ಪುಟ:Kanakadasa darshana Vol 1 Pages 561-1028.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೭೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೭೧ ತಾಳ-ಆಟ ಸಂಶಯಕ್ಕೆ ಎಡೆಯಿದೆ. ಕೀರ್ತನ ಸಾಹಿತ್ಯ ತಜ್ಞರು ಈ ವಿಚಾರವಾಗಿ ಇನ್ನಷ್ಟು ಕೂಲಂಕಷವಾಗಿ ಅಭ್ಯಸಿಸಬೇಕಾದ ಅಗತ್ಯವಿದೆ. ಈಗ ತಕ್ಷಣಕ್ಕೆ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾದ ಕೆಲವು ಸಮಾನ ಕೀರ್ತನೆಗಳನ್ನಷ್ಟೇ ಇಲ್ಲಿ ಕೆಳಗೆ ಉದಾಹರಿಸಿದ್ದೇನೆ : 1. ರಾಗ-ಮಧ್ಯಮಾವತಿ ಆರು ಸಂಗಡ ಬಾಹೋರಿಲ್ಲ-ಸಿರಿ ನಾರಾಯಣನ ಸ್ಮರಣೆ ನೆರೆ ಬಾಹೋದಲ್ಲದೆ ಹೊತ್ತು ನವಮಾಸ ಪರ್ಯಂತ ಗರ್ಭದೊಳು ಅತ್ಯಂತ ನೋವು ಬೇನೆಗಳಿಂದಲಿ ಹೆತ್ತು ತುಪ್ಪವನಿಕ್ಕಿ ಸಲಹಿದ ತಾಯ್ತಂದೆ ಅತ್ತು ಕರೆದುಳಿವರು ಮತ್ತೆ ಬೆನ್ನಲಿ ಬಾಹರೆ || ೧ || |ಪ|| ದಿವ್ಯನಾಮ (ಪು. 202) ಮತ್ತು ಸಾಕು ಸಾಕು ಮನುಜ ಸೇವೆಯು (ಪು. 47) ಎಂಬ ಕನಕದಾಸರ ಹಾಡುಗಳು ಪುರಂದರರ ಮರೆವರೇನೋ ಹರಿಯಾ (ಪು. 153), ಸ್ಮರಣೆ ಒಂದೇ ಸಾಲದೆ ಗೋವಿಂದನ (ಪು. 30), ಸಾಕು ಸಾಕಿನ್ನು ಸಂಸಾರ ಸುಖವು (ಪು. 53)-ಎಂಬುದನ್ನು ಫಕ್ಕನೆ ಜ್ಞಾಪಿಸುತ್ತವೆ. ಆದರೆ ಇವನ್ನು ಅಕ್ಕಪಕ್ಕ ತಕ್ಕಡಿಯ ತಟ್ಟೆಯಲ್ಲಿಟ್ಟು ತೂಗಿದರೆ ರಚನಾತ್ಮಕ ಅಂತರಗಳಿರುವುದು ವೇದ್ಯವಾಗುತ್ತದೆ. ಆದುದರಿಂದ, ಇದುವರೆಗೆ ಹೆಸರಿಸಿ ಸಮೀಕ್ಷಿಸಿದಂಥ ಇನ್ನೂ ಹತ್ತಾರು ಹಾಡುಗಳಲ್ಲಿರುವ, ಸಾದೃಶ್ಯ-ವೈದೃಶ್ಯಗಳು ನಮ್ಮನ್ನು ಯಾವ ನಿಶ್ವಯದ ನೆಲೆಗೂ ತಲುಪಿಸುವುದಿಲ್ಲ. ಇವುಗಳನ್ನು ಹಿಡಿದು ನಡೆಸುವ ಜಿಜ್ಞಾಸೆಯಿಂದ ಕೈಗೊಳ್ಳಬಹುದಾದ ಯಾವುದೇ ತೀರ್ಮಾನ, ತೀರ ಏಕಪಕ್ಷೀಯವಾಗಿ, ಅಪಾಯಕಾರಿಯಾಗಬಹುದು, ಅದಕ್ಕಾಗಿ ಇಂಥ ಸಡಿಲ ನಿದರ್ಶನಗಳನ್ನು ತಾತ್ಕಾಲಿಕವಾಗಿ ಕೈ ಬಿಟ್ಟು, ಇನ್ನೂ ಗಟ್ಟಿಯಾದ ಆಧಾರಗಳನ್ನು ಹುಡುಕ ಬೇಕಾಗುತ್ತದೆ. ಸ್ವಾರಸ್ಯವೆಂದರೆ ಅಂಥ ಪ್ರಬಲ ಆಧಾರಗಳೂ ಪರಾಮರ್ಶೆಗೆ ದೊರೆತಿವೆ. ಆ ಬಗೆಯ ಏಕಮೂಲ ನಿಷ್ಪನ್ನ ಕೀರ್ತನೆಗಳ ವಿಶ್ಲೇಷಣೆಗೆ ತೊಡಗುವ ಮೊದಲು, ಇಲ್ಲಿಯೇ ಉಲ್ಲೇಖಿಸಿ ವಿವರಿಸಬೇಕಾದ ಇನ್ನೊಂದು ವಿಚಾರವಿದೆ. ಕನಕದಾಸರ 'ದೇವಿ ನಮ್ಮ ದ್ಯಾವರು ಬಂದರು ಬನ್ನಿರೆ' (ಪು. 