ಪುಟ:Kanakadasa darshana Vol 1 Pages 561-1028.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೪೦ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೯೪೧ ಬೆರತು, ಊರೂರು ತಿರುಗಿ, ಜನರಲ್ಲಿ ಒಂದಾಗಿ, ಅವರವರ ಹವ್ಯಾಸಗಳಲ್ಲಿ ತೊಡಗಿರುತ್ತಲೇ ಅವರಿಗೆ ಭಕ್ತಿಯ ಸ್ವಾರಸ್ಯವನ್ನು ಮನಗಾಣಿಸುವುದು ದಾಸರ ಕರ್ತವ್ಯ.” (ಎಸ್. ಕೆ. ರಾಮಚಂದ್ರರಾವ್-ಪುರಂದರ ಸಾಹಿತ್ಯದರ್ಶನ, ಸಂಪುಟ: ಮೂರು) ಪುರಂದರದಾಸರೂ, ಕನಕದಾಸರೂ ಈ ಕಾಯಕವನ್ನು ವ್ರತವನ್ನಾಗಿ ಸ್ವೀಕರಿಸಿದವರು. ಸಹಜವಾಗಿಯೇ ಅವರಿಗೆ ಸಮಾಜದ ಎಲ್ಲ ಮುಖಗಳ ದರ್ಶನವಾಯಿತು. ಈ ಜಗತ್ತಿಗೆ ಅಂಟಿಕೊಂಡು, ಇಲ್ಲಿಯ ಸುಖ ಸೌಲಭಭೋಗ ಭಾಗ್ಯಗಳೇ ನಿತ್ಯಸತ್ಯ ಎಂದು ಭಾವಿಸುವ ಜನಗಳ ಮಧ್ಯೆಯೇ ಬದುಕಿ, ಅವರನ್ನು ಇದರಾಚೆಗೂ ಇರುವ ಸತ್ಯದ ಕಡೆಗೆ ತಿರುಗಿಸುವ ಕೆಲಸ ಸುಲಭವೇನಲ್ಲ. ವ್ಯಾಸರಾಯರೇ ಒಂದು ಕಡೆ ಲೋಕ ಜೀವನವನ್ನು ಕುರಿತು: 'ಮಾಯೆಯೆಂಬ ದುಷ್ಟರಾಯ ಮಾನವೆಂಬ ಬಿನುಗು ಮಂತ್ರಿ ಇಂದ್ರಿಯಗಳೆಂಬ ತಿರಿದೋಡುವ ಪರಿವಾರ....' ಇವುಗಳಿಂದ ಆವೃತವಾದ ಸಾಮಾನ್ಯರ ಪಾಡನ್ನು ಕಂಡು ಕನಿಕರಿಸಿದ್ದಾರೆ. ಇಂಥ ಜನಗಳನ್ನು ಕುರಿತೇ ಪುರಂದರದಾಸರು “ಮಾನವ ಜನ್ಮ ದೊಡ್ಡದು, ಇದ ಹಾನಿಮಾಡಲಿ ಬೇಡಿ ಹುಚ್ಚಪ್ಪಗಳಿರಾ” ಎಂಬ ಎಚ್ಚರಿಕೆಯ ಕಹಳೆಯನೂದಿದ್ದಾರೆ. ಇದು ದಾಸರ ಜನಪದರ, ಜೀವನದ ದೃಷಿಗೊಂದು ತೋರ್‌ಬೆರಳು. ” ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಅನೇಕ ಬಾರಿ ತಮ್ಮ ಶೋತೃಗಳಿಗೆ ನೆನಪು ಮಾಡಿಕೊಡುತ್ತಿದ್ದರಂತೆ. ಅಸಂಖ್ಯ ಸಾಧ್ಯತೆಗಳಿರುವ ಮಾನವ ಜನ್ಮ ವ್ಯರ್ಥವಾಗಬಾರದೆಂಬ ತೀವ್ರ ಕಳಕಳಿಯಿಂದ ಪುರಂದರದಾಸರು ಹೀಗೆನ್ನುತ್ತಾರೆ ; 'ಕಣ್ಣು ಕೈ ಕಾಲ್ ಕಿವಿ ನಾಲಿಗೆ ಇರಲಿಕೆ ಮಣ್ಣು ಮುಕ್ಕಿ ಮರಳಾಗುವರೆ ? ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ ಉಣ್ಣದೆ ಉಪವಾಸ ಇರುವರೆ ಖೋಡಿ ? || ಹೇಳುವ ಪ್ರಹರಿಯ ಕೆಲಸವನ್ನು ಮಾಡಿರುವುದನ್ನು ನಾವು ಕಾಣಬಹುದು. ಉದಾಹರಣೆಗೆ : “ಕಟ್ಟಲಿಲ್ಲ ಬಿಚ್ಚಲಿಲ್ಲ ಕಷ್ಟಪಟ್ಟು ಬಾಳಲಿಲ್ಲ ಸುಟ್ಟು ಸುಟ್ಟು ಸುಣ್ಣದರಳು ಆಯಿತೀ ಕಾಯ ಬಿಟ್ಟು ಹೋಗುವಾಗ ತೊಟ್ಟ ಬಟ್ಟೆ ನಿನಗೆ ಹೊಂದಲಿಲ್ಲ ದೃಷ್ಟಿನೋಟ ಕಟ್ಟಕಡೆಗೆ ಬಟ್ಟೆಬಯಲಾಗುತಿದೆ || ಗರುವದೋರಿ ನಿಂದ ನೀನು ಬರಿದೆ ಕಾಲ ಕಳಿದೆ ಮುಂ ದರಿದು ನೋಡು ನರರ ತನುವು ದೊರಕಲರಿಯದು.....? ಅಪರೂಪವಾಗಿ ಸಿಕ್ಕಿದ ಮನುಷ್ಯ ಶರೀರದ ಎಲ್ಲ ಸಾಮರ್ಥ್ಯಸಾಧ್ಯತೆಗಳನ್ನು ಮಾನವ ದುಡಿಸಿಕೊಳ್ಳಬೇಕು. ಆದರೆ ಇದಕ್ಕೆ ಬರುವ ವಿಘ್ನಗಳು ಅದೆಷ್ಟೋ ! ನಮ್ಮ ಅಂತರಂಗದ ಒಳಗೇ ನಮ್ಮ ಶತ್ರುಗಳು ಅವಿತುಕೊಂಡಿದ್ದಾರೆ; ಜ್ಞಾನರತ್ನವನ್ನು ಅಪಹಾರ ಮಾಡಲು ಹೊಂಚು ಹಾಕುತ್ತಿರುವ ಚೋರರು ಅವರು. ಆದ್ದರಿಂದ ವಿವೇಕಿಯಾದವನು ಅನವರತ ಎಚ್ಚರವಾಗಿರಬೇಕು. [ಅಂತರ್ವಸನ್ನಿ ಷಟ್ ಚೋರಾ : ದುರ್ಜಯಾ ಲೋಕ ವಿಶ್ರುತಾ ಜ್ಞಾನ ರತ್ನಾಪಹಾರಾಯ ತಸ್ಮಾತ್ ಜಾಗ್ರತ, l] ಉತ್ಸರ್ಗಮುಖಿಯಾದ ಮನುಷ್ಯ ಅನ್ನಮದ, ಅರ್ಥಮದ, ವೈಭವದ ಮದ, ರೂಪಮದ, ಪ್ರಾಯಮದ-ಇತ್ಯಾದಿ ಮದಗಳನ್ನು ಗೆಲ್ಲಬೇಕು ; ಸತಿಮೋಹ, ಸುತ ಮೋಹ-ಮುಂತಾದ ಸಾಂಸಾರಿಕ ಮೋಹಗಳನ್ನು ಕಡಿದುಕೊಳ್ಳಬೇಕು, ಆಗಮಾತ್ರ ಬದುಕಿನಲ್ಲಿ ಕೃತಕೃತ್ಯತೆಯ ಅನುಭವವನ್ನು ದಕ್ಕಿಸಿಕೊಳ್ಳಬಹುದೇನೋ. ಇದು ಪುರಂದರ ಕನಕರಿಬ್ಬರ ಅಭಿಪ್ರಾಯವೂ ಹೌದು. ಪುರಂದರದಾಸರು ಪ್ರಶ್ನಿಸುತ್ತಾರೆ - “ಆರು ಹಿತವರು ನಿನಗೆ-ಮೂರು ಮಂದಿಯೊಳಗೆ ನಾರಿಯೋ, ಧಾರುಣಿಯೋ, ಬಲುಧನದ ಸಿರಿಯೋ ?” ದಾಸರ ಈ ಪ್ರಶ್ನೆಯ ಹಿಂದೆ ಸಾಂಸಾರಿಕ ಜೀವನ ಹೇಯವೆಂಬ ನೇತ್ಯಾತ್ಮಕ ದೃಷ್ಟಿಯಿದೆಯೆಂದು ಭಾವಿಸಲಾಗದು. ಸ್ವತಃ ಪುರಂದರ ಕನಕದಾಸರಿಬ್ಬರೂ ಸಂಸಾರಿಗಳೇ, ವ್ಯಾಸಕೂಟಕ್ಕೆ ಸೇರಿದ ಯತಿಗಳಲ್ಲ. ಆದರೆ ಬದುಕಿನಲ್ಲಿ ಯಾವುದಕ್ಕೆ ಹೆಚ್ಚು ಮನ್ನಣೆ ಕೊಡಬೇಕೆಂಬ ಮೌಲ್ಯಪ್ರಜ್ಞೆ ಶಾಶ್ವತ ಅಶಾಶ್ವತೆಯನ್ನು ಕುರಿತಾದ ತಾರತಮ್ಯ ಜ್ಞಾನ-ಇವುಗಳ ಬಗೆಗೆ ಲೋಕದ ಜನರನ್ನು ಎಚ್ಚರಿಸುವುದೇ ಇಲ್ಲಿನ ಆಶಯ ಸಾಮಾನ್ಯರಾದ ನಾವು 'ಮುನ್ನ ಕಾಲನ ದೂತರು ಕಾಲ್ ಪಿಡಿದೆಳೆವಾಗ ತಾಳು ತಾಳೆಂದರೆ ತಾಳುವರೆ ? ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲು ಬೇಡಿ ” ಕನಕದಾಸರೂ ತಮ್ಮ ಅನೇಕ ಕೀರ್ತನೆಗಳಲ್ಲಿ ಈ ರೀತಿಯ ಎಚ್ಚರ