ಪುಟ:Kanakadasa darshana Vol 1 Pages 561-1028.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧೨ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೧೩ ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು ಬೇರಂಗೆ ಕಡವ ಕೊಡುವರು || ಅದರ ಜೊತೆ ಜೊತೆಯಲ್ಲಿಯೇ ಮಾನವ ಸ್ವಭಾವಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಚಿತ್ರಿಸಿರುವ ಬಗೆಯೂ ವಿಶಿಷ್ಟ ಬಗೆಯದಾಗಿದೆ. ಅಷ್ಟಾದಶವರ್ಣನೆಗೆ ಸಿಕ್ಕಿಹಾಕಿಕೊಂಡ ಅನೇಕ ಪ್ರಾಚೀನ ಕವಿಗಳು ಅದರಿಂದ ಬಿಡಿಸಿಕೊಳ್ಳಲಾಗದೆ ಕಾವ್ಯವನ್ನು ಬರಡಾಗಿಸಿರುವ ಅಥವಾ ಹೊರೆಯಾಗಿಸಿರುವ ನಿದರ್ಶನಗಳೇ ಹೆಚ್ಚು. ಆದರೆ 'ಮೋಹನ ತರಂಗಿಣಿ'ಯಲ್ಲಿಯ ಅದರ ರೀತಿಯೇ ಬೇರೆ. ಕನಕದಾಸರು ಅಷ್ಟಾದಶ ವರ್ಣನೆಗಳನ್ನು ತಂದಿದ್ದರೂ ಅದರಲ್ಲಿ ಅವರು ಸಿಕ್ಕಿ ಹಾಕಿಕೊಂಡಿಲ್ಲ. ಬದಲಾಗಿ ಅದನ್ನು ಹೆಚ್ಚು ಚೇತೋಹಾರಿಯನ್ನಾಗಿ ಮಾಡಿದ್ದಾರೆ. ಕುಸರಿ ಕೆಲಸದ ಇಲ್ಲಿಯ ವರ್ಣನೆಗಳು ಕವಿಯ ಅದ್ಭುತ ಕಲಾಸೃಷ್ಟಿಯೇ ಆಗಿದೆ. ಕಾವ್ಯಕಲೆಯನ್ನು ಕನಕದಾಸರು ಇಲ್ಲಿ ವಿಶಿಷ್ಟ ರೀತಿಯಲ್ಲಿ ಮೆರೆದಿದ್ದಾರೆ. ಇಲ್ಲಿ ಬರುವ ದ್ವಾರಕಾಪುರ ವರ್ಣನೆಯಂತೂ ಕನಕದಾಸರ ವಾಸ್ತವಿಕ ಪ್ರಜ್ಞೆಯ ಜೀವಂತ ಸಾಕ್ಷಿ. ಮನೆಯ ಮುಂಭಾಗದಲ್ಲಿನ ತುಳಸೀಕಟ್ಟೆ, ಅದನ್ನು ಪೂಜಿಸುತ್ತಿರುವ ಸ್ತ್ರೀಯರು, ಹೋಮದಲ್ಲಿ ತೊಡಗಿರುವ ಬ್ರಾಹ್ಮಣರು, ಊಟದ ಮನೆಯ ಮುಂದೆ ಹೊಟ್ಟೆ ಮುಂದುಮಾಡಿ ಒಳನುಗ್ಗಲು ಹಾತೊರೆಯುತ್ತಿರುವವರ ಚಿತ್ರವೇ ಮೊದಲಾಗಿ ನೂರೆಂಟು ಅತ್ಯದ್ಭುತ ಚಿತ್ರಗಳನ್ನು ಕನಕದಾಸರು ತಮ್ಮ ಕಾವ್ಯದಲ್ಲಿ ಹಿಡಿದಿಟ್ಟಿದ್ದಾರೆ. ಮಲ್ಲಿಗೆಯರಳಂತೆ ಬಿಟ್ಟೋಗರ ಮೊಸ ಅಳ್ಳೆಯ ಬಹಳುಪ್ಪಗಾಯಿ ಘಲ್ಲಿಸಿ ಗಟ್ಟಿಯ ಕಟ್ಟಿದ ಪಿರಿಯರು ಪುಲ್ಲಿಗೆಗಳು ತರತರಿಸೆ || ರಸಾಯನವ ಚರಿದು ನೀರ್ಮಜ್ಜಿಗೆ ಹಸಗೆಯ್ದಿರಲೀಂಟಿದರು ಪೊಸ ವಿಘ್ನರಾಜನ ಬಳಗವೆಂಬಂತೆ ವಶವಲ್ಲದೆದ್ದರುತ್ಸವದಿ || ಶರಧಿಯೊಳೊಗೆದ ಹೊಂದಾವರೆಯಂತಿರ್ಪ ಪುರಮಧ್ಯದಲಿ ಕೃಷ್ಣರಾಯ ಅರಮನೆ ಕನ್ನಿಕೆಯೆಂಬಂತೆ ಜನ ಮೋ ಹರಿಸಲು ಕಣೆ ರಂಜಿಸಿತು || “ಮೋಹನ ತರಂಗಿಣಿ'ಯಲ್ಲಿ ಬರುವ ವನವಿಹಾರದ ವರ್ಣನೆ ಕನಕದಾಸರ ಸೋಪಜ್ಞತೆಗೊಂದು ಉಜ್ವಲ ಸಾಕ್ಷಿ. ಕನ್ನಡದ ಬಹುತೇಕ ಕವಿಗಳಲ್ಲಿ ಬರುವ ವರ್ಣನೆಗಳಂತಲ್ಲ ಇಲ್ಲಿಯ ವನವಿಹಾರ ವರ್ಣನೆ ; ಇದರ ಸೊಬಗೇ ಬೇರೆ. ಕನಕದಾಸರ ವಿಶಿಷ್ಟ ಪ್ರತಿಭೆ ಇಲ್ಲಿ ಜೀವಂತಗೊಂಡಿದೆ. ವನವಿಹಾರಕ್ಕೆಂದು ಬರುವ ಇಲ್ಲಿಯ ಅರಮನೆಯ ಹೆಂಗಸರು, ಕೇವಲ ರಾಣಿಯರಾಗಿ ಅಥವಾ ರಾಣಿ ವಾಸದ ಜಂಬಗಾರ್ತಿಯರಾಗಿ ವನವನ್ನು ಅಂದಗೆಡಿಸುವ ಸೊಕ್ಕುಗಾರ್ತಿಯರಲ್ಲ. ಅದನ್ನು ಕಂಡು, ಅದರ ಸೊಬಗನ್ನು ಉಂಡು ಆನಂದಿಸುವ ಪುಷ್ಪಪ್ರಿಯರು, ಪ್ರಕೃತಿ ಆರಾಧಕರು. ಅಷ್ಟೇ ಅಲ್ಲ ಕವಿ ಇನ್ನೂ ಮುಂದೆ ನಡೆದು, ಪ್ರಾಚೀನ ಕಾವ್ಯಕ್ಕಷ್ಟೇ ಕಟ್ಟುಬಿದ್ದವರು ಕಲ್ಪಿಸಿಕೊಳ್ಳಲೂ ಆಗದ ಸುಂದರ ಸಾಂಸಾರಿಕ ಚಿತ್ರವನ್ನು ಉಸಿರಾಡುವಂತೆ ಬಣ್ಣಿಸಿದ್ದಾನೆ. ಇಲ್ಲಿಯ ವನವಿಹಾರಿ ರಾಣಿಯರು ಬರಿಯ ವಿಲಾಸಿನಿಯರಲ್ಲ ಒಳ್ಳೆಯ ಗೃಹಿಣಿಯರು, ಗರತಿಯರು, ಅವರೆಲ್ಲರೂ ಸಂಸಾರದ ಹೊರೆ ಹೊತ್ತ ಸಾಮಾನ್ಯ ಹೆಂಗಸರಂತೆ ಕಂಡು ಬರುತ್ತಾರೆ. ವನವಿಹಾರದಲ್ಲಿದ್ದರೂ ಅವರೆಲ್ಲಾ ಅಡುಗೆಮನೆಯ ಜವಾಬ್ದಾರಿಯಲ್ಲಿ ಮುಳುಗಿದರಂತೆ ತೋರುತ್ತಾರೆ. ಕನಕದಾಸರ ವೈಶಿಷ್ಟ್ಯ ಇಲ್ಲಿ ಎದ್ದು ಕಾಣುತ್ತದೆ : ಕೈದಣಿವ ತನಕ ನಾನಾ ಪುಷ್ಪಂಗಳ ಕೊಯ್ದು ಪೊಟ್ಟಣವ ಕಟ್ಟಿದರು ತೊಯ್ದರು ನೀರಾಟವನಾಡಿ ಸೊಬಗಾಂತು ಐದೆಯರುಗಳು ಸಂತಸದಿ || ಅಂಬೆ ಹಳದಿ ಕಾರ್ಗೆಣಸು ನೀರುಳ್ಳಿ ಕೊ ತುಂಬರಿ ಕರಿಬೇವು ಸಹಿತ ಸಿಂಬೆ ಕೂಗಲಿ ಪಿಪ್ಪಲಗಾ ಕೊಯ್ದರು ನಿಂಬೆಯ ಕಣಿವಣ್ಣಳೊಡನೆ ಇಂತಹ ಹಲವು ಹೊಸತನಗಳನ್ನು ಮೆರೆಯುವುದರ ಮೂಲಕ ಕನಕದಾಸರು ತಮ್ಮ ವಿಶಿಷ್ಟ ಪ್ರತಿಭೆಯನ್ನು ತೋರಿರುವುದರ ಜೊತೆಗೆ ಹೆಚ್ಚು ಆತ್ಮೀಯವಾಗಿಸಿದ್ದಾರೆ. ಏಕೆಂದರೆ ಕಣ್ಣೆಪ್ಪುವ, ಮನಮಿಡಿಯುವ ಇಂತಹ ಚಿತ್ರಗಳು ಕನ್ನಡ ಸಾಹಿತ್ಯದಲ್ಲಿ ಅಪರೂಪವೆಂದೇ ಹೇಳಬೇಕು. ಪಾಂಡಿತ್ಯ ಪ್ರದರ್ಶನ ಅಥವಾ ಸಾಂಪ್ರದಾಯಿಕ ವರ್ಣನೆಗಳಲ್ಲಿಯೇ ಕಾವ್ಯವನ್ನು