ಪುಟ:Kanakadasa darshana Vol 1 Pages 561-1028.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೬೦ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು ೯೬೧ ಪೂಜಿಸಿದ್ದಾರೆ, ಭಗವಂತನನ್ನು ಕುರಿತು ಇಬ್ಬರೂ ಮಗುವೆಂದು ಭಾವಿಸಿ ಲಾಲಿಪದ ಜೋಗುಳದ ಹಾಡುಗಳನ್ನು ರಚಿಸಿದ್ದಾರೆ. ಪುರಂದರದಾಸರುಲಾಲಿ ಲಾಲಿ ನಮ್ಮ ಹರಿಯೆ ಲಾಲಿ ಸುರನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ (ಪೂಜಾ ೧೬೪) ಎನ್ನುವ ಕೀರ್ತನೆಯಲ್ಲಿ ದಶಾವತಾರವನ್ನು ವಸ್ತುವಾಗಿಟ್ಟುಕೊಂಡು ಭಗವಂತನನ್ನು ಸ್ತುತಿಸಿದ್ದಾರೆ. ದೇವಕಿಯುದರಸಂಜಾತನೆ ತ್ರುವಿ ಕಾಮನಪಿತ ಕಮಲಾಕ್ಷನೆ ತ್ರುವಿ (ಪೂಜಾ ೬೫) ಎಂದೂ ಮುಂದಿನ ಚರಣದಲ್ಲಿ ಮಧುರೆಯೊಳುದಿಸಿದ ಮಹಿಮನೆ ಜೋ ಜೋ ಮುಂತಾಗಿ ಕೃಷ್ಣನ ದಶಾವತಾರ ಮತ್ತು ವಿಷ್ಣುವಿನ ಲೀಲೆಗಳನ್ನು ಕುರಿತು ಹಾಡಿದ್ದುಂಟು. ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ (ಪೂಜಾ ೧೬೬) ಎಂದು ತೂಗಿದುದುಂಟು, ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ ಎಂದು ಆಡಿಸಿದುದುಂಟು. ಕನಕದಾಸರು ಲಾಲಿ ಪಾವನಚರಣ ಲಾಲಿ ಅಘಹರಣ ಲಾಲಿ ವೆಂಕಟರಮಣ ಲಲಿತ ಕಲ್ಯಾಣ (ಕ, ಕೀ. ೨೩೬) ಮುಂತಾಗಿ ಹಾಡಿದ್ದಾರೆ. - ಭಕ್ತ ಭಗವಂತನಲ್ಲಿ ಸತಿಪತಿ ಭಾವ ಮತ್ತೊಂದು ಘಟ್ಟ, ಪುರಂದರ ಮತ್ತು ಕನಕದಾಸರಲ್ಲಿ ಈ ಬಗೆಯ ರಚನೆಗಳು ಸಾಕಷ್ಟು ಸಿಗುತ್ತವೆ. ಮನಸು ನಿನ್ನ ಮೇಲೆ ಬಹಳ ಕಾಲ ಅನುಕೂಲಿಸದೆ ಗೋಪಾಲ || ಪ || ನಿನ ಕೂಡೆ ಈಗ ಕೂಡುವೆನೆಂದರೆ ಮನೆ ಜನರೆಲ್ಲರು ಕೂಡಲೀಸರೊ ಕೃಷ್ಣ ||ಅ.ಪ|| (ಕೃಷ್ಣ, ೮೩) ಎಂದು ಪುರಂದರದಾಸರು ಹಾಡಿದ್ದರೆ ಕನಕದಾಸರು ತೋರೆ ಬೇಗನೆ ಸಖಿ ತೋರಮುತ್ತಿನಹಾರ ಭಾರವಾಗಿದೆ ಎನಗೆ || (ಕ. ಕೀ. ೭೯) | ಇರಲಾಗುವುದಿಲ್ಲವೆಂದ ಗೋಪಿಯರೇ ಕೃಷ್ಣನು ಬಿಲ್ಲಹಬ್ಬಕ್ಕೆ ಮಧುರೆಗೆ ಹೊರಟುನಿಂತಾಗ ಪರಿಪರಿಯಿಂದ ಗೋಳಾಡಿದುದುಂಟು. ಈ ರೀತಿ ಅನೇಕ ಬಗೆಯ ಕೀರ್ತನೆಗಳನ್ನು ರಚಿಸಿದ ದಾಸರು ತಮ್ಮ ಕೀರ್ತನೆಗಳಲ್ಲಿ ವಾವಪದಗಳನ್ನು ರಚಿಸಿದ್ದುಂಟು. 