸೇರಿದೆನೊ ನಿನ್ನಂಘ್ರ-ಹರಿಯೆ * ....ಇತ್ಯಾದಿ ಕೀರ್ತನೆಯ ಸಾಲುಗಳಲ್ಲಿ ಕನಕನಾಯಕನಾಗಿದ್ದ ವ್ಯಕ್ತಿ ಕ್ರಮಕ್ರಮವಾಗಿ 'ದಾಸ'ನಾಗಿ ಮಾರ್ಪಟ್ಟ ರೀತಿಗೆ ಆಧಾರಗಳಿವೆ. ಕನಕದಾಸರಲ್ಲಿ ಭಕ್ತಿ, ದೈವಶ್ರದ್ದೆ, ಭೋಗನಿರಾಸಕ್ತಿ, ಸಂಸಾರ ನಿಸ್ಸಾರತೆಯ ಅರಿವು ಮುಂತಾದ ವ್ಯಕ್ತಿನಿಷ್ಟರಚನೆಗಳು ಒಂದು ಕಡೆಯಾದರೆ, ಸಮಾಜನಿಷ್ಠರಚನೆಗಳು ಮತ್ತೊಂದು ಕಡೆಗಿವೆ. ಆಧ್ಯಾತ್ಮ ಸೆಳೆತ ಹಾಗೂ ಸ್ವಾನುಭವದ ಸಾಮಾಜಿಕ ವಾಸ್ತವತೆಯ ಭೀಕರ ಚಿತ್ರ ಅವರ ರಚನೆಗಳಲ್ಲಿ ಅಂತರ್ಗತವಾಗಿವೆ. ಪಾರಮಾರ್ಥಿಕತೆ ಹಾಗೂ ವೈಚಾರಿಕತೆಗಳು ಪರಸ್ಪರ ವಿರುದ್ದ ಪ್ರತಿಕ್ರಿಯೆಗಳಾದರೂ ಕನಕದಾಸ ಎದುರಿಸಿದ ವಿಶಿಷ್ಟ ಪರಿಸರ ಬದುಕಿನ ಬಗೆಯ ಸೀಳುನೋಟಕ್ಕೆ ದಾರಿಯಾಯಿತೆಂದು ತೋರುತ್ತದೆ. ಕವಿಯೊಬ್ಬ ಚಾರಿತ್ರಿಕ ಸಂದರ್ಭದಲ್ಲಿ ಕೃತಿರಚನೆ ಮಾಡಿದ್ದರೂ ಅಲ್ಲಿಯೇ ಅವನು ವಿರಮಿಸದೆ ಎಷ್ಟರಮಟ್ಟಿಗೆ ತನ್ನ ಕಾಲದಾಚೆಗೆ ದಾಟಿಬರುವವನಾಗಿದ್ದಾನೆ ಎನ್ನುವುದರ ಮೇಲೆ ಅರ್ಥಪೂರ್ಣತೆ ನಿರ್ಧಾರವಾಗುತ್ತದೆ. ಧಾರ್ಮಿಕ ಚೌಕಟ್ಟಿಗೆ ಗಂಟುಬಿದ್ದಿದ್ದರೂ ಎಷ್ಟರಮಟ್ಟಿಗೆ ಜೀವನರಹಸ್ಯವನ್ನು ಪರಿಶೋಧಿಸಿದ್ದಾರೆ, ಬದುಕಿನ ಮೂಲಭೂತ ಸಮಸ್ಯೆಗಳನ್ನು ಚರ್ಚಿಸಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಉಳಿದೆಲ್ಲ ದಾಸರಿಗಿಂತ ಪುರಂದರದಾಸ ಮತ್ತು ಕನಕದಾಸರು ಈ ದೃಷ್ಟಿಯಿಂದ ಬೇರೆಯಾಗಿಯೇ ನಿಲ್ಲುತ್ತಾರೆ. ಅವರ ಕೀರ್ತನೆ, ಕಾವ್ಯಗಳಲ್ಲಿ ಸಾಂಪ್ರದಾಯಕವಾದ ಹಾಗೂ ಕಾಲಬದ್ದವಾದ ಸಂಗತಿಗಳಿರುವಂತೆ ಕಾಲಾತೀತವಾಗಿ ನಿಲ್ಲಬಹುದಾದ ಮೌಲ್ಯ, ಸಂದೇಶಗಳೂ ಸಿಗುತ್ತವೆ. ವರ್ಣಿಸಿದ್ದಾರೆ. ಭಗವದ್ಭಕ್ತಿಯ ಅನನ್ಯತೆ ಮತ್ತು ಪೌರಾಣಿಕ ಆಶೋತ್ತರಗಳನ್ನು ಪ್ರಶ್ನಿಸದೆ ಒಪ್ಪಿಕೊಂಡ ಸಂಪ್ರದಾಯಶೀಲತೆ ಇವರಲ್ಲಿ ಕಾಣಿಸುತ್ತದೆ. ಇಂಥ ಸಾಂಪ್ರದಾಯಿಕ ವಿಚಾರಸರಣಿ ವೈಚಾರಿಕ ನೆಲೆಯನ್ನು ಸ್ಪರ್ಶಿಸುವುದಿಲ್ಲ. ಬದಲಾಗಿ ನಂಬಿಕೆಯು ಲೋಕದಲ್ಲಿ ವಿರಮಿಸುತ್ತದೆ ಎನ್ನಬಹುದು. ದೇವತಾಸ್ತುತಿ, ಭಗವಂತನ ಹಿರಿಮೆ, ಭಕ್ತರಕ್ಷಣೆಯಲ್ಲಿ ಅವನು ವಹಿಸಿದ ಪಾತ್ರ ಕನಕದಾಸರ ಕೀರ್ತನೆಗಳ ವಸ್ತು, ದಾಸದಾಸರ ಮನೆಯ ದಾಸಿಯರ ಮಗ ನಾನು” ಎಂಬ ಸರ್ವಸಮರ್ಪಣ ಭಾವ, “ಹರಿಮುಕುಂದನು ನೀನು ನರಜನ್ನ ಹುಳು ನಾನು, ಪರಮಾತ್ಮನು ನೀನು ಪಾಮರನು ನಾನು” ಎಂಬ ಸ್ವಯಂನಿಂದನೆಯಲ್ಲಿನ ನೈಚ್ಯಾನುಸಂಧಾನ ಕಾಣಿಸುತ್ತದೆ. ಸಂಸಾರ ಜಂಜಡದಿಂದ ಕೂಡಿದೆ. ಅದರಲ್ಲಿ ಬೆರೆತೂ ಬೆರೆಯದಂತೆ ಗೇರುಹಣ್ಣಿನಲ್ಲಿರುವ ಬೀಜದಂತೆ ಇರಬೇಕು, ಸಂಸಾರ ಸಾಗರ ದಾಟಲು ಕಂಸಾರಿಯ ನಾಮಸ್ಮರಣೆಯೊಂದಿದ್ದರೆ ಸಾಕು, ಒಲಿಯುತ್ತಾನೆ. ಸಂಸಾರ ಶಾಶ್ವತವಲ್ಲ, ಅದು ನೀರಮೇಲಿನ ಗುಳೆ. ಆದ್ದರಿಂದ ಸಂಸಾರದಲ್ಲಿರುವಷ್ಟು ದಿನ ಕೈಲಾದ ದಾನ ಧರ್ಮ ಮಾಡಬೇಕು. ಸಾವನ್ನು ಪ್ರತಿಯೊಬ್ಬರೂ ಒಂಟಿಯಾಗಿಯೇ ಎದುರಿಸಬೇಕು. ಬಂಧು ಬಳಗ, ಪತ್ನಿ-ಪುತ್ರ ಯಾರಿದ್ದರೂ ಅವರು ಸಹಾಯಕ್ಕೆ ಬರುವುದಿಲ್ಲ. ಎಲ್ಲಾ ಕೆಲಸದ ಕಾರ್ಯಗಳನ್ನು `ಕೃಷ್ಣಾರ್ಪಣ' ಎಂಬ ಧೋರಣೆಯಿಂದ ಮಾಡಿ ನೆಮ್ಮದಿಯಿಂದ ಬದುಕಬೇಕು. ಆದಿಕೇಶವನನ್ನು ನಂಬಿದರೆ ಮಾತ್ರ ಇಹ-ಪರ ಸುಖ. ಆದ್ದರಿಂದ “ಭಜಿಸಿ ಬದುಕೆಲೊ ಮನುಜ' ಎಂಬ ನಿಲುವು ಅವರದು. 