ಪುಟ:Kanakadasa darshana Vol 1 Pages 561-1028.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೮೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೮೫ ಮಾನಸಂರಕ್ಷಣ' ಎಂಬ ಹೆಸರಲ್ಲಿದೆ, ೧೫ ಷಟ್ಟದಿ ಪದ್ಯಗಳಿವೆ. ಇದು ಕೆಲವು ಹಸ್ತಪ್ರತಿಗಳಲ್ಲಿ 'ಮಂಗಳಂ ಶ್ರೀಯರಸ ಪುರಂದರ ವಿಠಲಗೆ' ಎಂದೂ, ಕೆಲವದರಲ್ಲಿ “ಮಂಗಳಂ ಸಿರಿಕಾಗಿನೆಲೆಯಾದಿಕೇಶವಗೆ' ಎಂದೂ ಕಡೆಯ ನುಡಿಯಲ್ಲಿದ್ದು ಸಂಶೋಧಕರ ಆಖೈರು ತೀರ್ಮಾನಕ್ಕೆ ಇನ್ನೂ ದಾರಿ ಕಾಯುತ್ತಿದೆ. ಪುರಂದರರ ಹಾಡುಗಳ ಸಂಕಲನದಲ್ಲಿ, ಇದು ಅವರ ರಚನೆಗೆ ಸೇರಿದ್ದೆಂಬಂತೆ, ಈ ಉದಯರಾಗ ಪದ್ಧತಿಯ ಪ್ರಕರಣವೂ ಸೇರ್ಪಡೆಯಾಗಿದೆ; ಹಲವು ಸಂಪಾದಕರುಗಳ ಆವೃತ್ತಿಗಳಲ್ಲಿ ಹೀಗೆ ಸೇರಿಕೊಂಡು ಇದು ಪುರಂದರರದೇ ಇರಬೇಕೆಂಬ ಪ್ರತೀತಿ ನಿಂತುಬಿಟ್ಟಿದೆ. ಪರಮದೇವ ಕವಿಯೂ ಇದನ್ನು ಪುರಂದರರಿಂದಲೇ ಎತ್ತಿಹಾಕಿದ್ದಾನೆಂದು ತಾವು ಮೊದಲು ಭಾವಿಸಿ ಬರೆದುದಾಗಿಯೂ, ಈಗ ಈ ಹಾಡು ಕನಕದಾಸರದೇ ಬಂದು ತಮಗೆ ಖಾತ್ರಿಯಾದದ್ದು ಹಿಂದೆ ತಳೆದ ನಿಲುಮೆಯನ್ನು ಪೂರ್ತಿ ಬದಲಾಯಿಸಿ ಕೊಂಡಿರುವುದಾಗಿಯೂ ಡಾ. ಕಮಲಾ ಹಂಪನಾ ಸಷ್ಟಪಡಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರದ 'ಪುರಂದರ ಸಾಹಿತ್ಯ ದರ್ಶನ' (೧೯೮೫) ಸಂಪುಟ ನಾಲ್ಕರಲ್ಲಿ (ಪುಟ 22) 'ಇದನ್ನು ಕನಕದಾಸರದ್ದೆಂದೂ ಹೇಳುವುದಿದೆ' ಎಂದು ಅಡ್ಡಗೋಡೆಯ ಮೇಲೆ ದೀಪವಿಡಲಾಗಿದೆ. ಆದರೆ ಬಿ. ಶಿವಮೂರ್ತಿ ಶಾಸ್ತ್ರಿಗಳು ಇದು ಕನಕದಾಸರ ರಚನೆಯೆಂದು ಕಡಾಖಂಡಿತವಾಗಿ ಹೇಳಿದ್ದಾರೆ. ಈ ದಿಕ್ಕಿನಲ್ಲಿ ಚಿಂತನೆಯನ್ನು ಮಸೆದು