ಪುಟ:Kanakadasa darshana Vol 1 Pages 561-1028.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦೮ ಕನಕ ಸಾಹಿತ್ಯ ದರ್ಶನ-೧ ಕನಕಸೂಕ್ತಿ ಸಂಚಯ ೧೦೦೯ ಸಂಕ್ಷಿಪ್ತತೆ ; ಅದರೊಂದಿಗೆ ಸ್ಪುರಿಸುವ ಅರ್ಥದ ಸಾಂದ್ರತೆ, ಅವರ ಅಭಿವ್ಯಕ್ತಿಯಲ್ಲಿ ಹಾಸುಹೊಕ್ಕಾಗಿರುವ ಜನಭಾಷೆಯ ಸೊಗಡು-ಸೌರಭ, ಸತ್ವ ಸೌಂದಯ್ಯ ನಮ್ಮ ಜನರ ನಾಲಗೆಯ ಮೇಲೆ ನಲಿದಾಡುವ ಗಾದೆಮಾತುಗಳನ್ನು ನೆನಪಿಗೆ ತರುತ್ತವೆ. ಕನಕದಾಸರ ಶೈಲಿಯ ಬಗ್ಗೆ ಬರೆಯುತ್ತ ಪ್ರೊ|| ಎಸ್. ವಿ. ರಂಗಣ್ಣನವರು ಹೇಳಿರುವ “ಕವಿ ಕನಕದಾಸ ನಿರಹಂಕಾರಿ, ನಯಶೀಲ : ಆದರೆ ಆರ್ತನಲ್ಲ, ಅಂಜುಗುಳಿಯಲ್ಲ, ಬಗ್ಗಿ ಕುಗ್ಗುವಾತನಲ್ಲ, ನೆಲದತ್ತ ಕುಸಿದು ಬೀಳುವವನಲ್ಲ”-ಎಂಬ ಮಾತು ಕನಕದಾಸರು ಅಂದಿನ ಸಮಾಜದಲ್ಲಿ ತಮ್ಮ ಅಂತಃಸತ್ಯದ ಬಲದಿಂದ ಎದ್ದುನಿಂತ ಬಗೆಯನ್ನು ಮನದಟ್ಟು ಮಾಡುತ್ತದೆ. ಕನಕ ದಾಸರ ಕೃತಿಗಳಲ್ಲಿ ಬಂದಿರುವ ಸಕ್ತಿಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಈ ಸೂಕ್ತಿಗಳು ಅವರ ಕಾವ್ಯಕರ್ತೃತ್ವ ಶಕ್ತಿಗೆ ಕನ್ನಡಿಯಾಗಿವೆ. ಮೋಹನ ತರಂಗಿಣಿ ಕಾವ್ಯದಿಂದ ೧) ತಪು ಸಾಸಿರವಿರಲು ಮುಳಿದೊಂದು ಗುಣ ಬರೆ ಯೊಪ್ಪಿಕೊಂಬುದು ಬಲ್ಲವರು. ಗುಬ್ಬಿಯ ಕೊರಲೆ ಗೋದಿಯ ಕಲ್ಲ ಕಟ್ಟಿದೊಡೆ ಗುಬ್ಬಿಯಾಗಸಕೆ ಪಾರುವುದೇ. ಬಟ್ಟವೆಯ ಬೆಟ್ಟಿಂಗಳ ಹೊಂದುವರೆವಟ್ಟಲೊಳ್ ಸೋಧಿಪರುಂಟೇ. ಕೊಡವಾಲು ಪುಳಿವೆರೆದಳಿವುದಲ್ಲದೆ ಪಾಲ್ಕ ಡಲು ನಾಶವಗೈದುವುದೆ. ಗೋವಿಂದ ತನ್ನಯ ಪೀತಾಂಬರವ ಕುಂದದೆ ಭೂಮಿಗೆ ಪೊದಿಸಿದವೊಲಿರುವುದು