ಪುಟ:Kanakadasa darshana Vol 1 Pages 561-1028.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೭೮ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೯೩೯ ಶಿಷ್ಯವಲರಾದ ಗುರುವನ್ನು ಕುರಿತು ಶಿಷ್ಯರು ಕೃತಜ್ಞರಾಗಿರುವುದು ಆಶ್ಚದ್ಯವೇನಲ್ಲ. ಪುರಂದರದಾಸರು ಅನೇಕ ಕೃತಿಗಳಲ್ಲಿ ನೇರವಾಗಿಯೋ, ಸೂಚ್ಯವಾಗಿಯೋ ವ್ಯಾಸರಾಯರನ್ನು ಸ್ಮರಿಸಿಕೊಳ್ಳುತ್ತಾರೆ (ಕನಕದಾಸರು ತಮ್ಮ ಕೃತಿಗಳಲ್ಲಿ ಎಲ್ಲಿಯೂ ವ್ಯಾಸರಾಯರನ್ನು ನೆನಪಿಸಿಕೊಂಡಿಲ್ಲವೆಂಬುದು ಸ್ವಲ್ಪ ಅಚ್ಚರಿಯ ವಿಚಾರವೇ. ಮೇಲೆ ಉಲ್ಲೇಖಿಸಿದ 'ಕನಕದಾಸನ ಮೇಲೆ ದಯಮಾಡಲು ವ್ಯಾಸ' ಎಂದು ಪ್ರಾರಂಭವಾಗುವ ಕೀರ್ತನೆಯನ್ನು ಕನಕದಾಸರ ರಚನೆಯೆಂದು ಭಾವಿಸುವವರೂ ಇದ್ದಾರೆ.) 'ವ್ಯಾಸರಾಯ ಸುಳಾದಿ'ಯೆಂದೇ ಪ್ರಸಿದ್ದವಾಗಿರುವ ಸುಳಾದಿಯೊಂದರಲ್ಲಿ ಪುರಂದರದಾಸರು ವ್ಯಾಸರಾಯರ ಚರಣ ಕಮಲ ದರುಶನವೆನಗೆ ಯೇಸು ಜನ್ಮದ ಸುಕೃತ ಫಲದಿ ದೊರಕಿತೊ ಎನ್ನ ಸಾಸಿರ ಕುಲಕೋಟಿ ಪಾವನ್ನವಾಯಿತು ಶ್ರೀಶನ ಭಜಿಸುವದಕಧಿಕಾರಿ ನಾನಾದೆ ದೋಷವಿರಹಿತನಾದ ಪುರಂದರ ವಿಠಲನ್ನ ದಾಸರ ಕರುಣವು ಯೆನಮ್ಯಾಲೆ ಇರಲಾಗಿ | -ಎಂದು ತುಂಬಿದ ಮನಸ್ಸಿನಿಂದ ತಮ್ಮ ಗುರು ವ್ಯಾಸರಾಯರಿಗೆ ಕೃತಜ್ಞತೆ ಧನ್ಯತೆಗಳ ಭಾವಾಂಜಲಿ ಸಲ್ಲಿಸಿದ್ದಾರೆ. ಗೂಟನಾಮಗಳಿಟ್ಟು ಕೊಟ್ಟರಿಯೆ ತಾನೆನುತ ಬೂಟಕವ ಮಾಡಲವ ಹರಿದಾಸನೇ ? -ಎಂದು ವ್ಯಾಸರಾಯರು ಪ್ರಶ್ನಿಸಿದರೆ, ಪುರಂದರದಾಸರು 'ಬೂಟಕತನದಲ್ಲಿ ಬಹುಳ ಭಕುತಿ ಮಾಡಿ ದಿಟನೀತ ಸರಿಯಾಗಿಲ್ಲೆನಿಸಿ ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ ಊಟದ ಮಾರ್ಗದ ಜ್ಞಾನವಿಲ್ಲದೆ... ಉದರ ವೈರಾಗ್ಯವಿದು, ನಮ್ಮ ಪದುಮನಾಭನಲಿ ಲೇಶಭಕುತಿಯಿಲ್ಲ' ಎನ್ನುತ್ತಾರೆ, ಕನಕದಾಸರಂತೂ ಅತ್ಯಂತ ಸ್ಪಷ್ಟವಾಗಿ 'ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ? ಸಾರ್ಥಕವಿಲ್ಲದವರೆಲ್ಲ ಭಾಗವತರೆ ?” ಎಂದು ಪ್ರಶ್ನಿಸುವುದಲ್ಲದೆ : 'ಪಟ್ಟೆ ನಾಮವ ಬಳಿದು, ಪಾತ್ರೆ ಕೈಯಲಿ ಪಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆ ಕೆಟ್ಟ ಕೂಗನು ಕೂಗಿ ಹೊಟ್ಟೆಯನ್ನು ಹೊರೆವಂಥ ಹೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ? ಎಂದು ಸಮಾಜದಲ್ಲಿನ ವಂಚಕರನ್ನೂ ಆಷಾಢಭೂತಿಗಳನ್ನೂ ಉಗ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮೂರೂ ಕೀರ್ತನೆಗಳಲ್ಲಿ ಕಂಡು ಬರುವ ವಸ್ತು, ಭಾಷೆ, ಛಂದಸ್ಸುಗಳಲ್ಲಿ ಇರುವ ಸಾದೃಶ ಕುತೂಹಲಕಾರಿಯಾಗಿದೆ. ಗುರುವ್ಯಾಸರಾಯರ ಸಾಮಾಜಿಕ ದೃಷ್ಟಿಕೋನವನ್ನು ಶಿಷ್ಯರಿಬ್ಬರೂ ಇನ್ನಷ್ಟು ತೀಕ್ಷವಾಗಿ ಬೆಳೆಸಿಕೊಂಡು ಬಂದಿರುವುದು ಈ ಉದಾಹರಣೆಗಳಿಂದ ಸುಸ್ಪಷ್ಟ. ಹರಿದಾಸರಾದವರು ಸಮಾಜದ ಒಳಗೇ ಇರಬೇಕಾದುದು ಅನಿವಾರ್ಯ. ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ಗಮನಿಸಿ, ಶುಭದ ಕಡೆಗೇ ಸಾಮಾಜಿಕರನ್ನು ನಡೆಸುವ ಹೊಣೆ ಹರಿದಾಸರದ್ದು. ನೀತಿಯನ್ನು ಕುರಿತಾದ ತಿಳಿವಳಿಕೆ, ಲೋಕಜೀವನದಲ್ಲಿ ಧರ್ಮದ ಸ್ಥಾನ-ಇತ್ಯಾದಿಗಳನ್ನೂ, ಭಕ್ತಿಯ ಮಹತ್ವವನ್ನೂ, ಕೀರ್ತನೆಗಳ ಮೂಲಕ ಮಾತ್ರವಲ್ಲದೆ, ಸ್ವಂತ ಆಚಾರದ ಮೂಲಕವಾಗಿಯೂ ಜನರ ಗಮನಕ್ಕೆ ತರಬೇಕಾದುದು ದಾಸರ ಜವಾಬ್ದಾರಿಯಾಗಿತ್ತು. ಬೇರೆ ಬೇರೆ ವೃತ್ತಿಗಳ, ಪ್ರವೃತ್ತಿಗಳ ಜನರೊಂದಿಗೆ ಗುರುಗಳಾದ ವ್ಯಾಸರಾಯರ ಪ್ರಭಾವ ಪುರಂದರ ಕನಕರ ರಚನೆಗಳಲ್ಲಿ ಕಂಡು ಬರುವುದು ಅಸಹಜವೇನಲ್ಲ. ಹಿಂದೆಯೇ ಪ್ರಸ್ತಾಪಿಸಲಾಗಿರುವ 'ದಾಸರೆಂದರೆ ಪುರಂದರದಾಸರಯ್ಯಾ' ಎಂದು ಪ್ರಾರಂಭವಾಗುವ ಕೀರ್ತನೆಯಲ್ಲಿ ವ್ಯಾಸರಾಯರು ಉದರನಿಮಿತ್ತವಾಗಿ ದಾಸರ ವೇಷ ಹಾಕಿ, ಜನಗಳನ್ನು ವಂಚಿಸುವ ಕಪಟಿಗಳ ಚಿತ್ರವನ್ನು ಕೊಟ್ಟಿದ್ದಾರೆ. ಕನಕ ಪುರಂದರರಿಬ್ಬರೂ ಸಮಾಜವನ್ನು ವ್ಯಾಸರಾಯರಿಗಿಂತಲೂ ನಿಕಟವಾಗಿ, ತೀರಾ ಹತ್ತಿರದಿಂದ ಕಂಡವರು. ಅಲ್ಲಿನ ಸಣ್ಣತನ, ಪಿಸುಣತನ, ಕಾಪಟ್ಯಗಳ ಪರಿಚಯ ಅವರಿಬ್ಬರಿಗೆ ಚೆನ್ನಾಗಿಯೇ ಇತ್ತು. ಹೀಗಾಗಿ ವ್ಯಾಸರಾಯರಂತೆಯೇ ಅವರೂ ಸಮಾಜದಲ್ಲಿನ ಉಪಾಯ ವೇದಾಂತಿಗಳನ್ನೂ, ಉದರ ವಿರಾಗಿಗಳನ್ನೂ ಕಟುವಾಗಿ ಟೀಕಿಸಿದ್ದಾರೆ. : 'ಪಾಠಕನ ತೆರನಂತೆ ಪದಗಳನು ತಾ ಬೊಗಳಿ ಕೂಟ ಜನರನು ಸಂತೋಷಪಡಿಸಿ