ಪುಟ:Kanakadasa darshana Vol 1 Pages 561-1028.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೨೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಂದೇಶ ಸರ್ವವೂ ಭಗವಾಧೀನ, 'ತನು ನಿನ್ನದು ಜೀವವು ನಿನ್ನದೆ | ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ. ಪ್ರತಿವ್ಯಕ್ತಿಯ ಕರ್ಮ ಅವನನ್ನು ನಿಯಂತ್ರಿಸುತ್ತದೆ, 'ಬಡತನವು ಸಾಕೆಂದು ಸಿರಿತನವ ಬಯಸಿದರೆ | ಪಡೆದದ್ದು ಪೂರ್ವದಲಿ ಬೆನ್ನ ಬಿಡದು', 'ಬರೆದ ಅಕ್ಷರವ ತೊಡೆಯಲಾಷೆಯಾ ರಂಗ' ಎಂದು ವಿಧಿ ಅಥವಾ ಹಣೆಬರಹಕ್ಕೆ ಕೈಚೆಲ್ಲುತ್ತಾರೆ. ಅಂತಿಮವಾಗಿ ವೈಕುಂಠ ದರ್ಶನವಾದಾಗ 'ಇಷ್ಟುದಿನ ಈ ವೈಕುಂಠ ದೂರವೆನ್ನುತ್ತಿದ್ದೆ . ಈಗ ಹತ್ತಿರವಾಯಿತಲ್ಲ' ಎಂಬ ಧನ್ಯತಾಭಾವ ಹುಟ್ಟುತ್ತದೆ. ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕೆಳಸ್ತರದಿಂದ ಬಂದ ಕನಕದಾಸರಿಗೆ ತಮ್ಮ ಪರಿಸರದಲ್ಲಿ ಜರುಗುತ್ತಿದ್ದ ಆರಾಧನೆ, ಕೀರ್ತನೆ, ಭಜನೆಗಳಲ್ಲಿ ಅವರ ಪೂರ್ವಾಶ್ರಮದ ಜಾನಪದ ಮನಸ್ಸು ಹಿಂದೆ ಸರಿಯುತ್ತಿದ್ದಿರಬೇಕು. ಕೆಲವೊಮ್ಮೆ ಆರೋಪಿತ ಶಿಷ್ಟಪ್ರಜ್ಞೆಯನ್ನು ಧಿಕ್ಕರಿಸಿ ಜಾನಪದ ಸಂಸ್ಕಾರ ಮುನ್ನುಗ್ಗಿ ಬಂದಿರುವುದಕ್ಕೆ ಅವರ ಕೀರ್ತನೆಗಳಲ್ಲಿಯೇ ಹಲವು ನಿದರ್ಶನಗಳು ಸಿಗುತ್ತವೆ. ಮನುಷ್ಯನ ಸರ್ವಕೇಡುಗಳಿಗೂ ಅಜ್ಞಾನವೇ ಮೂಲ ಎಂದರು ದಾಸರು. ಇದು ಎಲ್ಲಾ ಜ್ಞಾನಿಗಳು ಹೇಳಿದ್ದೆ, ಒಪ್ಪಬೇಕಾದದ್ದೆ, ಆದರೆ ಜನ್ಮಾಂತರ ಕರವೂ ಇದನ್ನು ಹೊಂದಿಕೊಂಡಿರುತ್ತದೆ ಎಂಬುದು ಕನಕದಾಸರ ಅಭಿಮತ. ಇದನ್ನು ನಿವಾರಿಸಿಕೊಳ್ಳಲು ಶ್ರೀಹರಿಯ ದಾಸನಾಗುವುದೊಂದೆ ಸರಿಯಾದ ದಾರಿ-ಎನ್ನುವ ಸಂದೇಶ ಪುನರುಕ್ತವಾಗುವಷ್ಟರ ಮಟ್ಟಿಗೆ ಪದೇ ಪದೇ ಬರುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಈ ಅಂಶ ಸತ್ಯವಿದ್ದಿರಬಹುದು. ವೈಚಾರಿಕವಾಗಿ ಆಲೋಚಿಸಿದರೆ ಈ ನಂಬಿಕೆಗೆ ಅರ್ಥವಿಲ್ಲ. ಆ ಕಾಲದ ಆಧ್ಯಾತ್ಮಿಕ ಸೆಳೆತದ ಪ್ರಭಾವ ಎಂಥದಿತ್ತೆಂಬುದು ಇದರಿಂದ ವೇದ್ಯವಾಗುತ್ತದೆ. ಕೀಳುಕುಲದ ಪ್ರತಿನಿಧಿಯಾಗಿ ಬಂದ ಕನಕದಾಸರೇನೊ ಆಧ್ಯಾತ್ಮಕ ನೌಕೆಯಲ್ಲಿ ಸಾಧನೆಯ ಗುರಿಮುಟ್ಟಿ ಸಾರ್ಥಕತೆಯನ್ನು ಪಡೆದುಕೊಂಡರು. ಆದರೆ ಇದೇ ಪರಿಸ್ಥಿತಿ ಕನಕದಾಸರು ಹುಟ್ಟಿಬಂದ ಕುಲದ ಎಲ್ಲರಿಗೂ ಸಾಧ್ಯವಾಗಲಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಅವರ ಆಧ್ಯಾತ್ಮಿಕತೆಯ ಮಿತಿ ತಾನಾಗಿಯೇ ವೇದ್ಯವಾಗುತ್ತದೆ. ಇಂಥದೊಂದು ಕನಕದಾಸರ ಆಯ್ಕೆಯ ಗೊಂದಲ ರಾಮಾನುಜ ಮತ್ತು ಮಾಧ್ವ ತತ್ವಗಳಲ್ಲಿ ಕೆಲವು ಕಾಲ ತೂಗಾಡಿ ಅಂತಿಮವಾಗಿ ಸಮನ್ವಯ ಮಾರ್ಗದಲ್ಲಿ ಆಸಕ್ತವಾದಂತೆ ಕಾಣಿಸುತ್ತದೆ. ಕನಕದಾಸರ ಈ ದೈವ ಸಾರ್ವಭೌಮತ್ವ ಅವರ ಕಾಲದ ವೈಜ್ಞಾನಿಕ ಅರಿವಿನಿಂದ ನಿಯಂತ್ರಿತವಾದದ್ದೆಂದು ಹೇಳಬಹುದು. 'ತರುಣಿಯಂಜದಿರಂದಿರು ವಿಧಿ ಬರೆದ ಬರಹವಿದೆನುತ ವೃಕ್ಷದ ತರಗೆಲೆಯ ಹಾಸಿನಲಿ ಮಲಗಿಸಿ ಸತಿಯನೀಕ್ಷಿಸುತ | ನರರತುಲ ಮಂಚದಲಿ ಪವಡಿಸಿ ಪರಮಸುಖವಿಹ ಸತಿಗೆ ವಿಧಿಯಿದು ಹರಹರಾಯೆನುತರಸ ಕಂಬನಿದುಂಬಿದನು ಮರುಗಿ || (ನಳಚರಿತ್ರೆ, ೫-೧೫) “ಬಡತನವು ಸಾಕೆಂದು ಸಿರಿತನವ ಬಯಸಿದರೆ | ಪಡೆದದ್ದು ಪೂರ್ವದಲಿ ಬೆನ್ನ ಬಿಡದು' ಎಂಬ ಕರ್ಮಸಿದ್ಧಾಂತ ಹಾಗೂ ಆ ವಿಧವಾದ ಕುಲದ ಸಾಮಾಜಿಕ ಪ್ರಜ್ಞೆಯಿಂದ ನಿಯಂತ್ರಿತವಾಗುತ್ತದೆ. ನಳಚರಿತ್ರೆಯಂಥ ಪ್ರೇಮಕಥೆ ಪ್ರಧಾನವಾದ ಕಾವ್ಯದಲ್ಲಿಯೂ ದೈವಸ್ಮರಣೆ ತೆರೆಮರೆಗೆ ನಿಂತು ಸಂಕಷ್ಟದಲ್ಲಿದ್ದವರಿಗೆ ಸಮಾಧಾನವನ್ನು ನೀಡುತ್ತದೆಂಬ ನಂಬಿಕೆಯನ್ನು ಕಾವ್ಯಾತ್ಮಕವಾಗಿ ಬಿತ್ತರಿಸಲಾಗಿದೆ. ನಳನಿಗೆ ಅರಣ್ಯದಲ್ಲಿ ಕಾರ್ಕೊಟಕದ ಕಚ್ಚಿ ಅವನ ದೇಹ ವಿಕೃತವಾದಾಗ 'ಪನ್ನಗಾರಿಧ್ವಜನ ಕೃಪೆ ತನಗೆ ತಪ್ಪಿ'ತೆಂದು ಮರಗುವಂತೆ ಮಾಡುವಲ್ಲಿ ಈ ಧೋರಣೆ ಅಂತರ್ಗತವಾಗಿದೆ. ಜೊತೆಗೆ ಸಾಮಾಜಿಕವಾಗಿಯೂ ವ್ಯಕ್ತಿಯೊಬ್ಬನ ನೈತಿಕ ಪತನದಿಂದ (ಜೂಜು) ಇತರರೂ ದುಃಖ ಪರಂಪರೆಯನ್ನು ಹೇಗೆ ಅನುಭವಿಸಬೇಕಾಗುತ್ತದೆಂಬ ತತ್ವವನ್ನು ಎತ್ತಿಹಿಡಿಯಲಾಗಿದೆ. ನಳದಮಯಂತಿಯರ ಸಮಾಗಮ, ಶೀಲ ಪರಿಶುದ್ಧತೆಯ ಮೂಲಕ ಪ್ರೀತಿಯೇ ದಾಂಪತ್ಯದ ರಕ್ಷಾಕವಚವೆಂಬ ಅಮರ ಸಂದೇಶವನ್ನು ಎತ್ತಿ ಹಿಡಿದಿದ್ದಾರೆ. ದುರ್ವ್ಯಸನಗಳಿಂದ ಆಗುವ ಹಾನಿ, ವಿಧಿ ಹೂಡುವ ಆಟ, ಅದನ್ನು ದೈವರಕ್ಷಣೆಯ ಆಶ್ರಯದಲ್ಲಿ ಗೆದ್ದು ಬರಬಹುದೆಂಬ ಸಂದೇಶವನ್ನು ತಿಳಿಗನ್ನಡದ ಭಾಮಿನಿ ಷಟ್ಟದಿ ಕಾವ್ಯ 'ನಳಚರಿತ್ರೆಯಲ್ಲಿ ಸಾರಿದ್ದಾರೆ. ದಾಸಸಾಹಿತ್ಯದ ಸ್ಪೂರ್ತಿಯ ನೆಲೆ ವಚನಸಾಹಿತ್ಯವಾದರೂ, ವಚನ ಸಾಹಿತ್ಯಕ್ಕಿಂತ ಭಿನ್ನವಾದ ಹರಿ-ಹರ ಅಭೇದ ಕಲ್ಪನೆಯನ್ನು ಕನಕದಾಸರಲ್ಲಿ ಕಾಣುತ್ತೇವೆ. ಈ ಮನೋಭಾವಕ್ಕೆ ಆ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಒತ್ತಾಸೆಗಳು ಕಾರಣವಾಗಿರಬಹುದು. ಮಹಮದೀಯರ ದಾಳಿ ಹಾಗೂ ತನ್ನ ಉಳಿವಿಗಾಗಿ ರೂಪಿಸಿಕೊಳ್ಳಬೇಕಾಗಿದ್ದ ಸಂಘಟನೆ,