ಪುಟ:Kanakadasa darshana Vol 1 Pages 561-1028.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧೬ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೧೭ ಸಾಗಬೇಕಾದ ದಾರಿ ಸಾಗರದಷ್ಟು ದೊಡ್ಡದು. ಆದರೆ ಕನಕನದು ಹಾಗಲ್ಲ. ಉದ್ದೇಶ ನೇರ-ಸ್ಪಷ್ಟ, ಹಾಗಾಗಿ ಭಟ್ಟಿ ಇಳಿಸಿದಂತೆ ಅವನ ಭಾವನೆಗಳು ಮಡುಗಟ್ಟಿ ವ್ಯಕ್ತಗೊಂಡಿವೆ. ಕನಕದಾಸರ ಕಾವ್ಯಪ್ರತಿಭೆ ಹಾಗೂ ಭಕ್ತಿಯ ಅಮಲು ಇಲ್ಲಿ ಉಕ್ಕಿ ಹರಿದಿರುವುದನ್ನು ಕಾಣಬಹುದು. 'ಹರಿಭಕ್ತಿಸಾರ'ದ ಪ್ರತಿಯೊಂದು ಪದ್ಯವೂ "ರಕ್ಷಿಸು ನಮ್ಮನನವರತ' ಎಂಬ ಅಂಕಿತದೊಡನೆ ಅಂತ್ಯಗೊಳ್ಳುವುದು ಒಂದು ವಿಶೇಷವಾಗಿದೆ ಅಷ್ಟೆ. - ಕುಮಾರವ್ಯಾಸ ಮಹಾಭಾರತದ ಪೀಠಿಕಾಭಾಗದಲ್ಲಿ ಮಹಾಭಾರತದ ಕಥೆಯನ್ನೂ, ಆ ಮೂಲಕ ಕೃಷ್ಣಕಥೆಯನ್ನೂ ಕೇಳಿದವರಿಗೆ ದೊರೆಯುವ ಹಲವು ಪುಣ್ಯದ ಒಂದು ಪಟ್ಟಿಯನ್ನು ಕೊಡುತ್ತಾನೆ : ವೇದ ಪಾರಾಯಣದ ಫಲ ಗಂ ಗಾದಿ ತೀರ್ಥಸ್ನಾನ ಫಲ ಕೃ ಜ್ಞಾದಿ ತಪಸಿನ ಫಲವು ಜ್ಯೋತಿಷ್ಟೋಮ ಯಾಗ ಫಲ | ಮೇದಿನಿಯನೊಲಿದಿತ್ತ ಫಲ ವ ಸ್ವಾದಿ ಕನ್ಯಾದಾನ ಫಲವಹು ದಾದರಿಸಿ ಭಾರತದೊಳೊಂದಕ್ಷರವ ಕೇಳರಿಗೆ || ಕನಕದಾಸರು ತಮ್ಮ 'ಹರಿಭಕ್ತಿಸಾರ'ದ ಕೊನೆಯಲ್ಲಿ : ನೂರು ಕನ್ಯಾದಾನವನು ಭಾ ಗೀರತಿ ಸ್ನಾನವನು ಮಿಗೆ ಕೈ ಯಾರೆ ಗೋವಳ ಪ್ರೇಮದಿಂದಲಿ ಭೂಸುರರಿಗೊಲಿದು || ಊರುಗಳ ನೂರಗ್ರಾಹಾರವ ಧಾರೆಯೆರೆದಿತ್ತಂತೆ ಫಲ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳವಗೆ || ಎಂದು ಈ ಕಾವ್ಯದ ಫಲವನ್ನು ಹೇಳಿದ್ದಾರೆ. ಇಲ್ಲಿ ಸಹಜವಾಗಿಯೇ ಕನಕದಾಸರ ಮೇಲೆ ಕುಮಾರವ್ಯಾಸನ ಪ್ರಭಾವ ಆಗಿರಬಹುದೆಂಬ ಶಂಕೆ ಮೂಡಿರಬಹುದಾದರೂ ಅದು ಕವಿಯ ಪ್ರತಿಭೆಗೆ ಅಡ್ಡಬರುವಂತಹುದಲ್ಲ. ಇಲ್ಲಿ ಕನಕದಾಸರು ಭಕ್ತಿಸಾಗರದಲ್ಲಿ ಎಷ್ಟು ಮುಳುಗಿದ್ದಾರೆ ಎಂಬುದಕ್ಕೆ ಸಾಕ್ಷಿ : ತಮ್ಮ ಕೀರ್ತನೆಗಳಲ್ಲಿ ಸಮಾಜದ ಏರು ಪೇರನ್ನು, ಮೇಲು-ಕೀಳನ್ನು