ಪುಟ:Kanakadasa darshana Vol 1 Pages 561-1028.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೯೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ-ಧಾರ್ಮಿಕ ಹಿನ್ನೆಲೆ ೯೯೧ ಕಳೆದುಕೊಂಡಿತ್ತು. ವಿಜಯನಗರ ಯುಗವು ರಾಜಕೀಯ, ಸಾಮಾಜಿಕ, ಧಾರ್ಮಿಕ ಜನಜೀವನದ ನಮ್ಮ ಇಂದಿನ ದಾರುಣ ಪರಿಸ್ಥಿತಿಯ ಉಪಕ್ರಮ ಕಾಲವಿತ್ತೆಂದರೆ ಅದು ತಪ್ಪಾಗಲಾರದು. ಅಂದಮೇಲೆ ಕನಕದಾಸರು ತಮ್ಮ ಕೃತಿ-ಕೀರ್ತನೆಗಳ ಮೂಲಕ ಅಂದಿನ ಅವರ ಸಮಾಜವನ್ನು ಪೀಡಿಸುತ್ತಿದ್ದ ಅಪಮೌಲ್ಯಗಳನ್ನು ಕುರಿತ ಆಪಾದನೆಗಳ ಒಂದು ಉದ್ದ ಪಟ್ಟಿಯನ್ನೆ ನೀಡಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ನಾಲ್ಕೂ ಜಾತಿಯವರೂ, ಆ ನಾಲ್ಕು ಜಾತಿಗಳಿಂದ ಹೊರಗಿರಿಸಲ್ಪಟ್ಟವರೂ, ಕಳ್ಳಕಾಕರೂ, ಸನ್ಯಾಸಿ, ಜಂಗಮರೂ ಕೂಡ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ' (೨೭)' ಮಾತ್ರವೆ ಕಾರ್ಯ ಪ್ರವೃತ್ತರಾಗಿರುವರೆಂದು ಆಪಾದಿಸುವ ಕನಕದಾಸರು 'ಸತ್ಯಧರ್ಮಗಳೆಲ್ಲ ಎತ್ತಷೋದವೋ ಕಾಣೆ ಉತ್ತಮರ ಜೀವನಕೆ ದಾರಿಯಿಲ್ಲ' (೧೨. ೧) ಎಂದೂ “ಮಾತಾಪಿತೃಗುರು ದೈವ ದ್ರೋಹದಿ ಭೂತಳವು ನಡನಡುಗುತಿಹುದು' (೪೯. ೨) ಎಂದೂ 'ಕತ್ತಲಾಯಿತು ಕಲಿಯ ಮಹಿಮೆ' (೪೯, ೧) ಎಂದೂ ಹಲುಬಿರುವುದು ವಿಜಯನಗರ ಸಾಮ್ರಾಜ್ಯದ ಯಥಾವತ್ತಾದ ಇತಿಹಾಸವನ್ನು ಬಲ್ಲವರಿಗೆ ಉತ್ತೇಕ್ಷೆಯೆನಿಸದು. ಇವು ನಿರಾಶಾವಾದಿಯೊಬ್ಬನ ಹೇಳಿಕೆಗಳಂತೂ ಅಲ್ಲ. ಅಷ್ಟೇ ಅಲ್ಲದೆ, ಅಂದಿನ ಜನತೆಯನ್ನು ತಪ್ಪು ದಾರಿಗೆಳೆದ ಸಾಮಾಜಿಕ-ಆರ್ಥಿಕ ಒತ್ತಡಗಳನ್ನು ಐತಿಹಾಸಿಕ ದೃಷ್ಟಿಯಿಂದ ಗುರುತಿಸಿದ ಹೆಮ್ಮೆ ಕನಕದಾಸರದ್ದಾಗುತ್ತದೆ. ಇಂತಹ ಆಪಾದನೆಗಳ ಹಿನ್ನೆಲೆಯಲ್ಲಿ, ಕನಕದಾಸರ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯ ಆಗುಹೋಗುಗಳ ಪರಿಚಯ ಮಾಡಿಕೊಳ್ಳೋಣ. ಇಲ್ಲಿ ನಾನು ಹೇಳಬೇಕಾದ ಮಾತೊಂದಿದೆ, ಸ್ವದೇಶಾಭಿಮಾನೀ ಇತಿಹಾಸಕಾರರ ಇಲ್ಲಿಯವರೆಗೂ ವಿಜಯನಗರ ಸಾಮ್ರಾಜ್ಯದ ಮೇಲೆ ಹೇರಿಬಂದಿರುವ ಹೊಗಳಿಕೆಗಳೆಲ್ಲವನ್ನೂ ಅಲ್ಲಗಳೆಯುವ ಉದ್ದೇಶ ನನ್ನದಲ್ಲ. ಅದೇ ವೇಳೆಗೆ, ನಾನು ನಿರೂಪಿಸಲಿರುವ ನಿರುತ್ಸಾಹೀ ಐತಿಹಾಸಿಕ ಚಿತ್ರಣವನ್ನು ಒರೆಗಲ್ಲಾಗಿರಿಸಿ ಅಂತಹ ಪ್ರಶಂಸಾತ್ಮಕ ಇತಿಹಾಸವನ್ನು ತಿದ್ದಿ ನೋಡಿದೆವೇ ಆದರೆ ಕನಕದಾಸರ ಕಾಲದ ವಾಸ್ತವ ಇತಿಹಾಸವನ್ನು ನಾವು ತಿಳಿಯುವಂತಾದೀತು. ಇನ್ನು, ವಿಜಯನಗರ ಕಾಲದ ರಾಜಕೀಯ-ಸಾಮಾಜಿಕಧಾರ್ಮಿಕ ಜೀವನವನ್ನು ಮತ್ತು ಅದರ ಮೇಲಿನ ಆರ್ಥಿಕ ಒತ್ತಡಗಳನ್ನು ಬೇರೆ ಬೇರೆಯಾಗಿ ಪ್ರತಿಪಾದಿಸುವುದು ಅಸಾಧ್ಯ. ಏಕೆಂದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಈ ಎಲ್ಲ ಕ್ಷೇತ್ರಗಳ ಮೇಲೂ ಪ್ರಭಾವ ಬೀರುವಂತಹ ಹಿತಾಹಿತಗಳ, ಸತ್ಯಾಸತ್ಯಗಳ, ಧರ್ಮಾಧರ್ಮಗಳ, ಗುಣಾವಗುಣಗಳ, ಮೌಲ್ಯಾಪ ವಮೌಲ್ಯಗಳ ನಿಷ್ಕರ್ಷೆಯಲ್ಲಿ ವಿಜಯನಗರದವರು ಉಭಯಸಂಕಟಕ್ಕೀಡಾಗಿದ್ದರು. ಆ ವೇಳೆಗಾಗಲೆ ಉತ್ತರ ಭಾರತದ ಎಲ್ಲೆಡೆಗಳಲ್ಲೂ ವಿಜಯಪತಾಕೆ ಹಾರಿಸಿದ್ದ ಮಹಮ್ಮದೀಯರ ಹಸ್ತಕ್ಷೇಪದಿಂದ ಸನಾತನ ಧರ್ಮವನ್ನು ಉಳಿಸಿಕೊಳ್ಳುವ ಮುಖ್ಯ ಧೈಯವೇ ಕ್ರಿ. ಶ. ೧೪ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯನಗರವು ಬೃಹತ್ಸಾಮ್ರಾಜ್ಯವಾಗಿ ಬೆಳೆಯಲು ಕಾರಣವಿತ್ತೆಂಬುದು