ಪುಟ:Kanakadasa darshana Vol 1 Pages 561-1028.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೪೪ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೯೪೫ ಸಾಮಾಜಿಕ ಸುಧಾರಣಾ ಪ್ರವೃತ್ತಿಯೂ ಕೆಲಸಮಾಡಿದೆ. 'ಕುಲ ಕುಲ ಕುಲವೆನ್ನುತಿಹರೊ | ಕುಲವಾವುದು ಸತ್ಯಜನರಿಗೆ?' ಎಂಬ ಪ್ರಶ್ನೆಯಲ್ಲಿರುವ ಕಳಕಳಿ ಗಮನಾರ್ಹವಾದುದು, ತಾವರೆ ಕೆಸರಲ್ಲಿ ಹುಟ್ಟಿದರೂ ಪೂಜಾಯೋಗ್ಯವಾಗುತ್ತದೆ : ಹಸುವಿನ ಕೆಚ್ಚಲಲ್ಲಿ ಬರುವ ಹಾಲನ್ನು “ಭೂಸುರರೆನ್ನಿಸಿಕೊಂಡವರು ಪವಿತ್ರವೆಂದು ಭಾವಿಸಿ, ಉಪಯೋಗಿಸುತ್ತಾರೆ. ಅಷ್ಟು ಮಾತ್ರವಲ್ಲ, ಪರಾಶರ, ವಸಿಷ್ಠ ನಾರದ ಮೊದಲಾದ ಪ್ರಸಿದ್ದ ಋಷಿಗಳು ಹುಟ್ಟಿನಿಂದ ಬ್ರಾಹ್ಮಣರೇನಲ್ಲ-ಹೀಗೆ ಬೇರೆ ಬೇರೆ ಉದಾಹರಣೆಗಳ ಮೂಲಕ ಕನಕದಾಸರು ಮನುಷ್ಯನ ಪಾಲಿಗೆ ಶ್ರೇಷ್ಠತೆ ಬರುವುದು ಹುಟ್ಟಿದ ಕುಲದಿಂದಲ್ಲ, ಅಂತಃಸ್ಸತ್ವದಿಂದ, ಆಚಾರದಿಂದ ಎಂಬುದನ್ನು ಸಮರ್ಥಿಸುತ್ತಾರೆ. ಆತ್ಮನಾವಕುಲ, ಜೀವನಾವ ಕುಲ, ತತೇಂದ್ರಿಯಗಳ ಕುಲ ಪೇಳಿರಯ್ಯ ?” ಇದು ಕೇವಲ ಕನಕದಾಸರೊಬ್ಬರ ಪ್ರಶ್ನೆಯಲ್ಲ ; “ಮನುಷ್ಯ ಜಾತಿ ತಾನೊಂದೆ ವಲಂ' ಎಂದು ಘೋಷಿಸಿದ ಆದಿಕವಿ ಪಂಪನಂಥವರೂ ಕರ್ಣನ ಬಾಯಲ್ಲಿ ಇಂಥದೇ ಮಾತನ್ನು ಆಡಿಸುವುದನ್ನು ನಾವು ಕಾಣಬಹುದು. ಆತ್ಯ, ಜೀವ, ಇಂದ್ರಿಯಗಳು ಕುಲದ ಕಲ್ಪನೆಗೆ ಅತೀತವಾದುವು, ಆದ್ದರಿಂದ ದೇಹಕ್ಕೆ ಮಾತ್ರ ಜಾತಿಯ ಮೇಲೆ ಕೀಳ್ಳೆಗಳನ್ನು ಅಂಟಿಸುವುದು