ಪುಟ:Kanakadasa darshana Vol 1 Pages 561-1028.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೪೬ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೯೪೭ ಮುಂದೆನ್ನ ಜನ್ಮ ಸಫಲವಾಯಿತು. ತಂದೆ ಶ್ರೀ ಕಾಗಿನೆಲೆಯಾದಿ ಕೇಶವರಾಯ ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ” ನಿಜಕ್ಕೂ ದಾಸರಪಾಲಿಗೆ 'ಇದು ಭಾಗ್ಯ, ಇದಕ್ಕಿಂತ ಬೇರೆ ಭಾಗ್ಯವಿಲ್ಲ! ಎಂದು ಪೀಠಿಕೆ ಹಾಕಿ “ಹರಿಮುಕುಂದನು ನೀನು. ನರಜನ್ನ ಹುಳು ನಾನು ಪರಮಾತ್ಮನು ನೀನು, ಪಾಮರನು ನಾನು ಗರುಡಗಮನನು ನೀನು, ಮರುಳು ಪಾಪಿಯು ನಾನು ಪರಂಜ್ಯೋತಿಯು ನೀನು ತಿರುಕನು ನಾನು ” -ಎಂದು ಭಗವಂತನ ಹಿರಿಮೆ ಗರಿಮೆಗಳನ್ನು ಗುರುತಿಸುವುದರೊಂದಿಗೆ ಮನುಷ್ಯರಾದ ತಮ್ಮ ಅಲ್ಪತನವನ್ನು ನಿವೇದಿಸಿದ್ದಾರೆ. “ದಾಸದಾಸರ ಮನೆಯ ದಾಸಿಯರ ಮಗ ನಾನು ಸಾಸಿರನಾಮದೊಡೆಯ ರಂಗಯ್ಯನ ಮನೆಯ” ಎಂಬ ಮಾತುಗಳಲ್ಲಿ ಕನಕದಾಸರು ಪ್ರದರ್ಶಿಸಿದ ವಿನಯಶೀಲತೆ, ಅಹಂಕಾರ ನಿರಸನ, ವ್ಯಾಸರಾಯರು ಹೇಳಿದ “ಆಳು ನಾ ನಿನ್ನಾಳು, ನಿನ್ನಾಳು ನಾನು...” ಎಂಬುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಹರಿ ವಿಶ್ವವ್ಯಾಪಕನೆಂಬ ಸತ್ಯವನ್ನು ಹರಿದಾಸರೆಲ್ಲರೂ ಒಪ್ಪಿಕೊಂಡಿದ್ದಾರೆ. ವ್ಯಾಸರಾಯರು ತಮ್ಮ ಕೀರ್ತನೆಯೊಂದರಲ್ಲಿ : “ಎಲ್ಲಿ ನೀ ನಿಲ್ಲಿಸಿದರೆನಗೇನು ಭಯವಿಲ್ಲ ಬಲ್ಲೆನೋ ವಿಶ್ವವ್ಯಾಪಕನೆಂಬುದ” ಎಂದಿದ್ದಾರೆ. ಪುರಂದರದಾಸರು ಪ್ರಸಿದ್ಧವಾದ ಕೀರ್ತನೆಯೊಂದರಲ್ಲಿ “ಸಕಲಗ್ರಹಬಲ ನೀನೆ ಸರಸಿಜಾಕ್ಷ ; ನಿಖಿಲ ವ್ಯಾಪಕ ನೀನೇ ವಿಶ್ವರಕ್ಷ” ಎಂದು ಸಾರಿ, ಭಗವಂತ ಕಾಲದೇಶಗಳಿಗೆ ಅತೀತನಾದವನು, ವಿಶ್ವದ ಎಲ್ಲ ಚಟುವಟಿಕೆಗಳ ಹಿಂದಿರುವ ಸೂತ್ರಧಾರನಾದವನು ಎಂಬುದನ್ನು ಪ್ರತಿಪಾದಿಸಿದ್ದಾರೆ. ಕಾಲದೇಶಗಳನ್ನು ವ್ಯಾಪಿಸಿ ವಿರಾಡೂಪಿಯಾಗಿರುವ ಭಗವಂತ ಭಕ್ತಿಗೆ ಮಾರುಹೋಗಿ, ಭಕ್ತನ ಹೃದಯದ ಗುಡಿಯಲ್ಲಿ ನೆಲಸಿದಾಗ ಭಕ್ತನಿಗೆ ಆಗುವ ಆನಂದ ಅದೆಂಥದೋ ! ಇಂಥ ಅನುಭವದ ಪ್ರವಾಹಕ್ಕೆ ತಮ್ಮನ್ನು ಒಡ್ಡಿಕೊಂಡ ಕನಕದಾಸರು : “ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಪದುಮನಾಭನ ಪಾದದೊಲುಮೆ ಎನಗಾಯಿತು” ಎಂದು ಅಂತಃಕರಣ ತುಂಬಿ, ಧನ್ಯತೆಯ ಉದ್ದಾರ ಎತ್ತಿದ್ದಾರೆ. ಈ ಅನುಭವದ ತುರೀಯ ಸ್ಥಿತಿಯ ಮುಂದೆ, ಉಳಿದೆಲ್ಲ ಐಹಿಕ ವಿಚಾರಗಳೂ ಸೊನ್ನೆ, ದಾಸರೆನ್ನುತ್ತಾರೆ : “ಇಂದೆನ್ನ ಜೀವಕ್ಕೆ ಸಕಲ ಸಂಪದವಾಯ್ತು ಹೀಗೆ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರಲ್ಲಿ ಹೋಲಿಕೆಗೆ ಸಿಗುವ ಅನೇಕ ಅಂಶಗಳಿವೆ. ಮೇಲೆ ಹೇಳಿದ ಸಂಗತಿಗಳಲ್ಲದೇ ಮುಖ್ಯವಾಗಿ ಪ್ರಸ್ತಾಪಿಸಲೇಬೇಕಾದುದು ಕೃಷ್ಣಲೀಲೆಯನ್ನು ಕುರಿತ ಕೃತಿಗಳು. ಭಾಗವತ ದಶಮಸ್ಕಂಧದಲ್ಲಿ ಬರುವ ಕೃಷ್ಣನ ಭುವನಮೋಹಕ ಮೂರ್ತಿಯ ಬಾಲಲೀಲೆಯನ್ನು ಹರಿದಾಸರೆಲ್ಲರೂ ಭಾವಪೂರ್ಣವಾಗಿ ತಮ್ಮ ಕೀರ್ತನೆಗಳಲ್ಲಿ ಚಿತ್ರಿಸಿದ್ದಾರೆ. ವ್ಯಾಸರಾಯರ-”ಕಣ್ಣಿಗೆ ಕಟ್ಟಿದಂತಿದೆ, ಬಣ್ಣದ ಕೊಳಲ ಭಾವಿಸಿ ನೋಡಬಾರದೆ” ಎಂಬ ಕೀರ್ತನೆ, “ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣಿಯಲಿ” ಎಂಬ ಪುರಂದರದಾಸರ ಪದ, “ಸೈಯವೇ ಇದು ಸೈಯೆ ಗೋಪಿಸೈಯೆ ಗೋಪಿ ನಿನ್ನ ಮಗನಿಗೆ ಒಳ್ಳೆಬುದ್ದಿಕಲಿಸಿದೆ ನೋಡು” ಎಂಬ ಗೋಪಿಯರ ದೂರಿನ ರೂಪದಲ್ಲಿರುವ ಕನಕದಾಸರ ಕೀರ್ತನೆಇತ್ಯಾದಿಗಳು ಅತ್ಯಂತ ರಸಸ್ಯಂದಿಯಾದವು. ಕೃಷ್ಣಲೀಲೆಯನ್ನು ಕುರಿತ ಕೀರ್ತನೆಗಳಿಗೆ ಇವು ಕೇವಲ ಒಂದೆರಡು ಉದಾಹರಣೆಗಳು ಮಾತ್ರ. ಕನಕದಾಸರು ಪುರಂದರದಾಸರಷ್ಟು ಹೆಚ್ಚಿನ ಪ್ರಮಾಣದಲ್ಲಿ ಇಂಥ ಕೀರ್ತನೆಗಳನ್ನು ರಚಿಸಿಲ್ಲ. ಆದರೆ 'ಮೋಹನ ತರಂಗಿಣಿ' ಯಂಥ ಕಾವ್ಯವನ್ನೇ ಬರೆದು ಕನಕದಾಸರು ಶ್ರೀಕೃಷ್ಣನ ಮಹಿಮೆಯನ್ನು ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಪ್ರತಿಪಾದಿಸಿದ್ದಾರೆ. ತಮ್ಮ ಕಾವ್ಯದ ಮಹತ್ವವನ್ನು ಅವರು ಹೇಳಿಕೊಂಡಿರುವ ರೀತಿಯೇ ಚೆನ್ನು ; ಅವರ ಪ್ರಕಾರ 'ಮೋಹನ ತರಂಗಿಣಿ' ಎಂಬುದು : “ಹರಿಶರಣರಪೆಚ್ಚು ಬುಧಜನರಿಗೆ ಮೆಚ್ಚು ದುರಿತವನಕೆ ವಿರಹಿಗಳಿಗೆದೆಗಿಚ್ಚು ವೀರರ್ಗೆ ಪುಚ್ಚು ಕೇ ಊರಿಗಿದು ತನಿಬೆಲ್ಲದಚ್ಚು ” ಕೊನೆಯದಾಗಿ ಕನಕದಾಸರೊಬ್ಬರನ್ನು ಕುರಿತೇ ಪ್ರತ್ಯೇಕವಾಗಿ ಕೆಲವು ಮಾತುಗಳನ್ನು ಹೇಳಬೇಕೆನಿಸುತ್ತದೆ. ವ್ಯಾಸರಾಯರು ಪೋಷಿಸಿ, ಬೆಳಸಿದ ಭಕ್ತಿ