ಪುಟ:Kanakadasa darshana Vol 1 Pages 561-1028.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೭೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೭೭ ಛಲದೊಳು ಅಸುರರ ಶಿರಗಳ ತರಿದು ತಾ ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಕೃಷ್ಣ ॥ ೧ ॥ ತರಳ ಪ್ರಹ್ಲಾದಗೊಲಿದು ಉಗುರಿನಿಂದ ಹಿರಣ್ಯನುದರ ಸೀಳಿದ ಕರಿರಾಜಗೊಲಿದು ನೆಗಳು ನುಂಗುತಿರಲಾಗ ಶಿರವ ತರಿದು ಕಷ್ಟಪರಿಹರಿಸಿದ ಕೃಷ್ಣ ಕಷ್ಟನಾದೆನು ಕೇಳೊ ಕೃಷ್ಣಾ ತೊಟ್ಟಿಲಿನ ಶಿಶು ತಾಯ ಬಿಟ್ಟತೆರನಂತೆ ಕಂ ಗೆಟ್ಟು ಸೊರಗಿದೆನಯ್ಯ ಕೃಷ್ಣಾ ಮುಟ್ಟಲಮ್ಮರು ಎನ್ನ ಸತಿಸುತರು ಬಾಂಧವರು ಅಟ್ಟಿ ಎಳೆಯುತ್ತಿಹರೊ ಕೃಷ್ಣಾ ಕಷ್ಟ ದಾರಿದ್ರವನ್ನು ಪರಿಹರಿಸದಿರೆ ದೂರು ಮುಟ್ಟುವುದು ನಿನಗಯ್ಯ ಕೃಷ್ಣಾ ಕಾಶಿಯಾ ವಾಸವನು ಬಯಸಿ ಬಹುದಿನದಿಂದ ಆಸೆಯೊಳಗಿದ್ದೆನಯ್ಯ ಕೃಷ್ಣಾ ಗಾಸಿಯನು ಮಾಡದಿ ದೋಷವನ್ನು ಪರಿಹರಿಸೊ ಸಾಸಿರದ ನಾಮದಾ ಕೃಷ್ಣಾ ಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯ ಪಾಶದಿಂದಲಿ ಬಿಗಿವರೇ ಕೃಷ್ಣಾ ಕಂಸಮರ್ದನನೆ ನೀ ಕಾಯಬೇಕಯ್ಯ ಹರಿ ವಾಸುದೇವನೆ ಮುದ್ದು ಕೃಷ್ಣಾ | ೨|| ಪಾಂಡವರಿಗೊಲಿದು ಕೌರವರನು ತುಂಡು ಛಿದ್ರವ ಮಾಡಿದ ಗಂಡರೈವರ ಮುಂದೆ ದೌಪದಿ ಕೂಗಲು ಕಂಡು ಕರುಣದಿ ಕಾಯ್ದ ಪುರಂದರ ವಿಠಲ || ೩ || (ಪು. ೭೯) ಈ ಬಗೆಯ ಹಾಡುಗಳು ಕೂಡ ಕೆಲವು ಸವಾಲುಗಳನೊಡುತ್ತವೆ. ಏಕಪ್ರಕಾರವಾದ ಭಾವದ ಬೆಳವಣಿಗೆಯಲ್ಲಿರುವ, ಸಾಮತಿಗಳ ಆಯ್ಕೆಯಲ್ಲಿರುವ ಒಟ್ಟು ತಾತ್ಪರ ಹೊಂದಾಣಿಕೆಯನ್ನು ಅರ್ಥೈಸುವ ಬಗೆ ಹೇಗೆ ಎಂಬುದು ಮುಖ್ಯ ಪ್ರಶ್ನೆ, ಎರಡರಲ್ಲೂ ಇರುವ ಮೂರು ಚರಣಗಳ ಲೆಕ್ಕದಲ್ಲಿ ಏರುಪೇರುಗಳಿಲ್ಲ ; ಈ ಸರಿಸಮಾನತೆ ಏನೋ ತೀರ ಆಕಸ್ಮಿಕವಾಗಿರ ಬಹುದೆನಿಸದೆ, ಪರಸ್ಪರ ಪ್ರಭಾವವನ್ನು ಸೂಚಿಸುತ್ತದೆ. ಶಬ್ದಗಳೂ ಪ್ರಾಸಸ್ಥಾನವೂ ವ್ಯತ್ಯಾಸವಾಗಿರುವಂತೆ ತೋರುತ್ತದೆಯಾದರೂ ಉದ್ದೇಶದಲ್ಲಿ ದೂರಾನ್ವಯಗಳಿಲ್ಲ. ಬಲಿ, ಪ್ರಹ್ಲಾದ, ವಿಭೀಷಣ, ದೌಪದಿ-ಇವರ ದೃಷ್ಟಾಂತಗಳು ಎರಡರಲ್ಲೂ ಬಂದಿವೆ. ರಾಗ ತಾಳ ಎರಡಕ್ಕೂ ಪ್ರತ್ಯೇಕವಾಗಿ ನಮೂದಾಗಿವೆ: 'ಆ'ದಲ್ಲಿ ಅನುಪಲ್ಲವಿಯೊಂದು ಚಿಗುರಿದೆ. ೪. ಅ. ರಾಗ-ಕಾಂಭೋದಿ ತಾಳ-ಝಂಪೆ ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದ ಉರ್ವಿಯೊಳು ಜನಿಸಿದೆನೊ ಕೃಷ್ಣಾ || ಪ || ಕಾರುಣ್ಯ ನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭನೇ ಮುದ್ದು ಕೃಷ್ಣ ||ಅ.ಪ.|| ಹುಟ್ಟಿದಂದಿಂದಿಗೂ ಸುಖವ ನಾ ಕಾಣದಿ ಲೋಕದೊಳಗೆನ್ನನು ಪೋಲ್ವ ಪಾಪಿಗಳನ್ನು ನೀ ಕಂಡು ಬಲ್ಲೆಯಾ ಕೃಷ್ಣಾ ಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿ ವೇಕಿಯನೆ ಮಾಡಯ್ಯ ಕೃಷ್ಣಾ ರಾಕೇಂದುಮುಖಿಯ ದೌಪದಿಯ ಮಾನವ ಕಾಯ್ದೆ ಆಕೆಗಕ್ಷಯವಿತ್ತೆ ಕೃಷ್ಣಾ ಪಿ ನಾಕಿಸಖನಾದಿ ಕೇಶವನೆ ಉಡುಪಿಯ ವಾಸ ಸಾಕಿ ಸಲಹೈ ಎನ್ನ ಕೃಷ್ಣಾ | (ಪು. ೭-೮) ತಾಳ-ಝಂಪೆ ಆ. ರಾಗ-ಕಾಂಭೋದಿ ಪೂರ್ವಜನ್ಮದಲಿ ನಾ ಮಾಡಿದ ಪಾಪದಿಂ