ಪುಟ:Kanakadasa darshana Vol 1 Pages 561-1028.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೯೮ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೫೯೯ ಹರಿದಿರುವುದನ್ನು ಕಾಣಬಹುದು. ಮೊದಲನೆಯದರಲ್ಲಿ ತಮ್ಮ ಅಂತರಂಗವನ್ನು ತೋರಿಕೊಂಡಿದ್ದರೆ, ಎರಡನೆಯದರಲ್ಲಿ ಸಂಪೂರ್ಣ ಕವಿಯಾಗಿಯೇ ನಿಂತು ಕಾವ್ಯಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಕನಕದಾಸರು ಒಬ್ಬ ಪರಿಪೂರ್ಣ ಭಕ್ತನೂ, ಕವಿಯೂ ಆಗಿ ಗಮನ ಸೆಳೆಯುತ್ತಾರೆ. ಅವರ ಈ ಎರಡೂ ಬಗೆಯ ಕೃತಿಗಳಲ್ಲಿ ಅದನ್ನು ಪರಿಶೀಲಿಸಬಹುದು. ಈ ಮೊದಲು ಅವರ ಭಕ್ತಿಭಾವ ಸ್ಥಾಯಿಯಾಗಿ ರಚನೆಗೊಂಡಿರುವ ಕೀರ್ತನೆಗಳನ್ನು ಹಾಗೂ 'ಹರಿಭಕ್ತಿಸಾರ' ಕೃತಿಯನ್ನು ಪರಿಶೀಲಿಸಿ ಅನಂತರ ಕಾವ್ಯ ಪ್ರಜ್ಞೆ ಸ್ಥಾಯಿಯಾದ ಇನ್ನುಳಿದ ಕೃತಿಗಳನ್ನು ಪರಿಶೀಲಿಸಬಹುದು. ಈ ಬಗೆಯಾದ ವಿಂಗಡಣೆ ಒಂದರ್ಥದಲ್ಲಿ ಸಾಧುವಾದುದಲ್ಲವಾದರೂ, ಕೇವಲ ಅಧ್ಯಯನದ ಅನುಕೂಲಕ್ಕೆ ಮಾಡಿಕೊಳ್ಳಬಹುದಾದ್ದಷ್ಟೇ, ಏಕೆಂದರೆ ಕಾವ್ಯಪ್ರಜ್ಞೆ ಇಲ್ಲದ ಕೀರ್ತನೆಯಾಗಲೀ-ಕೃತಿಯಾಗಲಿ ಇಷ್ಟುಕಾಲ ಉಳಿದು ಬರಲು ಸಾಧ್ಯವಿಲ್ಲ ; ಉಳಿದು ಬಂದರೂ ಕವಿಯೊಬ್ಬನ ಹೆಸರನ್ನು ಇಷ್ಟು ಜನಪ್ರಿಯವಾಗಿ ಉಳಿಸಲು ಸಾಧ್ಯವಾಗುವುದಿಲ್ಲ. ಒಳಗಾದವರು. ಅಲ್ಲಲ್ಲಿಯ ನೆಲೆಬೆಲೆಗಳನ್ನು ಚೆನ್ನಾಗಿ ಅರಿತವರು. ಅವರ ಕೀರ್ತನೆಗಳಲ್ಲಿ ಅಂದಿನ ಸಮಾಜದ ಕೆಲವೊಂದು ಕೆಟ್ಟ ಪದ್ಧತಿಗಳನ್ನು ಕಿತ್ತೊಗೆಯುವ ಮನೋಧರ್ಮವಿದೆ. ಕೆಲವೊಂದು ಬರಡು ಭ್ರಮೆಗಳಿಂದ ಬಳಲುತ್ತಿದ್ದವರನ್ನು ತಿದ್ದುವ ಪ್ರಯತ್ನವಿದೆ, ನಿಜವಾದ ಧರ್ಮ ಯಾವುದು, ಸತ್ಯ ಯಾವುದು ಎಂಬುದನ್ನು ತೋರಿಸಿಕೊಡುವ ಋಜು ಮಾರ್ಗವಿದೆ. ಅವರು ತಮ್ಮ ಒಂದು ಕೀರ್ತನೆಯಲ್ಲಿ ಇಡೀ ಸಮಾಜದ ವಿವಿಧ ವರ್ಗದ, ವಿವಿಧ ಬಗೆಯ ಜನರನ್ನು ಪಟ್ಟಿ ಮಾಡಿದಂತೆ “ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ” ಎಂದು ಹೇಳುವಲ್ಲಿ ವಾಸ್ತವಿಕ ಸತ್ಯವನ್ನು ನಿರ್ಭಯವಾಗಿ ಹೇಳಿದ್ದಾರೆ. “ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಬೋಧನೆ ಮಾಡುವವರಿಂದಲೇ ಜಾತಿ ಮತಗಳ ಭೇದಭಾವ ಕಂಡು ಬಂದಾಗ ಅವರು