'ವಾವೆಯೆಲ್ಲಿಹುದಯ್ಯ ವೈಕುಂಠಪತಿಗೆ ದೇವ ಭಾರ್ಗವನಾಗಿ ಮಾತೆಯ ಶಿರವ ಕಡಿದ' (ಮಾಹಾ ೧೦೦) ಎನ್ನುವಲ್ಲಿ ಪರಶುರಾಮನು ತನ್ನ ತಾಯಿಯ ಶಿರವನ್ನು ಕಡಿದ ಪ್ರಸಂಗ ಉಲ್ಲೇಖವಾಗಿದೆ. ಕೃಷ್ಣನನ್ನು ವಾವೆಯಿಂದ ಸ್ತುತಿಸಿದ ಕೀರ್ತನೆಯೊಂದು ಹೀಗಿದೆ: ಅತ್ತೆಯ ವರಿಸಿಯೆ ಮತ್ತೆ ಅಳಿಯಗಾದ ಪುತ್ರಿಯ ತಂದವನ ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ ನಿತ್ಯದೊಳಿರುತಿಪ್ಪನ ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ ಪುತ್ರನೆಂದೆನಿಸಿದನ ಹತ್ತಿರ ಕರೆದೊಯ್ದು ಪುರಂದರ ವಿಠಲನ ನಿತ್ಯ ತೋರೆನಗೆ || (ಮಾಹಾ ೮೫) ಎಂದಿದ್ದಾರೆ. ಬಾರೊ ಮುನಿಸೇತಕೆ ಭಾವಜನಯ್ಯ (ಕೃಷ್ಣ ೮೫) ಎನ್ನುವ ಕೀರ್ತನೆಯು ಗೋಪಿಯೊಬ್ಬಳು ಮುನಿದ ಕೃಷ್ಣನನ್ನು ಸಂತೈಸುವ ಭಾವದಲ್ಲಿ ರಚಿತವಾಗಿದ್ದು ಹೀಗೆ ಮುಂದುವರೆದಿದೆ. ಇಲ್ಲಿನ ಯಾವುದೇ ಸಂಬಂಧವನ್ನು ತೆಗೆದುಕೊಂಡರೂ ಕೃಷ್ಣನಿಗೆ ಅನ್ವಯವಾಗುವಂತಿದ್ದು ಹೀಗಿದೆ : ಮಾವನಳಿಯನೆ ಬಾರೊ ಭಾವತನಯನೆ ಬಾರೋ ಮಾವನ ಮಡದಿಯ ಮಗಳಸೊಸೆಯಗಂಡ || ೧ || ಅತ್ತಿಗೆ ಮೈದುನನೆ ಬಾರೊ ಅತ್ತಿಗೆಯ ಮಗಳಗಂಡ ಮತ್ತೆ ಮೇಲೆ ಅತ್ತಿಗೆಯ ಮಗಳ ಮುದ್ದಾಡುತ || ೨ || ಅಂಬುಜನಯನನೆ ಬಾರೊ ಆದಿಮೂಲನೆ ಬಾರೋ ಕಂಬದಿಂದೊಡೆದು ಬಂದ ಪುರಂದರವಿಠಲಯ್ಯ || ೩ || ಕನಕದಾಸರಲ್ಲಿಯೂ ಈ ಬಗೆಯ ವಾವಪದಗಳ ರಚನೆ ಕಂಡುಬರುತ್ತದೆ. ಗೋಪಿಯರು ವಿರಹಪೀಡಿತರಾಗಿ ಕೃಷ್ಣನನ್ನು ಹಂಬಲಿಸಿದ ಸಂದರ್ಭದಲ್ಲಿ ಇವು ಬರುವುದುಂಟು. ಇಲ್ಲೆಲ್ಲ ಶೃಂಗಾರರಸ ಪ್ರಧಾನವಾಗಿರುತ್ತದೆ. ರಂಗಬಾರೋ ರಂಗಯ್ಯ ಬಾರೋ || ಪ || (ಕ. ಕೀ. ೧೧೦) ಎನ್ನುವ ಕೀರ್ತನೆಯಲ್ಲಿನೀ ಬಾರದಿದ್ದರೆ ಎನ್ನ ಪ್ರಾಣವುಳಿಯದೋ ಎಂದು ವಿರಹದಗ್ಗಳಾದ ಗೋಪಿಕಾಸ್ತ್ರೀಯೊಬ್ಬಳು ಆದಿಕೇಶವರಾಯನನ್ನು ಸಂಬೋಧಿಸಿ ಹೀಗೆ ಆಹ್ವಾನಿಸುತ್ತಾಳೆ : ಇಂದು ನೀ ಕರೆದುತಾರೆ ಸಖಿಯೆ ಶ್ರೀ ಗೋ ವಿಂದನ ಮುನಿಯುವಾರೆ || (ಕ. ಕೀ. ೭೫) ಎಂದು ಹಾಡಿದ್ದಾರೆ. ಇವರ ಕೀರ್ತನೆಗಳಲ್ಲಿ ವಿಪ್ರಲಂಭ ಶೃಂಗಾರ ವಿರುವಂತೆಯೇ ಸಂಭೋಗಶೃಂಗಾರವೂ ಉಂಟು. ಆದರೆ ಅವು ಭಕ್ತ ಭಗವಂತನ ಸತಿಪತಿ ಭಾವವಾದುದರಿಂದ ದೈವೀಪರಿಸರದಲ್ಲಿರುವುದರಿಂದ ಯಾವ ಬಗೆಯ ಜುಗುಪ್ಪೆಯನ್ನು ಉಂಟುಮಾಡುವುದಿಲ್ಲ. ಕೃಷ್ಣನ ತುಂಟತನದಿಂದ ಗೋಕುಲದಲ್ಲಿ