ಪುಟ:Kanakadasa darshana Vol 1 Pages 561-1028.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯ ೨ ಕನಕ ಸಾಹಿತ್ಯ ದರ್ಶನ-೧ ಕನಕ ಮತ್ತು ಪುರಂದರರ ಕೀರ್ತನೆಗಳು ೯೬೩ ಅತ್ತಿಗೆ ಮೈದುನ ಬಾರೊ ಅತ್ತೆಯ ಮಗಳ ಗಂಡ ಅತ್ತಿಗೆ ಮೇಲತ್ತಿಗೆಯ ನಾದಿನಿ ಸೊಸೆಯಗಂಡ || ೧ || ಮಾವನ ಅಳಿಯ ಬಾರೋ ಮಾವನ ಬೀಗನ ತನುಜ ಮಾವನ ಮಡದಿಯ ಮಗಳ ತಂಗಿಯ ಗಂಡ || ೨ || ಹೀಗೆ ಯಾವುದೇ ಕೋನದಿಂದ ನೋಡಿದರೂ ವಾವೆ ವರಸೆಗಳು ಒಂದಕ್ಕೊಂದು ಪೂರಕವಾಗಿ ನಿಂತು ಒಂದೇ ಗುರಿಯುತ್ತ ಸಾಗುವುದನ್ನು ಕಾಣಬಹುದು. ಬಾ ರಂಗ ಎನ್ನ ಮನಕೆ ಭಾವಜನಯ್ಯ (ಕ, ಕೀ. ೧೯೫) ಮರೆಯದೆ ನೆನೆ ಚಿನ್ನಯನ (ಕ, ಕೀ. ೧೯೭) ಮುಂತಾದ ವಾವಪದಗಳು ಆನಂತರದ ಸಾಹಿತ್ಯದಲ್ಲಿ ಪುಂಖಾನುಪುಂಖವಾಗಿ ರಚಿತವಾಗಿವೆ. ಪುರಂದರ ಮತ್ತು ಕನಕರ ಕೀರ್ತನೆಗಳಲ್ಲಿ ಸಮಸ್ಯಾಪೂರ್ಣವಾದ ಅನೇಕ ರಚನೆಗಳನ್ನು ಕಾಣಬಹುದಾಗಿದೆ. ಕನಕದಾಸರು ಇಂತಹ ರಚನೆಗಳನ್ನು ಮುಂಡಿಗೆ (ಕ. ಕೀ, ೨೨೦) ಬೆಡಗು (ಕ. ಕೀ, ೨೧೬), ಉಭಯಾರ್ಥ (ಕ. ಕೀ. ೨೨೩), ನುಡಿಕೆ (ಕ, ಕೀ. ೨೧೮), ಎನ್ನುವ ಹೆಸರುಗಳಿಂದ ಕರೆದಿದ್ದಾರೆ. ದಶಾವತಾರ, ಕೃಷ್ಣಲೀಲೆ, ಜೀವದ ಸ್ವರೂಪ, ಸೃಷ್ಟಿ ರಹಸ್ಯ ಮುಂತಾದ ಸಂಗತಿಗಳು ಈ ಬಗೆಯ ಕೀರ್ತನೆಗಳಲ್ಲಿ ಎಡೆಪಡೆದಿವೆ. ಕನಕ-ಪುರಂದರರ ಈ ಬಗೆಯ ಕೀರ್ತನೆಗಳಲ್ಲಿ : ಭೂಮಿ ಆಕಾಶ ಪೊತ್ತೊ ಆಕಾಶ ಭೂಮಿಯ ಪೊತ್ತೊ ಭೂಮಿಯು ಮುಂದೊ ಆಕಾಶ ಮುಂದೊ ಸ್ವಾಮಿ ||೧|| ಹೋಗಿವೆ. ಇಂದಿನ ಪೀಳಿಗೆಗೆ ಇವು ಕಬ್ಬಿಣದ ಕಡಲೆಗಳಾಗಿದ್ದರೂ ಇವುಗಳನ್ನು ಅರ್ಥಮಾಡಿಕೊಳ್ಳಬಲ್ಲ ವ್ಯಾಖ್ಯಾನಿಸಬಲ್ಲ ಪರಂಪರೆಯೊಂದು ಕರ್ನಾಟಕದಲ್ಲಿದ್ದಿ ತೆಂದು ಭಾವಿಸಬಹುದಾಗಿದೆ. ನಮ್ಮ ಪರಂಪರೆಯಲ್ಲಿ ಪುನರ್ಜನ್ಮದ ನಂಬಿಕೆ ಉಳಿದು ಬೆಳೆದುಬಂದಿದೆ. ಈ ಜನ್ಮದ ಎಲ್ಲ ಸಂಗತಿಗಳಿಗೂ ಕರ್ಮ ಕಾರಣವಾದುದೆಂದು ಭಾವಿಸುವವರಿದ್ದಾರೆ. ಇಂದಿಗೂ ಪ್ರಾಕ್ತನ ಕರ್ಮ, ಪೂರ್ವಕರ್ಮ, ಹಣೆಬರೆಹ, ವಿಧಿಬರೆದ ಬರೆಹ ಮುಂತಾದ ಮಾತುಗಳಿವೆ ಆ ಸಿದ್ದಾಂತವನ್ನು ಕನಕ-ಪುರಂದರರು ಕೂಡ ಒಪ್ಪಿಕೊಂಡಿದ್ದಾರೆ. ಪುರಂದರದಾಸರು-ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೋ ದೇವಾ (ಆರ್ತ ೩೧), ಆರೇನ ಮಾಡುವರು ಆರಿಂದಲೇನಹುದು ಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು (ಆರ್ತ ೩೦), ಆರೇನ ಮಾಡುವರು ಭುವನದೊಳಗೆ ಪೂರ್ವ ಜನ್ಮದ ಕರ್ಮ ಪಣೆಯಲ್ಲಿ ಬರೆದುದಕೆ (ಆರ್ತ ೨೭)-ಮುಂತಾದ ಕೀರ್ತನೆಗಳಲ್ಲಿ ಈ ಬಗ್ಗೆ ಅವರಿಗಿರುವ ಮನೋಧರ್ಮವನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಕನಕದಾಸರು ಕೂಡ-ಆರಿಗಾದರು ಪೂರ್ವಕರ್ಮ ಬಿಡದು ಅಜಭವಾದಿಗಳ ಕಾಡುತಿಹುದು (ಕ.ಕೀ. ೪೯), ತನ್ನ ಪ್ರಾಪ್ತಿಯ ಫಲವ ತಾನರಿಯದೆ ಇನ್ನು ನುಡಿವುದು ಮೂರ್ಖತನವಲ್ಲವೆ (ಕ.ಕೀ. ೫೪) ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನೆಲ್ಲವನ್ನುಂಡು ತೀರಿಸಬೇಕು ಹರಿಯೇ (ಕ.ಕೀ. ೬೪) ಮುಂತಾದ ಕೀರ್ತನೆಗಳಲ್ಲಿ ಹಿಂದಿನ ಜನ್ಮದ ಫಲದಿಂದ ಹೀಗಾಯಿತು ಎಂದು ಹೇಳಿದ್ದಾರೆ. ಮುಂದಿನ ಜನ್ಮದ ಒಳಿತಿಗಾಗಿ ಈ ಜನ್ಮದಲ್ಲಿ ಸದಾಚಾರದಲ್ಲಿ ನಡೆ, ಧಾನಧರ್ಮಗಳನ್ನು ಮಾಡು, ಹರಿನಾಮಸಂಕೀರ್ತನೆ ಮಾಡು, ದಾಸರ ದಾಸನೆಂದೆನಿಸಿಕೋ ಎನ್ನುವಂತಹ ಸದಾಚಾರದ ಮಾತುಗಳನ್ನು ದಾಸರುಗಳೂ ಆಡಿದ್ದಾರೆ. ಪುರಂದರದಾಸರದಾನವೇ ಭೂಷಣವು ಎರಡು ಹಸ್ತಗಳಿಗೆ ಮಾನವೇ ಭೂಷಣವು ಮಾನವರಿಗೆ (ಆರ್ತ ೧೫೧-೨), ಅರ್ಥವಾರಿಗೆ ಪುತ್ರರಾರಿಗೆ ಮಿತ್ರ ಬಾಂಧವರಾರಿಗೆ ಕರ್ತುಯಮನವರೆಳೆದು ಒಯ್ಯಲು ಅರ್ಥಪುತ್ರರು ಕಾಯ್ದರೆ, ಮಂಚ ಬಾರದು ಮಡದಿ ಬಾರಳು ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿರಿ ಧರ್ಮವ (ಆರ್ತ ೪೪-೧, ೨) ಎನ್ನುವ ಮಾತುಗಳಿಗೆ ಸಂವಾದಿಯಾಗಿ ಕನಕದಾಸರು ಏನು ಬರುವುದೋ ಸಂಗಡೇನು ಬರುವುದೋ ||ಪ|| ದಾನಧರ್ಮ ಮಾಡಿ ಬಹುನಿಧಾನಿಯೆನಿಸಿಕೊಳ್ಳೋ ಮನುಜ (ಕ.ಕೀ.೬೬) ಬೀಜವೃಕ್ಷವು ಪೊತ್ತೊ ವೃಕ್ಷ ಬೀಜವು ಪೊತ್ತೊ ಬೀಜವು ಮುಂದೆ ವೃಕ್ಷವು ಮುಂದೆ ಸ್ವಾಮಿ|| (ಕ.ಕೀ. ೨೧೪-೩) ಮುಂತಾದ ಸಾರ್ವಕಾಲಿಕ ಸೃಷ್ಟಿರಹಸ್ಯದ ಸಮಸ್ಯೆಗಳಿರುವಂತೆಯೇ ಪುರಂದರದಾಸರ ಸುಲಭವಲ್ಲವೊ ಮಹಾನಂದ ತನ್ನೊಳಗೆ ತಿಳಿಯಬೇಕು ಗುರುದಯದಿಂದ (ಸಂಕೀರ್ಣ ೯೩) ಬಲ್ಲವನಾದರೆ ಈ ತಳ್ಳಿಬೇಡ ಅಲ್ಲದ ಪಥ ಇದರಾಸೆಯ ಬಿಡು (ಸಂಕೀರ್ಣ ೯೮ ಮತ್ತು ೯೫-೧೦೧) ಮುಂತಾದ ಕೀರ್ತನೆಗಳು ಕನಕದಾಸರ ಮುಂಡಿಗೆಗಳಿಗೆ ಸಮಾನಾಂತರವಾಗಿದ್ದು ವೇದಾಂತಬೋಧೆಯನ್ನು ಅತ್ಯಂತ ಕುತೂಹಲಕರವಾಗಿ ನಡೆಸಿಕೊಂಡು