ಅದನ್ನು ಕಟುವಾಗಿಯೇ ಟೀಕಿಸಿದ್ದಾರೆ. ಹೇಳುವುದೊಂದು, ಮಾಡುವುದೊಂದು ಆಗಬಾರದು, ನಿಜವಾದ ಸತ್ಯವನ್ನು ಶೋಧಿಸುವ ಕೆಲಸವನ್ನು ಮಾಡುವಂತೆ ಘೋಷಿಸಿದ್ದಾರೆ : ಕುಲಕುಲವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಿಜನಾಭನಿಗರ್ಪಿಸಲಿಲ್ಲವೆ ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ ಆತ್ಮಯಾವ ಕುಲ ಜೀವ ಯಾವಕುಲ ತತ್ತೇಂದ್ರಿಯಗಳ ಕುಲ ಪೇಳಿರಯ್ಯ ಆತ್ಮಾಂತರಾತ್ಮ ನೆಲೆಯಾದಿಕೇಶವನೊಲಿದ ಆತನೊಲಿದ ಮೇಲೆ ಯಾತರ ಕುಲವಯ್ಯಾ || ಕನಕದಾಸರಲ್ಲಿ ಪೂರ್ವಾಪರ ಯೋಚಿಸುವ ಶಕ್ತಿಯಿದೆ. ತಾರ್ಕಿಕವಾಗಿ ವಿವೇಚಿಸಿ ತೀರ್ಮಾನಿಸುವ ಸಂಕಲ್ಪವಿದೆ. ಅದರಲ್ಲಿಯೂ ದೊಡ್ಡಭಕ್ತನೆನಿಸಿ ಮೆರೆಯುವಲ್ಲಿ ದೇವರ ಪ್ರತಿನಿಧಿಯೆಂಬಂತೆ ವರ್ತಿಸುವವರಲ್ಲಿ ಕಂಡು ಬರುವ ಕೀಳುತನದ ಬಗೆಗೆ ಅವರಿಗೆ ಅಷ್ಟೇ ತುಚ್ಛಭಾವನೆ ಇದೆ. ಎಲ್ಲವನ್ನು ತಿಳಿದವರು ಎಂದು ಹೇಳಿಕೊಳ್ಳುವ ಜ್ಞಾನಿಗಳು ಕೆಲವೊಂದು ಮೂಲಭೂತ ವಿಚಾರಗಳ ವಚನಕಾರರಾಗಲೀ, ಕೀರ್ತನಕಾರರಾಗಲೀ ಭಕ್ತಿಭಾವ ಪ್ರೇರಿತರಾದವರು. ಆದರೆ ಅಷ್ಟಕ್ಕೇ ನಿಂತವರಲ್ಲ. ಆ ವಲಯವನ್ನು ಪ್ರವೇಶಿಸಬೇಕಾದರೆ ಬದುಕಿನ ಪರಿಶುದ್ಧತೆಯನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಸಾರಿದವರು. ಆ ಕಡೆಗೆ ಹೆಚ್ಚು ಒತ್ತುಕೊಟ್ಟವರು. ಹಾಗಾಗಿ ಮೊದಲು ಸಮಾಜದ ನಾನಾ ಬಗೆಯ ನಾನಾ ವರ್ಗದ ಜನರ ಸಣ್ಣತನಗಳನ್ನು ಎತ್ತಿತೋರಿ ಬಯಲಿಗೆಳೆದು ಅವುಗಳನ್ನು ದೂರ ಮಾಡಲು ಪ್ರಚೋದಿಸಿದವರು ಇವರುಗಳು. ಆ ಕಾರಣದಿಂದಾಗಿ ಇವರುಗಳ ಈ ಬಗೆಯ ರಚನೆಗಳಲ್ಲಿ ಸಾಮಾಜಿಕ ಪ್ರಜ್ಞೆ ದಟ್ಟವಾಗಿ ಹೊರಹೊಮ್ಮಿರುವುದನ್ನು ಕಾಣಬಹುದು. ದಾಸ ಪರಂಪರೆಯಲ್ಲಿ ಕನಕದಾಸರು ಸಮಾಜದ ಕೆಳಗಿನ ಸ್ತರದಿಂದ ಬಂದವರು, ಅವರು ಆ ವಲಯವನ್ನು ಪ್ರವೇಶಿಸಿ, ಉಳಿದು ಕೀರ್ತಿಗಳಿಸಲು ಬಹಳ ಹೋರಾಟವನ್ನೇ ನಡೆಸಬೇಕಾಯಿತು. ಮೇಲ್ವರ್ಗದ ಒಬ್ಬ ವ್ಯಕ್ತಿ ಅಲ್ಲಿಯೇ ನಿಂತು ಈ ಕೆಳವರ್ಗದ ಆಗುಹೋಗುಗಳನ್ನು ಗಮನಿಸುವುದಕ್ಕೂ, ಅಲ್ಲಿಂದಲೇ ಮೇಲೇರಿ ಬಂದು ಮತ್ತೆ ಅದನ್ನು ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಕನಕದಾಸರು ಹಾಗೆ ಈ ಸಮಾಜವನ್ನು ನೋಡಿ ವಿಶಿಷ್ಟಾನುಭವಕ್ಕೆ