ಪುಟ:Kanakadasa darshana Vol 1 Pages 561-1028.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೪೨ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೯೪೩ ಶತಕೋಟಿ ರಾಯರುಗಳು ಆಳಿದ ಈ ನೆಲವನ್ನು' ನಮ್ಮದು ಎಂದು ಶಾಸನ ಬರೆಯುತ್ತೇವೆ. ಅಲ್ಲಿ 'ಬಿನ್ನಣದ ಮನೆಕಟ್ಟಿ' ಅದೇ ಸ್ಥಿರವೆಂಬ ಭ್ರಾಂತಿಯಲ್ಲಿ ಈ ನೆಲಕ್ಕೆ ಕಟ್ಟುಬಿದ್ದು, ಎತ್ತರಕ್ಕೆ ಏರುವ ಅವಕಾಶದಿಂದ ವಂಚಿತರಾಗುತ್ತೇವೆ. ಆದ್ದರಿಂದ 'ನಾರಿ', 'ಧಾರುಣಿ', 'ಸಿರಿ' ಈ ಮೂವರೂ ನಮ್ಮ ದಾಸರಾಗಿರಬೇಕೇ ಹೊರತು, ಅರಸರಾಗಿರಬಾರದು. ಇದೇ ಅರ್ಥದಲ್ಲಿಯೇ ಕನಕದಾಸರು, ಸ್ವಲ್ಪ ವಾಚ್ಯವಾಗಿಯೇ - 'ಹೆಣ್ಣು ಹೊನ್ನು ಮಣ್ಣು ಮೂರು ತನ್ನಲ್ಲಿದ್ದು ಕಾಣಲಿಲ್ಲ ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದು ಅನ್ನ ವಸ್ತ್ರ ಭೋಗಿಯಾಗಿ ತನ್ನ ಸುಖವ ಕಾಣಲಿಲ್ಲ ಮಣ್ಣುಪಾಲು ಆದಮೇಲೆ ಆರಿಗಾಹೋದು ?” ಎಂದು ಮಾನವ ಬದುಕಿನಲ್ಲಿ ಯಾವುದಕ್ಕೆ ಪ್ರಾಶಸ್ಯ ಕೊಡಬೇಕೆಂದು ಮೌಲ್ಯ ನಿರ್ದೇಶನ ಮಾಡುತ್ತಾರೆ. ಲೌಕಿಕ ಜೀವನದಲ್ಲಿ ವ್ಯಕ್ತಿಯ ಬಾಳು ಹೇಗಿರಬೇಕೆಂಬುದನ್ನು ಪುರಂದರದಾಸರು 'ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ ಮೀರಿಯಾಸೆ ಮಾಡದಲೆ' ಇದ್ದು 'ಈಸಬೇಕು, ಇದ್ದು ಜೈಸಬೇಕು'ಎಂದು ಬೋಧಿಸುತ್ತಾರೆ. “ಹೊಲಯ ಹೊರಗಿಹನೆ, ಊರೊಳಗಿಲ್ಲವೆ ?' ಎಂದು ಪ್ರಾರಂಭವಾಗುವ ಪುರಂದರದಾಸರ ಕೀರ್ತನೆಯಲ್ಲಿ 'ಹೊಲಯ' ಎನ್ನುವ ಪದ ಜಾತಿಸೂಚಕವಲ್ಲ, ಗುಣಸೂಚಕವಾದುದು ಎಂಬುದು ಸ್ಪಷ್ಟವಾಗಿಯೇ ಇದೆ. ಅವರ ಪ್ರಕಾರ- 'ಹೇಳಿದ ಶಾಸ್ತ್ರವನ್ನು ತಿಳಿಯದವ', ಇದ್ದೂ 'ದಾನಧರ್ಮವ ಮಾಡದವ', 'ಹುಸಿಯಾಡುವವ', 'ಉಂಡಮನೆಗೆರಡು ಬಗೆಯುವವ' ಇಂಥವರೆಲ್ಲರೂ ಹೊಲೆಯರು, ಪುರಂದರರು 'ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವನು' ಎಂಬ ವ್ಯಾಖ್ಯೆಯನ್ನು ಕೊಟ್ಟು ಜಾತಿ ಎಂಬುದು ಹುಟ್ಟಿನಿಂದ ಬಂದುದಲ್ಲ ಎಂಬುದನ್ನು ಸೂಚಿಸಿದ್ದಾರೆ. ಇದೇ ವಿಚಾರವನ್ನು ಇನ್ನಷ್ಟು ತೀವ್ರವಾಗಿ : 'ಹೊಲೆಯ ಬಂದನೆಂದು ಒಳಗೆ ದೇವರ ಮಾಡಿ ಗಣಗಣ ಗಂಟೆ ಬಾರಿಸುವರಯ್ಯಾ ತನುವಿನ ಕೋಪವು ಹೊ ಪರಧನ ಪರಸತಿ ಹೊಲೆಯಲ್ಲವೇ ? ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟರೆ ಇದಕೇನೋ ಮದ್ದೋ ಪುರಂದರ ವಿಠಲ ?” -ಎಂದು ಮಡಿವಂತರೆನ್ನಿಸಿಕೊಂಡವರ ಮನಸ್ಸನ್ನು ಚುಚ್ಚಿ ಜಾತಿ ತತ್ವವನ್ನು ಕುರಿತು ಮರುಚಿಂತನೆ ನಡೆಸುವಂತೆ ಮಾಡಿದ್ದಾರೆ. ಹುಟ್ಟಿನಿಂದ ಮೇಲ್ವರ್ಗಕ್ಕೆ ಸೇರಿದ ವ್ಯಾಸರಾಯರಾಗಲೀ, ಪುರಂದರದಾಸರಾಗಲೀ, ಜಾತಿಪದ್ಧತಿಯಿಂದಾಗುವ ನೋವಿನ ಅನುಭವಕ್ಕೆ ನೇರವಾಗಿ ಒಡ್ಡಿಕೊಂಡವರಲ್ಲ. ಆದರೆ ಕನಕದಾಸರಿಗೆ ಈ ನೋವು ಸ್ವಂತ ಅನುಭವವೇ ಆಗಿತ್ತು. ಕುಲಜರೆನ್ನಿಸಿಕೊಂಡವರು ಸಮಾಜದ ಕೆಳವರ್ಗವನ್ನು ಕುರಿತು ತೋರಿಸುವ ತೀವ್ರ ತಿರಸ್ಕಾರ ಎಂಥ ನೋವಿನ ಸಂಗತಿ ಎಂಬುದು ಕನಕದಾಸರಿಗೆ ಸ್ವಾನುಭವದ ಸಂಗತಿಯಾಗಿತ್ತು. ಸಮಾಜದಲ್ಲಿ ಮೇಲು ವರ್ಗಕ್ಕೆ ಸೇರಿದವರು ಕೆಳಗಿನ ಜನರನ್ನು ಹೀನಾಯವಾಗಿ ಕಾಣುವುದರ ವಿರುದ್ದ ಕನಕದಾಸರು ತಮ್ಮ ಪ್ರತಿಭಟನೆಯನ್ನು ತಮ್ಮ ಅಣಕುಕಾವ್ಯ 'ರಾಮಧಾನ್ಯಚರಿತ್ರೆ' ಯಲ್ಲಿ ಸಾಕಷ್ಟು ತೀವ್ರವಾಗಿಯೇ ಅಭಿವ್ಯಕ್ತಿಸಿದ್ದಾರೆ. ಈ ಕಾವ್ಯದಲ್ಲಿ ನಾವು ನೋಡುವ ರಾಗಿಯ ಪ್ರತಿಭಟನೆ ದಲಿತವರ್ಗದವರ ಪ್ರತಿಭಟನೆಯೇ ಆಗಿದೆ. ತಮ್ಮ ಅನೇಕ ಕೀರ್ತನೆಗಳಲ್ಲೂ ಕನಕದಾಸರು 'ಕುಲ'ದ ಕಲ್ಪನೆಯನ್ನು ಕೆದಕುತ್ತಾರೆ. ಇದರ ಹಿಂದೆ ವೈಯಕ್ತಿಕ ನೋವಿನ ಅಂಶವಿರುವುದರ ಜೊತೆಗೆ ವಚನಕಾರರಂತೆಯೇ ಹರಿದಾಸರನ್ನೂ ತೀವ್ರವಾಗಿ ಕಾಡಿದ ಒಂದು ಅಂಶವೆಂದರೆ ಸಾಮಾಜಿಕ ಅಸಮಾನತೆ, ಜಾತಿ ಎಂಬ ಶಾಪ ಎಲ್ಲಕ್ಕೂ ನಮ್ಮ ಜನವನ್ನು ಕಾಡುತ್ತಲೇ ಬಂದಿದೆ. ಶಂಕರ, ರಾಮಾನುಜ, ಬಸವ, ಮಧ್ವಾಚಾರ್ಯ, ಗಾಂಧೀಜಿ, ಅಂಬೇಡ್ಕರ್‌ ಈ ಎಲ್ಲರೂ ಜಾತಿಯ ಪಿಡುಗನ್ನು ಮೂಲೋತ್ಪಾಟನೆ ಮಾಡುವ ಪ್ರಯತ್ನವನ್ನು ತಮ್ಮ ತಮ್ಮ ಮಿತಿಯಲ್ಲಿ ಮಾಡಿದರೂ, ಅದು ಮತ್ತೆ ಮತ್ತೆ ತಲೆಯೆತ್ತುತ್ತಲೇ ಇದೆ. ವ್ಯಾಸರಾಯರು ತಮ್ಮ ಶಿಷ್ಯವರ್ಗಕ್ಕೆ ಕನಕದಾಸರನ್ನೂ ಸೇರಿಸಿಕೊಂಡಾಗ ಕುಲೀನರೆನ್ನಿಸಿಕೊಂಡವರು ಪ್ರತಿಭಟಿಸಿದರು. ವ್ಯಾಸರಾಯರು ಕನಕದಾಸರ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟು, ತಮ್ಮ ಕುಲೀನ ಶಿಷ್ಯರ ಬಾಯಿ ಮುಚ್ಚಿಸಬೇಕಾಯಿತು. “ಕುಲ' ಎನ್ನುವ ಪರಿಕಲ್ಪನೆಯನ್ನು ಶೋಧಿಸಿ, ಅದರ ನಿಜವಾದ ಅರ್ಥವನ್ನು ಜನಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕಾದ ಅನಿವಾಯ್ಯ ಸ್ಥಿತಿ ಶಿವಶರಣರ ಕಾಲದಲ್ಲಿದ್ದಂತೆ, ಹರಿದಾಸರ ಕಾಲದಲ್ಲಿಯೂ ಇತ್ತು, ಪುರಂದರ ಕನಕರಿಬ್ಬರೂ ಕುಲಪರಿಕಲ್ಪನೆಯ ವಿಶ್ಲೇಷಣೆ ಮಾಡಿದ್ದಾರೆ.