ಪುಟ:Kanakadasa darshana Vol 1 Pages 561-1028.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೫೮ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು ೯೫೯ ಕನಕದಾಸನ ಮೇಲೆ ದಯಮಾಡಲು ವ್ಯಾಸ ಮುನಿ ಮಠಿಕರೆಲ್ಲರು ದೂರುತಿಹರೊ ||ಪ|| ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು ಧೂರ್ತರಾಗಿದ್ದ ವಿದ್ವಾಂಸರೆಲ್ಲ ಸಾರ್ಥಕವಾಯಿತು ಇವರ ಸನ್ಯಾಸಿತನವೆಲ್ಲ ಪೂರ್ತ್ಯಾಗಲೆಂದು ಯತಿ ನಗುತಲಿಹನು | ಕ. ಕೀ. ೨೩೮) ಎನ್ನುವ ಮಾತು ಮೇಲಿನ ಹೇಳಿಕೆಗೆ ಪೂರಕವಾಗಿ ನಿಲ್ಲುತ್ತದೆ. ಸ್ವಸಾಮರ್ಥ್ಯದಿಂದ, ತಮ್ಮ ಜೀವಿತದಲ್ಲಿ ಸಾಧಿಸಿದ ಅನುಭಾವದಿಂದ ಕನಕದಾಸರು ಗಟ್ಟಿಯಾಗಿ ನಿಂತು ಇದನ್ನೆಲ್ಲ ಸಹಿಸಿದಂತೆ ಕಾಣುತ್ತದೆ. ಕನಕದಾಸರು ಕುಲದ ಬಗ್ಗೆ ಎರಡು ಕೀರ್ತನೆಗಳನ್ನು ರಚಿಸಿದ್ದು : ಕುಲ ಕುಲ ಕುಲವೆನ್ನುತಿಹರು || ಪ || ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ | ಅ ಪ || (ಕ. ಕೀ. ೭೭) ಎನ್ನುವ ಕೀರ್ತನೆಯಲ್ಲಿ ಕೆಸರಿನಲ್ಲಿ ಹುಟ್ಟಿದ ತಾವರೆಯನ್ನು ತಂದು ಬಿಸಜನಾಭನಿಗೆ ಅರ್ಪಿಸಲಿಲ್ಲವೆ ? ಹಸುವಿನ ಮಾಂಸದಲ್ಲಿ ಉತ್ಪತ್ತಿಯಾದ ಹಾಲನ್ನು ಬ್ರಾಹ್ಮಣರು ಊಟಮಾಡಲಿಲ್ಲವೆ ? ಮೃಗಗಳ ಮೈಯಲ್ಲಿ ಹುಟ್ಟಿದ ಕಸ್ತೂರಿಯನ್ನು ಭೂಸುರರು ತೆಗೆದು ಪೂಸುವುದಿಲ್ಲವೆ ? ನಾರಾಯಣ ಯಾವ ಕುಲದವನು ? ಈಶ್ವರ ಯಾವ ಕುಲದವನು ಎಂದು ಪ್ರಶ್ನಿಸುತ್ತ : ಆತ್ಮ ಯಾವ ಕುಲ ಜೀವ ಯಾವ ಕುಲ ತತೇಂದ್ರಿಯಗಳ ಕುಲ ಪೇಳಿರಯ್ಯ ಆತ್ಮಾಂತರಾತ್ಮ ನೆಲೆಯಾದಿ ಕೇಶವ ಆತನೊಲಿದ ಮೇಲೆ ಯಾತರ ಕುಲವಯ್ಯ || ಎಂದಿದ್ದಾರೆ. ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ (ಕ.ಕೀ. ೧೬೨) ಎನ್ನುವ ಕೀರ್ತನೆಯಲ್ಲಿ ಕಾಗಿನೆಲೆಯಾದಿಕೇಶವರಾಯನ ಚರಣ ಕಮಲವ ಕೀರ್ತಿಸುವನೆ ಕುಲಜ ಎನ್ನುವ ನಿಲುವನ್ನು ತಾಳಿದ್ದಾರೆ. ಇವರ ಕುಲವನ್ನು ಪ್ರಶ್ನಿಸಿದವರಿಗೆ, ಕುರಿತು ಮಾತನಾಡಿದವರಿಗೆ ಏಕಾಂತದಲ್ಲಿ ಬಾಳೆಯ ಹಣ್ಣನ್ನು ತಿನ್ನುವ ಪ್ರಸಂಗ, ಈತನೀಗ ವಾಸುದೇವನು ಎಂದು ಹೇಳಿ ವ್ಯಾಸರಾಯರ ಕೈಯಲ್ಲಿದ್ದ ಸಾಲಿಗ್ರಾಮವನ್ನು ಕುರಿತ ಪ್ರಸಂಗ, ವೈಕುಂಠಕ್ಕೆ ಯಾರು ಹೋಗಬಹುದು ಎಂದು ವ್ಯಾಸರಾಯರು ಪ್ರಶ್ನಿಸಿದಾಗ ನಾನು ಹೋದರೆ ಹೋಗಬಹುದು ಎಂದು ಉತ್ತರಿಸಿದ ಪ್ರಸಂಗಗಳು ಪೇಚನ್ನುಂಟುಮಾಡಿರಲು ಸಾಕು. ಭಕ್ತಿಸಾಧನೆಯಲ್ಲಿ ಪೂಜೆಗೆ ತೊಡಗಿದ ದಾಸರು ಶ್ರೀಹರಿಗೆ ಸೋಪಚಾರ ಪೂಜೆಯನ್ನು ನಡೆಸುವುದುಂಟು. ಪುರಂದರದಾಸರು ಜನ್ಮತಃ ಬ್ರಾಹ್ಮಣರಾಗಿದ್ದು ಷೋಡಶೋಪಚಾರ ಪೂಜೆಯನ್ನು ನಡೆಸುತ್ತಾರೆ. ಮಾನಿನಿ ಸಿರಿಯರಸ ನಿನ್ನ ನಾಮವನ್ನೆ ನೆನೆವೆನಯ್ಯ (ಪೂಜಾ ೧೨೨), ಎಂತು ನಿನ್ನ ಪೂಜೆ ಮಾಡಿ ಪೂಜಿಸುವೆನೋ (೧೨೩), ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನ ನಾಗಶಯನ (೧೨೪). ಒಲ್ಲನೋ ಹರಿ ಕೊಳ್ಳನೋ ಎಲ್ಲ ಸಾಧನವಿದ್ದು ತುಲಸಿ ಇಲ್ಲದ ಪೂಜೆ (೧೨೫) ಧೂಪಾರತಿಯ ನೋಡುವ ಬನ್ನಿ-ನಮ್ಮ ಗೋಪಾಲಕೃಷ್ಣನ ಪೂಜೆಯ ಸಮಯದಿ (೧೨೬), ಏಕಾರತಿಯನೆತ್ತುವ ಬನ್ನಿ (೧೨೭), ನೈವೇದ್ಯವ ಕೊಳ್ಳೋ ನಾರಾಯಣಸ್ವಾಮಿ ದಿವ್ಯ ಹೂಡುರಸಾನ್ನವನಿಟ್ಟೆನೆ (೧೨೮), ಫಲಾಹಾರವನು ಮಾಡೋ ಪರಮ ಪುರುಷ (೧೩೧), ಹೀಗೆ ಪೂಜಾಕೈಂಕರ್ಯವನ್ನು ಸಾಂಗವಾಗಿ ವರ್ಣಿಸಿದ್ದಾರೆ. ಕನಕದಾಸರಲ್ಲಿಯಾದರೋ ಈ ಬಗೆಯ ಭಾವನೆಗಳನ್ನುಳ್ಳ ಕೀರ್ತನೆಗಳಿಲ್ಲ. ಅವರಲ್ಲಿ : ಭಜಿಸಿ ಬದುಕೆಲೊ ಮಾನವ ಅಜಭವೇಂದ್ರಾದಿಗಳು ವಂದಿಸುವ ಪಾದವನು || (ಕ. ಕೀ. ೨೯)

ನಾರಾಯಣ ಎನ್ನಿ ನಾರದವರದನ ನಾರಾಯಣ ಎನ್ನಿರೊ ವೇದ ಪಾರಾಯಣನಾಗಿ ಕರಿಯ ಕಾಯ್ತಾತನ ನಾರಾಯಣ ಎನ್ನಿರೋ | (ಕ. ಕೀ. ೨೭) ಎನ್ನುವಂತಹ ರಚನೆಗಳು ಕಂಡುಬರುತ್ತವೆ. ಪುರಂದರದಾಸರು ಸಿರಿಲೋಲನ ನೆನೆಕಾಣೋ ನಾಲಗೆ (ಪೂಜಾ ೮೧), ಗೋವಿಂದನ ನಾಮವ ಮರೆಯದಿರಿರೊ (ಪೂಜಾ ೮೨), ಶ್ರೀ ನರಹರಿ ನಾರಾಯಣ ಎನ್ನಿರೊ (ಪೂಜಾ ೮೩) ಎಂದರೆ ಕನಕದಾಸರು ಮುಂದುವರಿದು-ಎಂತಹುದೊ ನಿನ್ನಯ ಭಕುತಿ ಎನಗೆ ಶ್ರೀಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ (ಕ. ಕೀ, ೪೦) ಎಂದು ತಮ್ಮ ಅಳಲನ್ನು ತೋಡಿಕೊಂಡಿರುವುದಲ್ಲದೆ ಮನುಜಸೇವೆಯನ್ನು ಮಾಡಿ ದಣಿದು ನೊಂದೆ ಲೋಕದೊಡೆಯ ರಂಗರಾಯ ನಿನ್ನ ಪಾದಭಜನೆ ಬೇಕು ಎಂದು ಆರ್ತರಾಗಿ ಬೇಡಿಕೊಂಡಿದ್ದಾರೆ. ಭಗವಂತನನ್ನು ಪೂಜಿಸುವಾಗ ವಾತ್ಸಲ್ಯಭಾವದಿಂದ ಪುರಂದರ ಕನಕರು