ಪುಟ:Kanakadasa darshana Vol 1 Pages 561-1028.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೪೮ ಕನಕ ಸಾಹಿತ್ಯ ದರ್ಶನ-೧ ವ್ಯಾಸರಾಯರು, ಪುರಂದರದಾಸರು ಮತ್ತು ಕನಕದಾಸರು ೯ರ್೪ ಗ್ರಂಥಋಣ - C ೧ ಕ ಇ ವೃಕಕ್ಕೆ ಪುರಂದರ ಕನಕರು ಎರಡು ಮುಖ್ಯ ಶಾಖೆಗಳು. ನಿಜ, ಭಕ್ತಿಸಾಹಿತ್ಯದ ಇತಿಹಾಸದಲ್ಲಿ ಅವರಿಬ್ಬರ ಹೆಸರಿಗೂ ಸಮಾನ ಗೌರವವಿರುವುದೂ ಸತ್ಯ. ಆದರೆ ಪುರಂದರದಾಸರಿಗಿಂತ ಕನಕದಾಸರು ಅದೆಷ್ಟೋ ವಿಷಯಗಳಲ್ಲಿ ಭಿನ್ನರಾಗಿದ್ದರೆಂಬ ಮಾತೂ ಅಷ್ಟೇ ಸತ್ಯ. ಶ್ರೀ ಜಿ. ಎಸ್. ಶಿವರುದ್ರಪ್ಪನವರು ಸರಿಯಾಗಿಯೇ ಗುರುತಿಸಿರುವಂತೆ 'ಪುರಂದರದಾಸರ ಕೀರ್ತನೆಗಳಿಗಿಂತ ಕನಕದಾಸರ ಕೀರ್ತನೆಗಳಲ್ಲಿ ಕಾವ್ಯಗುಣ ಒಂದು ಕೈ ಮಿಗಿಲಾಗಿಯೂ ಇರುವಂತೆ ತೋರುತ್ತದೆ. ಅದಕ್ಕೆ ಕಾರಣ ಕನಕದಾಸರು ಪ್ರಧಾನತಃ ಕವಿಗಳು ಎನ್ನುವುದೇ ಆಗಿದೆ... ಕನಕದಾಸರಲ್ಲಿ ಕಂಡುಬರುವ ಆಶ್ವರ್ಯ, ಜಿಜ್ಞಾಸೆ, ಕಲ್ಪಕತೆಗಳು ಬೇರೆಯವರಲ್ಲಿ ವಿರಳವೆಂದೇ ಹೇಳಬಹುದು” (ಜಿ ಎಸ್. ಶಿವರುದ್ರಪ್ಪ, ಪರಿಶೀಲನ), ತಮ್ಮ ಕಾಲದ ಹರಿದಾಸರಿಗಿಂತ ಕೇವಲ ಭಿನ್ನವಾಗಿ ಕೀರ್ತನೆಗಳನ್ನಷ್ಟೇ ರಚಿಸದೆ, ಕಾವ್ಯಗಳ ರಚನೆಯ ಸಾಹಸಕ್ಕೂ ಕೈಹಾಕಿ, ಸಾಕಷ್ಟು ಯಶಸ್ವಿಗಳಾದವರು ಕನಕದಾಸರು. ಅದರಲ್ಲೂ 'ರಾಮಧಾನ್ಯ ಚರಿತ್ರೆ' ಯಂತಹ “ಅನ್ನೋಕಿ' (Allegory) ಪ್ರಕಾರದ ಕಾವ್ಯವನ್ನು ಕನಕದಾಸರು ತಮ್ಮ ಕಾಲದಲ್ಲಿ ಬರೆದರೆಂಬುದನ್ನು ಗಮನಿಸಿದಾಗ ಅವರ ಅನನ್ಯತೆ, ಸ್ಪೋಪಜ್ಞತೆಗಳ ಬಗೆಗೆ ಬೆರಗು ಉಂಟಾಗುತ್ತದೆ. ಇನ್ನೊಂದು ಮಾತೆಂದರೆ ಬದುಕಿನ ಅಗ್ನಿದಿವ್ಯಗಳನ್ನು ಹಾದು ಬಂದ ಕನಕದಾಸರು ಬಹುಶಃ ಕೊನೆಯವರೆಗೂ ಶೋಧಕ ಪ್ರವೃತ್ತಿಯನೂ, ಬಾಳಿನ ನಿಜವನ್ನು ಕುರಿತಾದ 'ಹುಡುಕಾಟದ' ಮನೋಧರ್ಮವನ್ನೂ ಉಳಿಸಿಕೊಂಡೇ ಬಂದಿದ್ದರು. ಅವರು “ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ ?” ಎಂದು ಕೇಳುವ ಪ್ರಶ್ನೆ, “ಬೀಜವೃಕ್ಷದೊಳಾಯ್ತು, ವೃಕ್ಷಕೆ ಬೀಜವಾರಿಂದಾಯ್ತು ?” ಎನ್ನುವ ಮತ್ತೊಂದು ಪ್ರಶ್ನೆ-ಎಲ್ಲವೂ ಅವರ ಚಿಂತನಶೀಲತೆಯನ್ನೂ ಬಾಳಿನ ನಿಗೂಢತೆಯ ಬಗೆಗಿನ ಬೆರಗಿನೆಂದಿಗಿರುವ ಕುತೂಹಲವನ ತೋರಿಸುತ್ತವೆ. (ನೀ ಮಾಯೆಯೊಳಗೋ...' ಕೀರ್ತನೆಯನ್ನು ಓದಿದಾಗ ಆಧುನಿಕರಿಗೆ ಬ್ರೇಕ್ ಕವಿಯ “Tyger” ಪದ್ಯ ನೆನಪಾದರೆ ಆಶ್ಚರ್ಯವಲ್ಲ. ಒಟ್ಟಿನಲ್ಲಿ ಕನಕದಾಸರು ಹರಿದಾಸರಲ್ಲಿ ಕವಿ, ಕವಿಗಳಲಿ ಅನುಭಾವಿ ; ಇದೇ ಅವರ ವಿಶಿಷ್ಟತೆ. ಪಂಚೇಂದ್ರಿಯಗಳ ಮೂಲಕ ದೊರೆಯುವ ಸಂವೇದನೆಯ ದಾರಿಯಲ್ಲಿಯೇ ನಡೆದು, ಅದರಾಚೆಗೆ ಇರುವ ಸತ್ಯಕ್ಕೆ ಕೈಚಾಚಿದವರು ಕನಕರು. 'ಇಹದ ತಳಹದಿಯಿಂದ ದಿಟದ ದರ್ಶನವರಳಿ, ಹಂಬಲಿಸಿ' ಹಾಡಿದ ಹಾಡು ಕನಕರದ್ದು! ... j ಪುರಂದರ ಸಾಹಿತ್ಯದರ್ಶನ-ಸಂಪುಟ ೧ ರಿಂದ ೪ ; ಸಂಪಾದಕರು: ಪ್ರೊ. ಎಸ್. ಕೆ. ರಾಮಚಂದ್ರರಾವ್, ಪ್ರಕಾಶಕರು : ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ಬೆಂಗಳೂರು ಜನಪ್ರಿಯ ಕನಕ ಸಂಪುಟ-ಸಂಪಾದಕರು : ಪ್ರೊ. ದೇ. ಜವರೇಗೌಡರು ಮತ್ತು ಇತರರು ; ಪ್ರಕಾಶಕರು : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು. ಹರಿದಾಸ ಹೃದಯ-ಡಾ. ಜಿ. ವರದರಾಜರಾವ್ ; ಪ್ರಕಾಶಕರು : ಶಾರದಾಮಂದಿರ, ಮೈಸೂರು. ಕರ್ಣಾಟಕದ ಹರಿದಾಸರು-ಡಾ. ಎಚ್. ಕೆ. ವೇದವ್ಯಾಸಾಚಾರ : ಪ್ರಕಾಶಕರು : ಶ್ರೀಪರಿಮಳ ಸಂಶೋಧನ ಮತ್ತು ಪ್ರಕಾಶನ ಮಂದಿರ, ನಂಜನಗೂಡು. - ಕವಿ ಕನಕದಾಸರು-ಕಟ್ಟಿ ಶೇಷಾಚಾರ್ಯ, ಪ್ರಕಾಶಕರು : ಎಸ್. ಜಿ. ಕಟ್ಟಿ, ಬೆಳಗಾವಿ. ಕನಕಕಿರಣ-ಸಂಪಾದಕರು : ಕಾ. ತ. ಚಿಕ್ಕಣ್ಣ ; ಕಾಳಿದಾಸ ಸಾಂಸ್ಕತಿಕ ಸಂಘ, ವಿಜಯನಗರ, ಬೆಂಗಳೂರು. ದಾಸಸಾಹಿತ್ಯದ ಹಾದಿಯಲ್ಲಿ-ವಸಂತ ಕುಷ್ಟಗಿ ; ಶ್ರೀ ಬತ್ತೇರೇಶ ಪ್ರಕಾಶನ, ಕಲ್ಲುರ್ಗಿ. ೮. ಹರಿದಾಸ ಸಾಹಿತ್ಯ ಸಮೀಕ್ಷೆ - ಸಂಪಾದಕರು : ಡಾ | ಜಿ. ವರದರಾಜ ರಾವ್; ಪ್ರಕಾಶಕರು : ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ೯. ವಿಜಯದಾಸರು ಮತ್ತು ಅವರ ಕೃತಿಗಳು-ಎನ್. ಗೋಪಾಲ ಕೃಷ್ಣ ಉಡುಪ ; ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಡಿಸೆಂಬರ್ 62, ಜೂನ್ 63, ಡಿಸೆಂಬರ್ 63. ೧೦. ದಾಸಮಾನಸ-ಪ್ರಕಾಶನ : ಪುರಂದರದಾಸರ ೫೦೦ನೇ ಹುಟ್ಟು ಹಬ್ಬ ಕೀರ್ತನಕಾರರ ಸಮ್ಮೇಳನ ಸಮಿತಿ, ಹಾದಿಗಲ್ಲು, ಶಿವಮೊಗ್ಗ ಜಿಲ್ಲೆ. ೧೧. ಕೀರ್ತನಕಾರರು-ಎಚ್. ಎಸ್. ವೆಂಕಟೇಶಮೂರ್ತಿ, ಪ್ರಕಾಶಕರು ; ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು. J