ಪುಟ:Kanakadasa darshana Vol 1 Pages 561-1028.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೧೪ ಕನಕ ಸಾಹಿತ್ಯ ದರ್ಶನ-೧ ಕನಕಸೂಕ್ತಿ ಸಂಚಯ ೧೦೧೫ ೨೫) ಉಂಡು ನಗದಿಹ ಮೋರೆ ಅದು ಕಹಿಯ ಸೋರೆ. ೨೬) ದಂಡಿಗಂಜುವ ಭಂಟ ಬಡಕು ಹರಿವಿಯ ಕಂಠ. ೧೭) ಬಾಯಿ ನಾರಿದ ಮೇಲೆ ಏಕಾಂತವೆ ತಾಯಿ ತೀರಿದ ಮೇಲೆ ತೇರಾಸೆಯೆ. ೨೮) ಚಳಿ ಜ್ವರಕೆ ಚಂದನದ ಲೇಪವೆ. ೨೯) ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ ಬೆಲೆ ಬಿದ್ದ ಸರಕಿನೊಳು ಲಾಭಉಂಟೆ. ೩೦) ಸತ್ವ ತಗ್ಗಿದ ಮೇಲೆ ಸಾಮರ್ಥ್ಯವೆ. ೩೧) ಎಂದಿದ್ದರೊಂದುದಿನ ಸಾವು ತಪ್ಪದು. ೩೨) ಹುಟ್ಟುತೇನು ತಾರಲಿಲ್ಲ, ಸಾಯುತೇನು ಒಯ್ಯಲಿಲ್ಲ. ೩೩) ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು ಚಳ್ಳ ಪಿಳ್ಳಿ ಗೊಂಬೆಯಂತೆ ಆಡಿಹೋಯಿತು. ೩೪) ತಲ್ಲಣಿಸದಿರು ಕಂಡ್ಯ ತಾಳುಮನವೆ. ೩೫) ನಾರಾಯಣ ಎಂಬ ನಾಮದ ಬೀಜವ ನಾಲಿಗೆಯ ಕೂರಿಗೆ ಮಾಡಿ ಬಿತ್ತಿರಯ್ಯ. ೩೬) ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ. ೩೭) ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಯು ಜಿ.ಯೊಳಗೊ. ೩೮) ಹರಣ ಹಿಂಗದ ಮುನ್ನ ಹರಿಯ ಸೇವೆಯಮಾಡಿ ಪರಗತಿಗೆ ಸಾಧನವ ಮಾಡಿಕೊಳ್ಳೋ. ೩೯) ಪಿಸುಣಗಿನ್ನಧಿಕ ಹೊಲೆಯುಂಟೆ. ೪೦) ಪರಮ ಸಾತ್ವಿಕ ಗುಣಕೆ ಪಿರಿದುಂಟೆ. ೪೧) ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ೪೨) ಆತ್ಮ ಯಾವ ಕುಲ, ಜೀವ ಯಾವ ಕುಲ. ೪೩) ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ. ೪೪) ಜಪವ ಮಾಡಿದರೇನು ತಪವ ಮಾಡಿದರೇನು ಕಪಟಗುಣ ವಿಪರೀತ ಕಲುಷವಿದ್ದವರು. ೪೫) ತೊರೆದು ಜೀವಿಸಬಹುದೆ ಹರಿನಿನ್ನ ಚರಣವ. ೪೬) ಸಂಸಾರ ಸಾಗರವನುತ್ತರಿಸುವಡೆ ಕಂಸಾರಿ ನಾಮವೊಂದೆ ಸಾಕು. ೪೭) ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದೊಡೆ. ೪೮) ನೋಡಿ ಮರುಳಾಗದಿರು ಪರಸತಿಯರ. ೪೯) ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ. ೫೦) ಮುತ್ತು ಬಂದಿದೆ ಕೇರಿಗೆ, ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು. ೫೧) ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತುಹಿಟ್ಟಿಗಾಗಿ, ೫೨) ಮಾಡುದಾನಧರ್ಮ ಪರಉಪಕಾರವ ಮರೆಯದಿರೆಚ್ಚರಿಕೆ. ೫೩) ಯಾರಿಗಾರು ಬಹರು ಸಂಗಡ ಮುಂದೆ... ಮೀರಿ ನಡೆದ ಸಂಚಿತಕರ್ಮಕಂತೆ ವಂತೆ ಮುಂಗಡ ೫೪) ಜಲದೊಳಗೆ ಮುಳುಗಿದರೆ ತೋಲಗದು ಹೊಲೆಗೆಲಸವು. ಮುಂಡಿಗೆಗಳಿಂದ ೧) ಸುಟ್ಟು ಬೀಜವ ಬಿತ್ತಿ ಬೆಳೆಯಬಾರದಾ ಕಾಯಿ | ಬೆಟ್ಟದ ಸಾರವನು ತೊಟ್ಟು ಇಲ್ಲದ ಹಣ್ಣು ಮುಟ್ಟಿ ಕೊಯ್ದನು ಒಬ್ಬ ಹುಟ್ಟು ಬಂಜೆಯ ಮಗನು. ೨) ಹಲವು ಜೀವನವ ಒಂದೆಲೆ ನುಂಗಿತು ಹರಿಯ ನುಂಗಿತು, ಹರಬ್ರಹರ ನುಂಗಿತು | ಸುರರಿಗುಂಟಾದ ದೇವರ ನುಂಗಿತು || ಉರಿಗಣ್ಣ ಶಿವನ ಒಂದೆಲೆ ನುಂಗಿತೆಲೆ ದೇವ | ಹರಿಯ ಬಳಗವ ಒಂದೆಲೆ ನುಂಗಿತು. ೩) ಈ ಜಗದೊಳು ಪಂಡಿತರಿಂದ ಬಿಡಿಸಿ, ನೀರನು ಕಂಡರೆ ಮುಳುಗುತಿದೆ | ತನ್ನ ಮೋರೆಯ ತೋರದೆ ಓಡುತಿದೆ || ಧಾರಿಣಿ ಅಲ್ಲಲ್ಲಿ ಅಳೆಯುತಿದೆ | ದೊಡ್ಡ | ಭೈರವಾಕಾರದಿ ಕೂಗುತಿದೆ. ಕರಿಯ ಬೀಜಕೆ ಕಾಯಿ, ಬಿಳಿಯ ಬೀಜಕೆ ಬೇರು | ಮತ್ತೊಂದು ಬೀಜಕ್ಕೆ ಹದಿನೆಂಟು ಬೇರು |