ಕುರಿತು ಕಟುವಾಗಿ ಟೀಕಿಸುವ ಕನಕದಾಸರು ಇಲ್ಲಿ 'ಕೈಯಾರೆ ಗೋವಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರಗ್ರಾಹಾರವ ಧಾರೆಯೆರೆದಿತ್ತಂತೆ ಫಲ ಕೈಸೇರುವುದು ಹರಿಭಕ್ತಿಸಾರದ ಕಥೆಯ ಕೇಳವಗೆ' ಎಂದು ಮೈಮರೆತು ಹೇಳುತ್ತಾರೆ. ಕುಮಾರವ್ಯಾಸನಲ್ಲಿಯ ಪ್ರಚಂಡ ಪ್ರತಿಭೆ ಕನಕದಾಸರಲ್ಲಿ ಕಂಡುಬರದಿದ್ದರೂ ಸ್ಪೋಪಜ್ಞತೆಗೆ ಕೊರತೆ ಇಲ್ಲ. ಸಂತಕವಿಯಾದ ಕನಕದಾಸ 'ಹರಿಭಕ್ತಿಸಾರ'ದ ಸಂದರ್ಭದಲ್ಲಿ ಆ ಪಜ್ಞತೆಯನ್ನು ಮೆರೆದಿದ್ದಾನೆ : ಎಂಟುಗೇಣಿನ ದೇಹ ರೋಮಗ ಳೆಂಟು ಕೋಟಿಯ ಕೀಳರುವ ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು ನೆಂಟ ನೀನಿರ್ದಗಲಿದಡೆ ಒಣ ಹೆಂಟೆಯಲಿ ಮುಚ್ಚುವರು ದೇಹವ ಉಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮನನವರತ || ಬೀಗ ಮುದ್ರೆಗಳಿಲ್ಲದೂರಿಗೆ ಬಾಗಿಲುಗಳೊಂಬತ್ತು ಹಗಲಿರು ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ ನೀಗಿಯೆಲ್ಲವ ಬಿಸುಟು ಬೇಗದಿ ಹೋಗುತಿಹ ಸಮಯದಲಿ ಇವರವರ ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ || ಕುಮಾರವ್ಯಾಸ ಭಾರತ ಕಥೆಯ ಸಾಗರ, 'ಹರಿಭಕ್ತಿಸಾರ' ಅದರಲ್ಲಿ ವ್ಯಕ್ತವಾಗುವ ಕೃಷ್ಣಭಕ್ತಿಯ ಒಂದು ಭಾಗ. ಇದಕ್ಕೆ ತನ್ನದೇ ಆದ ಮಿತಿ ಇದೆ. ಸಂತಕವಿ ಕನಕನ ದೃಷ್ಟಿಯೇ ಬೇರೆ. ಭಗವದ್ಭಕ್ತಿಯನ್ನು ಮೆರೆಯುವುದು. ಭಕ್ತಭಗವಂತನ ಸಂಬಂಧ ಇಲ್ಲಿ ನೇರವಾಗಿ ವ್ಯಕ್ತಗೊಂಡಿದೆ : ನಿನ್ನ ಸೂತ್ರದೊಳಾಡುವುವು ಚೈ ತನ್ಯ ಸಚರಾಚರಗಳೆಲ್ಲವು ನಿನ್ನ ಸೂತ್ರವು ತಪ್ಪಿದರೆ ಮುಗ್ಗುವುವು ಹೂಹೆಗಳು ಇನ್ನು ನಮಗೆ ಸ್ವತಂತ್ರವೆಲ್ಲಿಯ ದನ್ಯಕರ್ಮ ಸುಕರ್ಮವೆಲ್ಲ ನಿನ್ನದೆಂದೊಪ್ಪಿಸಿದೆ ರಕ್ಷಿಸು ನಮ್ಮನನವರತ || ಚಂಪುವಿನಲ್ಲಿ ಪಂಪ ಪ್ರಭಾವ ಬೀರಿದಂತೆ, ಸಾಂಗತ್ಯದಲ್ಲಿ ರತ್ನಾಕರವರ್ಣಿ, ರಗಳೆಯಲ್ಲಿ ಹರಿಹರ ಎದ್ದು ಕಾಣುವಂತೆ, ಷಟ್ಟದಿ ಕವಿಗಳಲ್ಲಿ ಕುಮಾರವ್ಯಾಸ