ನಿಲ್ಲಿಸಿದ ಆದ್ಯರಲ್ಲಿ ಬೆಟಗೇರಿ ಕೃಷ್ಣಶರ್ಮರನ್ನು ಮೊದಲು ನೆನೆಯಬೇಕು. ಇದರ ಸಂಬಂಧವಾಗಿ ಅವರ ಹೇಳಿಕೆ ಹೀಗಿದೆ : “ಪುರಂದರದಾಸರ-ಕನಕದಾಸರ ಕೆಲವೊಂದು ಗೀತಗಳು ಪರಸ್ಪರ ಅಂಕಿತಗಳನ್ನು ಬದಲಿಸಿಕೊಂಡು ಮುದ್ರಿತವಾಗಿವೆ. ಇವುಗಳ ನಿಜವಾದ ಕರ್ತೃಗಳಾರೆಂಬುದನ್ನು ನಿರ್ಣಯಿಸುವುದಕ್ಕೆ ಪ್ರಾಚೀನ ಹಸ್ತಪ್ರತಿಗಳೇ ನಮಗೆ ಸಹಕಾರ ನೀಡಬಲ್ಲವು. ಆ ಸಹಕಾರವನ್ನು ಉಪಯೋಗ ಮಾಡಿಕೊಂಡು ದರಿಂದಲೇ ಈ ಸಂಕಲನದಲ್ಲಿ, ಪುರಂದರದಾಸರವೆಂದು ನಂಬುಗೆಗೆ ಪಾತ್ರವಾಗಿ, ಇದರಲ್ಲಿ ಅಚ್ಚಾಗಿವೆ. ಇದಕ್ಕೆ ಮುಖ್ಯವಾದ ಉದಾಹರಣೆಯನ್ನು ಹೇಳಬೇಕೆಂದರೆ, ದೌಪದೀ ಮಾನಸಂರಕ್ಷಣೆಯ ಉದಯರಾಗದ ದೀರ್ಘಕವನ ಅಥವಾ ಖಂಡಕಾವ್ಯ. ಇದು ಎಲ್ಲ ಹಸ್ತಪ್ರತಿಗಳಲ್ಲಿಯೂ ಕನಕದಾಸರ ಅಂಕಿತದಿಂದಲೇ ಕೂಡಿರುವುದು”. (ಕನಕದಾಸರ ಭಕ್ತಿ ಗೀತಗಳು' : ಸಮಾಜ ಪುಸ್ತಕಾಲಯ, ಧಾರವಾಡ, 1965, ಪುಟ V) ಈ ಅಂಶವನ್ನು, ಅದೇ ಪುಸ್ತಕದಲ್ಲಿ ಮುಂದುವರಿಸಿ, ಇನ್ನೊಂದು ಕಡೆ ಮತ್ತೆ ಪ್ರಸ್ತಾಪಿಸುತ್ತ ಹೇಳಿರುವ ಮಾತುಗಳಿವು: “ಈ ಸಂಕಲನದಲ್ಲಿ ಪ್ರಕಟವಾಗಿರುವ 'ವಾಸುದೇವಾಯ ನಮೋ' ಎಂಬ ದೌಪದಿಯ ಮಾನರಕ್ಷಣೆಯ ಕೃತಿಯೂ ಒಂದು ಖಂಡಕಾವ್ಯದಂತಿದೆ. ಕುಮಾರವ್ಯಾಸ ಕವಿಯ ಈ ಕಥಾಭಾಗದೊಂದಿಗೆ ಕನಕದಾಸರ ಈ ಕೃತಿಯನ್ನು ಹೋಲಿಸಿ ನೋಡಿದರೆ, ಕನಕದಾಸರು ಕುಮಾರವ್ಯಾಸ ಕವಿಯ ಕೃತಿಯಿಂದ ಪ್ರಭಾವಿತರಾಗಿದ್ದಾರೆಂಬುದು ಕಂಡು ಬಾರದಿರದು” (-ಅದೇ- : ಮುನ್ನುಡಿ, ಪುಟ XXVII-XXVIII). ಕೆಲವು ಅಂಶಗಳು ಇಲ್ಲಿ ಸ್ಪಷ್ಟಗೊಳ್ಳಬೇಕಾಗಿವೆ. ಬೆಟಗೇರಿಯವರ ಪ್ರಾಂಜಲ ವಿವೇಚನೆ ಸ್ತುತ್ಯಾರ್ಹವಾದುದು. ಅವರು ಕನಕದಾಸರ ಹಾಡುಗಳನ್ನೂ, ಪುರಂದರದಾಸರ ಹಾಡುಗಳನ್ನೂ ಶ್ರದ್ದೆಯಿಂದ ಸಂಪಾದಿಸಿ ಪ್ರಕಟಿಸಿದ್ದಾರೆ : ಉಪಲಬ್ದ ಹಸ್ತಪ್ರತಿಗಳಲ್ಲಿ ಕೆಲವನ್ನು ಆಧರಿಸಿ ಪಾಠಪರಿಷ್ಕರಣ ಮಾಡಿದ್ದಾರೆ. ಕನಕದಾಸರವೆಂದು ಅಚ್ಚಾಗಿರುವ ಕೆಲವು ಹಾಡುಗಳು ಅವರವಲ್ಲವೆಂದು ತಿಳಿದು, ಅಂತಹ, ಅಂದರೆ ಅವರವಲ್ಲದ ಕೀರ್ತನೆಗಳನ್ನು ತಮ್ಮ ಸಂಕಲನದಲ್ಲಿ ಸೇರಿಸಿಲ್ಲವೆಂದು ಸ್ಪಷ್ಟವಾಗಿ ಅರಿಕೆ ಮಾಡಿದ್ದಾರೆ (ಅದೇ: ಪುಟ. IV). ಅಷ್ಟೇ ಅಲ್ಲದೆ ಸಂಪಾದಕರಾಗಿ ಅವರು ಗಂಟೆ ಹೊಡೆದಂತೆ ಹೀಗೆ ಹೇಳಿದ್ದಾರೆ : “ಕನಕದಾಸರವಲ್ಲದ ಹಾಡುಗಳನ್ನು ಈ ಸಂಕಲನದಲ್ಲಿ ಒಂದನ್ನೂ ತೆಗೆದುಕೊಂಡಿಲ್ಲ” (ಅದೇ ಮುನ್ನುಡಿ ಪುಟ. XXIX). ಹೀಗೆ ಹೊಣೆಯನ್ನು ಹೊತ್ತು ಅವರು ಹೊರತಂದ ಕನಕದಾಸರ ಹಾಡುಗಳ ಕಟ್ಟಿನಲ್ಲಿ ಇದುವರೆಗೆ ನಾನು ಉದಾಹರಿಸಿದ ಹಾಡುಗಳು, ವರಕವಿಗಳ ಮುಂದೆಎಂಬುದನ್ನು ಬಿಟ್ಟು, ಸೇರ್ಪಡೆಯಾಗಿವೆ : ಅದರಿಂದ ಆ ಕೀರ್ತನೆಗಳೆಲ್ಲ ಕನಕದಾಸರ ರಚನೆಯೆಂದು ಅವರು ಪರಿಶೀಲಿಸಿ ಕೈಗೊಂಡು ನಿರ್ಣಯವಾಗಿ, ಒಪ್ಪಿದ್ದಾರೆ. ಹೀಗಿದ್ದೂ ಇಂದಿಗೂ ಆ ಹಾಡುಗಳು ಪುರಂದರದಾಸರ ಹಾಡುಗಳೆಂದೇ ಹೊಸ ಪ್ರಕಟಣೆಗಳಲ್ಲಿ ರಾರಾಜಿಸುತ್ತ ಮುಂದುವರಿ ಯುತ್ತಿರುವುದೇಕೆ? ಸಂಪಾದಕರಾಗಿ ಅಷ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ ಬೆಟಗೇರಿಯವರು ಕೂಡ, 'ಪುರಂದರದಾಸರವೆಂದು (-ಅದೇ: ಪುಟ. V) ಮೊಗಂ ಆಗಿ ಹೇಳಿದರೇ ಹೊರತು, ಆ ಒಗಟು ಬಿಡಿಸಿ ಇಂತಿಂತಹ ಹಾಡುಗಳೇ ಅವು ಎಂದು ಢಣಾಡಂಗುರವಾಗಿ ಹೇಳಲಿಲ್ಲ. ನಾನು ಈ ಸಂಪ್ರಬಂಧದಲ್ಲಿ ಆ ಕೆಲಸ ಮಾಡಿ, ಎಲ್ಲವನ್ನೂ ಹುಡುಕಿ ತೆಗೆದು ಉದಾಹರಿಸಿದ್ದು ಇದೇ ಕಾರಣಕ್ಕಾಗಿ,