85) ಎಂಬುದೂ ಪುರಂದರರ `ದೇವ ಬಂದ ನಮ್ಮ ಸ್ವಾಮಿ ಬಂದಾನೊ' (ಪು. 81) ಎಂಬುದೂ ಒಂದೇ ಮೂಲದಿಂದ ಬಂದ ಕಲ್ಪನೆಯೊಂದರ ಎರಡು ಕವಲುಗಳು. ಒಂದರಲ್ಲಿ ಕನ್ನಡ ಮಾತುಗಳೊಳಗೆ ಹತ್ತು ಅವತಾರಗಳ ಕಂಡರಣೆ ; ಇನ್ನೊಂದರಲ್ಲಿ ಸಂಸ್ಕೃತ ಶಬ್ದಗಳ ಬಳಕೆಯಿಂದ ದಶಾವತಾರದ ಪ್ರಸ್ತಾಪ-ಇಷ್ಟೇ ವ್ಯತ್ಯಾಸ. ಇವೆರಡೂ ಹಾಡುಗಳ ಜೀವನಾಡಿ ಹಿಡಿದು ನೋಡಿದರೆ, ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿರುವ ರೀತಿಯನ್ನು ಪೃಥಕ್ಕರಿಸಿದರೆ, ಯಾವುದೋ ಒಂದು ಇನ್ನೊಂದಕ್ಕೆ ಆಕರವಾಗಿರುವ ಸಾಧ್ಯತೆಯನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. [ಪುಟಗಳ ಸಂಖ್ಯೆ ಪರಿಮಿತಿಯಲ್ಲಿರಲೆಂಬ ಕಾರಣಕ್ಕಾಗಿ ಈ ಎರಡು ಕೀರ್ತನೆಗಳನ್ನೂ, ಇದುವರೆಗೆ ಪ್ರಸ್ತಾಪಿಸಿದ ಯಾವೊಂದು ಹಾಡನ್ನೂ ಇಲ್ಲಿ ಉದಾಹರಿಸದೆ ಕೇವಲ ಅವು ಅಚ್ಚಾಗಿರುವ ಪುಸ್ತಕಗಳ ಪುಟಸಂಖ್ಯೆಯನ್ನು ನಮೂದಿಸಿದ್ದೇನೆ. ಕನಕದಾಸರಲ್ಲಿ ಕನ್ನಡ ನುಡಿಯ ಹಾಗೂ ದೇಸಿಯ ಚೆಲುವು ಸೂಸಾಡಿದೆ : ಇದನ್ನು ಶಿಷ್ಟದ ಎರಕಕ್ಕೆ ಹಾಕಿ ತೆಗೆದ ಪರಿಷ್ಕಾರ ರೂಪ ಆಮೇಲೆ ರೂಪಗೊಂಡಿರಬಹುದೆಂಬ ಮನೆಮಕ್ಕಳಿವರೆನ್ನ ತನುವಿಗೊಡೆಯರೆಂದು ಘನವಾಗಿ ಬಲು ನಂಬಿ ನೆಚ್ಚುತಿಹರು ಅನುಮಾನವಾಗಿ ಜೀವನ ತೋಳಲಿದಾಕ್ಷಣದಿ ಮನೆಯೊಳೊಂದರಗ ಸುತ್ತ ಮುತ್ತಲು ಕುಳಿತಿದ್ದ ಬಂಧುಜನರು ಹೊತ್ತು ಹೋಯಿತೇಳಿರೇಳೆಂಬರು ಒತ್ತಿದ ಕಸಕಿಂತ ಕಡುಕಷ್ಟದೀ ದೇಹ ಹೊತ್ತೊಯ್ದು ಅಗ್ನಿಯೊಳು ಬಿಸುಟಿ ಬಾಹರೊ || ೩ || ಧರೆಮಿತ್ರ ಬುಧಜನರ ಅಗ್ನಿಸಾಕ್ಷಿಯ ಮಾಡಿ ಕರವಿಡಿದು ಧಾರೆಯನೆರಸಿಕೊಂಡ ತರುಣಿ ತನ್ನಿನಿಯನ ಮುಟ್ಟಲಂಜಿ ದೂರದಲಿ ಪೊರೆವರು ತನಗಾರು ಹೇಳೆಂಬಳು ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡು ಪರಲೋಕ ಸಾಧನವನು ಮಾಡು