ಪುಟ:Kanakadasa darshana Vol 1 Pages 561-1028.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೨೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಂದೇಶ ೯೨೩ ಸರ್ವಧರ್ಮಸಮನ್ವಯ ದೃಷ್ಟಿ ಅಂದಿನ ವಿಜಯನಗರ ಸಾಮ್ರಾಜ್ಯದ ಹಿನ್ನೆಲೆಗಿತ್ತು. ಜೊತೆಗೆ ಕನಕದಾಸರ ಕೌಟುಂಬಿಕ ಪರಿಸರದಲ್ಲಿಯೇ ದೈವ ಸಮನ್ವಯದ ಮಾನಸಿಕ ಪರಿಸರ ರೂಪುಗೊಂಡಿದ್ದಿರಬೇಕು. ಮನೆತನದ ಶೈವಮೂಲವಾದ ಹಾಲುಮತ, ಪುತ್ರಪ್ರಾಪ್ತಿಯಾಗಲೆಂದು ಕನಕದಾಸನ ತಂದೆ ಆಶ್ರಯಿಸಿದ ತಿರುಪತಿ ತಿಮ್ಮಪ್ಪನ ವೈಷ್ಣವ ಮೂಲ ಭಕ್ತಿ ಪರಸ್ಪರ ಸಮನ್ವಯಗೊಂಡಿರಬೇಕು. ಮುಂದೆಯೂ ಕನಕದಾಸರು ರಾಮಾನುಜ ಹಾಗೂ ಮಾಧ್ವಮತದಿಂದ ಆಕರ್ಷಿತರಾದಾಗಲೂ ಶೈವಧರ್ಮದ ಬಗ್ಗೆ ತಾತ್ಸಾರ ತಾಳಲಿಲ್ಲ. ಯಾವ ಮತವನ್ನು ತಿರಸ್ಕರಿಸದೆ, ಯಾವ ದೇವರನ್ನು ಬಹಿಷ್ಕರಿಸದೆ ವಿಷ್ಣು, ಶಿವರಲ್ಲಿ ಭೇದವೆಣಿಸದ ಸಮನ್ವಯ ಪರಂಪರೆಯೊಂದನ್ನು ರೂಪಿಸಿಕೊಂಡು ಆತ್ಮಸಾಕ್ಷಾತ್ಕಾರ ಪಡೆದರು. ಅವರು ಬರೆದ 'ಹರಿಭಕ್ತಿಸಾರ' ಮತ್ತು 'ಮೋಹನ ತರಂಗಿಣಿ' ಕೃತಿಗಳಲ್ಲಿ ಶೈವ-ವೈಷ್ಣವ ಸಮನ್ವಯದ ಗುರಿಯನ್ನೇ ಪ್ರಧಾನ ಆಶಯವಾಗಿ ಹೊಂದಿವೆ ಎನ್ನಬಹುದು. ಸಿರಿಯು ಕುಲಸತಿ ಸುತನು ಕಮಲಜ ಹಿರಿಯ ಸೊಸೆ ಶಾರದೆ ಸಹೋದರಿ ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು ನಿರುತ ಮಾಯೆಯು ದಾಸ ನಿಜಮಂ ದಿರವಜಾಂಡವು ಜಂಗಮಸ್ಥಾ ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ || (ಹರಿಭಕ್ತಿಸಾರ, ಪದ್ಯ ೨೫) ಹೆಚ್ಚಾಗಿ ನಮ್ಮ ಪ್ರಾಚೀನ ಧಾರ್ಮಿಕ ಕಾವ್ಯಗಳಲ್ಲಿ ಅನ್ಯಧರ್ಮವನ್ನು ಅವಹೇಳನ ಮಾಡುವ, ಕವಿ ತಾನು ಒಪ್ಪಿಕೊಂಡ ಧರ್ಮದ ಪರವಾಗಿ ನಿಂತು ಸಮರ್ಥಿಸುವ ಮನೋಭಾವನೆ ಹೆಚ್ಚಾಗಿ ಕಾಣಿಸುತ್ತದೆ. ಇದಕ್ಕೆ ಅಪವಾದವೆನ್ನುವಂತೆ ಕವಿ 'ಮೋಹನ ತರಂಗಿಣಿ'ಯಲ್ಲಿ ಹರಿಗೆ ತೋರುವ ಸರಿಸಮಾನ ಭಕ್ತಿಯನ್ನು ಹರನಿಗೂ ತೋರಿದ್ದಾರೆ. ಬಾಣಾಸುರನ ಶಿವಪೂಜೆಯ ಸಂದರ್ಭ ಈ ಮನೋಭಾವಕ್ಕೆ ಒಳ್ಳೆಯ ಆಧಾರವಾಗಿದೆ : ಹಡೆದ ತಾಯಿಲ್ಲ ತಾಯುಳ್ಕೊಡೆ ತಲೆ ಹೀಗೆ ಜಡೆಗಟ್ಟಿಕೊಂಡು ಮಾಸಿಹುದೆ ಮಡದಿಯರೆಲ್ಲ ಮಂಡೆಯ ಹಿಕ್ಕನೊಡೆವರೆ ನೊಡೆಯ ಕೋ ಎನುತೆ ನೀರೆರೆದ || ವಿಸ್ತರಣೆಯು ನೋಡುವರೆ ಬ್ರಹ್ಮಾಂಡ ಸ ಮಸ್ತ ನಿನ್ನೊಳಗಡಗಿಹುದು ಪ್ರಸ್ತವಿದೇನು ಕಾರಣ ಸ್ವಾಮಿ ನೀನೆನ್ನ ಹಸ್ತಾಬ್ಬದೊಳಗೆ ಮಂಡಿಸಿದೆ || ಬಾಣಾಸುರನ ಶಿವವಾತ್ಸಲ್ಯ ನೋಡಿದರೆ ಹಾಗೂ ಅವನು ಪೂಜಿಸುವುದು ಸ್ಥಾವರಲಿಂಗವಲ್ಲ ; ಇಷ್ಟಲಿಂಗ ಎಂಬುದನ್ನು ಲಕ್ಷಿಸಿದರೆ ಕನಕದಾಸರ ಸಮನ್ವಯ ಸಂಸ್ಕಾರದ ಸ್ವರೂಪ ಸ್ಪಷ್ಟಪಡುತ್ತದೆ, ಕಾಮದಹನದ ಪ್ರಸಂಗ ಮತ್ತು ಹರಿಹರನ ನಡುವಿನ ಯುದ್ಧಚಿತ್ರಗಳಲ್ಲಿ ಇದೇ ಧೋರಣೆ ಕೆಲಸ ಮಾಡಿದೆ. ಅವೆರಡು ಸೇನೆಗಳ ನಡುವೆ ಯುದ್ಧ ನಡೆದರೂ ಯಾರೂ ಬೀಳುವುದಿಲ್ಲ, ಯಾರೂ ಸೋಲುವುದಿಲ್ಲ. ಹರಿ-ಹರರಿಬ್ಬರೂ ಸಮರಾಗಿಯೇ ಉಳಿಯುತ್ತಾರೆ. ಭಾರತದಂಥ ಧರ್ಮನಿರಪೇಕ್ಷ ಸಂಸ್ಕೃತಿಯಲ್ಲಿ ಕನಕದಾಸರಂಥವರ ಧರ್ಮಸಮನ್ವಯ ತತ್ವ ಹಾಗೂ ಸಂದೇಶ ಎಲ್ಲ ಕಾಲಕ್ಕೂ ಅನುಸರಣ ಯೋಗ್ಯವಾದುದೇ ಆಗಿದೆ. ಕನಕದಾಸರನ್ನು ತೀವ್ರವಾಗಿ ಕಾಡಿದ್ದು ಕುಲ ಮತ್ತು ಅದರ ಹಿನ್ನೆಲೆಯ ಸಾಮಾಜಿಕ ಸಂಬಂಧಗಳು, ಸಮಾಜದ ಕೆಳಸ್ತರದಿಂದ ಬಂದ ಕನಕದಾಸರಿಗೆ ಕುಲದ ಮತ್ತು ಹುಟ್ಟಿನ ನೋವು ಒಂದು ಅಮೂರ್ತ ವಿಚಾರವಾಗಿರುವುದಕ್ಕಿಂತ ಹೆಚ್ಚಾಗಿ ಅದೊಂದು ಸಾಮಾಜಿಕ 'ತಲ್ಲಣ'ದ ವಿಷಯವಾಯಿತು. ಹುಟ್ಟಿನ ಕಾರಣಕ್ಕಾಗಿ ಹಲವರ ತಾತ್ಸಾರ, ಕುಚೋದ್ಯಗಳಿಗೆ ಮನನೊಂದ ಕನಕದಾಸರು ಕುಲ ಕುಲವೆನ್ನುತಿಹರೂ ಕುಲವಾವುದು ಸತ್ಯಸುಜನರಿಗೆ ಆತನೊಲಿದ ಮ್ಯಾಲೆ ಯಾತರ ಕುಲವಯ್ಯ | ಎಂದು ಮಾರ್ಮಿಕವಾಗಿ ಹೇಳಿಕೊಂಡಿರುವುದು ಪರಿಚಿತವೇ ಆಗಿದೆ. ಕುಹಕಿಗಳು ಮತ್ತು ಮತಾಂಧರು ಅವರ ಜಾತಿಯನ್ನು ಪದೇ ಪದೇ ನೆನಪುಮಾಡಿಕೊಟ್ಟು ಪ್ರಶ್ನಿಸಿದಾಗೆಲ್ಲಾ ಅತ್ಯಂತ ನೋವಿನಿಂದ ಯಾತರವನೆಂದುಸುರಲಿ | ಜಗ | ಸ್ನಾಥ ಮಾಡಿದ ಒಂದು ನರರೂಪವಯ್ಯ ಎಂದು ಹೇಳುವುದರ ಮೂಲಕ ತಾನು ಇತರರಂತೆ 'ಮನುಷ್ಯಜಾತಿ' ಎಂಬ ಮಾನವೀಯ ಸಂದೇಶ ಸಾರಿದ್ದಾರೆ. 'ತೀರ್ಥವನು ಪಿಡಿದವರೆಲ್ಲ