ಪುಟ:Kanakadasa darshana Vol 1 Pages 561-1028.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೮೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು F 0. ತುರುವ ಕಾಯ್ದ ಹಣ್ಣು ಉರುಗನ ತುಳಿದಾ ಹಣ್ಣು ಕರದರೆ ಕಂಬದೊಳು ಓಯೆಂಬ ಹಣ್ಣು ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು ಕರುಣಾಳು ಕಾಗಿನೆಲೆಯಾದಿ ಕೇಶವನ ಹಣ್ಣು (ಪುಟ. ೧೮೩-೧೮೪) ತಾಳ-ಆಟ || ಪ || ಆ) ರಾಗ-ಬಿಲಹರಿ ಹಣ್ಣು ಬಂದಿದೆ ಕೊಳ್ಳಿರೊ ಹರಿದಾಸರು ಹಣ್ಣು ಬಂದಿದೆ ಕೊಳ್ಳಿರೊ ಚಿನ್ನ ಬಾಲಕೃಷ್ಣನೆಂಬ ಚೆನ್ನಾದ ಬಾಳೆಯ ಕೊಳೆತು ಹೋಗುವದಲ್ಲ ಹುಳಿತು ನಾರುವದಲ್ಲ ಕಳೆದು ಬೀಸಾಡಿಸಿ ಕೊಳುವದಲ್ಲ ಅಳತೆಗೊಂಬುದಲ್ಲ ಗಿಳಿಕಚ್ಚಿ ತಿಂಬುದಲ್ಲ ಒಳಿತಾದ ಶ್ರೀಹರಿ ಎಂಬ ಮಾವಿನ ಹಣ್ಣು || ಅ.ಪ || ಶುದ್ದವಾಗಿ ಹೊಂದಿಕೊಳ್ಳುತ್ತದೆಂಬುವನ್ನು ಹೇಳಬಲ್ಲರು ; ಆ ಬಗ್ಗೆ ನಾನು ಏನನ್ನೂ ಹೇಳಲಾರೆ. ಆದರೆ ಸಾಹಿತ್ಯ ದೃಷ್ಟಿಯಿಂದ ಮಾತ್ರ ನೋಡಿದಾಗ, ಒಂದೇ ಓದಿಗೆ, ಧಾರಾಳವಾಗಿ ಹೇಳಬಹುದಾದ ಮಾತೆಂದರೆ 'ಆ' ದ ಕೀರ್ತನಶಿಲ್ಪದಲ್ಲಿ ಶೈಥಿಲ್ಯಗಳಿವೆ, ಮಾವಿನಹಣ್ಣು, ತ್ರಿಜಗ ಎಂಬ ಶಬ್ದ ಎರಡೆರಡು ಸಲ ಬಂದಿರುವುದಕ್ಕೆ ಔಚಿತ್ಯವಿಲ್ಲ; ದೈವವನ್ನು (ಕೃಷ್ಣನನ್ನು) ಒಂದು ಹಣ್ಣೆಂದು ರೂಪಕವಾಗಿಸಿ ಪುನರುಕ್ತಿ ಮಾಡುತ್ತಾ ಹೊರಟಿರುವುದು ಬೇರೆ-ಅದರ ಅರ್ಥ, ಔಚಿತ್ಯ ಸ್ವಾರಸ್ಯಗಳಿವೆ ; ಇಡೀ ಕೀರ್ತನೆ ನಿಂತಿರುವ ಕೇಂದ್ರವೇ ಅದು ಹಿಂದಿನ ಉದಾಹೃತ ಕೀರ್ತನೆಗಳಲ್ಲಿ ಗುರುತಿಸಿರುವ ಹಾಗೆ ಇಲ್ಲಿಯೂ ಕೆಲವು ಶಬ್ದಗಳು ಸ್ಥಳಾಂತರಗೊಂಡಿವೆ : ಈ ಬಗೆಯ ಒಂದು ಕಡೆ ಬಳಸಿರುವ ನುಡಿಗಳನ್ನು ಬೇರೊಂದು ಮಾತಿನಿಂದ ಪಲ್ಲಟಿಸಿರುವಿಕೆಯಿಂದ ನಿರೂಪಣೆಯಲ್ಲಿ ಯಾವ ಬದಲಾವಣೆಯೂ ಫಲಿಸಿಲ್ಲ; ಇವೆರಡೂ ಹಾಡುಗಳು ಒಂದೇ ಬುದ್ಧಿ-ಭಾವದ ಸೃಷ್ಟಿಯೆಂಬ ವಾಸ್ತವಾಂಶ ಮರೆಯಾಗಿಲ್ಲ. ಇನ್ನು ಮತ್ತೆ ಇಡೀ ಕೀರ್ತನೆ 'ಹೂವ ತರುವರ ಮನೆಗೆ ಹುಲ್ಲು