ಪುಟ:Kanakadasa darshana Vol 1 Pages 561-1028.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೭೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೭೯ ದುರ್ವಿಯೊಳು ಜನಿಸಿದೆನೊ ಕೃಷ್ಣ || ಪ || ಕಾರುಣ್ಯ ನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭ ಶ್ರೀಕೃಷ್ಣ || ಅ.ಪ || ಹುಟ್ಟಿದಂದಿಂದಿಗೂ ಸುಖವೆಂಬುದನು ಅರಿಯೆ ಕಷ್ಟಪಡುತಿಹೆನಯ್ಯ ಕೃಷ್ಣ ದಟ್ಟದಾರಿದ್ರವನ್ನು ಪರಿಹರಿಸದಿರೆ ದೂರು ತಟ್ಟುವದು ನಿನಗಯ್ಯ ಕೃಷ್ಣ ಕಾಸಿನಾ ಆಸೆಯನು ಮಾಡಬಹುದಿನದಿಂದ ಆಯಾಸದೊಳಗಿರುತಿಹೆನೊ ಕೃಷ್ಣ ಆಸೆಯನು ಬಿಡಿಸಿ ಮಿಗೆ ದೋಷವನ್ನು ಪರಿಹರಿಸೊ ಸಾಸಿರ ನಾಮದ ಶ್ರೀಕೃಷ್ಣ ಮುಟ್ಟಲಂಜುವರು ಬಂಧುಗಳು ಕಂಡರೆ ಎನ್ನ ಅಟ್ಟಿ ಕೊಲುತಿಹರಯ್ಯ ಕೃಷ್ಣ ತೊಟ್ಟಿಲ ಶಿಶು ಬಾಯ ಬಿಡುವ ತೆರನಂತೆ ಕಂ ಗೆಟ್ಟು ಶೋಕಿಸುವೆನೋ ಕೃಷ್ಣ ತಂದೆತಾಯಿಯು ಇಲ್ಲ ಬಂಧುಬಳಗವು ಇಲ್ಲ ಇಂದೆನಗೆ ಗತಿಯೇನೊ ಕೃಷ್ಣ ಮಂದರಧರ ಶ್ರೀಪುರಂದರ ವಿಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ ಈ ಪುಟ-೬೧) ಈ ಸಮಾನ ಕೀರ್ತನೆಯಲ್ಲೂ ಛಂದಸ್ಸು, ರಾಗ, ಮತ್ತು ತಾಳಗಳಲ್ಲಿ ಏಕರೂಪತೆಯಿದೆ : ಪಲ್ಲವಿ ಅನುಪಲ್ಲವಿಗಳಲ್ಲೂ ವ್ಯತ್ಯಾಸಗಳಿಲ್ಲ. ಐದೈದು ಮಾತ್ರೆಗಳ ಓಟ ಎರಡೂ ಕಡೆ ಪ್ರಧಾನವಾಗಿದೆ. ಛಂದಸ್ಸಿನ ಲಕ್ಷಣದಿಂದ ಸಾಂಗತ್ಯಕ್ಕೆ ಸಂಗತವಾಗಿದೆ ಅಲ್ಲಲ್ಲಿ. ವಿಷ್ಣು ಗಣದ ಬದಲು ರುದ್ರಗಣ ಕಂಡುಬರುತ್ತದೆ ; ಅಂಶಗಣದ ಬದಲು ಮಾತ್ರಾಗಣಘಟಿತ ಸಾಂಗತ್ಯವೆಂದೂ ಹೇಳಬಹುದು. ಕನಕದಾಸರ ಹಾಡಿನಲ್ಲಿ ಮೂರು ಚರಣಗಳೆಂದು ಸಂಪಾದಕರು ಸೂಚಿಸಿದ್ದಾರೆ: ದ್ವಿತೀಯಾಕ್ಷರ ಪ್ರಾಸದ ಆಧಾರ ಬಲದಿಂದ ಅವರು ಹಾಗೆ ಗ್ರಹಿಸಿರಬಹುದು. ಆದರೆ ಅವನ್ನು ಎಂಟೆಂಟು ಸಾಲುಗಳ ಮೂರು ಚರಣಗಳೆಂದು ತಿಳಿಯುವುದಕ್ಕಿಂತ ನಾಲ್ಕು ಪಾದಗಳ ಆರು ಚರಣಗಳೆಂದೇ ಪರಿಗಣಿಸುವುದು ಉಚಿತ. 