ಅನೈಸರ್ಗಿಕವಾಗುತ್ತದೆ. ಇನ್ನೊಂದು ಕೀರ್ತನೆಯಲ್ಲಿ ಕನಕದಾಸರು ಹಾಡುತ್ತಾರೆ-'ಯಾತರವನೆಂದುಸುರಲಿ, ಜಗನ್ನಾಥ ಮಾಡಿದ ಒಂದು ನರರೂಪವಯ್ಯ ; ಇಲ್ಲಿಯೂ ಕುಲದ ಕಲ್ಪನೆಯನ್ನೇ ಕುರಿತಾದ ನೋವಿದೆ. ಚಿಂತನೆಯೂ ಇದೆ. ತಾನು ದೇವರ ಮಗ 'ಜಗನ್ನಾಥಮಾಡಿದ ಒಂದು ನರರೂಪ' ಎಂದು ಹೇಳುವುದರ ಮೂಲಕ, ತನ್ನ ಜಾತಿ ಮಾನವ ಜಾತಿ, ಭಗವಂತನೇ ತನ್ನ ತಂದೆ ; ಹೀಗಾಗಿ ಹುಟ್ಟಿನ ಮೂಲಕ ಕೀಳಾಗಲು ಸಾಧ್ಯವಿಲ್ಲ-ಎಂಬುದನ್ನು ಧ್ವನಿಪೂರ್ವಕವಾಗಿ ಅವರು ತೋರಿಸಿದ್ದಾರೆ. “ಈ ದೇಹದಲಿ ನೀ ನೆಲಸಿರಲು ಹೊಲೆಯುಂಟೆ'? ಎಂಬ ಮಾತೂ ಹರಿಭಕ್ತಿಸಾರದಲ್ಲಿ ಬರುತ್ತದೆ. ಭಗವಂತನ ವಾಸಸ್ಥಾನವಾದ ದೇಹ ಹುಟ್ಟಿನ ಕಾರಣಕ್ಕಾಗಿ ಕೀಳಾಗಲಾರದು ಎಂಬುದನ್ನು ಇದು ಸಮರ್ಥಿಸುತ್ತದೆ. ಅರ್ಪಿಸಿಕೊಳ್ಳುವ ಸಂಪೂರ್ಣ ಸಮರ್ಪಣಾಭಾವ, ಶರಣ್ಯತೆ ಹರಿದಾಸರೆಲ್ಲರ ಕೃತಿಗಳ ಸಮಾನ ಲಕ್ಷಣ. ಮನಸ್ಸು, ಮಾತು, ಕೃತಿಗಳೆಲ್ಲದರಲ್ಲಿಯೂ ಭಗವದನುಸಂಧಾನ ನಡೆಯುತ್ತಿರಬೇಕೆಂಬುದು ಹರಿದಾಸರು ಸ್ವೀಕರಿಸಿದ ವ್ರತ. ವ್ಯಾಸರಾಯಸ್ವಾಮಿಗಳು “ಅಂತರಂಗದಲಿ ಹರಿಯ ಕಾಣದವ ಹುಟ್ಟುಗುರುಡನೋ” ಎಂದು ಮರುಗಿದರು : “ಹರಿದಾಸರ ಸಂಗ, ಗುರುಕರುಣೆಗಳಿಗೆ ಪ್ರತಿಯಿಲ್ಲ” ಎಂಬ ವಿಶ್ವಾಸ ಅವರದ್ದು. “ಹರಿಯ ಹೆಸರಿಂದ ಬದುಕುವ ದಾಸನಾನು, ಸಿರಿಕೃಷ್ಣ ದಾಸರ ದಾಸ ನಾನು” ಎಂಬ ವಿನಯದ ದಾರಿಯನ್ನು ತಮ್ಮ ಶಿಷ್ಯರಿಗೆ ಹಾಕಿಕೊಟ್ಟರು : “ಆಳು ನಾ ನಿನ್ನಳು ನಿನ್ನಾಳು ನಾನು ನೀನು ತಂದೆ, ನಿನ್ನ ಕಂದ ಶರಣ್ಯ ನಾ ನಿನ್ನ ಶರಣಾಗತನು ...." ಎಂದು 'ಅಹಂಕಾರ' 'ಮಮಕಾರಗಳನ್ನು ಭಕ್ತಿಯಜ್ಞದಲ್ಲಿ ಆಹುತಿ ನೀಡಿ, “ಕೃಷ್ಣಾರ್ಪಣ' ಎಂದರು. ಪುರಂದರ ಕನಕದಾಸರ ಕೃತಿಗಳಲ್ಲಿ ಈ ಭಾವ ಬಹಳ ಕಡೆ ಸ್ಥಾಯಿಯಾಗಿ ಕಾಣಿಸಿಕೊಳ್ಳುತ್ತದೆ. ಪುರಂದರದಾಸರು ; “ನಿನ್ನ ಪಾದಾಂಬುರುಹ ಭಜಿಸುವುದೆ ಸೌಭಾಗ್ಯ ನಿನ್ನ ನಿರ್ಮಾಲ್ಯಗಳೆ ಭೋಗದ್ರವ್ಯ ನಿನ್ನ ಕಥೆ ಕೇಳುವುದೆ ಮಂಗಳ ಸುವಾದ್ಯಗಳು ನಿನ್ನಂಥ ಅರಸನೆಗೆ ಪುರಂದರ ವಿಠಲ” || ಎನ್ನುವುದರ ಜೊತೆಗೆ 'ಅನಾಥನು ನಾನು ಬಂಧು ನೀನು ಹೀನನು ನಾನು ದಯಾವಂತ ನೀನು ಧ್ಯಾನಮಂತ್ರನು ನೀನು ಧ್ಯಾನಿಸುವೆನು ನಾನು ಜ್ಞಾನಗಮ್ಯನು ನೀನು ಅಜ್ಞಾನಿ ನಾನು” || ಎಂದೂ ಹೇಳಿ ಭಗವಂತನ ಸರ್ವಜ್ಞತ್ವ, ಸರ್ವಶಕ್ತಿತ್ವ, ಕಾರುಣ್ಯ ಮೊದಲಾದ ಕಲ್ಯಾಣ ಗುಣಗಳನ್ನು, ತಮ್ಮಲ್ಲಿರುವ ಅಲ್ಪಶಕ್ತಿತ್ವ, ಅಸ್ವಾತಂತ್ರ್ಯ, ದೈನ್ಯ ಇವುಗಳೊಂದಿಗೆ ವೈದೃಶ್ಯ ರೂಪದಲ್ಲಿ ಪರಿಭಾವಿಸಿಕೊಂಡಿದ್ದಾರೆ. ಇದಕ್ಕೆ ಸಂವಾದಿಯಾಗಿ ಕನಕದಾಸರೂ : “ಏನೆಂದು ಕೊಂಡಾಡಿ ತುತಿಸಲೋ ದೇವ ನಾನೇನು ಬಲ್ಲೆ ನಿನ್ನಯ ಮಹಿಮೆ ಘನವ” ಹರಿದಾಸ ಸಾಹಿತ್ಯದ ಎಲ್ಲ ಹಂತಗಳಲ್ಲಿಯೂ ಕಾಣುವ ಸಮಾನ ಸಂಗತಿಯೆಂದರೆ, ಆತ್ಮನಿವೇದನೆ, ಸ್ತೋತ್ರ ಉಪದೇಶ, ತತ್ತ್ವಚಿಂತನೆ ಮುಂತಾದ ವಿಷಯವ್ಯಾಪ್ತಿಯಲ್ಲಿ ಬರುವ ಭಕ್ತಿ ನಿರ್ಭರ ರಚನೆಗಳೂ, 'ಹರಿ' ಎಂಬ ಪರಾಶಕ್ತಿಯಲ್ಲಿ ಅಚಲ ಶ್ರದ್ಧೆಯನ್ನಿರಿಸಿ, ಆತ್ಮೀಕರಿಸಿಕೊಂಡು, ಅದಕ್ಕೆ ತಮ್ಮನ್ನೇ