ಪುಟ:Kanakadasa darshana Vol 1 Pages 561-1028.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ವೇದೋಪನಿಷತ್ತುಗಳಲ್ಲಿನ ಗಹನ ತತ್ತ್ವಗಳನ್ನು ಸಾಮಾನ್ಯಜನರಿಗೆ ದೊರಕಿಸಿಕೊಡುವ ಸಲುವಾಗಿ ಶುಕಮುನಿಗಳು ಭಾಗವತವನ್ನು ರಚಿಸಿದರು. ಹೀಗೆಯೇ “ಜನಸಾಮಾನ್ಯರು ಭಕ್ತಿಯಿಂದ ಹಾಡಲು ಸಾಧ್ಯವಾಗುವಂತೆ, ತತ್ತ ವಿಚಾರಗಳನ್ನು ಅರಿಯುವಂತೆ, ಭಾಗವತ ಜೀವನದ ಹರ್ಷವನ್ನು ಸವಿಯುವಂತೆ” ಹರಿದಾಸರು ತಿಳಿಯಾದ ಕನ್ನಡದಲ್ಲಿ ಪದ ಪದ್ಯಗಳಲ್ಲಿ ರಚಿಸಿದರು. ಆಳ್ವಾರರು ಶ್ರೀ ರಾಮಾನುಜರ ವಿಶಿಷ್ಟಾದೈತ ತತ್ತ್ವವನ್ನು ತಮಿಳುನಾಡಿನ ಮನೆಮನೆಗಳಿಗೆ ಆಡುಮಾತಿನಲ್ಲಿ ತಲುಪಿಸಿದಂತೆ, ಕರ್ನಾಟಕದ ಹರಿದಾಸರು ಮಧ್ವಾಚಾರ್ಯರ ದೈತಸಿದ್ದಾಂತವನ್ನು ಕನ್ನಡ ನಾಡಿನ ಮನೆಮನೆಗೆ ತಲುಪಿಸುವ ಪ್ರಯತ್ನ ಮಾಡಿದರು. ಹೀಗೆ ಮಾಡುವುದರ ಜೊತೆಗೇ, ಪಂಡಿತರ ಪಾಲಿಗೇ ಮೀಸಲಾಗಿದ್ದ ಸಾಹಿತ್ಯವನ್ನು-ಹನ್ನೆರಡನೆಯ ಶತಮಾನದಲ್ಲಿ ಶಿವಶರಣರು ಮಾಡಿದಂತೆ ಸಾಮಾನ್ಯರ ಹತ್ತಿರಕ್ಕೆ ತರುವ ಕೆಲಸವನ್ನೂ ಮಾಡಿದರು. ಕರ್ನಾಟಕದಲ್ಲಿ ಹರಿದಾಸ ಪರಂಪರೆ ಮಧ್ವಾಚಾರ್ಯರಿಂದಲೇ ಆರಂಭವಾಯಿತೆಂದು ನಂಬುವವರಿದ್ದಾರೆ. ಆದರೆ ಶ್ರೀಪಾದರಾಜರೇ ವಾಸ್ತವವಾಗಿ ಈ ಪರಂಪರೆಯ ಆದ್ಯಪ್ರವರ್ತಕರು ಎಂಬುದು ವಿದ್ವಾಂಸರ ಅಭಿಪ್ರಾಯ. ಶ್ರೀಪಾದರಾಜರ ಸಂನ್ಯಾಸಿ ಶಿಷ್ಯ ವ್ಯಾಸರಾಯರು ಹರಿದಾಸ ಪರಂಪರೆಗೆ ಕ್ರಿಯಾಪೂರ್ಣ ಚಾಲನೆ ಕೊಟ್ಟವರೆಂಬುದು ಐತಿಹಾಸಿಕ ಸತ್ಯ. “ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ || ನಮಃ ಪುರಂದರರಾರ್ಯಾಯ ವಿಜಯಾರ್ಯಾಯ ತೇ ನಮಃ” ಎಂಬ ಶ್ಲೋಕದಲ್ಲಿ ದಾಸಪರಂಪರೆಯ ದಿಗ್ಗಜಗಳಾದ ಶ್ರೀಪಾದರಾಜರು, ವ್ಯಾಸರಾಯರು, ಪುರಂದರದಾಸರು ಹಾಗೂ ವಿಜಯದಾಸರು ಹೆಸರುಗಳನ್ನು ಸೇರಿಸಲಾಗಿದೆ. ಶ್ರೀಪಾದರಾಜರಿಂದ ಹರಿದಾಸ ಪಂಥ ಬಲಗೊಳ್ಳಲು ನಿಜವಾದ ಪ್ರೇರಣೆ ದೊರಕಿತು. ಈ ಪಂಥದ ಚುಕ್ಕಾಣಿಯನ್ನು ಕೈಯಲ್ಲಿ ಹಿಡಿದು, ಅದನ್ನು ಸಮರ್ಥವಾಗಿ ಪ್ರವರ್ತಿಸಿದವರು ವ್ಯಾಸತೀರ್ಥರು ; ಅದಕ್ಕೊಂದು ಅಪೂರ್ವ ಜನಪ್ರಿಯತೆಯನ್ನು ಒದಗಿಸಿದವರು ಪುರಂದರದಾರು ; ಸ್ವಲ್ಪಕಾಲ ಗುಪ್ತಗಾಮಿನಿಯಾಗಿದ್ದ ಹರಿದಾಸವಾಹಿನಿಗೆ ಹೊಸ ತೇಜಸ್ಸನ್ನು ನೀಡಿ, ಪುನರುಜೀವನಗೊಳಿಸಿದವರು ವಿಜಯದಾಸರು. ಹೀಗೆ ದಾಸವಾಯ ವಿಕಾಸಕ್ಕೆ ಕಾರಣರಾದ 'ದಾಸ ಚತುಷ್ಟಯ'ದಲ್ಲಿ ವ್ಯಾಸತೀರ್ಥರದು ವಿಶಿಷ್ಟಸ್ಥಾನ. ವ್ಯಾಸತೀರ್ಥರಲ್ಲಿ ಪಾಂಡಿತ್ಯದ ಜೊತೆಗೆ ಹರಿದಾಸರಲ್ಲಿರಬೇಕಾದ ಭಾವ ಶ್ರೀಮಂತಿಕೆಯೂ ಇತ್ತೆಂಬುದಕ್ಕೆ ಅವರ ಶಿಷ್ಯವಾತ್ಸಲ್ಯವೇ ಸಾಕ್ಷಿ. ಜನಸಾಮಾನ್ಯರೊಂದಿಗೆ ಬೆರೆಯಲೇಬೇಕಾದ ಅಗತ್ಯ ಅವರಿಗೇನೂ ಇರಲಿಲ್ಲ. ವಿಜಯನಗರ ಸಾಮ್ರಾಟ ಕೃಷ್ಣದೇವರಾಯನಿಗೆ ಗುರುವಾಗಿದ್ದು, ಅವನಿಂದ ಹಲವಾರು ಬಿರುದುಗಳನ್ನು ಪಡೆದವರು ವ್ಯಾಸರಾಯರು. ಧಾರ್ಮಿಕ ಪ್ರಪಂಚ, ಲೋಕವ್ಯವಹಾರ-ಈ ಎರಡರಲ್ಲೂ ಉಜ್ವಲ ಯಶಸ್ಸುಗಳಿಸಿದ ಸವ್ಯಸಾಚಿ ಶಕ್ತಿ ಅವರದ್ದು. ಆದರೂ ಅವರು ಕೀರ್ತಿಶನಿಯ ಕಾಟಕ್ಕೆ ಬಲಿಯಾಗಲಿಲ್ಲ ; ಪಾಂಡಿತ್ಯ-ಪ್ರಸಿದ್ದಿಗಳ ಗೋಪುರದಲ್ಲಿ ಕುಳಿತುಕೊಂಡು, ನೆಲವನ್ನು ಮರೆತುಬಿಡುವ ಪ್ರವೃತ್ತಿ ಅವರದಾಗಿರಲಿಲ್ಲ. ಭಕ್ತಿ ಮಂದಾಕಿನಿಯನ್ನು ಶ್ರೀಸಾಮಾನ್ಯನ ಗುಡಿಸಿಲಿನವರೆಗೂ ತರಬೇಕೆಂಬ ಭಗೀರಥ ಪ್ರಜ್ಞೆ ಅವರದ್ದು, ಸ್ವತಃ ಯತಿಗಳಾದರೂ ಪರಂಪರೆಯ ಕುರುಡು ಹಿಡಿತದಿಂದ ಬಿಡಿಸಿಕೊಂಡು ಹೊರಬರುವುದರಲ್ಲಿ ಯಶಸ್ವಿಗಳಾದ ಕ್ರಾಂತಿಕಾರರು ವ್ಯಾಸರಾಯರೆಂದರೆ ತಪ್ಪಲ್ಲವೇನೋ. ಅವರಿಗೆ ವ್ಯಕ್ತಿಗಳ ಜಾತಿ, ಅಂತಸ್ತು ಮುಖ್ಯವಾಗಿರಲಿಲ್ಲ. ಯೋಗ್ಯತೆಗೇ ಅವರು ಮನ್ನಣೆ ನೀಡಿದರು. ಆದ್ದರಿಂದಲೇ ಅವರು ವೈದಿಕರ ಆಡಂಬರ, ಕುಹಕಗಳಿಗೆ ಮಣಿಯದೆ, ಪಂಡಿತರೂ ವೈದಿಕರೂ ಅಲ್ಲದ ಪುರಂದರದಾಸರನ್ನು” ಶಿಷ್ಯರನ್ನಾಗಿ ಸ್ವೀಕರಿಸಿದರು. ಮಾತ್ರವಲ್ಲ, ಅವರ ಹಿರಿಮೆಯನ್ನು ಮುಕ್ತಮನಸ್ಸಿನಿಂದ ಕೊಂಡಾಡಿದರು. ಜಾತಿಯಲ್ಲಿ ಕುರುಬರಾಗಿದ್ದ ಕನಕದಾಸರ ಪ್ರತಿಭೆ, ವ್ಯಕ್ತಿತ್ವಗಳನ್ನು ಗುರುತಿಸಿ, ಅವರನ್ನು ತಮ್ಮ ಕರುಣೆಯ ಪರಿಧಿಯಲ್ಲಿ ಸೇರಿಸಿಕೊಂಡರು. ಗೊಡ್ಡು ಆಚಾರ, ಅರ್ಥಹೀನ ಮಡಿವಂತಿಕೆ ಇತ್ಯಾದಿಗಳಿಂದ ಜಡ್ಡುಗಟ್ಟಿದ್ದ ಅಂದಿನ ಸಮಾಜದಲ್ಲಿ ವ್ಯಾಸರಾಯರ ಈ ಸಾಹಸದ ಹಿಂದೆ ಅದೆಂಥ ಧೀಮಂತಿಕೆ, ಹೃದಯವಂತಿಕೆ, ದೂರದೃಷ್ಟಿ ಇದ್ದೀತೆಂದು ಊಹಿಸಿದರೆ ನಿಜಕ್ಕೂ ವಿಸ್ಮಯವಾಗುತ್ತದೆ. ವ್ಯಾಸರಾಯರು ಸಂಸ್ಕೃತ ಕನ್ನಡ-ಎರಡೂ ಭಾಷೆಗಳಲ್ಲಿ ಗ್ರಂಥರಚನೆ ಮಾಡಿದ್ದರು. ನ್ಯಾಯಾಮೃತ, ತರ್ಕತಾಂಡವ, ತಾತ್ಪರ್ಯಚಂದ್ರಿಕಾ-ಮುಂತಾದ ಜಟಿಲವಾದ ಬ್ರಹ್ಮಸೂತ್ರವನ್ನು ತಿಳಿಗನ್ನಡದಲ್ಲಿ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಲು ಪ್ರಯತ್ನಿಸಿದರು. ಇದು ಅವರ ಸಾಹಸಪ್ರವೃತ್ತಿಯನ್ನಲ್ಲದೆ, ನಿಜವಾದ ಸಂನ್ಯಾಸಿಗಿರಬೇಕಾದ ಬಹುಜನ ಹಿತ, ಬಹುಜನ ಸುಖವನ್ನು ಕುರಿತಾದ ಕಳಕಳಿಯನ್ನೂ ತೋರಿಸುತ್ತದೆ. ಬ್ರಹ್ಮಸೂತ್ರದ ಮೊದಲನೇ ಸೂತ್ರವನ್ನು ಅವರು ಜಿಜ್ಞಾಸುವಿಗೆ ಜ್ಞಾನಕಾರಣ, ಜ್ಞಾನಿಗೆ ಅಪರೋಕ್ಷ ಕಾರಣ, ಅಪರೋಕ್ಷಿಗೆ