ಸರ್ವವಿದಿತ. ಸಾಮ್ರಾಜ್ಯದ ಮೊದಲ ಎರಡು ಅರಸುಗಳೂ ಆ ಧೈಯದಿಂದ ಪ್ರೇರಿತರಾಗಿ, ಬಾಹ್ಯಾಡಂಬರಕ್ಕೆ ಬಲಿಯಾಗದೆ, ತಮ್ಮನ್ನು “ಮಹಾಮಂಡಲೇಶ್ವರ'ರೆಂದಷ್ಟೇ ಕರೆದುಕೊಂಡಂತಹ ನಿಗರ್ವಿಗಳಿದ್ದರು, ಆದರೆ ಅವರ ನಂತರದ ಅರಸುಗಳು, ಸಿಂಹಾಸನವು ಸುಭದ್ರವಾಯಿತೆಂಬ ಧೈರ್ಯದಲ್ಲಿ ತಮ್ಮನ್ನು 'ಮಹಾರಾಜಾಧಿರಾಜ' 'ರಾಜಪರಮೇಶ್ವರ' ಎಂದು ಮುಂತಾಗಿ ವೈಭವದಿಂದ ಬಣ್ಣಿಸಿಕೊಳ್ಳತೊಡಗಿದರು. ಸೈನ್ಯಬಲವು ಹೆಚ್ಚಿದಂತೆ ಸಾಮ್ರಾಜ್ಯ ಸ್ಥಾಪನೆಯ ಮೂಲಕಾರಣನ್ನು ಬದಿಗಿಟ್ಟು, ಮೇಲಿಂದ ಮೇಲೆ ಹಾನಿಕಾರಕ ಯುದ್ಧಗಳನ್ನು ಹೂಡಿದರು ; ದಿಗ್ವಿಜಯ ಪ್ರಯಾಣಗಳನ್ನು ಕೈಗೊಂಡರು : ರಾಜ್ಯ ವಿಸ್ತರಣೆಯ ಸಲವಾಗಿ ಸ್ವಧರ್ಮೀಯರ ಮೇಲೆ ಯುದ್ಧ ಮಾಡಿದರು; ನೆರೆಹೊರೆಯವರ ರಾಜ್ಯ, ಭಂಡಾರಗಳನ್ನು ಸ್ವಾಧೀನಪಡಿಸಿಕೊಂಡರು ; ಕೆಲವೊಮ್ಮೆ ತಮ್ಮ ಅನೈತಿಕವರ್ತನೆಯಿಂದ ಸಾಮ್ರಾಜ್ಯದ ಮೇಲೆ ಪರರ ಆಕ್ರಮಣವನ್ನು ಆಹ್ವಾನಿಸಿದ್ದರು. ಇಂತಹ ವಿಷಯೋಜಕ ಸಾಹಸ ಪ್ರವೃತ್ತಿಯನ್ನು ಖಂಡಿಸುವ ಸಲುವಾಗಿಯೇ ಇರಬೇಕು ಕನಕದಾಸರು 'ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು ಗಳಿಸದಿರು ನೀ ದುರಿತ ರಾಸಿಗಳನು' (೧೦, ೧)-ಎಂದಿರುವುದು. ಈ ರೀತಿ ಸಾಮ್ರಾಜ್ಯದ ಭಂಡಾರವು ತುಂಬಿದಂತೆ ವಿಜಯನಗರದ ಅರಸು ಮನೆತನಗಳ ದಾಯಾದಿಗಳೂ ಉನ್ನತಸ್ಥಾನಗಳಲ್ಲಿದ್ದ ಅಧಿಕಾರಿಗಳೂ, 1 ಈ ಲೇಖನದಲ್ಲಿ ಬಳಸಿರುವ ಕನಕದಾಸರ ಕೃತಿಗಳ ಉದ್ದರಣಗಳೆಲ್ಲವನ್ನೂ ಸುಬೋಧ ಎಂ. ರಾಮರಾವ್ ಸಂಪಾದಿಸಿರುವ 'ಹರಿದಾಸ ಕೀರ್ತನ ತರಂಗಿಣಿ' ಭಾಗ೨ (ಸುಬೋಧ ಮುದ್ರಣಾಲಯ, ಬೆಂಗಳೂರು, ೧೯೩೬)ರಿಂದ ಆರಿಸಿಕೊಂಡಿರುವೆನು.