ಗಂಧಶಾಲಿಯ ವನಕಳಿತು. ಸುಣ್ಣ ಕಲ್ಲುಡಿಗಟ್ಟಿ ಮಡುವಿನೊಳಿಳಿದಂತೆ. ಪಾಪಕ್ಷಯರೆಂದು ಗಂಗೆಯೆಂದರೆ ಪಾಪಿಯ ಮೊಸಳೆ ತಿಂದಂತೆ. ೭) ಕಳಿಲೆಯ ನಖದಲಿ ಚಿವುಟಲಹುದು ಮುಂದ ಲಳಿಗೆ ಕೂರುಗುರಿಗಂಜುವುದೆ ? ೮) ತಲೆಬಲಿತೆಂದು ಕಲ್ಲನೆ ಹಾಯಬೇಡ. ೯) ಮೂಢರಂದದೊಳೂರ ಗುದ್ದಲಿಯನುಕೊಂಡು ನಾಡ ಕಾಲುವೆಯ ತಿದ್ದುವರೆ ? ೧೦) ಕರಗಸವೆತ್ತ ಕಂದಳಿಯೆತ್ತ ? ೧೧) ಕಂಡುದ ನುಡಿದರೆ ಕೋಪವೆ ? ೧೨) ಗಿಣ್ಣುಗೊಳ್ಳದ ಬೆಳಬ್ಬಿನ ರಸದಂತೆ. ೧೩) ಒಗೆತನವ ಬಿಟ್ಟು ಹೋಹಾಗ, ಹೆಪ್ಪ ಮೊಗದಿಕ್ಕಿದವರಾರುಂಟು ೧೪) ಪಟ್ಟೆಯ ಗೋಣಿಯೊಳ್ ತುಂಬಿದರತ್ನ ಓದೆಯೊಳಚೆಲ್ಲಿದಂತಿದೆ. ೧೫) ಮಲ್ಲಿಗೆಯರಳಮತೆ ಬಿಟ್ಟೋಗರ. ೧೬) ಸುರಿವ ಸೊಂಡಿಲ ನೀರ್ಗರೆಯುತ ಬಂದುದು ಬಿರುಗಾಳಿ ಮದಗಜದಂತೆ. ೧೭) ಕನಸಿನ ಭತ್ತಕ್ಕೆ ಗೋಣಿಯನಾಂತಂತೆ. ೧೮) ಇನಕಿರಣಂಗಳ ಮಸುಳಿಪ ರತ್ನಕಾಂಚನ ಮಂಚ. ೧೯) ಸೋದೆಯ ನೀಂಟುವ ರಾಜಹಂಸನ ಮರಿಗೆ ಮೇ ವಿದೆಯ ತೋರಿದೊಡೆ ಪೀರ್ದಪುದೆ. ೨೦) ತರಳಭಾಸ್ಕರನಂತೆ ಮೆರೆವ ಮಾಣಿಕವೆನ್ನ ಕೊರಲೊಳಗಿರ್ದು ಪೋದುದು. ೨೧) ಅಜವಿಂಡಹೊಕ್ಕ ಹೆಬ್ಬುಲಿಯಂತೆ. ೨೨) ಸೊಕ್ಕಿದ ಗಜವಿಂಡ ಸಿಂಹಹೊಕ್ಕಂತೆ. ೨೩) ಭುಜಗ ಸಮೂಹವ ಖಗರಾಜ ಹೊಕ್ಕಂತೆ. ೨೪) ಮುತ್ತುಗ ನಿಡುಗೊನೆ ನಿಕರಹೂವಾದಂತೆ ನೆತ್ತರ ಬಣ್ಣ ತೋರಿಸಲು. ೨೫) ಜಗದೊಳು ಬುದ್ದಿವಂತರ ಮಾತು ಮನಸಿಂಗೆ ಯೊಗಡಿಸುವುದು ದುರಾತ್ಮರಿಗೆ. ೨೬) ಗಂಧಶಾಲಿಯ ಭತ್ತದೊಳಗಿದೇ ಕಳೆಯ ಕೀ ತ್ವಂದದೆ ಖಳರತೀರ್ಕೆಣಿಸಿ, ೨೭) ಕೋಪವೆಂಬುದು ಪರಮಾತ್ಮಂಗೆ ದುರ್ಗಂಧ ಲೇಪನ ಮಾಡಿದಂತಿಹುದು.