'ತಲ್ಲಣಿಸದಿರು ಕಂಡ್ಯ ತಾಳು ಮನವೇ | ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ' ಎಂಬ ನಂಬಿಕೆಗೆ ತಕ್ಕುದಾದ ಯೋಗ್ಯ ಆಧಾರವನ್ನು ಅವರು ರೂಪಿಸಿದ್ದಾರೆ. ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ನೀರು ಎರೆದವರು, ಕಲ್ಲಿನೊಳಗೆ ಹುಟ್ಟಿ ಕೂಗುವ ಕಪ್ಪೆಗೆ ಆಹಾರವೀಯುವವರು ಯಾರೆಂದು ಪ್ರಶ್ನಿಸಿ ತಮ್ಮ ಹಾಗೂ ಕೇಳುಗರ ನಂಬಿಕೆಯನ್ನು ಸಾಧಾರವಾಗಿ ದೃಢಗೊಳಿಸಿದ್ದಾರೆ. “ಆರು ಬಾಳಿದರೇನು? ಆರು ಬದುಕಿದರೇನು? ನಾರಾಯಣನ ಸ್ಮರಣೆ ನಮಗಿಲ್ಲದನಕ' ಎಂದು ಹಾಡುವುದರ ಮೂಲಕ ಭಗವಂತನ ಸ್ಮರಣೆಯಿಲ್ಲದ ಬದುಕು ವ್ಯರ್ಥವೆಂದು ಘಂಟಾಘೋಷವಾಗಿ ಸಾರಿದ್ದಾರೆ. ಜ್ಞಾನಸಾಧನೆ ಮಾಡಿ ದೈವಸಾಕ್ಷಾತ್ಕಾರದಾನಂದವನ್ನು ಪಡೆಯಬೇಕೆಂಬ ಹಂಬಲ ತೋರಿದ್ದಾರೆ. ಬದುಕಿಗಾಧಾರವಾದ ಸಮಸ್ತವೂ ಭಗವಂತನ ಸೃಷ್ಟಿ, ಮನುಷ್ಯ ಒಂದು ತೊಗಲುಗೊಂಬೆಯಂತೆ ; ದೇವರಿಂದ ಆಡಿಸಲ್ಲಡುವವನು. ಆದ್ದರಿಂದ ಲೋಕದ ಈ ಎಲ್ಲ ಸಂತರೂ ನಂಬುವಂತೆ ಕನಕದಾಸರೂ ಭಗವಂತನ ಸರ್ವಾಂತರ್ಯಾಮಿತ್ವ ಸರ್ವಶಕ್ತಗುಣದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದಾರೆ. ಭಕ್ತನನ್ನು ಎಂಥ ಸಂಕಷ್ಟ ಕಾಲದಲ್ಲೂ ಕೈಬಿಡುವುದಿಲ್ಲ ಎಂಬ ವಿಶ್ವಾಸವನ್ನು ಸ್ವಾನುಭವದ ಹಿನ್ನೆಲೆಯಲ್ಲಿ ರೂಪಿಸಿಕೊಂಡಿದ್ದಾರೆ. ಇಂಥ ನಂಬಿಕೆಯ ಎರಕದಲ್ಲಿ ಅವರ ಕೀರ್ತನೆಗಳು ಮೈದಾಳುತ್ತವೆ. ಸಂದೇಶಗಳು ಹುಟ್ಟುತ್ತವೆ. ಕನಕದಾಸರೂ ಸೇರಿದಂತೆ ಎಲ್ಲ ದಾಸರು ತಮಗೂ ಭಗವಂತನಿಗೂ, ಭಗವಂತನಿಗೂ ಲೋಕಕ್ಕೂ ಇರುವ ಸಂಬಂಧವನ್ನು ಹಲವು ಸಾದೃಶಗಳಲ್ಲಿ, ಸಾಮತಿಗಳಲ್ಲಿ