ಪುಟ:Kanakadasa darshana Vol 1 Pages 561-1028.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೫೬ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು ೯೫೭ ಹನುಮಂತ, ಭೀಮ ಮುಂತಾದವರನ್ನು ಕುರಿತು ಕೀರ್ತನೆಗಳನ್ನು ರಚಿಸಿರವುದಲ್ಲದೆ ಶನೀಶ್ವರ, ಸದಾಶಿವ ಮುಂತಾದವರ ಬಗ್ಗೆಯೂ ಕೀರ್ತನೆಗಳನ್ನು ರಚಿಸಿರುವುದುಂಟು. ಆವ ಬಲವಿದ್ದರೇನು ದೈವಬಲವಿಲ್ಲದವಗೆ ಶ್ರೀವಾಸುದೇವನ ಬಲ ನಿಜವಾಗಿ ಇಲ್ಲದನಕ ಎಂದು ಆರಂಭಿಸಿ ಶಿಶುಪಾಲ, ಹಿರಣ್ಯಾಕ್ಷ, ರಾವಣ, ಬಾಣ ಮುಂತಾದವರಿಗೆ ಈಶ್ವರನ ಬಲವಿದ್ದು ಏನು ತಾನೇ ಪ್ರಯೋಜನವಾಯಿತು. ಅವರೆಲ್ಲ ನಾಶವಾದರೆಂದು ಕನಕದಾಸರು ತಿಳಿಸಿದ್ದಾರೆ. ಪುರಂದರದಾಸರು : ಹೊಯ್ಯಲೊ ಡಂಗುರವ-ಜಗ ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದು || (ಮಾಹಾ ೧೪೩) ಎಂದು ಸಾರಿದರೆ ಕನಕದಾಸರು ಕೊರವಂಜಿಯ ಹಾಡಿನ ರೂಪದಲ್ಲಿ: ಕಣಿಯ ಹೇಳಬಂದೆ ನಾರಾಯಣನಲ್ಲದಿಲ್ಲವೆಂದು ಪ|| ಸಿಕ್ಕ ಬಣಗು ದೈವದ ಗೊಡವೆ ಬೇಡ ನರಕ ತಪ್ಪದು ಅll ಎಂದು ಹೇಳುತ್ತ ಎಕ್ಕನಾತಿ, ಕಾಟ, ಅಕ್ಕಿ, ಬೈರೇದೇವರು, ಮಾರಿ, ಮಸಣಿ, ಚೌಡಿ, ಮೈಲಾರಿ, ಗುತ್ತಿಯ ಎಲ್ಲಮ್ಮ ಮುಂತಾದ ದೇವತೆಗಳನ್ನು ಪೂಜೆಮಾಡಬೇಡಿ, ಕೈಯಲ್ಲಿನ ಹೊನ್ನನ್ನು ಹಣವನ್ನು ಕಳೆದುಕೊಳ್ಳಬೇಡಿ. ಕೋಣ ಕುರಿಗಳ ಬಲಿಕೊಡಬೇಡಿ. ಪೊಳ್ಳುದೈವದ ಗೊಡವೆ ಬೇಡಿ. ಬಾಡದಾದಿಕೇಶವನ ಬಿಡದೆ ಭಜಿಸಿರೊ ಎಂದು ಹೇಳಿದ್ದಾರೆ (ಕ. ಕೀ. ೧೪೨) ಹರಿಸೇವೆ ಮಾಡುವಲ್ಲಿ ಕನಕ-ಪುರಂದರ-ವ್ಯಾಸರಾಯರಂಥ ಜನರು ಇದ್ದುದು ನಿಜವಾದರೂ ಹೊಟ್ಟೆಯ ಪಾಡಿಗಾಗಿ ಡಂಭಕತನಕ್ಕಾಗಿ ನಡೆಸಿದವರೇ ಬಹಳ, ಪುರಂದರ ದಾಸರು ತಮಗೇ ಅನ್ವಯವಾಗುವಂತೆ ರಚಿಸಿದ ಕೀರ್ತನೆಯೊಂದರಲ್ಲಿ : ದಾಸನೆಂತಾಗುವೆನು ಧರೆಯೊಳಗೆ ನಾನು ವಾಸುದೇವನಲಿ ಲೇಶ ಭಕುತಿಯ ಕಾಣೆ ||ಪ|| ಕೀರ್ತನೆಯಲ್ಲಿ ಪಟ್ಟೆನಾಮವ ಬಳೆದು ಪಾತ್ರೆ ಕೈಯಲಿ ಪಿಡಿದು ಗುಟ್ಟಿನಲಿ ರಹಸ್ಯವ ಗುರುತರಿಯದೆ ಕೆಟ್ಟ ಕೂಗನು ಕೂಗಿ ಬಗುಳಿ ಬಾಯಾರುವಂಥ ಹೊಟ್ಟೆಗುಡಮೃಗಗಳೆಲ್ಲ ಶ್ರೀವೈಷ್ಣವರೆ ಕೃಷ್ಣ || ಎಂದು ಪ್ರಶ್ನಿಸಿದ್ದಾರೆ. ಇಂತಹ ಡಾಂಭಿಕರು ನಡೆಸುವ ಪೂಜೆಯನ್ನು ಕುರಿತು ಪುರಂದರದಾಸರು ವಿಡಂಬಿಸುತ್ತ ಇವರು ದೇವರ ಸೇವೆಗಾಗಿ ಪೂಜೆ ಮಾಡುವುದಿಲ್ಲ. ಇವರು ನಡೆಸುವ ಪೂಜೆ ಸ್ವಾರ್ಥಕ್ಕಾಗಿ ಎನ್ನುವುದನ್ನು-ಉದರ ವೈರಾಗ್ಯವಿದು (ಆರ್ತ ೪೬) ಎನ್ನುವ ಕೀರ್ತನೆಯಲ್ಲೂ ಹಸಿವಾಯಿತೇಳು ದೇವರ ತೋಳೆ ಎಂಬರು ಹಸನಾಗಿ ಮನಮುಟ್ಟಿ ಪೂಜೆಯಮಾಡರು (ಲೋಕ ೭೫) ಎನ್ನುವ ಉಗಾಭೋಗದಲ್ಲಿಯೂ ತಿಳಿಸಿದ್ದಾರೆ. ಮಡಿ, ಹೊಲೆ ಮತ್ತು ಕುಲಗಳು ವ್ಯಕ್ತಿಗತವಾಗಿರುತ್ತವೆಯೇ ಹೊರತು ಬೇರಲ್ಲ ಎನ್ನುವ ನಿಲುವು ಇವರದು. ಪುರಂದರದಾಸರು ಈ ಅಭಿಪ್ರಾಯವನ್ನು: ಮಡಿಮಡಿಯೆಂದು ಮುಮಾರು ಹಾರುವೆ ಮಡಿಯಲ್ಲಿ ಬಂದಿತೊ ಬಿಕನಾಶೀ ಪ॥ ಮಡಿಯು ನೀನೆ-ಮೈಲಿಗೆ ನೀನೆ ಸುಡಲಿ ನಿನ್ನ ಮಡಿ ಬಿಕನಾಶಿ ಅ||ಪ(ಲೋಕ ೭೧) | ಎನ್ನುವ ಕೀರ್ತನೆಯಲ್ಲಿ ಬಟ್ಟೆಯನ್ನು ನೀರಲ್ಲಿಟ್ಟು ಒಣಗಿಸಿ ಉಟ್ಟರೆ ಅದು ಮಡಿಯಲ್ಲ, ಹೊಟ್ಟೆಯೊಳಗಿನ ಕಾಮಕ್ರೋಧಗಳ ಬಿಟ್ಟರೆ ಅದು ಮಡಿಯೆಂದು ತಿಳಿಸಿದ್ದಾರೆ. ಗುರುಹಿರಿಯರನ್ನು ಹರಿದಾಸರನ್ನು ನೆನೆದು ಚರಣಕ್ಕೆರಗಿ ಭಯಭಕ್ತಿಯಿಂದ ಪುರಂದರವಿಟ್ಠಲನ ನೆರೆನಂಬುವುದು ಉತ್ತಮ ಮಡಿಯೆಂದಿದ್ದಾರೆ. ಹೀಗೆಯೇ ಹೊಲೆಯೆನ್ನುವುದು ಹೊಲೆಗೇರಿಯಲ್ಲಿಲ್ಲ, ಅವನು ಊರೊಳಗೆ ಇಲ್ಲವೆ ಶಾಸ್ತವಿದರು ಹೇಳಿ ಎಂದಿದ್ದಾರೆ. ಮುಂದುವರೆದು ಕುಲದ ಬಗ್ಗೆ ಹೇಳುವಾಗ-ಆವಕುಲವಾದರೇನು ಭಾವಜ್ಞಾನ ತಿಳಿದವನಿಗೆ ಮತ್ತೆ (ಲೋಕ ೮೯) ಎನ್ನುವ ಭಾವವನ್ನು ವ್ಯಕ್ತಪಡಿಸಿದ್ದಾರೆ. ಕನಕದಾಸರಿಗೆ ಮಡಿ ಅಥವಾ ಹೊಲೆಯೆನ್ನುವ ಮಾತುಗಳಿಗಿಂತ ಕುಲ ಎನ್ನುವ ಮಾತು ಮುಖ್ಯವಾದದ್ದು. ಏಕೆಂದರೆ ಶೂದ್ರವರ್ಗದಲ್ಲಿ ಜನಿಸಿದ ಕನಕದಾಸರು ಮಠೀಯರಿಂದ ತುಂಬ ನೋವನ್ನು ಅನುಭವಿಸಿದಂತೆ ಕಾಣುತ್ತದೆ, ಪುರಂದರದಾಸರು ಕನಕದಾಸರನ್ನು ಕುರಿತು ರಚಿಸಿರುವ ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು ಗೋಟಂಚು ಧೋತರ ಮಡಿಯನುಟ್ಟು ದಾಟುಗಾಲಿಡುತ ನಾ ಧರೆಯೊಳಗೆ ಬರಲೆನ್ನ ಬೂಟಕತನ ನೋಡಿ ಭ್ರಮಿಸದಿರಿ ಜನರೆ || ಲೋಕ ೧೭ || ಎಂದಿದ್ದರೆ ಕನಕದಾಸರು-ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ (ಕ. ಕೀ. ೧೨೬) ಎನ್ನುವ