ಪುಟ:Kanakadasa darshana Vol 1 Pages 561-1028.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೧೨ ಕನಕ ಸಾಹಿತ್ಯ ದರ್ಶನ-೧ ಕನಕಸೂಕ್ತಿ ಸಂಚಯ ೧೦೧೩ ೧೪) ನೆಂಟ ನೀನಿರ್ದಗಲಿದಡೆ ಒಣ ಹೆಂಟೆಯಲಿ ಮುಚ್ಚುವರು ದೇಹದ ಲುಂಟೆ ಫಲ ಪುರುಷಾರ್ಥ... (೧೫) ಕೋಪವೆಂಬುದು ತನುವಿನಲಿ ನರೆ ಪಾಪ ಪಾತಕದಿಂದ ನರಕದ ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ದವಲೆ. ೧೬) ನಿನ್ನ ಸೂತ್ರದೊಳಾಡುವುವು ಚೈ ತನ್ಯ ಸಚರಾಚರಗಳೆಲ್ಲವು ನಿನ್ನ ಸೂತ್ರವು ತಪ್ಪಿದರೆ ಮುಗ್ಗುವುವು ಹೂಹೆಗಳು. ೧೭) ನೀರ ಮೇಲಣ ಗುಳ್ಳೆಯಂದದಿ ತೋರಿಯಡಗುವ ದೇಹ. ೧೮) ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು. ೧೯) ಬೀಜ ವೃಕ್ಷದೊಳಾಯ್ತು ವೃಕ್ಷಕೆ ಬೀಜವಾರಿಂದಾಯ್ತು ಲೋಕದಿ ಬೀಜವೃಕ್ಷನ್ಯಾಯವಿದಭೇದಿಸುವರಾರಿನ್ನು. ೨೦) ಬೀಗಮುದ್ರೆಗಳಿಲ್ಲದೂರಿಗೆ ಬಾಗಿಲುಗಳೊಂಭತ್ತು, ೨೧) ಸತ್ತವರಿಗಳಲೇಕೆ ತನ್ನನು ಹೊತ್ತವರು ಪೆತ್ತವರುಗಳು ತಾ ಸತ್ತು ಹೋಗುವರಲ್ಲದುಳಿವರೆ. ೨೨) ಮೃತ್ಯು ಬೆನ್ನೋಳಿಹುದು. ೨೩) ಮಣ್ಣಿನಲಿ ಬಂಧಿಸಿದ ದೇಹವ ಮಣ್ಣುಗೂಡಿಸಬೇಡ ಜ್ಞಾನದ ಕಣ್ಣ ದೃಷ್ಟಿಯನಿಟ್ಟು ರಕ್ಷಿಸು ೨೪) ಸಾರವಿಲ್ಲದ ದೇಹವಿದು. ೨೫) ದೇಹದೊಳು ನೀ ನೆಲೆಸಿರಲು ಹೊಲೆಯುಂಟೆ. ೨೬) ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೆ. ಕೀರ್ತನೆಗಳಿಂದ ೧) ಆವ ಬಲವಿದ್ದೇನು ದೈವಬಲವಿಲ್ಲದವಗೆ. ೨) ಈಸು ದೇವರ ಬಲಗಳಿದ್ದರೆ ಫಲವೇನು ವಾಸುದೇವನ ಬಲವಿಲ್ಲದವಗೆ. ಕೇಶವನೊಲುಮೆಯು ಆಗುವತನಕ ಹರಿದಾಸರೊಳಿರುತಿರು ಹೇ ಮನವೆ. ಪುತ್ತಳಿಗೊಂಬೆಯ ಚಿತ್ರದಿ ಬರೆದರೆ, ಮುತ್ತನು ಕೊಟ್ಟರೆ ನುಡಿದೀತೆ. ನ್ಯಾಯವಬಿಟ್ಟನ್ಯಾಯವ ಪೇಳುವ ನಾಯಿಗೆ ನರಕವು ತಪ್ಪಿತೆ. ನೇಮವಿಲ್ಲದ ಹೋಮ ಇನ್ನೇತಕೆ, ರಾಮನಾಮವು ಇರದ ಮಂತ್ರವೇಕೆ. ೭) ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು. ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು. ೯ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು. ೧೦) ಹಸಿದು ಬಂದವರಿಗೆ ಅಶನವೀಯಲುಬೇಕು. ೧೧) ಕುಳ್ಳಿರ್ದ ಸಭೆಯೊಳಗೆ ಕುತ್ತಿತವುಬೇಡ. ೧೨) ಸಿರಿಬಂದ ಕಾಲಕ್ಕೆ ಬಲು ಮರೆಯಬೇಡ. ೧೩) ತನು ನಿನ್ನದು ಜೀವನ ನಿನ್ನದೊ. ೧೪) ನರಜನ್ನೆಂಬ ಪಾತಕದ ಪಂಜರದೊಳಗೆ. ಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿ. ೧೫) ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು. ೧೬) ಹಂಬಲಿಸಿಹಾಳರಟೆ ಹೊಡೆವುದಕಿಂತ ಹರಿ ಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು. ೧೭) ಬಿಡದೆ ಬಾಂಧವರೊಡನೆ ಬಡಿದಾಡುವುದಕಿಂತ ಅಡವಿಯೊಳಗಜ್ಞಾತವಾಸವೆ ಲೇಸು. ೧೮) ಧರ್ಮವಿಲ್ಲದ ಅರಸು, ಮುರಿದ ಕಾಲಿನ ಗೊರಸು. ೧೯) ಭೋಗಿಸದೆ ಇಹಪರಕೆ ಗಳಿಸಿದರ್ಥ ಅಪಾರ್ಥ. ೨೦) ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ. ೨೧) ಮಾತು ಕೇಳದೆ ಮಲೆತು ನಡೆವ ಮಕ್ಕಳ್ಳಾತಕೆ. ೨೨) ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆ. ೨೩) ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನ್ಯಾತಕೆ. ೨೪) ದೇವರಿಲ್ಲದ ಗುಡಿಯು ಪಾಳುಬಿದ್ದಂಗಡಿಯು.