'ಆ'ದಲ್ಲಿ ನಾಲ್ಕು ಪಾದಗಳ ನಾಲೈ ಚರಣಗಳಿವೆ; 'ಆ'ದಲ್ಲಿರುವ ಎರಡನೆಯ ಚರಣದ ಎರಡನೆಯ ಸಾಲು 'ಆಯಾಸದೊಳಗಿರು ......' ಎಂಬುದರಲ್ಲಿನ ಆರಂಭದ ದೀರ್ಘ ಸ್ವರಾಕ್ಷರವಾದ ಆ ವನ್ನು ಅದರ ಹಿಂದಿನ (ಅಂದರೆ ಮೊದಲನೆಯ) ಸಾಲಿನ ಕಡೆಯಲ್ಲಿಡಬೇಕು, ಹಾಗೆ ಮಾಡಿದರೆ ಆಗ ಪ್ರಾಸ ಪರಿಪಾಲನೆ ಸರಿಯಾಗುತ್ತದೆ ; ಈಗಿರುವಂತೆ ಪ್ರಾಸೊಲ್ಲಂಘನೆಯಾಗಿದೆ-ಇದು ಪ್ರಾಯಃ ಸಂಪಾದಕರ ಕಣ್ ತಪ್ಪಿನಿಂದಾಗಿರಬಹುದು. 'ಅ' ಮತ್ತು 'ಆ' ಗಳಲ್ಲಿ ಮೊದಲ ಮೂರು ಪದ್ಯ (ಚರಣ)ಗಳಲ್ಲಿ ಶೇಕಡ ತೊಂಬತ್ತರಷ್ಟು ಸಾಮ್ಯವಿದೆ: 'ಅ' ದಲ್ಲಿರುವ ಕಡೆಯ ಮೂರು ಪದ್ಯಗಳನ್ನು 'ಆ'ದಲ್ಲಿ ಸಂಗ್ರಹಿಸಿ ಒಂದೇ ಪದ್ಯಕ್ಕಿಳಿಸಲಾಗಿದೆ; ಹೀಗೆ ಸಂಕ್ಷೇಪಿಸುವಾಗ ಕಂಸಮರ್ದನ ಹಾಗೂ ದೌಪದಿಯ ಮಾನವಕಾಯ ಪ್ರಸ್ತಾಪ ಜಾರಿ ಹೋಗಿದೆ. ಅಥವಾ ಇದರ ತದ್ವಿರುದ್ಧ ದಿಕ್ಕಿನಲ್ಲಿ ಈ ಕೀರ್ತನೆಯ ಪ್ರಭಾವ ಪ್ರಕ್ರಿಯೆ ಸಂಭವಿಸಿದ್ದರೆ, 'ಆ'ದಲ್ಲಿ ಇರದಿದ್ದ ಈ ಎರಡು ಹೊಸ ಸಂಗತಿಗಳ ಸೇರ್ಪಡೆಯಿಂದ 'ಆ'ದಲ್ಲಿ ಇನ್ನೆರಡು ಪದ್ಯಗಳೂ ಹುಟ್ಟಿಕೊಂಡಿವೆ. ಹೀಗಾಗಿ ಇವೆರಡರಲ್ಲಿ ಯಾವ ಹಾಡು ಯಾವ ಹಾಡಿಗೆ ಮೂಲವಾಗಿದೆಯೆಂಬ ಪ್ರಶ್ನೆಗೆ ಆದಿಕೇಶವನೂ, ಪುರಂದರವಿಠಲನೂ ಉತ್ತರ ಕಂಡುಕೊಳ್ಳಲು ಬೆಳಕು ತೋರಿಸಬೇಕಾಗಿದೆ ; ಆ ಬೆಳಕು ಮುಂದಿನ ಕೀರ್ತನೆಯಲ್ಲಿರುವ ತೊಡಕನ್ನು ನಿವಾರಿಸಿಕೊಳ್ಳುವುದಕ್ಕೂ ಬೇಕಾಗಿದೆ ; ೫. ಅ. ರಾಗ-ಸೌರಾಷ್ಟ್ರ ತಾಳ-ಆಟ ವರ ಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು | ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು || ಪ || ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು | ಬಹು ಕೋಪಿಗಳಿದ್ದಲ್ಲಿ ಅನುಭಾವ ಗೋಷ್ಠಿಯ ಮಾಡಬಾರದು || ೧ || Vಳng YW3011 WHYSY ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು | ಬಹು WAY1 F ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು CHL CH ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು | ತಾ ಪರರನು ಬೈದು ಪಾತಕಕೆ ಮುನ್ನೋಳಗಾಗಬಾರದು || ೩ || 09