ಪುಟ:Kanakadasa darshana Vol 1 Pages 561-1028.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೨೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಂದೇಶ ಆಶ್ರಯಿಸಿರಬೇಕೆಂದು ಊಹೆಮಾಡಲು ಸಾಧ್ಯವಿದೆ. ಒಟ್ಟಾರೆ ಜನ ಸಾಮಾನ್ಯರೂ ಬದುಕಬೇಕು, ಅವರೂ ಇತರರಂತೆ ಮೇಲೆ ಬರಬೇಕೆನ್ನುವ ಆರೋಗ್ಯಕರ ಜೀವನ ಸಂದೇಶವನ್ನು ಕನಕದಾಸ 'ರಾಮಧಾನ್ಯ ಚರಿತೆ'ಯ ಮೂಲಕ ನೀಡಿದ್ದಾರೆ ಎನ್ನಲಡ್ಡಿ ಇಲ್ಲ. ಕನಕದಾಸರ ಪಾರಮಾರ್ಥಿಕ ಜೀವನಮೌಲ್ಯ ಹಾಗೂ ಸಂದೇಶಗಳ ಮಿತಿ ಏನೇ ಇರಲಿ, ಕಾಲ ದೇಶ ಪರಿಸರದ ಬದ್ದತೆಯಲ್ಲೂ ಕಾಲಾತೀತವಾಗಿ ನಿಲ್ಲುವ ಜೀವನ ಸಂದೇಶಗಳನ್ನು, ಮೌಲ್ಯಗಳನ್ನು ನೀಡಿದ್ದಾರೆ. ತಿರುನಾಮಧಾರಿಗಳೆ ! ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ” ಎಂಬ ಕೀರ್ತನೆಯಲ್ಲಿ ಬಾಹ್ಯಾಚರಣೆಯ ಭ್ರಮೆ, ಭಕ್ತಿಯ ಡಂಭಾಚಾರವನ್ನು ಬಯಲಿಗೆಳೆದಿದ್ದಾರೆ. ಹೊಲೆತನ, ಮಡಿ, ಎಂಜಲು ಮುಂತಾದ ರೂಢಿಗತ ಅಭಿಪ್ರಾಯಗಳನ್ನು ತಮ್ಮ ವೈಚಾರಿಕತೆಯ ಒರೆಗೆ ಹಚ್ಚಿದ್ದಾರೆ. ಮಾನವರೆಲ್ಲ ಪರಮಾತ್ಮನ ಅಂಶವೇ ಆಗಿರುವುದರಿಂದ ಅವರೆಲ್ಲಾ ಸಮಾನರೆಂದು ಉದ್ಯೋಷಿಸಿದ್ದಾರೆ. ಮನುಷ್ಯ ಬಹಿರಂಗದಲ್ಲಿ ಎಷ್ಟೇ ಉದಾರಿಯಾಗಿದ್ದರೂ ಆತ ತನ್ನ ಆಳದಲ್ಲೆಲ್ಲೋ ಸ್ವಾರ್ಥಿಯಾಗಿರುತ್ತಾನೆ. ಆ ಸ್ವಾರ್ಥವನ್ನು ಮೀರುವುದರಲ್ಲೇ ಮನುಷ್ಯನ ಉದ್ದಾರದ ಹಾದಿ ಇದೆ ಎಂಬ ನಿತ್ಯಸತ್ಯವನ್ನು “ಎಲ್ಲಾರು ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ ಎಂಬ ಕೀರ್ತನೆಯಲ್ಲಿ ಎತ್ತಿ ಹಿಡಿದಿದ್ದಾರೆ. “ಕಣಿಯ ಹೇಳಬಂದೆ ನಾನು' ಎಂಬ ಹಾಡಿನಲ್ಲಿ ಕ್ಷುದ್ರದೇವತೆಯ ಉಪಾಸನೆ, ಪ್ರಾಣಿಬಲಿ, ಶಾಸ್ತಶುಷ್ಕತೆಯನ್ನು ಪ್ರಶ್ನಿಸಿದ್ದಾರೆ. 'ಕ್ಷೀಣ ಶಾಸ್ತ್ರಾರ್ಥವ ಪರಿಗ್ರಹಿ' ಸುತೆ ಕುರಿಕೋಣಗಳ ತಲೆ ಚೆಂಡನಾಡಿ ಪ್ರಾಣಹತ್ಯವ ಮಾಳುದಾವ ಸತ್ಕರ್ಮ, 'ಅಪುತ್ರಸ್ಯ ಗತಿರ್ನಾಸ್ತಿಃ' ಎಂಬ ಪಾರಂಪರಿಕೆಯ ನಂಬಿಕೆಯ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕನಕದಾಸರ ಸಾಮಾಜಿಕ ವಿಮರ್ಶೆ ಹೆಚ್ಚು ನಿಷ್ಠುರವೂ, ನೈತಿಕ ಧೈರ್ಯದಿಂದ ಕೂಡಿದ್ದಾಗಿದೆ. ಭತ್ತ-ರಾಗಿಗಳ ಜಗಳದ ಸರಳಕಥೆಯನ್ನು ತುಳಿತಕ್ಕೊಳಗಾದ ಜನತೆಯ ಸಾಮಾಜಿಕ ಪ್ರತಿಭಟನೆಯ ಧ್ವನಿಯಾಗಿ ರೂಪಿಸಿರುವ ಹಿನ್ನೆಲೆಯನ್ನು ನೋಡಿದಾಗ ಕನಕದಾಸರ ಸಾಮಾಜಿಕ ಚಿಂತನೆಯ ಸ್ವರೂಪ ಸ್ಪಷ್ಟಪಡುತ್ತದೆ. ಕನಕದಾಸರ ಆತ್ಮ ಚರಿತ್ರಾತ್ಮಕ ಕೃತಿ ಹೇಗೊ ಹಾಗೆ, ವರ್ಗ ಹೋರಾಟವನ್ನು ವಿವರಿಸುವ ಕೃತಿಯೂ ಆಗಿದೆ. ಕೆಳಜಾತಿ-ಮೇಲುಜಾತಿ, ಬಡವ-ಶ್ರೀಮಂತ, ಕೆಳವರ್ಗದ, ಎಚ್ಚರ ಪ್ರತಿಭಟನೆಗೆ ಸಂಬಂಧಿಸಿದ ಈ ಕಾವ್ಯದಲ್ಲಿ ಪುರೋಗಾಮಿ ಮನಸ್ಸುಗಳು ಆಶ್ಚರ್ಯಪಡಬಹುದಾದ ಜಾತಿವಿನಾಶದ ಸ್ಫೋಟಕ ವಸ್ತುವನ್ನು ಕನಕದಾಸ ಅಡಗಿಸಿಟ್ಟಿದ್ದಾನೆ. ಸಮಾನತಾ ಸಮಾಜದ ಕನಸು ನನಸಾಗುವಿಕೆಯ ಮುಂಗಾಣ್ಯ ಈ ಕೃತಿ 'ರೂಪಕ' ರೀತಿಯಲ್ಲಿ ಪ್ರಕಟಗೊಂಡಿರುವ ತಂತ್ರ ಆಶ್ಚರ್ಯ ಹುಟ್ಟಿಸುತ್ತದೆ. ಅವಕಾಶಹೀನರ, ಜನಸಾಮಾನ್ಯರ ವಿಜಯದ ಧ್ವಜಪತಾಕೆ ಹೊತ್ತ ಈ ಕಾವ್ಯ ವಾಚ್ಯ ಶೈಲಿಯಲ್ಲಿ ಪ್ರಕಟಗೊಂಡಿದ್ದರೆ ಕನಕದಾಸ ಎದುರಿಸಬೇಕಾದ ಸಾಮಾಜಿಕ ಬಿಕ್ಕಟ್ಟಿನ ಸ್ವರೂಪವೇ ಬೇರೆಯಾಗುತ್ತಿತ್ತೆಂದು ತೋರುತ್ತದೆ. ಇದರ ಅರಿವಿದ್ದೂ ಏನೊ ಕವಿ “ರೂಪಕ ಶೈಲಿ'ಯನ್ನು