ತರುವೆ' ಎಂಬುದು. ಇದರಲ್ಲಿ ಎರಡೂ ಕಡೆ ರಾಗ ನಿರ್ದೆಶನ ಕಾಂಭೋದಿಯೇ ಆಗಿದ್ದರೂ ತಾಳದಲ್ಲಿ (ಒಂದು ಕಡೆ ಆಟ, ಇನ್ನೊಂದು ಕಡೆ ಝಂಪೆ) ಮತ್ತು ಇಡೀ ಕೀರ್ತನ ಶರೀರದಲ್ಲಿ ಅಂತರ ತುಂಬ ಇದೆ ; ಆದರೆ ಹಾಡಿನ ಒಟ್ಟು ಆಂತಯ್ಯ ಒಂದೇ ಎನಿಸಿದೆ. ಇದೇ ರೀತಿಯಾಗಿ 'ಈತನೀಗ ವಾಸದೇವನು' ಮತ್ತು 'ಈತ ಮುಖ್ಯ ಪ್ರಾಣನಾಥ' ಎಂಬ. ಕ್ರಮವಾಗಿ ಈ ಇಬ್ಬರ, ಕೀರ್ತನೆಗಳ ಆದಿಯಲ್ಲಿರುವ ಸಾಮ್ಯ ಅನಂತರದ ಚರಣಗಳಲ್ಲಿ ಕಾಣದೆ ಹೋದರೂ, ಒಟ್ಟು ಆಶಯ ಒಂದೇ ಮೂಲಕ್ಕೆ ದುಡಿಯುವಂತಿದೆ. ಹೀಗೆ, ಈ ಪಟ್ಟಿಯನ್ನು ಇನ್ನಷ್ಟೂ ಉದಾಹರಣೆಗಳನ್ನಿತ್ತು ಪುಷ್ಟಿಗೊಳಿಸಲು, ಸಾಕಷ್ಟು ಗ್ರಾಸ ಸಿಗುತ್ತದೆಂಬೊಂದು ಸೂಚನೆಯನ್ನು ಮುಂದಿನ ಅನ್ವೇಷಕರ ಮಡಿಲಿಗೆ ಹಾಕಬಹುದು. ಈ ನಿದರ್ಶನಗಳನ್ನು ನಿಲ್ಲಿಸಿ, ಸಮಾರೋಪ ರೂಪದ ಕೆಲವು ತೀರ್ಮಾನಗಳಿಗೆ ತೊಡಗುವುದಕ್ಕೆ ಮುಂಚೆ ಇನ್ನೊಂದು ಉದಯರಾಗವನ್ನು ಪ್ರಸ್ತಾಪಿಸಬೇಕಾಗಿದೆ: ಈ ಕಡೆಗೆ ನನ್ನ ಗಮನ ಸೆಳೆದು ಮಾಹಿತಿ ಕೊಟ್ಟವರು ಡಾ. ಕಮಲಾ ಹಂಪನಾ. ಡಾ. ಕಮಲಾ ಹಂಪನಾ ಅವರು ತಮ್ಮ ನಿಬಂಧ “ತುರಂಗ ಭಾರತ: ಒಂದು ಅಧ್ಯಯನ”ದಲ್ಲಿ, ಪರಮದೇವ ಕವಿಯು ತನ್ನ ಕಾವ್ಯದಲ್ಲಿ ಅಳವಡಿಸಿಕೊಂಡಿರುವ, ಪುರಂದರದಾಸರ ಹೆಸರಿನಲ್ಲೂ ಅಚ್ಚಾಗಿರುವ, ಒಂದು ಉದಯರಾಗದ ಆಕರದತ್ತ ಗಮನ ಸೆಳೆದಿದ್ದಾರೆ : ಅದು 'ಬ್ರೌಪದೀ ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು ತ್ರಿಜಗದಿ ಮುನಿಗಳಿಗೆ ತೋರಿದ ಹಣ್ಣು ತ್ರಿಜಗವಂದಿತ ಪಾದವೆಂಬ ಮಾವಿನ ಹಣ್ಣು ಸುಜನಾನಂದಿಯರು ನೀ ತುರುವ ಕಾಯ್ದ ಹುಣ್ಣು ಉರುಗನ ತುಳಿದಾ ಹಣ್ಣು ಕರೆದರೆ ಕಂಬದಿಂದ ಬಂದ ಹಣ್ಣು ಮರುಗುವ ಧ್ರುವನ ಉನ್ನತನ ಮಾಡಿದ ಹಣ್ಣು ಪುರಂದರ ವಿಠಲನೆಂಬ ಹಣ್ಣು ಕೊಳ್ಳ ಬನ್ನಿ (ಪುಟ. ೨೭) ಇಲ್ಲಿ ಕೆಲವು ವ್ಯತ್ಯಾಸಗಳು ಸಂಭವಿಸಿವೆ : ರಾಗ ಒಂದರಲ್ಲಿ ಶಂಕರಾಭರಣ, ಇನ್ನೊಂದರಲ್ಲಿ ಬಿಲಹರಿ ಇದ್ದರೂ ತಾಳ ಸಮಾನವಾಗಿದೆ. ಸಂಗೀತಶಾಸ್ತ್ರವಿಶಾರದರು ಈ ಕೀರ್ತನೆ ಯಾವ ರಾಗಕ್ಕೆ ಉಚಿತವಾಗಿ,