ಪುಟ:Kanakadasa darshana Vol 1 Pages 561-1028.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦೨ ಕನಕ ಸಾಹಿತ್ಯ ದರ್ಶನ-೧ ಕೊಡೇಕಲ್ಲ ಬಸವಣ್ಣನ ಸಂಪ್ರದಾಯ ಮತ್ತು ಕನಕದಾಸ ೧೦೦೩ ಸನ್ನಿವೇಶವೊಂದು ಇಲ್ಲಿ ಉಕ್ತವಾಗಿದೆ. ಕನಕದಾಸನ ರಾಜಕೀಯ ಜೀವನದ ಅಂತ್ಯವೂ, ಅವನ ಹರಿದಾಸ ಬದುಕಿನ ಆರಂಭವೂ ಆದ ಈ ಸಂಕ್ರಮಣ ಸಂದರ್ಭದಲ್ಲಿಯೇ ಸಂಗಪ್ಪಯ್ಯ ಮಡಿದ ಹಾಗಿದೆ. ಇಲ್ಲಿಂದ ಮುಂದೆ ಕನಕದಾಸನದು ಲೋಕೋತ್ತರ ಲಕ್ಷದ ಅನುಭಾವಿಯ ಬದುಕು ಈ ಬದುಕಿನಲ್ಲಿ ರಚನೆಗೊಂಡ ಅವನ ಹಾಡುಗಳಲಿ ಕೊಡೇಕಲ್ ಬಸವಣ್ಣ-ರಾಚಪ್ಪಯ್ಯಸಂಗಪ್ಪಯ್ಯ ಅನುಕ್ತರಾಗಿಯೇ ಉಳಿದದ್ದು ಒಂದು ಕೊರತೆಯೇ ಆಗಿದೆ. “ನಾವು ಕುರುಬರು ನಮ್ಮ ದೇವರೆ ಬೀರಯ್ಯ' ಎಂದು ಆರಂಭವಾಗುವ ಹಾಡು ಕನಕದಾಸನ ಹೆಸರಿನಲ್ಲಿ ಈಗ ದೊರೆಯುತ್ತಿದ್ದರೂ ಮೂಲತಃ ಅದರ ಕರ್ತೃ ಕೊಡೇಕಲ್ ಬಸವಣ್ಣನ ಹಿರಿಯ ಮಗ ರಾಚಪ್ಪಯ್ಯ ಎಂದು ಹಿಂದೆಯೇ ಕಾಣಿಸಲಾಗಿದೆ. ಕನಕದಾಸ ಕೊಡೇಕಲ್ಲಿಗೆ ಬಂದಾಗ ರಾಚಪ್ಪಯ್ಯನಿಂದ ರಚನೆಗೊಂಡು ಹೇಗೋ ಈತನ ಕೈಸೇರಿ ಕಾಗಿನೆಲೆಗೆ ಬಂದ ಈ ಹಾಡು ('ನಾವು ಕುರುಬರು) ಮುಂದೆ ಕನಕದಾಸನ ಭಕ್ತರ ಕೈಸೇರಿ ಅಷ್ಟಿಷ್ಟು ಮೈಬದಲಿಸಿಕೊಂಡು 'ಕಾಗಿನೆಲೆಯಾದಿ ಕೇಶವನ ಮುದ್ರಿಕೆ ಹೊತ್ತಿದೆ ; ಕನಕದಾಸ “ಕುರುಬ ಜಾತಿಯವನು ಎಂಬ ಅವಾಸ್ತವ ನಂಬಿಕೆಗೆ ಪರೋಕ್ಷವಾಗಿ ಕಾರಣವಾಗಿದೆ. ಈ ಹಾಡಿನ ಕರ್ತೃ ರಾಚಪ್ಪಯ್ಯನೇ ಎನ್ನಲು ಕೆಳಗಿನ ಕಾರಣಗಳನ್ನು ಕೊಡಬಹುದು : ೧) ಈ ಹಾಡಿನ ಬೇರೆ ಬೇರೆ ಪಾಠಗಳು ಕನಕದಾಸನ ಹೆಸರಿನಲ್ಲಿ ಪ್ರಚಲಿತದಲ್ಲಿವೆ. ರಾಚಪ್ಪಯ್ಯ ತನ್ನ ಮಿಕ್ಕ ಹಾಡುಗಳಿಗೆ ಬಳಸಿರುವ 'ರಾಚ' ಅಂಕಿತ ರಾಚಪ್ಪಯ್ಯನ ಹಾಡಿನಾಂತ್ಯದಲ್ಲಿದ್ದು ಸುಸಂಗತವಾಗಿದೆ. ಆದಾನ-ಪ್ರದಾನ ಗಳ ನ್ನೇನೂ ಅನ್ಯಸಾಹಿತ್ಯದಿಂದ ಮಾಡಿಕೊಂಡಿರದ ಕೊಡೇಕಲ್ ಸಂರಕ್ಷಿತ ಹಸ್ತಪ್ರತಿ ಸಾಹಿತ್ಯ ಕಟ್ಟಿನಲ್ಲಿ ರಾಚಪ್ಪಯ್ಯನ ಉಳಿದ ಸಾಹಿತ್ಯ ರಚನೆಗಳೊಂದಿಗೇ ಈ ಹಾಡಾದರೂ ದೊರೆಯುತ್ತಿದ್ದು ಇದನ್ನು ಪ್ರಾಚೀನದಿಂದಲೂ ಹಾಡಿಕೊಂಡು ಬಂದಿರುವ ಕೊಡೇಕಲ್ ಬಸವಣ್ಣನ ಸಂಪ್ರದಾಯದ ಪಾರಂಪರಿಕ ಭಕ್ತವರ್ಗ ಈಗಲೂ ಕೊಡೇಕಲ್‌ನಲ್ಲಿ ಇದೆ. ೪) ಕನಕದಾಸ ಕೊಡೇಕಲ್ಲಿಗೆ ಬಂದು ರಾಚಪ್ಪಯ್ಯನನ್ನು ಕಂಡದ್ದು ಐತಿಹಾಸಿಕ ಘಟನೆ ಎನ್ನಲು, ಈ ಸಂದರ್ಭದಲ್ಲಿ ರಾಚಪಯ್ಯನಿಂದ ರಚಿತವಾದ ಈ ಹಾಡು ಕನಕದಾಸನ ಕೈ ಸೇರಿರಬೇಕು ಎಂದು ಭಾವಿಸಲು ಪ್ರಬಲ ಆಧಾರವಾಗಿ ರಾಚಪ್ಪಯ್ಯನ ತಮ್ಮ ಸಂಗಪ್ಪಯ್ಯನ ಸಮಾಧಿ ಈಗಲ್ಲೂ ಕಾಗಿನೆಲೆಯಲ್ಲಿ ಇದೆ. ೫) ಬಂಧದ ಸೃಷ್ಟಿಯಿಂದ ಕನಕದಾಸನ ಹೆಸರಿನಲ್ಲಿರುವ ಈ ಹಾಡು ಶಿಥಿಲವಾಗಿದ್ದರೆ, ರಾಚಪ್ಪಯ್ಯನಲ್ಲಿ ಸುಸಂಬದ್ದವಾಗಿದೆ. ಇವೇ ಮೊದಲಾದ ವಿಚಾರಗಳ ಸಮರ್ಥನೆಗೆ, ಈ ಹಾಡಿನ ಮೊದಲನೆಯ ಹಾಗೂ ಕೊನೆಯ ನುಡಿಗಳನ್ನು ರಾಚಪ್ಪಯ್ಯ ಮತ್ತು ಕನಕದಾಸರಲ್ಲಿ ಈಗ ನೋಡಬಹುದು : “ಮರವೆ ನರಕುರಿ ಹಿಂಡು ತನುವಿಂಧ್ಯದೊಳು ಮೇಯು ತಿರಲಾಂತಕನೆಂಬ ಯಮದೂತ ತೋಳ ಮರವ್ಯಾಧಿ ವಿಘ್ನ ಮರಮುರಿದು ತಿನುತಿರಲು ಕುರಿ ಸತ್ತುದರಿವುಂಟು ಹರನು ಪ್ರಭುಗೌಡನಿಗೆ” -ರಾಚಪ್ಪಯ್ಯ “ಅರುಹೆಂಬ ನರಗುರಿಯು ತೆರೆಯೆಂಬ ಜಾವಲಿಯು ಮರವೆಯಲಿ ಯಮನೆಂಬ ತೋಳ ತುಡಕಿ ಅರುಹಿನಾ ಮರೆಯಲ್ಲಿ ಕುರಿಯ ಮುರಿವುದು ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ”! -ಕನಕದಾಸ 'ನಾವು ಕುರುಬರು ನಮ್ಮ ದೇವರು ಬೀರಯ್ಯ' ಎಂದು ಆರಂಭವಾಗುವ ಹಾಡಿನ ಮೊದಲನೆಯ ನುಡಿಯ ಈ ಎರಡು ಪಾಠಗಳಲಿ ರಾಚಪ್ಪಯ್ಯನ ರಚನೆಯಲ್ಲಿ ಅರ್ಥ ಗಾಂಭೀರ್ಯ, ಧ್ವನಿಪೂರ್ಣತೆ, ಉಚಿತ ಪದಬಳಕೆ ಇದ್ದರೆ, ಕನಕದಾಸನಲ್ಲಿ ಅವು ಇಲ್ಲದಿರುವುದು ತಂತಾನೆ ದೃಗ್ಗೋಚರವಾಗುವಂತಿದೆ. ๆ 8 ೧. ನೋಡಿ : 'ಕನಕದಾಸರ ಗೀತೆಗಳು, 'ಸಂ : ವಸಂತ ಕುಷ್ಟಗಿ, ಪು. ೪೫ ; 'ಜನಪ್ರಿಯ ಕನಕ ಸಂಪುಟ', ಕನ್ನಡ ಮತ್ತು ಸಂಸ್ಕತಿ ನಿರ್ದೆಶನಾಲಯ, ಕರ್ನಾಟಕ ಸರಕಾರ, ಬೆಂಗಳೂರು, ಪು ೩೦ ೧. ಕನಕದಾಸರ ಗೀತೆಗಳು, ಸಂ ; ವಸಂತ ಕುಷ್ಟಗಿ, ಪು. ೪೫